ಗ್ರೂಪ್‌ ಕಾಲ್‌ನಲ್ಲಿ ಕಿರಿಕಿರಿ ತಪ್ಪಿಸಲು ಹೊಸ ಆಯ್ಕೆ ನೀಡಿದ ವಾಟ್ಸಾಪ್‌!

|

ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚು ಉಪಯೋಗಿಸುವ ಅಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್‌ ಕೂಡ ಒಂದು. ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿರುವ ವಾಟ್ಸಾಪ್‌ ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ಗ್ರೂಪ್‌ ಕಾಲ್‌ ಹೋಸ್ಟ್‌ ಮಾಡುವವರಿಗಾಗಿ ಹೊಸ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ಗ್ರೂಪ್‌ ಕಾಲ್‌ನಲ್ಲಿ ಕಿರಿಕಿರಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಗ್ರೂಪ್‌ ಕಾಲ್‌ ಫೀಚರ್ಸ್‌ನಲ್ಲಿ ಹೊಸ ಅಪ್ಡೇಟ್‌ ಮಾಡಿದೆ. ಇದರಿಂದ ಗ್ರೂಪ್‌ ಕಾಲ್‌ ಹೋಸ್ಟ್‌ ಹೊಸ ಆಯ್ಕೆಯನ್ನು ಪಡೆಯಲಿದ್ದಾರೆ. ಗ್ರೂಪ್‌ ಕಾಲ್‌ ಹೋಸ್ಟ್ ಈಗ ತಮ್ಮನ್ನು ಮ್ಯೂಟ್ ಮಾಡಲು ಮರೆಯುವ ಜನರನ್ನು ಮ್ಯೂಟ್ ಮಾಡಲು ಸಾಧ್ಯವಾಗಲಿದೆ. ಈ ಹೊಸ ಅಪ್ಡೇಟ್‌ ಮೂಲಕ ವಾಟ್ಸಾಪ್‌ ಗ್ರೂಪ್‌ ಕಾಲ್‌ ಫೀಚರ್ಸ್‌ ಹೆಚ್ಚು ಉಪಯುಕ್ತವಾಗಲಿದೆ. ಹಾಗಾದ್ರೆ ವಾಟ್ಸಾಪ್‌ ಗ್ರೂಪ್‌ ಕಾಲ್‌ ಸೇರಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಗ್ರೂಪ್‌ ಕಾಲ್‌ ಫೀಚರ್ಸ್‌ನಲ್ಲಿ ಗ್ರೂಪ್‌ ಕಾಲ್‌ ಹೋಸ್ಟ್‌ ಮಾಡುವವರಿಗೆ ಹೊಸ ಆಯ್ಕೆಗಳನ್ನು ನೀಡುತ್ತಾ ಬಂದಿದೆ. ಇದೀಗ ಬಂದಿರುವ ಹೊಸ ಆಯ್ಕೆಯನ್ನು ಬಳಸಿ ನಿರ್ದಿಷ್ಟ ಜನರನ್ನು ನೀವು ಮ್ಯೂಟ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಇಲ್ಲವೇ ಗ್ರೂಪ್‌ ಕಾಲ್‌ನಲ್ಲಿ ಮ್ಯೂಟ್‌ ಮಾಡಲು ಮರೆತವರಿಗೆ ಸಂದೇಶವನ್ನು ಕಳುಹಿಸುವ ಆಯ್ಕೆ ಲಭ್ಯವಾಗಲಿದೆ. ಇದರಿಂದ ನಿಮಗೆ ಗ್ರೂಪ್‌ ಕಾಲ್‌ ಸಮಯದಲ್ಲಿ ಮ್ಯೂಟ್‌ ಮಾಡದೆ ಕಿರಕಿರಿ ನೀಡುವವರನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಗ್ರೂಪ್‌ ಕಾಲ್‌ನ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುವುದಕ್ಕೆ ಇದು ಸಹಾಯಕವಾಗಲಿದೆ.

ವಾಟ್ಸಾಪ್‌

ಮೆಟಾ ಒಡೆತನದ ವಾಟ್ಸಾಪ್‌ ಈ ಹಿಂದೆ ಕೇವಲ 8 ಮಂದಿಗೆ ಮಾತ್ರ ಗ್ರೂಪ್‌ಕಾಲ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಆದರೆ ಕಳೆದ ಏಪ್ರಿಲ್‌ನಲ್ಲಿ ಗ್ರೂಪ್‌ ಕಾಲ್‌ನಲ್ಲಿ 32 ಸದಸ್ಯರನ್ನು ಸೇರಿಸುವ ಅವಕಾಶವನ್ನು ನೀಡಿದೆ. ಇದರಿಂದ ಹೆಚ್ಚಿನ ಮಂದಿ ಗ್ರೂಪ್‌ಕಾಲ್‌ನಲ್ಲಿ ಸೇರಿದಾಗ ಮ್ಯೂಟ್‌ ಮಾಡದೆ ಶಬ್ದ ಮಾಡುವುದರಿಂದ ಬೇರೆಯವರು ಮಾತನಾಡಲು ಸಾದ್ಯವಾಗುವುದಿಲ್ಲ. ಆದರಿಂದ ಮ್ಯೂಟ್‌ ಆಯ್ಕೆಯನ್ನು ವಾಟ್ಸಾಪ್‌ ನೀಡಿದೆ. ಇನ್ನು ಗ್ರೂಪ್‌ ಕಾಲ್‌ ಹಿಸ್ಟರಿ ಕಾಲ್ಸ್‌ ಟ್ಯಾಬ್‌ನಲ್ಲಿ ಕಾಣಿಸಲಿದೆ. ಕರೆಯಿಂದ ಪ್ರತ್ಯೇಕವಾಗಿ ಭಾಗವಹಿಸುವವರನ್ನು ವೀಕ್ಷಿಸಲು ನೀವು ಕಾಲ್‌ ಹಿಸ್ಟರಿ ಮೂಲಕ ಟ್ಯಾಪ್‌ ಮಾಡಬಹುದಾಗಿದೆ.

ವಾಟ್ಸಾಪ್‌ನಲ್ಲಿ ಗ್ರೂಪ್‌ ಕಾಲ್‌ ಮಾಡುವುದಕ್ಕೆ ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ಗ್ರೂಪ್‌ ಕಾಲ್‌ ಮಾಡುವುದಕ್ಕೆ ಹೀಗೆ ಮಾಡಿ:

ಹಂತ:1 ಮೊದಲಿಗೆ ನೀವು ಗ್ರೂಪ್‌ ಕಾಲ್‌ ಮಾಡಲು ಬಯಸುವ ಗ್ರೂಪ್‌ ಚಾಟ್ ತೆರೆಯಿರಿ.
ಹಂತ:2 ನಿಮ್ಮ ಗ್ರೂಪ್‌ನಲ್ಲಿ 32 ಕ್ಕಿಂತ ಹೆಚ್ಚು ಭಾಗವಹಿಸುವವರನ್ನು ಹೊಂದಿದ್ದರೆ ನೀವು ಗ್ರೂಪ್‌ ಕಾಲ್‌ ಆಯ್ಕೆಯನ್ನು ಟ್ಯಾಪ್ ಮಾಡಬಹುದು
ಹಂತ:3 ಇದರಲ್ಲಿ 33 ಕ್ಕಿಂತ ಹೆಚ್ಚು ಭಾಗವಹಿಸುವವರು ಇದ್ದರೆ, ಕರೆಗೆ ಮೊದಲು ಉತ್ತರಿಸುವ ಏಳು ಜನರು ಕರೆಗೆ ಸೇರಬಹುದು.
ಹಂತ:4 ನೀವು ಕರೆಗೆ ಸೇರಿಸಲು ಬಯಸುವ ಸಂಪರ್ಕಗಳನ್ನು ಸಹ ನೀವು ಕಾಣಬಹುದು, ಇದರಲ್ಲಿ ವಾಯ್ಸ್‌ಕಾಲ್‌ ಟ್ಯಾಪ್ ಮಾಡಬೇಕಾಗುತ್ತದೆ.

ವಾಟ್ಸಾಪ್‌

ಇದಲ್ಲದೆ ಇತ್ತೀಚಿಗೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ವಾಟ್ಸಾಪ್‌ ಗ್ರೂಪ್‌ ಅಡ್ಮೀನ್‌ ಒಂದು ಗುಂಪಿಗೆ 512 ರ ವರೆಗೆ ಭಾಗವಹಿಸುವವರನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಈಗಾಗಲೇ ಆಂಡ್ರಾಯ್ಡ್‌, iOS ಮತ್ತು ಡೆಸ್ಕ್‌ಟಾಪ್ ಆಧಾರಿತ ಅಪ್ಲಿಕೇಶನ್‌ಗಳ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಒಂದು ತಿಂಗಳು ಕಳೆದ ನಂತರ, ಈ ಆಯ್ಕೆಯನ್ನು ಜಗತ್ತಿನಾದ್ಯಂತ ತನ್ನ ಎಲ್ಲಾ ಬಳಕೆದಾರರಿಗೆ ಹೊರತರಲಾಗುವುದು ಎಂದು ಹೇಳಲಾಗಿದೆ.

ನೀವು ಕೂಡ ನಿಮ್ಮ ವಾಟ್ಸಾಪ್‌ ಗ್ರೂಪ್‌ನಲ್ಲಿ ಈ ಹೊಸ ಆಯ್ಕೆಯನ್ನು ಪರಿಶೀಲಿಸಲು ನ್ಯೂ ಗ್ರೂಪ್‌ ಕ್ರಿಯೆಟ್‌ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಇದರಿಂದ ಹೊಸ ಗ್ರೂಪ್‌ ಕ್ರಿಯೆಟ್‌ ಮಾಡಲು ಹೋದಾಗ ನೀವು ಗ್ರೂಪಿಗೆ ಎಷ್ಟು ಮಂದಿಯನ್ನು ಸೇರಿಸಬಹುದು ಎನ್ನುವ ಆಯ್ಕೆ ಕಾಣಲಿದೆ. ಒಂದು ವೇಳೆ ನೀವು 512 ಸದಸ್ಯರನ್ನು ಸೇರಿಸಬಹುದು ಎನ್ನುವ ಆಯ್ಕೆಯನ್ನು ನೋಡಿದರೆ, ಹೊಸ ಅಪ್ಡೇಟ್‌ ಅನ್ನು ನೀವು ಸ್ವೀಕರಿಸಿದ್ದೀರಿ ಎಂದರ್ಥ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನು ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರಲ್ಲಿ 'ಡಿಲೀಟ್ ಮಾಡಿದ ಮೆಸೆಜ್‌ ರದ್ದುಗೊಳಿಸು' (Undo Deleted Messages) ಫೀಚರ್ಸ್‌ ಕೂಡ ಸೇರಿದೆ. ಈ ಫೀಚರ್ಸ್‌ ಈಗಾಗಲೇ ಅಭಿವೃದ್ದಿ ಹಂತದಲ್ಲಿದ್ದು, ಕೆಲವು ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ಆರಂಭಿಕ ಪರೀಕ್ಷೆಯಲ್ಲಿ ಲಭ್ಯವಾಗುತ್ತಿದೆ. ಇನ್ನು ಈ ಫೀಚರ್‌ ಮೂಲಕ ನೀವು ಡಿಲೀಟ್‌ ಮಾಡಿದ ಮೆಸೆಜ್‌ಗಳನ್ನು ಹಿಂಪಡೆಯಲು ಅವಕಾಶ ಸಿಗಲಿದೆ. ತಪ್ಪಾಗಿ ಡಿಲೀಟ್ ಮಾಡಿದ ಮೆಸೇಜ್‌ಗಳನ್ನು ಮತ್ತೆ ಹಿಂಪಡೆಯಲು ಅನುಮತಿಸುತ್ತದೆ. ಇದಕ್ಕಾಗಿ 'Undo' ಬಟನ್ ಸಂಕ್ಷಿಪ್ತವಾಗಿ ಪರದೆಯ ಕೆಳಗಿನ ತುದಿಯಲ್ಲಿ ಪಾಪ್ ಅಪ್ ಆಗುತ್ತದೆ. ಈ ಆಯ್ಕೆಯು ಡಿಲೀಟ್ ಮಾಡಿದ ಮೆಸೆಜ್‌ಗಳನ್ನು ಹಿಂಪಡೆಯಲು ಬಳಕೆದಾರರಿಗೆ ಸಹಾಯ ಮಾಡಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಇತ್ತೀಚಿನ ಅಪ್ಡೇಟ್‌ನಲ್ಲಿ ಚಾಟ್‌ ಟ್ರಾನ್ಸ್‌ಫರ್‌ ಮಾಡುವುದಕ್ಕೆ ಹೊಸ ಅವಕಾಶ ನೀಡಿದೆ. ಇದರಿಂದ ಆಂಡ್ರಾಯ್ಡ್‌ ಬಳಕೆದಾರರು ಐಫೋನ್‌ಗೆ ತಮ್ಮ ಚಾಟ್‌ಗಳನ್ನು ಸುಲಭವಾಗಿ ಟ್ರಾನ್ಸ್‌ಫರ್‌ ಮಾಡಬಹುದು. ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಸಹಾಯವಿಲ್ಲದೆ ಚಾಟ್‌ ಟ್ರಾನ್ಸಫರ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಸದ್ಯ ಆಫಲ್‌ ಐಫೋನ್‌ ಬಳಕೆದಾರರು ಈ ಹೊಸ ಅಪ್ಡೇಟ್‌ ಅನ್ನು ಬಳಸಲು ತಮ್ಮ ಫೋನ್‌ಗಳನ್ನು ಬ್ಯಾಕಪ್ ಮತ್ತು ಫ್ಯಾಕ್ಟರಿ ರೀಸೆಟ್ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಈ ಚಾಟ್‌ ಟ್ರಾನ್ಸಫರ್‌ ಆಂಡ್ರಾಯ್ಡ್‌ ಮತ್ತು ಐಫೋನ್‌ ನಡುವೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೂಲಕ ಮಾಡಲಾಗುವುದು ಎನ್ನುವ ಮಾತನ್ನು ಮೆಟಾ ಕಂಪೆನಿ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ಹೇಳಿದ್ದಾರೆ.

ವಾಟ್ಸಾಪ್‌ನ

ಇನ್ನು ವಾಟ್ಸಾಪ್‌ನ ತನ್ನ ಬಳಕೆದಾರರಿಗೆ ನೀಡಿದ ಇತ್ತೀಚಿನ ಆಯ್ಕೆಗಳಲ್ಲಿ ಚಾಟ್‌ ಬ್ಯಾಕಪ್‌ ಅನ್ನು ಹೊರಗಡೆ ಸ್ಟೋರೇಜ್‌ ಮಾಡುವುದು ಕೂಡ ಸೇರಿದೆ.ಅಂದರೆ ಗೂಗಲ್‌ ಡ್ರೈವ್‌ ಮಾತ್ರವಲ್ಲದೆ ಇತರೆ ಕ್ಲೌಡ್‌ ಸ್ಟೋರೇಜ್‌ನಲ್ಲಿ ನಿಮ್ಮ ವಾಟ್ಸಾಪ್‌ ಬ್ಯಾಕಪ್‌ ಸ್ಟೋರೇಜ್‌ ಮಾಡಬಹುದು. ಸದ್ಯ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ದಿ ಹಂತದಲ್ಲಿದೆ.

Best Mobiles in India

English summary
WhatsApp’s group calling feature has received an important update

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X