ಬಳಕೆದಾರರ ಬಹು ದಿನಗಳ ಕೋರಿಕೆಯನ್ನು ಈಡೇರಿಸಲು ಮುಂದಾದ ವಾಟ್ಸಾಪ್‌!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಬಳಕೆದಾರರ ಬಹು ದಿನಗಳ ಕೋರಿಕೆಯನ್ನು ಈಡೇರಿಸುವುದಕ್ಕೆ ಮುಂದಾಗಿದೆ. ವಾಟ್ಸಾಪ್‌ನಲ್ಲಿ ಫೋಟೋ ಸೆಂಡ್‌ ಮಾಡಿದರೆ ಅದರ ಮೂಲ ಗುಣಮಟ್ಟ ಉಳಿಯುವುದಿಲ್ಲ ಎನ್ನುವ ಕೊರಗನ್ನು ಮರೆ ಮಾಚಲು ಮುಂದಾಗಿದೆ. ಇದಕ್ಕಾಗಿ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೂಲ ಗುಣಮಟ್ಟದ ಫೋಟೋಗಳನ್ನು ಸೆಂಡ್‌ ಮಾಡಲು ಅನುಮತಿಸುವ ಹೊಸ ಫೀಚರ್ಸ್‌ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ.

ಬಳಕೆದಾರರ ಬಹು ದಿನಗಳ ಕೋರಿಕೆಯನ್ನು ಈಡೇರಿಸಲು ಮುಂದಾದ ವಾಟ್ಸಾಪ್‌!

ಹೌದು, ವಾಟ್ಸಾಪ್‌ನಲ್ಲಿ ಫೋಟೋಗಳನ್ನು ಮೂಲ ಗುಣಮಟ್ಟದಲ್ಲಿ ಕಳುಹಿಸುವುದಕ್ಕೆ ಅವಕಾಶ ಸಿಗುವ ದಿನಗಳು ದೂರವಿಲ್ಲ ಎನ್ನಲಾಗಿದೆ. ಪ್ರಸ್ತುತ ದಿನಗಳಲ್ಲಿ ನೀವು ವಾಟ್ಸಾಪ್‌ ಮೂಲಕ ಫೋಟೋ ಸೇಂಡ್‌ ಮಾಡಿದರೆ ಅದರ ಮೂಲಗುಣಮಟ್ಟದಲ್ಲಿ ಸ್ವಲ್ಪ ಬದಲಾವಣೆಯನ್ನು ಕಾಣಬಹುದು. ಇದರಿಂದ ಹೆಚ್ಚಿನ ಜನರು ವಾಟ್ಸಾಪ್‌ ಮೂಲಕ ಫೋಟೋ ಶೇರ್‌ ಮಾಡಲು ಹೋಗುವುದಿಲ್ಲ. ಆದರೆ ಈ ಹೊಸ ಫೀಚರ್ಸ್‌ ಸೇರ್ಪಡೆಯಾದರೆ ಈ ಕೊರತೆ ನಿವಾರಣೆಯಾಗಲಿದೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಫೀಚರ್ಸ್‌ ನಿಮಗೆ ಹೇಗೆ ಅನುಕೂಲಕರವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ ನಿಮಗೆ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಲು ಅನುಮತಿಸಲಿದೆ. ಅಂದರೆ ನೀವು ಸೆಂಡ್‌ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಅನ್ನೊದನ್ನ ನೀವೇ ನಿರ್ಧಾರ ಮಾಡಬಹುದಾಗಿದೆ. ಇದರಿಂದ ನಿಮ್ಮ ಫೋಟೋ ಮೂಲ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಸೆಂಡ್‌ ಮಾಡುವ ಅವಕಾಶ ನಿಮಗೆ ಲಭ್ಯವಾಗಲಿದೆ. ಸದ್ಯ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಈ ಫೀಚರ್ಸ್‌ ಲಭ್ಯವಾಗಲಿದ್ದು, ಇದು ಇತ್ತೀಚಿನ ಬೀಟಾ ಅಪ್‌ಡೇಟ್ - 2.23.2.11ನಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

ಬಳಕೆದಾರರ ಬಹು ದಿನಗಳ ಕೋರಿಕೆಯನ್ನು ಈಡೇರಿಸಲು ಮುಂದಾದ ವಾಟ್ಸಾಪ್‌!

ಇನ್ನು ಈ ಫೀಚರ್ಸ್‌ ಬಳಕೆದಾರರಿಗೆ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಫೋಟೋ ಕಳುಹಿಸಲು ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಇತ್ತೀಚಿನ ಬೀಟಾ ಆವೃತ್ತಿ 2.21.15.7 ನಲ್ಲಿ ಕೂಡ ವಾಟ್ಸಾಪ್‌ ಮೂರು ರೀತಿಯ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡುವ ಅವಕಾಶಗಳನ್ನು ಕಲ್ಪಿಸಿದೆ. ಇನ್ನು ಈ ಆಯ್ಕೆಯುವ ವಾಟ್ಸಪ್‌ ಸೆಟ್ಟಿಂಗ್ಸ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದನ್ನು ಟ್ಯಾಪ್‌ ಮಾಡುವ ಮೂಲಕ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಬಹುದು ಎಂದು ವಾಬೇಟಾಇನ್ಫೋ ವೆಬ್‌ಸೈಟ್‌ ತಿಳಿಸಿದೆ.

ವಾಟ್ಸಾಪ್‌ ಬಳಕೆದಾರರು ಈ ಮಾದರಿಯ ಫೀಚರ್ಸ್‌ ಅನ್ನು ಸಾಕಷ್ಟು ದಿನದಿಂದ ಬಯಸುತ್ತಿದ್ದರು. ಇದು ಬಳಕೆದಾರರಿಗೆ ಅತಿ ಅವಶ್ಯಕವಾಗಿ ಬೇಕಾಗಿದ್ದ ಪ್ರಮುಖ ಫೀಚರ್ಸ್‌ಗಳಲ್ಲಿ ಒಂದಾಗಿತ್ತು. ಇದನ್ನು ಗಮನಿಸಿಯೇ ವಾಟ್ಸಾಪ್‌ ಈ ಫೀಚರ್ಸ್‌ ಅನ್ನು ಅಭಿವೃದ್ಧಿ ಪಡಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನೀವು ನಿಮ್ಮ ಫೋಟೋಗಳನ್ನು ಫೈಲ್‌ ಡಾಕ್ಯುಮೆಂಟ್‌ ಶೈಲಿಯಲ್ಲಿ ಕಳುಹಿಸುವುದನ್ನು ತಪ್ಪಿಸಬಹುದಾಗಿದೆ.

ಬಳಕೆದಾರರ ಬಹು ದಿನಗಳ ಕೋರಿಕೆಯನ್ನು ಈಡೇರಿಸಲು ಮುಂದಾದ ವಾಟ್ಸಾಪ್‌!

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಕಂಟ್ಯಾಕ್ಟ್‌ ಅನ್ನು ಬ್ಲಾಕ್‌ ಮಾಡುವ ಆಯ್ಕೆಯಲ್ಲಿ ಹೊಸ ವಿಧಾನವನ್ನು ಪರಿಚಯಿಸಿದೆ. ಇದರಿಂದ ನೀವು ಕಂಟ್ಯಾಕ್ಟ್‌ ಚಾಟ್‌ ಅನ್ನು ತೆರೆಯದೆ ನೇರವಾಗಿ ಬ್ಲಾಕ್‌ ಮಾಡುವ ಅವಕಾಶ ಲಭ್ಯವಾಗಲಿದೆ. ಇದಕ್ಕಾಗಿ ನೀವು ವಾಟ್ಸಾಪ್‌ ಆ್ಯಪ್‌ ಎಂಟ್ರಿ ಪಾಯಿಂಟ್‌ ಚಾಟ್‌ ಲಿಸ್ಟ್‌ನಲ್ಲಿ ಲಭ್ಯವಾಗುವ ಕಂಟ್ಯಾಕ್ಟ್‌ ಅನ್ನು ನೇರವಾಗಿ ಬ್ಲಾಕ್‌ ಮಾಡಬಹುದಾಗಿದೆ. ಇದಲ್ಲದೆ ಅಪರಿಚಿತ ಸಂಪರ್ಕದಿಂದ ನಿಮಗೆ ಯಾವುದೇ ಸಂದೇಶ ಬಂದರೆ ಅದನ್ನು ಬ್ಲಾಕ್‌ ಮಾಡುವ ಆಯ್ಕೆಯನ್ನು ವಾಟ್ಸಾಪ್‌ ನೇರವಾಗಿ ನೀಡಲಿದೆ. ಇದರಿಂದ ನೀವು ವಾಟ್ಸಾಪ್‌ ತೆರೆಯದಿದ್ದರೂ ಸಂದೇಶದ ನೋಟಿಫಿಕೇಶನ್‌ನಲ್ಲಿಯೇ ಅದನ್ನು ಬ್ಲಾಕ್‌ ಮಾಡಬಹುದಾಗಿದೆ.

ಈ ಎರಡು ವಿಧಾನಗಳನ್ನು ನೀಡುವ ಹೊಸ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದೆ ಎನ್ನಲಾಗಿದೆ. ಇದು ವಾಟ್ಸಾಪ್‌ ನ 2.23.2.10 ಅಪ್ಡೇಟ್‌ನಲ್ಲಿ ಬೀಟಾ ಬಳಕೆದಾರರಿಗೆ ಲಭ್ಯವಾಗಲಿದ್ದು, ನಂತರದ ದಿನಗಳಲ್ಲಿ ಎಲ್ಲರಿಗೂ ದೊರೆಯಲಿದೆ. ಇದು ಐಒಎಸ್‌ ಅಪ್ಲಿಕೇಶನ್‌ನಲ್ಲಿ ಲಭ್ಯವಾಗುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅಂತಿಮವಾಗಿ ಬಿಡುಗಡೆಯಾದಗ ಈ ಫೀಚರ್ಸ್‌ ಐಒಎಸ್‌ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಗಳು ಇಲ್ಲ ಎಂದು ಕೂಡ ವರದಿಯಾಗಿದೆ.

Best Mobiles in India

English summary
WhatsApp will soon allow you share photos in the original quality.know more details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X