ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್‌! ವಿಶೇಷತೆ ಏನು?

|

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಕಾಲಕ್ಕೆ ಅನುಗುಣವಾಗಿ ಹೊಸ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಿದೆ. ಅಲ್ಲದೆ ಹಲವು ಪ್ರಮುಖ ಫೀಚರ್ಸ್‌ಗಳಲ್ಲಿ ಹೊಸ ಬದಲಾವಣೆಗಳನ್ನು ಕೂಡ ಮಾಡುತ್ತಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ದಿಷ್ಟ ಜನರಿಂದ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡುವ ಹೊಸ ಆಯ್ಕೆಯನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಇದರಿಂದ ನಿಮ್ಮ ಆನ್‌ಲೈನ್‌ ಸ್ಟೇಟಸ್‌ ಅನ್ನು ಯಾರು ನೋಡಬಾರದು ಎಂದು ಬಯಸುತ್ತಿರೋ ಅವರನೆಲ್ಲಾ ಹೈಡ್‌ ಮಾಡಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ನಿರ್ದಿಷ್ಟ ಜನರನ್ನು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಹೈಡ್‌ ಮಾಡುವ ಆಯ್ಕೆ ನೀಡಲು ಮುಂದಾಗಿದೆ. ಇದರಿಂದ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಅದರಲ್ಲೂ ವಿಶೇ‍ವಾಗಿ ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಕೆಲವು ಜನರು ನಿಮ್ಮ 'ಆನ್‌ಲೈನ್' ಸ್ಟೇಟಸ್‌ ನೋಡಬಾರದು ಎಂದು ನಿಮಗನಿಸಿದರೆ ಅವರನ್ನು ಹೈಡ್‌ ಮಾಡಬಹುದು. ಇದರಿಂದ ನೀವು ಆನ್‌ಲೈನ್‌ನಲ್ಲಿದ್ದರೂ ಕೂಡ ಅವರಿಗೆ ತಿಳಿಯದಂತೆ ಮಾಡಬಹುದು.

ವಾಟ್ಸಾಪ್‌

ವಾಟ್ಸಾಪ್‌ ಇತ್ತೀಚಿಗೆ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಇಂದು ಒಂದಾಗಿದೆ. ಬಳಕೆದಾರರ ಅನುಭವವನ್ನು ಸುದಾರಿಸಲು ಪ್ರಯತ್ನಿಸುತ್ತಿರುವ ವಾಟ್ಸಾಫ್‌ ಗೌಪ್ಯತೆಯ ಫೀಚರ್ಸ್‌ಗಳನ್ನು ನೀಡುತ್ತಾ ಬಂದಿದೆ. ಈ ಸಾಲಿಗೆ ಇದೀಗ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡುವ ಫೀಚರ್ಸ್‌ ಒಂದಾಗಿದೆ. ಸಾಮಾನ್ಯವಾಗಿ ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವವರಿಗೆ ನೀವು ಆನ್‌ಲೈನ್‌ನಲ್ಲಿದ್ದರೆ ತಿಳಿಯಲಿದೆ. ಆದರೆ ಹೊಸ ಆಯ್ಕೆಯು ಸೇರ್ಪಡೆಯಾದ ನಂತರ ನೀವು ಬಯಸದ ವ್ಯಕ್ತಿಗಳು ಆನ್‌ಲೈನ್‌ ಸ್ಟೇಟಸ್‌ ನೋಡದಂತೆ ಮಾಡುವುದಕ್ಕೆ ನಿಮಗೆ ಅವಕಾಶ ಸಿಗಲಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಹೊಸ ಆಯ್ಕೆಯ ಮೂಲಕ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಸಧ್ಯವಾಗಲಿದೆ. ಪ್ರಸ್ತುತ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದೆ. ಆದ್ದರಿಂದ ಬೀಟಾ ಬಳಕೆದಾರರಿಗೂ ಕೂಡ ಈ ಫೀಚರ್ಸ್‌ ಇನ್ನೂ ಲಭ್ಯವಿಲ್ಲ. ಇದಲ್ಲದೆ "ಎಲ್ಲರೂ" ಮತ್ತು "ಕೊನೆಯದಾಗಿ ನೋಡಿದಂತೆಯೇ" ಎಂಬ ಎರಡು ಹೊಸ ಆಯ್ಕೆಗಳು ಕೂಡ ವಾಟ್ಸಾಪ್‌ನಲ್ಲಿ ಸದ್ಯದಲ್ಲೇ ಸೇರ್ಪಡೆಯಾಗಲಿದೆ. ಇದರಿಂದ ನೀವು ಲಾಸ್ಟ್‌ ಸೀನ್‌ ಅನ್ನು ಯಾರೆಲ್ಲಾ ನೋಡಬಹುದು ಅನ್ನೊದನ್ನ ಕಾನ್ಫಿಗರ್ ಮಾಡಲು ಸಾಧ್ಯವಾಗುತ್ತದೆ. ಇದರಲ್ಲಿ ನೀವು "ಕೊನೆಯದಾಗಿ ನೋಡಿದಂತೆಯೇ" ಆಯ್ಕೆಮಾಡಿದರೆ, ನೀವು ಆನ್‌ಲೈನ್‌ನಲ್ಲಿರುವಾಗ ಸಂಪರ್ಕಗಳಲ್ಲದವರು ನೋಡಲು ಸಾಧ್ಯವಾಗುವುದಿಲ್ಲ.

ವಾಟ್ಸಾಪ್‌ನಲ್ಲಿ

ಇನ್ನು ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಲಾಸ್ಟ್‌ ಸೀನ್‌ ಮತ್ತು ಸ್ಟೇಟಸ್‌ ಅನ್ನು ನಿರ್ದಿಷ್ಟ ಜನರಿಂದ ಮರೆಮಾಡುವ ಆಯ್ಕೆಯನ್ನು ಹೊಂದಿರಲಿಲ್ಲ. ಬಳಕೆದಾರರು "ಎಲ್ಲರೂ", "ನನ್ನ ಸಂಪರ್ಕಗಳು" ಮತ್ತು "ಯಾರೂ ಇಲ್ಲ" ಎನ್ನುವ ಮೂರು ಆಯ್ಕೆಗಳನ್ನು ಮಾತ್ರ ಹೊಂದಿದ್ದರು. ಈಗ ಬಳಕೆದಾರರು "ನನ್ನ ಸಂಪರ್ಕಗಳನ್ನು ಹೊರತುಪಡಿಸಿ" ಆಯ್ಕೆಯನ್ನು ಕೂಡ ಹೊಂದಿದ್ದಾರೆ. ಇದರಿಂದ ನೀವು ಬಯಸದ ನಿರ್ದಿಷ್ಟ ಕಂಟ್ಯಾಕ್ಟ್‌ಗಳನ್ನು ನಿಮ್ಮ ಸ್ಟೇಟಸ್‌ ನೋಡದಂತೆ ತಡೆಯಬಹುದಾಗಿದೆ.

ಸ್ಟೇಟಸ್‌

ಇದರಿಂದ ನೀವು ವಾಟ್ಸಾಪ್‌ನಲ್ಲಿ ಸ್ಟೇಟಸ್‌ ಅನ್ನು ಪೋಸ್ಟ್ ಮಾಡುವ ಮೊದಲು "ಎಲ್ಲರೂ" ಆಯ್ಕೆಯನ್ನು ಆರಿಸಿದರೆ ನಿಮ್ಮ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ ಬಗ್ಗೆ ಎಲ್ಲಾ ವಾಟ್ಸಾಪ್‌ ಬಳಕೆದಾರರಿಗೆ ಲಭ್ಯವಿರುತ್ತದೆ. ಒಂದು ವೇಳೆ ನೀವು 'ನನ್ನ ಸಂಪರ್ಕಗಳು' ಆಯ್ಕೆ ಮಾಡಿದರೆ, ನಿಮ್ಮ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ, ನಿಮ್ಮ ಸಂಪರ್ಕಗಳಿಗೆ ಲಭ್ಯವಿರುತ್ತದೆ. ಇದಲ್ಲದೆ ನೀವು 'ಯಾರೂ ಇಲ್ಲ' ಅನ್ನು ಆಯ್ಕೆ ಮಾಡಿದರೆ, ನಿಮ್ಮ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ, ಬಗ್ಗೆ, ಅಥವಾ ಸ್ಟೇಟಸ್‌ ಬಗ್ಗೆ ಯಾರಿಗೂ ಲಭ್ಯವಿರುವುದಿಲ್ಲ.

ವಾಟ್ಸಾಪ್‌

ವಾಟ್ಸಾಪ್‌ ಇತ್ತೀಚಿಗೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ವಾಟ್ಸಾಪ್‌ ಗ್ರೂಪ್‌ ಅಡ್ಮೀನ್‌ ಒಂದು ಗುಂಪಿಗೆ 512 ರ ವರೆಗೆ ಭಾಗವಹಿಸುವವರನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಇದೀಗ ಆಂಡ್ರಾಯ್ಡ್‌, iOS ಮತ್ತು ಡೆಸ್ಕ್‌ಟಾಪ್ ಆಧಾರಿತ ಅಪ್ಲಿಕೇಶನ್‌ಗಳ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಒಂದು ತಿಂಗಳ ನಂತರ, ಕಂಪನಿಯು ಜಗತ್ತಿನಾದ್ಯಂತ ತನ್ನ ಎಲ್ಲಾ ಬಳಕೆದಾರರಿಗೆ ಹೊರತರಲು ಪ್ರಾರಂಭಿಸಿದೆ. ಇನ್ನು ನೀವು ಕೂಡ ನಿಮ್ಮ ವಾಟ್ಸಾಪ್‌ನಲ್ಲಿ ಈ ಹೊಸ ಆಯ್ಕೆಯನ್ನು ಪಡೆದಿದ್ದಾರಾ ಅನ್ನೊದನ್ನ ಪರಿಶೀಲಿಸಲು, ನ್ಯೂ ಗ್ರೂಪ್‌ ಕ್ರಿಯೆಟ್‌ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ತಿಳಿಯಬಹುದಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ತನ್ನ ವೀಡಿಯೊ ಕಾಲ್‌ನಲ್ಲಿ ವರ್ಚುವಲ್‌ ಅವತಾರ್‌ಗಳನ್ನು ಬಳಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಅಲ್ಲದೆ ಈ ಅವತಾರ್‌ಗಳನ್ನು ದೀರ್ಘಕಾಲದವರೆಗೆ ವೀಡಿಯೊ ಕಾಲ್‌ನಲ್ಲಿ ಬಳಸುವುದಕ್ಕೆ ಸಾಧ್ಯವಾಗಲಿದೆ ಎನ್ನಲಾಗಿದೆ. ಇದಕ್ಕಾಗಿ ವಾಟ್ಸಾಪ್‌ ತನ್ನದೇ ಆದ ಮೆಮೊಜಿ/ಬಿಟ್‌ಮೊಜಿ ಪರ್ಯಾಯ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಸದ್ಯ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಆದರಿಂದ ಈ ಆಯ್ಕೆಯನ್ನು ಯಾವುದೇ ಸಮಯದಲ್ಲಿ ವೀಡಿಯೊ ಕರೆಗಳಲ್ಲಿ ಬಳಸುವುದಕ್ಕೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಫೀಚರ್ಸ್‌

ಇದಲ್ಲದೆ ಬಳಕೆದಾರರು ತಮ್ಮ ಚಾಟ್‌ಗಳು ಮತ್ತು ಗ್ರೂಪ್‌ಗಳಲ್ಲಿ ತಮ್ಮ ಅವತಾರಗಳನ್ನು ಸ್ಟಿಕ್ಕರ್‌ಗಳಾಗಿ ಕಳುಹಿಸುವುದಕ್ಕೆ ಅನುಮತಿಸುವ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ತಯಾರಿ ನಡೆಸಿದೆ. ಇದಕ್ಕಾಗಿ "ಅವತಾರ್ ಎಡಿಟರ್" ಅನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. ಇದರ ಮೂಲಕ ಬಳಕೆದಾರರು ತಮ್ಮ ಸ್ವಂತ ಅವತಾರ್‌ ಅನ್ನು ಸೆಟ್‌ ಮಾಡುವುದಕ್ಕೆ ಸಾದ್ಯವಾಗಲಿದೆ. ಜೊತೆಗೆ ನಿಮ್ಮ ಅವತಾರ್‌ ಅನ್ನು ಕಸ್ಟಮೈಸ್ ಕೂಡ ಮಾಡಬಹುದಾಗಿದೆ. ಸದ್ಯ ಈ ಅವತಾರ್‌ ಎಡಿಟರ್‌ ಆಯ್ಕೆಯು ಇನ್ನು ಕೂಡ ಅಭಿವೃದ್ದಿಯ ಹಂತದಲ್ಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಇದರೊಂದಿಗೆ ವಾಟ್ಸಾಪ್‌ ತನ್ನ ಮೀಡಿಯಾ ಎಡಿಟರ್‌ ಆಯ್ಕೆಯಲ್ಲಿ ಬ್ಲರ್ ಟೂಲ್ ಅನ್ನು ಸೇರಿಸುವ ನಿರೀಕ್ಷೆ ಕೂಡ ಇದೆ. ಈ ಫೀಚರ್ಸ್‌ ಮೂಲಕ ನೀವು ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಟೂಲ್‌ ಬಳಸದೆ ಯಾವುದೇ ಚಿತ್ರದ ಭಾಗವನ್ನು ಬ್ಲರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಕ್ಕಾಗಿ ವಾಟ್ಸಾಪ್ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಡ್ರಾಯಿಂಗ್ ಟೂಲ್ ಅನ್ನು ಪರಿಚಯಿಸಲು ಪ್ಲಾನ್‌ ಮಾಡಿದೆ ಎನ್ನಲಾಗಿದೆ. ಇದರಿಂದ ನೀವು ಇಮೇಜ್‌ ಅನ್ನು ಶೇರ್‌ ಮಾಡುವ ಮುನ್ನ ಬ್ಲರ್‌ ಮಾಡುವ ಜಾಗವನ್ನು ವಾಟ್ಸಾಪ್‌ನಲ್ಲಿ ಬ್ಲರ್‌ ಮಾಡಬಹುದಾಗಿದೆ.

Best Mobiles in India

English summary
Whatsapp will soon allow users to hide online status from everyone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X