ವಾಟ್ಸಾಪ್‌ ಸೇರಲಿದೆ ಹೊಸ ಫೀಚರ್!..ಗ್ರೂಪ್‌ ಅಡ್ಮಿನ್‌ಗೆ ಸಿಗಲಿದೆ ಈ ಆಯ್ಕೆ!

|

ಮೆಟಾ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ವಾಟ್ಸಾಪ್‌ ಮೆಸೆಜ್‌ ಅಪ್ಲಿಕೇಶನ್ ಹತ್ತು ಹಲವು ಉಪಯುಕ್ತ ಫೀಚರ್ಸ್‌ಗಳಿಂದ ಬಳಕೆದಾರರಿಗೆ ಆಪ್ತ ಎನಿಸಿದೆ. ವಾಟ್ಸಾಪ್‌ ಇತ್ತೀಚೆಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ ಧ್ವನಿ ಸಂದೇಶವನ್ನು ಕಳುಹಿಸುವ ಮೊದಲು ಪೂರ್ವವೀಕ್ಷಿಸಲು ಸಕ್ರಿಯಗೊಳಿಸುವ ಫೀಚರ್‌ ಅನ್ನು ಪರಿಚಯಿಸಿತು. ಇದರ ಜೊತೆಗೆ, ಸಂದೇಶವು ಯಾವಾಗ ಕಣ್ಮರೆಯಾಗುತ್ತದೆ ಎಂಬುದರ ಕುರಿತು ಬಹು ಟೈಮ್‌ಲೈನ್‌ಗಳನ್ನು ಪರಿಚಯಿಸುವ ಮೂಲಕ ಕಣ್ಮರೆಯಾಗುವ ಸಂದೇಶಗಳ ಮೇಲೆ ಕಂಪನಿಯು ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡಿತು. ಇದೀಗ, ಮತ್ತೊಂದು ಹೊಸ ಫೀಚರ್ ಪರಿಚಯಿಸಲು ಸಜ್ಜಾಗಿದೆ.

ವಾಟ್ಸಾಪ್‌ ಸೇರಲಿದೆ ಹೊಸ ಫೀಚರ್!..ಗ್ರೂಪ್‌ ಅಡ್ಮಿನ್‌ಗೆ ಸಿಗಲಿದೆ ಈ ಆಯ್ಕೆ!

ಹೌದು, ವಾಟ್ಸಾಪ್ ಅಪ್ಲಿಕೇಶನ್ ಮೆಸೆಜ್ ಡಿಲೀಟ್ ಮಾಡಲು ಗುಂಪು ಮೆಸೆಜ್‌ ಅಡ್ಮಿನ್‌ಗೆ ಆಯ್ಕೆ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಬೀಟಾ ಆಪ್‌ನಲ್ಲಿ ನೂತನ ಅಪ್‌ಡೇಟ್‌ ಅನ್ನು ಬಿಡುಗಡೆ ಮಾಡಿದೆ ಎಂದು WABetaInfo ವರದಿ ಮಾಡಿದೆ. ಇನ್ನು ಈ ಹೊಸ ಆವೃತ್ತಿಯು ಗುಂಪಿನಲ್ಲಿರುವ ಎಲ್ಲಾ ಸದಸ್ಯರಿಗೆ ಸಂದೇಶಗಳನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಗುಂಪಿನ ನಿರ್ವಾಹಕರಿಗೆ(group admin) ನೀಡುತ್ತದೆ.

ವಾಟ್ಸಾಪ್‌ ಸೇರಲಿದೆ ಹೊಸ ಫೀಚರ್!..ಗ್ರೂಪ್‌ ಅಡ್ಮಿನ್‌ಗೆ ಸಿಗಲಿದೆ ಈ ಆಯ್ಕೆ!

ಸದ್ಯ ಸಂದೇಶವನ್ನು ಕಳುಹಿಸುವವರು ಮಾತ್ರ ಅದನ್ನು ಡಿಲೀಟ್ ಮಾಡಬಹುದಾಗಿದೆ. ಈ ಹೊಸ ಆಯ್ಕೆಯಿಂದ ಗ್ರೂಪ್ ಅಡ್ಮಿನ್‌ಗೆ ಅವರ ಗುಂಪುಗಳಲ್ಲಿ ನಡೆಯುವ ಸಂಭಾಷಣೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಮಾಡಲು ಅವಕಾಶ ಸಿಕ್ಕಂತೆ ಆಗುತ್ತದೆ. ಗ್ರೂಪ್‌ನಲ್ಲಿ ಅಡ್ಮಿನ್ ಮೆಸೆಜ್ ಡಿಲೀಟ್ ಮಾಡಿದಾಗ, ಗ್ರೂಪ್ ಅಡ್ಮಿನ್‌ನಿಂದ ಮೆಸೆಜ್ ಡಿಲೀಟ್ ಮಾಡಲಾಗಿದೆ (This was removed by an admin) ಎಂದು ಎಲ್ಲರಿಗೂ ಕಾಣಿಸುತ್ತದೆ.

ಗುಂಪು ನಿರ್ವಾಹಕರು ತಮ್ಮ ಗುಂಪಿನಲ್ಲಿರುವ ಎಲ್ಲಾ ಸದಸ್ಯರಿಗೆ ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವ ಸಂದೇಶಗಳನ್ನು ತೆಗೆದುಹಾಕಲು ಈ ಸೇರ್ಪಡೆಯು ಮೂಲಭೂತವಾಗಿ ಸಹಾಯ ಮಾಡುತ್ತದೆ.

ಗ್ರೂಪ್ ಅಡ್ಮಿನ್‌ಗಳು ಈಗಾಗಲೇ ತಮ್ಮ ಗುಂಪುಗಳಿಗೆ ಸಂದೇಶಗಳನ್ನು ಕಳುಹಿಸದಂತೆ ಸದಸ್ಯರನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಒಳಗೊಂಡಿರುವ ಫೀಚರ್ಸ್ಗಳನ್ನು ಹೊಂದಿದ್ದಾರೆ. ಅಲ್ಲದೇ ವಾಟ್ಸಾಪ್‌ನ ಹೊಸ ಆಯ್ಕೆಯು ಮತ್ತಷ್ಟು ಉಪಯುಕ್ತ ಎನಿಸಲಿದೆ. ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವ ಸಂದೇಶಗಳನ್ನು ತೆಗೆದುಹಾಕಲು ಈ ನೂತನ ಆಯ್ಕೆಯು ಪೂರಕ ಆಗಲಿದೆ.

ವಾಟ್ಸಾಪ್‌ ಸೇರಲಿದೆ ಹೊಸ ಫೀಚರ್!..ಗ್ರೂಪ್‌ ಅಡ್ಮಿನ್‌ಗೆ ಸಿಗಲಿದೆ ಈ ಆಯ್ಕೆ!

ಹಾಗೆಯೇ ವಾಟ್ಸಾಪ್‌ ಆಂಡ್ರಾಯ್ಡ್‌ ಡಿವೈಸ್‌ಗಳಿಗಾಗಿ ನೂತನ ಇನ್-ಆಪ್ ಕ್ಯಾಮೆರಾ ಇಂಟರ್ಫೇಸ್ ಅನ್ನು ಪರೀಕ್ಷಿಸುತ್ತಿದೆ. ಇದು ಫ್ಲ್ಯಾಶ್ ಶಾರ್ಟ್‌ಕಟ್‌ನ ಸ್ಥಾನವನ್ನು ಬದಲಾಯಿಸುವಂತೆ ಮತ್ತು ಸ್ವಿಚ್ ಕ್ಯಾಮೆರಾ ಬಟನ್ ಅನ್ನು ಮರುವಿನ್ಯಾಸಗೊಳಿಸುವಂತೆ ತೋರುತ್ತಿದೆ. ಮರುವಿನ್ಯಾಸಗೊಳಿಸಲಾದ ಕ್ಯಾಮರಾವನ್ನು ಸೂಚಿಸಲು WABetaInfo ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ. ಇದು ಫ್ಲ್ಯಾಶ್ ಶಾರ್ಟ್‌ಕಟ್ ಅನ್ನು ಕೆಳಗಿನ ಎಡದಿಂದ ಮೇಲಿನ ಬಲ ಭಾಗದ ಮೂಲೆಗೆ ತರುತ್ತದೆ.

ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಮಾಡುವುದು ಹೇಗೆ?
ಹಂತ:1 ಮೊದಲಿಗೆ ವಾಟ್ಸಾಪ್‌ನಲ್ಲಿ ನಿಮ್ಮ ವೈಯಕ್ತಿಕ ಅಥವಾ ಗುಂಪು ಚಾಟ್ ತೆರೆಯಿರಿ.
ಹಂತ:2 ನಂತರ ವಾಟ್ಸಾಪ್‌ನಲ್ಲಿ ಮೈಕ್ರೊಫೋನ್ ಅನ್ನು ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ,
ಹಂತ:3 ಇದೀಗ ವಾಯ್ಸ್ ಸಂದೇಶವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿ.
ಹಂತ:4 ವಾಯ್ಸ್‌ ಮೆಸೇಜ್‌ ನಂತರ, ಸ್ಟಾಪ್‌ ಟ್ಯಾಪ್ ಮಾಡಿ.
ಹಂತ:5 ಇದಾದ ನಂತರ ನಿಮ್ಮ ರೆಕಾರ್ಡಿಂಗ್ ಆಲಿಸಲು ಪ್ಲೇ ಟ್ಯಾಪ್ ಮಾಡಿ. ಆ ಟೈಮ್‌ಸ್ಟ್ಯಾಂಪ್‌ನಿಂದ ಅದನ್ನು ಪ್ಲೇ ಮಾಡಲು ನೀವು ರೆಕಾರ್ಡಿಂಗ್‌ನ ಯಾವುದೇ ಭಾಗವನ್ನು ಟ್ಯಾಪ್ ಮಾಡಬಹುದು.
ಹಂತ:6 ನೀವು ಪ್ರಿವ್ಯೂ ಮಾಡಿದ ಸಂದೇಶ ಸರಿಯಿಲ್ಲದಿದ್ದರೆ ಅದನ್ನು ಡಿಲೀಟ್‌ ಮಾಡಲು ಟ್ರಾಶ್‌ ಕ್ಯಾನ್ ಅನ್ನು ಟ್ಯಾಪ್ ಮಾಡಬಹುದು.
ಒಂದು ವೇಳೆ ನಿಮ್ಮ ಸಂದೇಶ ಸರಿಯಿದ್ದರೆ ಸೆಂಡ್‌ ಟ್ಯಾಪ್ ಮಾಡಿ.

Best Mobiles in India

English summary
WhatsApp will soon let Group Admins Delete Messages for everyone: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X