ವಾಟ್ಸಾಪ್‌ನಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಡಬ್ಬಲ್ ಧಮಾಕಾ

Written By:

ಹಲವಾರು ಗಂಟೆಗಳಿಗಾಗಿ ಆಮಂತ್ರಣ ವಿಂಡೋವನ್ನು ತೆರೆದಿಟ್ಟುರುವಂತೆಯೇ, ತನ್ನ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ತೆರೆದಿದೆ. ಜಗತ್ತಿನ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಮೊದಲೆಲ್ಲಾ ಸ್ವಲ್ಪ ಸಮಯಕ್ಕೆ ಮಾತ್ರವೇ ಆಹ್ವಾನ ವಿಂಡೋವನ್ನು ತೆರೆದಿತ್ತು. ಆದರೆ ಈ ಬಾರಿ ವಾಟ್ಸಾಪ್ ಇನ್ನು ಸ್ವಲ್ಪ ಸಮಯಕ್ಕಾಗಿ ಆಹ್ವಾನ ವಿಂಡೋವನ್ನು ತೆರೆದಿಟ್ಟಿದೆ.

ವಾಟ್ಸಾಪ್‌ನಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಡಬ್ಬಲ್ ಧಮಾಕಾ

ವಾಟ್ಸಾಪ್ ಕಾಲಿಂಗ್ ಫೀಚರ್ ಅನ್ನು ಹೆಚ್ಚಿನ ಬಳಕೆದಾರರು ಸ್ವೀಕರಿಸಿದ್ದಾರೆ ಎಂದು ವದಂತಿಗಳು ತಿಳಿಸಿವೆ. ಇದನ್ನು ನಿಮ್ಮ ಫೋನ್‌ನಲ್ಲಿ ಅಳವಡಿಸಿಕೊಳ್ಳಲು ನೀವು ವಾಟ್ಸಾಪ್‌ನ ಅತ್ಯಾಧುನಿಕ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ನೀವು ಕರೆ ಮಾಡುವ ಇತರ ವ್ಯಕ್ತಿ ಈ ಫೀಚರ್ ಅನ್ನು ಹೊಂದಿರಬೇಕು. ನಿಮಗೆ ಕರೆ ಬಂದ ನಂತರ, ಕರೆಗಳು, ಚಾಟ್ ಮತ್ತು ಸಂಪರ್ಕಗಳಿರುವ ಮೂರು ಟ್ಯಾಬ್‌ಗಳನ್ನು ಕಾಣಬಹುದಾಗಿದೆ.

ವಾಟ್ಸಾಪ್‌ನಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಡಬ್ಬಲ್ ಧಮಾಕಾ

ಇನ್ನು ವರದಿಗಳ ಪ್ರಕಾರ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಾಗಿ ಮೊಬೈಲ್ ಮೆಸೇಜಿಂಗ್ ಸೇವೆ ವಾಟ್ಸಾಪ್ ಬಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದೆ. ವಾಟ್ಸಾಪ್ ಸಿಇಒ ಜಾನ್ ಕೋಮ್ ಈ ವಿಷಯವನ್ನು ಘೋಷಿಸಿದ್ದು, ತಮ್ಮ ಕಂಪೆನಿಯಲ್ಲೇ ಆಂಡ್ರಾಯ್ಡ್‌ಗಾಗಿ ಕಾರ್ಯನಿರ್ವಹಿಸುವ ತಂಡವೊಂದಿದೆ ಎಂಬುದನ್ನು ಇವರು ಒತ್ತಿ ಸಾರಿದ್ದಾರೆ. ಫೇಸ್‌ಬುಕ್ ವಾಟ್ಸಾಪ್ ಅನ್ನು ಖರೀದಿಸಿದ್ದರೂ ತನ್ನ ಹಿಂದಿನ ಮೌಲ್ಯವನ್ನು ಸಂಸ್ಥೆ ಹಾಗೆಯೇ ಉಳಿಸಿಕೊಂಡಿದೆ ಎಂಬುದನ್ನು ದೃಢಪಡಿಸಿದೆ. ಇದೂ ಕೂಡ ವಾಟ್ಸಾಪ್‌ನ ಹೊಸ ಫೀಚರ್‌ಗೆ ಹೊಸ ಗರಿಯನ್ನು ಮೂಡಿಸಿದ್ದು ಆಂಡ್ರಾಯ್ಡ್ ಬಳಕೆದಾರರಿಗೆ ಡಬ್ಬಲ್ ಧಮಾಕಾ ಕೊಡುಗೆಯನ್ನು ನೀಡಿದೆ.

English summary
WhatsApp Voice Calling Now Open to All Android Users.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot