ಶೀಘ್ರದಲ್ಲೇ ವಾಟ್ಸಾಪ್‌ನ 'ಡಿಲೀಟ್‌ ಫಾರ್‌ ಎವರಿಒನ್‌' ಟೈಂ ಲಿಮಿಟ್‌ ಚೇಂಜ್‌!

|

ಪ್ರಸ್ತುತ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಎಂದರೆ ಅದು ವಾಟ್ಸಾಪ್‌. ಮೆಟಾ ಒಡೆತನದ ವಾಟ್ಸಾಪ್‌ ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಬಳಕೆದಾರರನ್ನು ಆಕರ್ಷಿಸಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ಗೆ ಪರ್ಯಾಯವಾಗಿ ಅನೇಕ ಅಪ್ಲಿಕೇಶನ್‌ಗಳಿದ್ದರೂ ಕೂಡ ವಾಟ್ಸಾಪ್‌ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಕಾಲಕ್ಕೆ ಅನುಗುಣವಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಜೊತೆಗೆ ಹಲವು ಫೀಚರ್ಸ್‌ಗಳಲ್ಲಿ ಅಗತ್ಯ ಬದಲಾವಣೆಗಳನ್ನು ಕೂಡ ಮಾಡುತ್ತಾ ಬಂದಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ ಫೀಚರ್ಸ್‌ಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ. ಇದೀಗ ವಾಟ್ಸಾಪ್‌ ಮತ್ತೊಂದು ಅತ್ಯಗತ್ಯ ಫೀಚರ್ಸ್‌ನಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ವಾಟ್ಸಾಪ್‌ನ ಪ್ರಮುಖ ಫೀಚರ್ಸ್‌ಗಳಲ್ಲಿ ಒಂದಾದ ಡಿಲೀಟ್‌ ಫಾರ್‌ ಎವರಿಒನ್‌ ಕೂಡ ಒಂದು. ಇದೇ ಫೀಚರ್ಸ್‌ನಲ್ಲಿ ಇದೀಗ ಟೈಂ ಲಿಮಿಟ್‌ ಅನ್ನು ಮತ್ತಷ್ಟು ಹೆಚ್ಚಳ ಮಾಡುವುದಕ್ಕೆ ವಾಟ್ಸಾಪ್‌ ಮುಂದಾಗಿದೆ. ವಾಟ್ಸಾಪ್‌ ಡಿಲಿಟ್‌ ಫಾರ್‌ ಎವರಿಒನ್‌ ಲಿಮಿಟ್‌ನಲ್ಲಿ ಇದೀಗ ಎರಡು ದಿನಗಳ ಅವಧಿಯನ್ನು ನೀಡಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್ಸ್‌ ಬಗ್ಗೆ ನಿಮಗೆಲ್ಲಾ ತಿಳಿದೆ ಇದೆ. ಈ ಫೀಚರ್ಸ್‌ ಮೂಲಕ ನೀವು ಚಾಟ್‌ನಲ್ಲಿ ಮಾಡಿದ ಮೆಸೇಜ್‌ ಅನ್ನು ಶೇರ್‌ ಮಾಡಿದ ನಂತರ ಒಂದು ಗಂಟೆಯ ಅವಧಿಯೊಳಗೆ ಯಾರಿಗೂ ಲಭ್ಯವಾಗದಂತೆ ಡಿಲೀಟ್‌ ಮಾಡಬಹುದು. ಇದರಿಂದ ನಿಮ್ಮ ಸಂದೇಶ ಸ್ವಿಕರಿಸಿದವರಿಗೂ ಕೂಡ ಈ ಸಂದೇಶ ಲಭ್ಯವಾಗುವುದಿಲ್ಲ. ಪ್ರಸ್ತುತ ವಾಟ್ಸಾಪ್‌ ಬಳಕೆದಾರರು ತಾವು ಸೆಂಡ್‌ ಮಾಡಿದ ಸಂದೇಶವನ್ನು ಹಂಚಿಕೊಂಡ ಸಮಯದಿಂದ ಒಂದು ಗಂಟೆ ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯಲ್ಲಿ ಡಿಲೀಟ್‌ ಫಾರ್‌ ಎವರಿಒನ್‌ ಮೂಲಕ ಡಿಲೀಟ್‌ ಮಾಡಬಹುದು. ಇದೀಗ ಇದರ ಟೈಂ ಲಿಮಿಟ್‌ ಬದಲಾಗಲಿದೆ ಎನ್ನಲಾಗಿದೆ.

ಡಿಲೀಟ್‌

ಮೆಟಾ ಕಂಪೆನಿ ವಾಟ್ಸಾಪ್‌ನಲ್ಲಿರುವ ಡಿಲೀಟ್‌ ಫಾರ್‌ ಎವರಿಒನ್‌ ಟೈಂ ಲಿಮಿಟ್‌ ಅನ್ನು ಬರೋಬ್ಬರಿ ಎರಡು ದಿನಗಲಿಗೆ ವಿಸ್ತರಿಸಲು ಮುಂದಾಗಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ ಎರಡು ದಿನಗಳ ನಂತರ ಡಿಲೀಟ್‌ ಫಾರ್‌ ಎವರಿಒನ್‌ ಬಳಸಿ ಡಿಲೀಟ್‌ ಮಾಡಬಹುದಾಗಿದೆ. ಸದ್ಯ ಈ ಹೊಸ ಫೀಚರ್ಸ್‌ ವಾಟ್ಸಾಪ್‌ ಬೀಟಾದ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರುವ ಆಯ್ದ ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ. ಅದರಂತೆ ಈ ಫೀಚರ್ಸ್‌ ಒಂದು ಗಂಟೆ, ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳಿಂದ ಎರಡು ದಿನಗಳು ಮತ್ತು 12 ಗಂಟೆಗಳವರೆಗೆ ಹೆಚ್ಚಿಸಲು ಪ್ಲಾನ್‌ ಮಾಡಿದೆ.

ಬೀಟಾ

ಇನ್ನು ಬೀಟಾ ಟೆಸ್ಟರ್ ಅನ್ನು ಆಯ್ಕೆ ಮಾಡಲು ವಾಟ್ಸಾಪ್‌ ಈ ಫೀಚರ್ಸ್‌ ಅನ್ನು ರೋಲಿಂಗ್ ಮಾಡಲು ಪ್ರಾರಂಭಿಸಿದೆ ಎಂದು ಬ್ಲಾಗ್ ಸೈಟ್ ಹೇಳಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಿನ ಬೀಟಾ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಆದರೆ ಹೊಸ ಸಮಯದ ಮಿತಿಯು ನಿಜವಾಗಿಯೂ 2 ದಿನಗಳು ಮತ್ತು 12 ಗಂಟೆಗಳು ಎನ್ನುವುದು ಖಚಿತವಾಗಿದೆ. ಆದರೆ ಈ ಫೀಚರ್ಸ್‌ ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ವಾಟ್ಸಾಪ್

ಇದರೊಂದಿಗೆ ವಾಟ್ಸಾಪ್ ತನ್ನ ವಾಟ್ಸಾಪ್‌ ಗ್ರೂಪ್ ಅಡ್ಮಿನ್‌ಗಳಿಗೂ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಅದರಂತೆ ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ಗಳು ತಮ್ಮ ಗುಂಪುಗಳಲ್ಲಿನ ಯಾವುದೇ ಸಂದೇಶವನ್ನು ಡಿಲೀಟ್‌ ಮಾಡುವುದಕ್ಕೆ ಅವಕಾಶ ನೀಡುವ ಫೀಚರ್ಸ್‌ ಸದ್ಯದಲ್ಲೇ ಬರಲಿದೆ. ಸದ್ಯಕ್ಕೆ, ಗುಂಪಿನಲ್ಲಿರುವ ಸಂದೇಶವನ್ನು ಶೇರ್ ಮಾಡಿದ ಸದಸ್ಯರು ಮಾತ್ರ ಅಳಿಸಬಹುದಾಗಿದೆ. ಆದರೆ ಈ ಹೊಸ ಫೀಚರ್ಸ್‌ ಅನ್ನು ಸಕ್ರಿಯಗೊಳಿಸದ ನಂತರ ಬಳಕೆದಾರರು ಗುಂಪಿನಲ್ಲಿರುವ ಪ್ರತಿಯೊಬ್ಬರಿಗೂ ಒಳಬರುವ ಸಂದೇಶವನ್ನು ಅಳಿಸಲು ಸಾಧ್ಯವಾಗುತ್ತದೆ. ಆದರೂ ಕೂಡ ಗ್ರೂಪ್‌ ಮೆಸೇಜ್‌ ನೋಟಿಫಿಕೇಶನ್‌ ಬಳಸಿಕೊಂಡು ನಿರ್ದಿಷ್ಟ ಸಂದೇಶವನ್ನು ಯಾರು ಅಳಿಸಿದ್ದಾರೆ ಎಂದು ಗುಂಪಿನಲ್ಲಿರುವ ಇತರ ಸದಸ್ಯರಿಗೆ ತಿಳಿಸಲಾಗುತ್ತದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ಕರೆಗಳಲ್ಲಿ ವರ್ಚುವಲ್‌ ಅವತಾರ್‌ಗಳನ್ನು ಸೇರ್ಪಡೆ ಮಾಡುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಅಂದರೆ ಬಳಕೆದಾರರು ತಮ್ಮ ವರ್ಚುವಲ್ ಅವತಾರಗಳನ್ನು ವೀಡಿಯೊ ಕರೆಗಳಲ್ಲಿ ಸೇರಿಸುವುದಕ್ಕೆ ಅನುಮತಿಸುವ ಸಾಮರ್ಥ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ವೀಡಿಯೊ ಕರೆ ಬಂದಾಗ ನಿಮ್ಮ ಬದಲಿಗೆ ನಿಮ್ಮ ವರ್ಚುವಲ್‌ ಅವತಾರ್‌ ಮೂಲಕ ವೀಡಿಯೊ ಕರೆಯಲ್ಲಿ ಮಾತನಾಡಬಹುದಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ವೀಡಿಯೊ ಕಾಲ್‌ನಲ್ಲಿ ವರ್ಚುವಲ್‌ ಅವತಾರ್‌ಗಳನ್ನು ಬಳಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಅಲ್ಲದೆ ಈ ಅವತಾರ್‌ಗಳನ್ನು ದೀರ್ಘಕಾಲದವರೆಗೆ ವೀಡಿಯೊ ಕಾಲ್‌ನಲ್ಲಿ ಬಳಸುವುದಕ್ಕೆ ಸಾಧ್ಯವಾಗಲಿದೆ ಎನ್ನಲಾಗಿದೆ. ಇದಕ್ಕಾಗಿ ವಾಟ್ಸಾಪ್‌ ತನ್ನದೇ ಆದ ಮೆಮೊಜಿ/ಬಿಟ್‌ಮೊಜಿ ಪರ್ಯಾಯ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಸದ್ಯ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಆದರಿಂದ ಈ ಆಯ್ಕೆಯನ್ನು ಯಾವುದೇ ಸಮಯದಲ್ಲಿ ವೀಡಿಯೊ ಕರೆಗಳಲ್ಲಿ ಬಳಸುವುದಕ್ಕೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಫೀಚರ್ಸ್‌

ಇದಲ್ಲದೆ ಬಳಕೆದಾರರು ತಮ್ಮ ಚಾಟ್‌ಗಳು ಮತ್ತು ಗ್ರೂಪ್‌ಗಳಲ್ಲಿ ತಮ್ಮ ಅವತಾರಗಳನ್ನು ಸ್ಟಿಕ್ಕರ್‌ಗಳಾಗಿ ಕಳುಹಿಸುವುದಕ್ಕೆ ಅನುಮತಿಸುವ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ತಯಾರಿ ನಡೆಸಿದೆ. ಇದಕ್ಕಾಗಿ "ಅವತಾರ್ ಎಡಿಟರ್" ಅನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಇದರ ಮೂಲಕ ಬಳಕೆದಾರರು ತಮ್ಮ ಸ್ವಂತ ಅವತಾರ್‌ ಅನ್ನು ಸೆಟ್‌ ಮಾಡುವುದಕ್ಕೆ ಸಾದ್ಯವಾಗಲಿದೆ. ಜೊತೆಗೆ ನಿಮ್ಮ ಅವತಾರ್‌ ಅನ್ನು ಕಸ್ಟಮೈಸ್ ಕೂಡ ಮಾಡಬಹುದಾಗಿದೆ. ಸದ್ಯ ಈ ಅವತಾರ್‌ ಎಡಿಟರ್‌ ಆಯ್ಕೆಯು ಇನ್ನು ಕೂಡ ಅಭಿವೃದ್ದಿಯ ಹಂತದಲ್ಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ತನ್ನ ಮೀಡಿಯಾ ಎಡಿಟರ್‌ ಆಯ್ಕೆಯಲ್ಲಿ ಬ್ಲರ್ ಟೂಲ್ ಅನ್ನು ಸೇರಿಸುವ ನಿರೀಕ್ಷೆ ಕೂಡ ಇದೆ. ಈ ಫೀಚರ್ಸ್‌ ಮೂಲಕ ನೀವು ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಟೂಲ್‌ ಬಳಸದೆ ಯಾವುದೇ ಚಿತ್ರದ ಭಾಗವನ್ನು ಬ್ಲರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಕ್ಕಾಗಿ ವಾಟ್ಸಾಪ್ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಡ್ರಾಯಿಂಗ್ ಟೂಲ್ ಅನ್ನು ಪರಿಚಯಿಸಲು ಪ್ಲಾನ್‌ ಮಾಡಿದೆ ಎನ್ನಲಾಗಿದೆ. ಇದರಿಂದ ನೀವು ಇಮೇಜ್‌ ಅನ್ನು ಶೇರ್‌ ಮಾಡುವ ಮುನ್ನ ಬ್ಲರ್‌ ಮಾಡುವ ಜಾಗವನ್ನು ವಾಟ್ಸಾಪ್‌ನಲ್ಲಿ ಬ್ಲರ್‌ ಮಾಡಬಹುದಾಗಿದೆ.

Best Mobiles in India

Read more about:
English summary
Whatsapp users will soon be able to delete messages which are two days old

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X