ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಬಳಕೆದಾರರ ಮನ ಗೆಲ್ಲುವ ಫೀಚರ್ಸ್‌!

|

ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್‌ ಬ್ಯಾಕ್‌ಗ್ರಾಂಡ್‌ ವಾಲ್‌ ಪೇಪರ್‌ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ವಾಟ್ಸಾಪ್‌ ಪ್ರತಿ ಚಾಟ್ ಆಧಾರಿತ ವಾಲ್‌ಪೇಪರ್ ಫೀಚರ್ಸ್‌ ಪರಿಚಯಿಸಿತ್ತು. ಆದರೆ ಈಗ ಪರಿಚಯಿಸಲಿರುವ ಹೊಸ ಫೀಚರ್ಸ್‌ ಬಳಕೆದಾರರು ವಿವಿಧ ಚಾಟ್‌ಗಳಲ್ಲಿ ಹೊಂದಿಸಿರುವ ವೈಯಕ್ತಿಕ ಚಾಟ್ ವಾಲ್‌ಪೇಪರ್‌ಗಳನ್ನು ಬದಲಾಯಿಸಲು ಅವಕಾಶ ನೀಡಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ವೈಯುಕ್ತಿಕ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದರಿಂದ ನೀವು ವೈಯುಕ್ತಿಕ ಚಾಟ್‌ ವಾಲ್‌ಪೇಪರ್‌ಗಳ ಬ್ಯಾಕ್‌ಗ್ರೌಡ್‌ನಲ್ಲಿ ಹೊಸ ಅನುಭವ ನೀಡಲಿದೆ. ಸದ್ಯ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದೆ. ಆದರಿಂದ ಆಂಡ್ರಾಯ್ಡ್‌ ಅಥವಾ iOS ನ ಅಪ್ಲಿಕೇಶನ್‌ನ ಬೀಟಾ ಆವೃತ್ತಿ ಇನ್ನು ಬಹಿರಂಗವಾಗಿಲ್ಲ ಎಂದು ವರದಿಯಾಗಿದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೀಚರ್ಸ್‌

ವಾಟ್ಸಾಪ್‌ ವೈಯುಕ್ತಿಕ ಚಾಟ್‌ ಬ್ಯಾಕ್‌ಗ್ರೌಂಡ್‌ ವಾಲ್‌ ಪೇಪರ್‌ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಲಿದೆ. ಇದರಿಂದ ನಿಮ್ಮ ವೈಯುಕ್ತಿಕ ಚಾಟ್‌ ವಾಲ್‌ಪೇಪರ್‌ಗಳನ್ನು ವಾಯ್ಸ್‌ ಕಾಲ್‌ನಲ್ಲಿ ಬದಲಾಯಿಸಲಿದೆ. ಇದನ್ನು ನಿಮ್ಮ ಅನುಭವಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಇನ್ನು ವಾಟ್ಸಾಪ್‌ ಈಗಾಗಲೇ ಪ್ರತಿ ಚಾಟ್‌ ಆಧಾರಿತ ವಾಲ್‌ಪೇಪರ್‌ ಫೀಚರ್ಸ್‌ ಕೂಡ ಪರಿಚಯಿಸಿತ್ತು. ಇದರಿಂದ ಪ್ರತಿ ಚಾಟ್ ಮತ್ತು ಗುಂಪಿಗೆ ವಿಭಿನ್ನ ಚಾಟ್ ಬ್ಯಾಕ್‌ಗ್ರೌಂಡ್‌ ಸೆಟ್‌ ಮಾಡಲು ಅವಕಾಶ ನೀಡಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇದು ಫೋಕಸ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ. ಅಲ್ಲದೆ ನೊಟಿಫಿಕೇಶನ್‌ ಜೊತೆಗೆ ಗ್ರೂಪ್‌ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ. ಇನ್ನು ವಾಟಯ್ಸ್‌ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ವಿರಾಮ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ. ವಾಯ್ಸ್‌ ನೋಟ್‌ ತೆಗೆದುಕೊಳ್ಳುವಾಗ ಯಾರಾದರೂ ಅಡ್ಡಿಪಡಿಸಿದಾಗ ವಿರಾಮ ತೆಗೆದುಕೊಳ್ಳಬೇಕಾದಾಗ ಈ ಫೀಚರ್ಸ್‌ ಉಪಯುಕ್ತವಾಗಿರುತ್ತದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ವಾಲ್‌ಪೇಪರ್‌ ಅನ್ನು ಕಸ್ಟಮೈಸ್‌ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಇದು ನಿಮ್ಮ ಅಭಿರುಚಿಗೆ ಅನುಗುಣವಾಗಿ ಚಾಟ್‌ಗಳಿಗಾಗಿ ವಾಲ್‌ಪೇಪರ್ ಅನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಬಳಕೆದಾರರು ತಮ್ಮ ವಾಲ್‌ಪೇಪರ್‌ ನಲ್ಲಿ ಕಸ್ಟಮೈಸ್‌ ಸೆಟ್‌ ಮಾಡಲು ಅಂತರ್ಗತ ಬ್ರೈಟ್, ಡಾರ್ಕ್ ಮತ್ತು ಘನ ಬಣ್ಣಗಳ ಆಯ್ಕೆಗಳಿಂದ ಆಯ್ಕೆ ಮಾಡಬಹುದು. ಹೆಚ್ಚುವರಿಯಾಗಿ, ಬಳಕೆದಾರರು ಯಾವುದೇ ಇಮೇಜ್‌ ಅನ್ನು ಕೂಡ ತಮ್ಮ ವಾಟ್ಸಾಪ್‌ ವಾಲ್‌ಪೇಪರ್‌ನಂತೆ ಸೆಟ್‌ ಮಾಡಬಹುದು. ಇದನ್ನು ನಿಮ್ಮ ವೈಯಕ್ತಿಕ ಚಾಟ್‌ಗಳಿಗಾಗಿ ಮತ್ತು ಎಲ್ಲಾ ಚಾಟ್‌ಗಳಿಗೆ ಮಕೂಡ ಇಮೇಜ್‌ ಅನ್ನು ವಾಲ್‌ಪೇಪರ್‌ ಮಾದರಿಯಲ್ಲಿ ಸೇಟ್‌ ಮಾಡುವುದಕ್ಕೆ ಅವಕಾಶವಿದೆ. ಅಲ್ಲದೆ ನೀವು ನಿಮ್ಮ ಸಂಪರ್ಕಗಳಿಗೆ ಸಂದೇಶ ಕಳುಹಿಸುವಾಗ ಆಯ್ಕೆಮಾಡಿದ ಚಿತ್ರವನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ವ್ಯೂ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ.

ವಾಟ್ಸಾಪ್‌ನಲ್ಲಿ ವಾಲ್‌ಪೇಪರ್‌ ಕಸ್ಟಮೈಸ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವಾಲ್‌ಪೇಪರ್‌ ಕಸ್ಟಮೈಸ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಯಾವುದೇ ಚಾಟ್ ವಿಂಡೋವನ್ನು ತೆರೆಯಿರಿ.
ಹಂತ:3 ಇಲ್ಲಿ ನಿಮ್ಮ ಚಾಟ್ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡಾಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ನಂತರ ವಾಲ್‌ಪೇಪರ್ ಮೇಲೆ ಟ್ಯಾಪ್ ಮಾಡಿ.
ಹಂತ:5 ಇದರಲ್ಲಿ ಬದಲಾವಣೆ ಆಯ್ಕೆಯನ್ನು ಆರಿಸಿ.
ಹಂತ:6 ಇಲ್ಲಿ ಬಳಕೆದಾರರು WhatsApp ನ ಅಂತರ್ಗತ ಥೀಮ್‌ಗಳಿಂದ ಆಯ್ಕೆ ಮಾಡಬಹುದು ಅಥವಾ ಅವರ ವಾಲ್‌ಪೇಪರ್‌ನಂತೆ ಯಾವುದೇ ಚಿತ್ರವನ್ನು ಆಯ್ಕೆ ಮಾಡಬಹುದು.

Best Mobiles in India

English summary
WhatsApp may soon let you set your custom chat backgrounds as voice call backgrounds too.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X