ವಾಟ್ಸಾಪ್‌'ನಿಂದ ಬಳಕೆದಾರರು ಬಯಸುತ್ತಿರುವ ಟಾಪ್‌ 5 ಹೊಸ ಫೀಚರ್‌ಗಳಿವು!

ಆದರೆ ವಾಟ್ಸಾಪ್‌ ಬಳಕೆದಾರರು, ಕಂಪನಿಯಿಂದ ಈ ಕೆಳಗಿನ ಟಾಪ್ 5 ಹೊಸ ಫೀಚರ್‌ಗಳನ್ನು ಪಡೆಯಲು ಬಯಸುತ್ತಿದ್ದಾರೆ. ಆ 5 ಫೀಚರ್‌ಗಳು ಯಾವುವು ಎಂದು ತಿಳಿಯಿರಿ.

By Suneel
|

ವಾಟ್ಸಾಪ್‌ ಅಂತು ಇಂತು ಕಡೆಗೂ ಬಹುನಿರೀಕ್ಷಿತ ವೀಡಿಯೊ ಕರೆ ಫೀಚರ್ ಅನ್ನು ಅಧಿಕೃತವಾಗಿ ಆಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್ ವೇದಿಕೆಗಳಿಗೆಲ್ಲಾ ಲಾಂಚ್‌ ಮಾಡಿದೆ. ಆದರೆ ವಾಟ್ಸಾಪ್‌ ಬಳಕೆದಾರರೆಲ್ಲಾ ಇತರೆ ಹಲವು ಫೀಚರ್‌ಗಳನ್ನು ವಾಟ್ಸಾಪ್‌ನಿಂದ ಬಯುಸುತ್ತಿದ್ದಾರೆ.

ವಾಟ್ಸಾಪ್ ತನ್ನ ವೀಡಿಯೊ ಕರೆ ಫೀಚರ್‌ ಮಾತ್ರವಲ್ಲದೇ ಈ ಹಿಂದಿನ ಕೆಲವು ತಿಂಗಳಲ್ಲಿ ಹಲವು ಹೊಸ ಫೀಚರ್‌ಗಳನ್ನು ಪರಿಚಯಿಸಿದೆ. ಆಪ್‌ ತನ್ನ ಬಳಕೆದಾರರ ಉತ್ತಮ ಅನುಭವಕ್ಕಾಗಿ ವೀಡಿಯೊ ಕರೆ, ಇಮೇಜ್‌ಗಳಿಗೆ ಕ್ಯಾಪ್ಶನ್, ವೀಡಿಯೊಗಳಿಗೆ ಕ್ಯಾಪ್ಶನ್‌, ಗ್ರೂಪ್‌ ಚಾಟ್‌ನಲ್ಲಿ '@' ಮೆನ್ಸನ್‌ ಮಾಡುವುದು, ಕೋಟೆಡ್ ರೀಪ್ಲೇಗಳು ಈ ಎಲ್ಲಾ ಫೀಚರ್‌ಗಳನ್ನು, 'ಮೆಸೇಂಜರ್, ಟೆಲಿಗ್ರಾಂ, ಸ್ನಾಪ್‌ಚಾಟ್‌, ಇನ್‌ಸ್ಟಗ್ರಾಂ' ನಂತಹ ಆಪ್‌ಗಳ ಪ್ರೇರಣೆಯಿಂದ ಅಭಿವೃದ್ದಿಪಡಿಸಿದೆ.

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಲಾಂಚ್: ಒಂದೇ ಕ್ಲಿಕ್‌ನಿಂದ ಫೀಚರ್ ಪಡೆಯಿರಿ!

ಆದರೆ ವಾಟ್ಸಾಪ್‌ ಬಳಕೆದಾರರು, ಕಂಪನಿಯಿಂದ ಈ ಕೆಳಗಿನ ಟಾಪ್ 5 ಹೊಸ ಫೀಚರ್‌ಗಳನ್ನು ಪಡೆಯಲು ಬಯಸುತ್ತಿದ್ದಾರೆ. ಆ 5 ಫೀಚರ್‌ಗಳು ಯಾವುವು ಎಂದು ತಿಳಿಯಿರಿ.

ಆಟೋ-ಡೌನ್‌ಲೋಡ್'ನ ಗ್ರಾನುಲರ್ ನಿಯಂತ್ರಣ

ಆಟೋ-ಡೌನ್‌ಲೋಡ್'ನ ಗ್ರಾನುಲರ್ ನಿಯಂತ್ರಣ

ಇಮೇಜ್‌ಗಳು ಮತ್ತು ವೀಡಿಯೊಗಳನ್ನು ಇತರೆ ಸ್ನೇಹಿತರಿಂದ ಸ್ವೀಕರಿಸಿದಾಗ, ಇವುಗಳು ಆಟೋ-ಡೌನ್‌ಲೋಡ್ ಆಗಲು ಅಥವಾ ಡೌನ್‌ಲೋಡ್ ಆಗದಿರಲು ಸ್ವಿಚ್‌ ಆಪ್ಶನ್ ನೀಡಲಾಗಿದೆ. ಆಟೋ-ಡೌನ್‌ಲೋಡ್ ಬೇಡವಾದಲ್ಲಿ ಸ್ವಿಚ್‌ ಆಫ್ ಮಾಡಬಹುದು. ಅಲ್ಲದೇ ನಿರ್ಧಿಷ್ಟ ಗ್ರೂಪ್‌ ಅಥವಾ ಸ್ನೇಹಿತರು ಕಳುಹಿಸಿದ ಇಮೇಜ್‌ಗಳು ಮಾತ್ರ ಆಟೋ-ಡೌನ್‌ಲೋಡ್‌ ಆಗಲು ಗ್ರಾನುಲರ್ ಆಟೋ-ಡೌನ್‌ಲೋಡ್ ಆಪ್ಶನ್‌ ಸೆಟ್‌ ಮಾಡಲು ಅವಕಾಶ ನೀಡುತ್ತದೆ.

ಡೆಸ್ಕ್‌ಟಾಪ್‌ನಲ್ಲಿ ಡೈರೆಕ್ಟ್ ವಾಟ್ಸಾಪ್ ಲಾಗಿನ್

ಡೆಸ್ಕ್‌ಟಾಪ್‌ನಲ್ಲಿ ಡೈರೆಕ್ಟ್ ವಾಟ್ಸಾಪ್ ಲಾಗಿನ್

ಪ್ರಸ್ತುತದಲ್ಲಿ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ಲಾಗಿನ್‌ ಆಗಲು, ಫೋನ್‌ ಆಕ್ಸೆಸ್ ಬೇಕು. ಒಂದು ವೇಳೆ ಫೋನ್‌ ಚಾರ್ಜ್ ಇಲ್ಲದಿದ್ದಲ್ಲಿ ಡೆಸ್ಕ್‌ಟಾಪ್‌ಗೆ ಲಾಗಿನ್‌ ಆಗುವುದಾದರೂ ಹೇಗೆ ಅಲ್ವಾ? ಆದ್ದರಿಂದ ವಾಟ್ಸಾಪ್ ಬಳಕೆದಾರರು ಫೇಸ್‌ಬುಕ್‌ಗೆ ಲಾಗಿನ್‌ ಆದಂತೆ, ವಾಟ್ಸಾಪ್‌ಗೆ ಡೆಸ್ಕ್‌ಟಾಪ್‌ನಲ್ಲಿ ಲಾಗಿನ್‌ ಆಗಲು ಫೀಚರ್ ಪಡೆಯಲು ಬಯಸುತ್ತಿದ್ದಾರೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ರೂಪ್‌ಗೆ ಆಡ್‌ ಮಾಡುವ ಮೊದಲು ಬಳಕೆದಾರರಿಂದ ಅನುಮತಿ

ಗ್ರೂಪ್‌ಗೆ ಆಡ್‌ ಮಾಡುವ ಮೊದಲು ಬಳಕೆದಾರರಿಂದ ಅನುಮತಿ

ವಾಟ್ಸಾಪ್‌ನಲ್ಲಿ ಹಲವರು ಗ್ರೂಪ್‌ ಒಂದಕ್ಕೆ ಯಾರನ್ಣೇ ಆದರೂ ಅನುಮತಿ ಇಲ್ಲದೇ ಆಡ್‌ ಮಾಡಬಹುದು. ಆದರೆ ಇದು ಕೆಲವೊಮ್ಮೆ ಸಮಸ್ಯೆಯೂ ಹೌದು. ಆದರೆ ಫೇಸ್‌ಬುಕ್‌ನಲ್ಲಿ ಈ ರೀತಿ ಇಲ್ಲ. ಆದ್ದರಿಂದ ವಾಟ್ಸಾಪ್‌ನಲ್ಲಿ ಗ್ರೂಪ್‌ಗೆ ಸದಸ್ಯರನ್ನು ಆಡ್‌ ಮಾಡುವ ಮುನ್ನ ಅನುಮತಿ ಕೇಳುವ ಫೀಚರ್‌ ಭೇಕು ಎಂದು ಬಳಕೆದಾರರು ಬಯಸಿದ್ದಾರೆ.

ಕಾನ್ಫರೆನ್ಸ್ ಕರೆ

ಕಾನ್ಫರೆನ್ಸ್ ಕರೆ

ವಾಟ್ಸಾಪ್‌ನಲ್ಲಿ ಆಡಿಯೋ ಕರೆಯೂ ಬಂತು, ವೀಡಿಯೊ ಕರೆ ಫೀಚರ್‌ ಬಂತು. ಈಗ ಮುಂದಿನ ಸರದಿ ಕಾನ್ಫರೆನ್ಸ್ ಕರೆ'ಯದು. ಹೌದು, ಹಲವು ಬಳಕೆದಾರರು ವೀಡಿಯೊ ಕರೆ ಫೀಚರ್ ಪಡೆಯುತ್ತಿದ್ದಂತೆ, ಕಾನ್ಫರೆನ್ಸ್ ಕರೆ ಫೀಚರ್ ಅನ್ನು ಬಯಸುತ್ತಿದ್ದಾರೆ.

ಎನ್ಕ್ರಿಪ್ಟ್‌ ಕ್ಲೌಡ್ ಬ್ಯಾಕಪ್‌

ಎನ್ಕ್ರಿಪ್ಟ್‌ ಕ್ಲೌಡ್ ಬ್ಯಾಕಪ್‌

ವಾಟ್ಸಾಪ್ ಪ್ರಸ್ತುತದಲ್ಲಿ ಎಂಡ್‌-ಟು-ಎಂಡ್ ಗೂಢಲಿಪೀಕರಣವನ್ನು ಚಾಟ್‌ನಲ್ಲಿ ಹೊಂದಿದೆ. ಆದರೆ ಬ್ಯಾಕಪ್‌ನಲ್ಲಿ ಗೂಢಲಿಪೀಕರಣ ಚಾಟ್ ಹೊಂದಿಲ್ಲ. ಅಲ್ಲದೇ ಐಕ್ಲೌಡ್ ಅಥವಾ ಗೂಗಲ್ ಡ್ರೈವ್‌ನಲ್ಲಿ ಚಾಟ್‌ ಬ್ಯಾಕಪ್ ಅನ್‌ಎನ್ಕ್ರಿಪ್ಟ್‌ ಆಗಿದ್ದು, ಅಸುರಕ್ಷಿತವಾಗಿದೆ. ಆದ್ದರಿಂದ ವಾಟ್ಸಾಪ್ ಚಾಟ್ ಬ್ಯಾಕಪ್‌ನಲ್ಲಿ ಗೂಢಲಿಪೀಕರಣ ಆಫರ್ ಮಾಡಬೇಕಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
WhatsApp Video Calling is Here: 5 Other Features WhatsApp Users Are Craving For. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X