ವಾಟ್ಸಪ್ ವೆಬ್‌ ಆವೃತ್ತಿಯಲ್ಲಿಯೂ ಈಗ ಡಾರ್ಕ್ ಮೋಡ್ ಲಭ್ಯ!

|

ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಪ್ ಈಗಾಗಲೇ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದ್ದು, ಇತ್ತೀಚಿಗೆ ಹಲವು ಅನುಕೂಲಕರ ಫೀಚರ್ಸ್‌ಗಳ್ನು ಅವಳವಡಿಸಿದೆ. ಅವುಗಳಲ್ಲಿ ವಾಟ್ಸಪ್‌ ಈಗಾಗಲೇ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಆವೃತ್ತಿಯಲ್ಲಿ ಡಾರ್ಕ್ ಮೋಡ್ ಫೀಚರ್ ಅನ್ನು ಅಳವಡಿಸಿದೆ. ಇದೀಗ ಗ್ರಾಹಕರಿಗೆ ಅನುಕೂಲವಾಗಲೆಂದು ವಾಟ್ಸಪ್ ವೆಬ್‌ ಆವೃತ್ತಿಯಲ್ಲಿಯೂ ಸಹ ಡಾರ್ಕ್ ಮೋಡ್ ಸೌಲಭ್ಯವನ್ನು ಅಳವಡಿಸಿದೆ.

ವಾಟ್ಸಪ್ ವೆಬ್‌ ಆವೃತ್ತಿ

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ವೆಬ್‌ ಆವೃತ್ತಿಯಲ್ಲಿ ಡಾರ್ಕ್ ಮೋಡ್ ಸೌಲಭ್ಯವನ್ನು ಪರಿಚಯಿಸಿದೆ. ಬಳಕೆದಾರರು ಅಧಿಕೃತ ವೆಬ್ ಡಾರ್ಕ್ ಮೋಡ್ ಫೀಚರ್‌ಗಾಗಿ ಕಾಯದೇ ಈಗ ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್ ಮೋಡ್‌ಗೆ ಬದಲಾಯಿಸಬಹುದು ಎಂದು WABetaInfo ತಾಣವು ಹೇಳಿದೆ. ಹೀಗಾಗಿ ವಾಟ್ಸಪ್‌ ಅನ್ನು ಡೆಸ್ಕ್‌ಟಾಪ್‌/ವೆಬ್‌ ಆವೃತ್ತಿಯಲ್ಲಿ ಬಳಕೆ ಮಾಡುವವರು ಸಹ ಡಾರ್ಕ್‌ ಮೋಡ್ ಸೌಲಭ್ಯ ಬಳಕೆ ಮಾಡಬಹುದು. ಹಾಗಾದರೆ ಡಾರ್ಕ್ ಮೋಡ್ ಸಕ್ರಿಯ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡಿರಿ.

ಡಾರ್ಕ್ ಮೋಡ್ ಸಕ್ರಿಯ ಮಾಡುವುದು ಹೇಗೆ

ಡಾರ್ಕ್ ಮೋಡ್ ಸಕ್ರಿಯ ಮಾಡುವುದು ಹೇಗೆ

ಬಳಕೆದಾರರು ತಮ್ಮ ಬ್ರೌಸರ್‌ಗಳಲ್ಲಿ ವಾಟ್ಸಾಪ್ ವೆಬ್ ಅನ್ನು ತೆರೆಯ�%A

ವಾಟ್ಸಪ್‌ನಲ್ಲಿ ಡಾರ್ಕ್‌ಮೋಡ್ ಆನ್ ಮಾಡಲು ಹೀಗೆ ಮಾಡಿರಿ:

ವಾಟ್ಸಪ್‌ನಲ್ಲಿ ಡಾರ್ಕ್‌ಮೋಡ್ ಆನ್ ಮಾಡಲು ಹೀಗೆ ಮಾಡಿರಿ:

* ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸಪ್ ಆಪ್ ತೆರೆಯಿರಿ.

* ಮೆನು(ಮೂರು ಡಾಟ್) ಸೆಟ್ಟಿಂಗ್ ಕ್ಲಿಕ್ ಮಾಡಿರಿ.

* ನಂತರ ಚಾಟ್ಸ್‌(chats) ಆಯ್ಕೆ ಸೆಲೆಕ್ಟ್ ಮಾಡಿರಿ.

ಥೀಮ್ ಆಯ್ಕೆ

* ಚಾಟ್ಸ್ ಆಯ್ಕೆ ತೆರೆದಾಗ (Theme) 'ಥೀಮ್' ಆಯ್ಕೆ ಕಾಣಿಸುತ್ತದೆ.

* ಥೀಮ್ ಆಯ್ಕೆಯಲ್ಲಿ- ಸೆಟ್‌ ಬೈ ಬ್ಯಾಟರಿ ಸೇವರ್, ಲೈಟ್ ಮತ್ತು ಡಾರ್ಕ್ ಆಯ್ಕೆಗಳು ಕಾಣಿಸುತ್ತವೆ.

* ಅವುಗಳಲ್ಲಿ ಡಾರ್ಕ್ ಆಯ್ಕೆ ಸೆಲೆಕ್ಟ್ ಮಾಡಿರಿ.

ಡಾರ್ಕ್‌ಮೋಡ್ ಪ್ರಯೋಜನ

ಡಾರ್ಕ್‌ಮೋಡ್ ಪ್ರಯೋಜನ

ವಾಟ್ಸಪ್ ಬಳಕೆದಾರರು ಡಾರ್ಕ್‌ಮೋಡ್ ಆಯ್ಕೆ ಆನ್ ಮಾಡಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ವಾಟ್ಸಪ್‌ ಚಾಟ್, ಸ್ಟೇಟಸ್‌, ಫೀಡ್ ಮತ್ತು ಸೆಟ್ಟಿಂಗ್ ಆಯ್ಕೆಗಳು ಸಹ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಡಾರ್ಕ್‌ಮೋಡ್‌ ಆಯ್ಕೆ ಸಕ್ರಿಯದಿಂದ ಫೋನಿನ ಡಿಸ್‌ಪ್ಲೇಯ ಪ್ರಖರತೆ ಕಡಿಮೆ ಆಗುತ್ತದೆ ಇದರಿಂದ ಕಣ್ಣಿಗೂ ಉತ್ತಮ ಹಾಗೂ ಬ್ಯಾಟರಿ ಉಳಿಕೆಗೂ ನೆರವಾಗಲಿದೆ.

Best Mobiles in India

English summary
WhatsApp is set to receive dark mode on the web as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X