ಅಂತೂ ಇಂತೂ ವಾಟ್ಸಾಪ್‌ ಸೇರಲಿದೆ ಈ ಜಬರ್ದಸ್ತ್ ಫೀಚರ್!..ನೀವು OMG ಅಂತೀರಾ!

|

ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ಆಪ್ ವಾಟ್ಸಾಪ್‌ ಇತ್ತೀಚಿಗೆ ಬಳಕೆದಾರರಿಗೆ ಮತ್ತೆ ಕೆಲವು ಬಹುಉಪಯುಕ್ತ ಫೀಚರ್ ಪರಿಚಯಿಸಿದೆ. ಅದರ ಬೆನ್ನಲ್ಲೇ ಈಗ ಬಳಕೆದಾರರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಹೊಸ ಅಪ್‌ಡೇಟ್‌ ಒಂದನ್ನು ಸೇರ್ಪಡೆ ಮಾಡಿದೆ. ಅದುವೇ (Messages with yourself) ಮೆಸೆಜ್ ವಿತ್ ಯೂವರ್‌ಸೆಲ್ಫ ಆಗಿದೆ. ಈ ಹೊಸ ಫೀಚರ್‌ನಲ್ಲಿ ವಾಟ್ಸಾಪ್ ಬಳಕೆದಾರರು ತಮ್ಮ ನಂಬರ್‌ಗೆ ತಾವೇ ಮೆಸೆಜ್ ಮಾಡಲು ಸಾಧ್ಯವಾಗುತ್ತದೆ. ಈ ನೂತನ ಫೀಚರ್ ಪ್ರಾಯೋಗಿಕ ಹಂತದಲ್ಲಿದ್ದು, ಸದ್ಯದಲ್ಲೇ ಎಲ್ಲ ಬಳಕೆದಾರರಿಗೆ ಮುಕ್ತವಾಗಲಿದೆ.

ಮೆಸೆಜ್ ವಿತ್ ಯೂವರ್‌ಸೆಲ್ಫ್

ಹೌದು, ಮೆಟಾ ಮಾಲೀಕತ್ವದ ವಾಟ್ಸಾಪ್‌ ಸಂಸ್ಥೆಯು ಇದೀಗ ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರಿಗಾಗಿ 'ಮೆಸೆಜ್ ವಿತ್ ಯೂವರ್‌ಸೆಲ್ಫ್' (Messages with yourself) ಆಯ್ಕೆಯನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಇನ್ನು ಈ ಆಯ್ಕೆಯು ಆಯ್ದ ಕೆಲವು ಆಂಡ್ರಾಯ್ಡ್‌ (Android) ಮತ್ತು ಐಓಎಸ್‌ (iOS) ಬೀಟಾ ಆವೃತ್ತಿಯ ಬಳಕೆದಾರರಿಗೆ ಲಭ್ಯವಿದೆ. ಹಾಗೆಯೇ ಮತ್ತಷ್ಟು ಅಪ್‌ಡೇಟ್‌ನೊಂದಿಗೆ ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ ಎನ್ನಲಾಗಿದೆ.

Message yourself

ಬಳಕೆದಾರರು ಸ್ವಂತ ಅವರ ಮೊಬೈಲ್ ನಂಬರ್‌ಗೆ ಅವರೇ ಮೆಸೆಜ್‌ ಕಳುಹಿಸುವುದು ಸಾಧ್ಯ, ಆದರೆ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಯಾವುದೇ ಮೀಸಲಾದ ಚಾಟ್ ವಿಂಡೋ ಲಭ್ಯವಿರಲಿಲ್ಲ. ಆದರೆ ಹೊಸ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ಸ್ವಂತ ನಂಬರ್‌ನ ವಾಟ್ಸಾಪ್ ಚಾಟ್ ಅನ್ನು ತೆರೆದಾಗ, ಚಾಟ್ ಹೆಡ್‌ಲೈನ್‌ನಲ್ಲಿ ಮೆಸೆಜ್ ಯೂವರ್‌ಸೆಲ್ಫ್ (Message yourself) ಎಂದು ಕಾಣಿಸಬಲಿದೆ. ಇನ್ನು ವಾಟ್ಸಾಪ್‌ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿಯೂ ಮೆಸೆಜ್ ಯೂವರ್‌ಸೆಲ್ಫ್ ಹೆಸರಿನಿಂದ ಕಾಣಿಸಿಕೊಳ್ಳಲಿದೆ.

WaBetaInfo

WaBetaInfo ವರದಿಯ ಪ್ರಕಾರ, ಬಳಕೆದಾರರು ಅವರ ಫೋನ್ ನಂಬರ್‌ನೊಂದಿಗೆ ಚಾಟ್‌ಗೆ ಮೆಸೆಜ್‌ ಕಳುಹಿಸಿದರೆ, ಮಲ್ಟಿ ಡಿವೈಸ್‌ಗಳನ್ನು ಬಳಸುವಾಗ ಅದು ಇನ್ನು ಮುಂದೆ ಬೆಂಬಲಿಸದ ಫೀಚರ್‌ ಆಗಿರುವುದರಿಂದ ಅದನ್ನು ಯಾವಾಗಲೂ ಬಳಕೆದಾರರ ಇತರ ಲಿಂಕ್ ಮಾಡಲಾದ ಡಿವೈಸ್‌ನೊಂದಿಗೆ ಸಿಂಕ್ ಮಾಡಲಾಗುತ್ತದೆ'. ಇನ್ನು ಕೆಲವು ಬೀಟಾ ಆವೃತ್ತಿಯ ಬಳಕೆದಾರರಿಗೆ ವಿಭಿನ್ನ ಹೆಡ್‌ಲೈನ್‌ ಅನ್ನು ಬಳಸುವ ಮೂಲಕ ನಿಮ್ಮೊಂದಿಗೆ ಚಾಟ್ ಫೀಚರ್‌ ಅನ್ನು ಹೈಲೈಟ್ ಮಾಡಲಾಗುತ್ತದೆ.

ಬಳಕೆದಾರರ

ಮುಂಬರುವ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಈ ಫೀಚರ್‌ ಅನ್ನು ಹೊರತರಲಾಗುವುದು. ಅದನ್ನು ಅನುಸರಿಸಿ ವಾಟ್ಸಾಪ್‌ ಮುಂದಿನ ಅಪ್‌ಡೇಟ್‌ನಲ್ಲಿ 'ability to view your phone number within the contacts list' ಕಾಟ್ಯಾಂಕ್ಟ್‌ ಲಿಸ್ಟ್‌ನಲ್ಲಿ ಬಳಕೆದಾರರ ಫೋನ್ ನಂಬರ್ ನೋಡುವ ಆಯ್ಕೆ ಲಭ್ಯವಾಗುತ್ತದೆ.

ವೀಡಿಯೊಗಳು

ಹಾಗೆಯೇ ಹೆಡ್‌ಲೈನ್ ಫೀಚರ್ಸ್‌ಗಳೊಂದಿಗೆ ಮೀಡಿಯಾ ಫಾರ್ವರ್ಡ್ ಮಾಡುವ ಬೀಟಾ ಪರೀಕ್ಷಾ ಸಾಮರ್ಥ್ಯವನ್ನು ವಾಟ್ಸಾಪ್ ಪ್ರಾರಂಭಿಸಿದೆ. ಈ ಹೊಸ ಅಪ್‌ಡೇಟ್‌ ಹೆಡ್‌ಲೈನ್ ನೊಂದಿಗೆ ಫೋಟೋ, ವೀಡಿಯೊಗಳು, GIF ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಸಹ ಫಾರ್ವರ್ಡ್ ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ. ಈ ಮೊದಲು ಮೀಡಿಯಾ (ಫೋಟೊ/ ವಿಡಿಯೋ) ಅನ್ನು ಮಾತ್ರ ಫಾರ್ವರ್ಡ್ ಮಾಡಲು ಸಾಧ್ಯ ಇದ್ದು, ಫೋಟೊ/ ವಿಡಿಯೋ ಜೊತೆಗೆ ಬರೆದ ಪದಗಳನ್ನು ಪುನಃ ಬರೆಯಬೇಕಾಗಿತ್ತು. ಆದರೆ ಸದ್ಯದಲ್ಲೇ ಈ ತೊಂದರೆ ಸರಿಯಾಗಲಿದೆ.

ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋ ಶೇರ್ ಮಾಡಲು ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋ ಶೇರ್ ಮಾಡಲು ಹೀಗೆ ಮಾಡಿ:

ಹಂತ 1. ನಿಮ್ಮ ಐಫೋನ್‌ ಅಥವಾ ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ವಾಟ್ಸಾಪ್‌ ಆಪ್‌ ತೆರೆಯಿರಿ.
ಹಂತ 2. ನಂತರ, ವಾಟ್ಸಾಪ್‌ ಸೆಟ್ಟಿಂಗ್‌ ತೆರೆಯಲು, ಬಲಭಾಗದ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಹಂತ 3. ಬಳಿಕ ಸೆಟ್ಟಿಂಗ್‌ಗಳಲ್ಲಿ, Storage and Data ಆಯ್ಕೆ ಮಾಡಿರಿ.
ಹಂತ 4. ತದ ನಂತರ, ಫೋಟೋ ಅಪ್‌ಲೋಡ್ ಗುಣಮಟ್ಟವನ್ನು ಟ್ಯಾಪ್ ಮಾಡಬೇಕು ಮತ್ತು Best Quality option ಆಯ್ಕೆಯನ್ನು ಸೆಲೆಕ್ಟ್‌ ಮಾಡಿರಿ.
ಹಂತ 5. ಒಮ್ಮೆ Best Quality option ಆಯ್ಕೆ ಮಾಡಿದ ನಂತರ, ಓಕೆ ಕ್ಲಿಕ್ ಮಾಡಿ.

Best Mobiles in India

English summary
WhatsApp will soon rollout 'Messages with yourself' feature for both Android and iOS users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X