ಬಳಕೆದಾರರಿಗೆ ಭಾರೀ ಅಚ್ಚರಿ ನೀಡಿದ ವಾಟ್ಸಪ್‌ನ ಹೊಸ ಫೀಚರ್!

|

ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್‌ ಈಗಾಗಲೇ ಹಲವಾರು ಅತ್ಯುತ್ತಮ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಮತ್ತೆ ಮುಂದುವರೆದಿರುವ ವಾಟ್ಸಪ್‌ ಸಂಸ್ಥೆಯು ಬಳಕೆದಾರರಿಗೆ ಇದೀಗ ಹೊಸದೊಂದು ಫೀಚರ್ ಘೋಷಿಸಿದೆ. ಬಳಕೆದಾರರಿಗೆ ಈ ಫೀಚರ್ ಖಂಡಿತಾ ಅಚ್ಚರಿ ಮೂಡಿಸುತ್ತದೆ ಹಾಗೂ ಉಪಯುಕ್ತ ಫೀಚರ್ ಎನಿಸುವುದರಲ್ಲಿ ಎರಡು ಮಾತಿಲ್ಲ.

ಫೇಸ್‌ಬುಕ್ ಮಾಲಿಕತ್ವದ ವಾಟ್ಸಪ್‌

ಹೌದು, ಫೇಸ್‌ಬುಕ್ ಮಾಲಿಕತ್ವದ ವಾಟ್ಸಪ್‌ ಮೆಸೆಜ್ ಅಪ್ಲಿಕೇಶನ್ ಇದೀಗ ಕಳುಹಿಸಿದ ಮೆಸೆಜ್ ನಿರ್ದಿಷ್ಟ ಸಮಯದ ನಂತರ ಸ್ವಯಂ ಪ್ರೇರಿತವಾಗುವ (self-destructing messages) ಆಯ್ಕೆಯನ್ನು ಪರಿಚಯಿಸಲಿದೆ. ಮೆಸೆಜ್ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಲು ಸಮಯದ ಆಯ್ಕೆಗಳನ್ನು ನೀಡಲಿದೆ. ಈಗಾಗಲೇ ಈ ಫೀಚರ್ ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಬಳಕೆದಾರರಿಗೆ ಲಭ್ಯವಾಗಲಿದೆ.

ಆಟೋ ಡಿಲೀಟ್ ಮೆಸೆಜ್

ವಾಟ್ಸಪ್‌ ಸೇರಲು ಸಿದ್ಧವಾಗಿರುವ 'ಆಟೋ ಡಿಲೀಟ್ ಮೆಸೆಜ್' ಆಯ್ಕೆಯು, 5 ಸೆಕೆಂಡ್‌ ಮತ್ತು 1 ಗಂಟೆಯ ಸಮಯದ ಎರಡು ಆಯ್ಕೆಗಳನ್ನು ಒಳಗೊಂಡಿರಲಿದೆ. ಬಳಕೆದಾರರು ಮೆಸೆಜ್ ಕಳುಹಿಸುವಾಗ ಆಟೋ ಡಿಲೀಟ್ ಆಯ್ಕೆಯನ್ನು ಸೆಟ್‌ ಮಾಡಿದರೇ, ಮೆಸೆಜ್ ಸ್ವೀಕರಿಸಿದ ವಾಟ್ಸಪ್‌ನ ಚಾಟ್‌ ಲಿಸ್ಟ್‌ನಿಂದ ಕಳುಹಿಸಿದ ಮೆಸೆಜ್ ಡಿಲೀಟ್ ಆಗುತ್ತದೆ. ವಾಟ್ಸಪ್‌ನಲ್ಲಿ ಬಳಕೆದಾರರು ಮೆಸೆಜ್ ಕಳುಹಿಸುವಾಗ ಸಮಯದ ಆಯ್ಕೆಯನ್ನು ಸೆಟ್‌ ಮಾಡಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ವರ್ಷನ್‌ನಲ್ಲಿ

ವಾಟ್ಸಪ್‌ ಸಂಸ್ಥೆಯು ಆಟೋ ಡಿಲೀಟ್ ಮೆಸೆಜ್ ಆಯ್ಕೆಯನ್ನು ತನ್ನ ಆಂಡ್ರಾಯ್ಡ್ 2.19.275 ವರ್ಷನ್‌ನಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದ್ದು, ಗ್ರೂಪ್‌ ಚಾಟ್‌ ಸೆಟ್ಟಿಂಗ್ ಇರಲಿದೆ. ಸದ್ಯ ಕೆಲವು ವಾಟ್ಸಪ್‌ ಅಂಡ್ರಾಯ್ಡ್‌ ಬೇಟಾ ಅಪ್‌ಡೇಟ್ ವರ್ಷನ್‌ನಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲಯೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮುಕ್ತವಾಗಲಿದೆ. ಇನ್ಮುಂದೆ ಬಳಕೆದಾರರು ಕಳುಹಿಸಿದ ಮೆಸೆಜ್‌ಗೆ ದಾಖಲೆಯೇ ಇಲ್ಲದಂತಾಗುತ್ತದೆ.

ಟೆಲಿಗ್ರಾಂ ಮತ್ತು ಜಿ-ಮೇಲ್‌

ವಾಟ್ಸಪ್‌ನ ಆಟೋ ಮೆಸೆಜ್ ಡಿಲೀಟ್ ಹೊಸ ಫೀಚರ್ ರೀತಿಯ ಫೀಚರ್ ಈಗಾಗಲೇ ಟೆಲಿಗ್ರಾಂ ಮತ್ತು ಜಿ-ಮೇಲ್‌ಗಳಲ್ಲಿ ಕಾಣಬಹುದಾಗಿದೆ. ಆದ್ರೆ ವಾಟ್ಸಪ್‌ನಲ್ಲಿ ಈ ಫೀಚರ್ ಬಾರಿ ಟ್ರೆಂಡ್‌ ಹುಟ್ಟುಹಾಕಲಿದೆ. ಅಂದಹಾಗೇ ಈ ಫೀಚರ್ ವಾಟ್ಸಪ್‌ ಗ್ರೂಪ್‌ ಚಾಟ್‌ಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಒಟ್ಟಾರೇ ವಾಟ್ಸಪ್‌ ಬಳಕೆದಾರರಂತೂ ಈ ಫೀಚರ್‌ನಿಂದ ಖುಷಿ ತಂದಿದೆ.

ಡಾರ್ಕ್ ಮೋಡ್‌

ಹಾಗೆಯೇ ವಾಟ್ಸಪ್‌ ಐಫೋನ್ ಐಓಎಸ್‌ ಓಎಸ್‌ ವರ್ಷನ್‌ನಲ್ಲಿ ಅಪ್ಲಿಕೇಶನ್‌ನಲ್ಲಿ ಡಾರ್ಕ್ ಮೋಡ್‌ ಪರಿಚಯಿಸಲು ತಯಾರಿಸಿ ನಡೆಸಿದೆ. ನೂತನ ಐಫೋನ್‌ ಐಓಎಸ್‌ ಓಎಸ್‌ ಈಗಾಗಲೇ ಡಾರ್ಕ್ ಮೋಡ್ ಆಯ್ಕೆಯನ್ನು ಹೊಂದಿದೆ. ಆದರೆ ಐಫೋನ್ ವಾಟ್ಸಪ್‌ ಆಪ್‌ನಲ್ಲಿ ಡಾರ್ಕ್ ಮೋಡ್ ಫೀಚರ್ ಯಾವಾಗ ಎಂಟ್ರ ಕೊಡಲಿದೆ ಎನ್ನುವ ಬಗ್ಗೆ ವಾಟ್ಸಪ್‌ ಸಂಸ್ಥೆಯು ಅಧಿಕೃತವಾಗಿ ತಿಳಿಸಿಲ್ಲ.

Best Mobiles in India

English summary
WhatsApp is working on disappearing messages that will be automatically deleted from the chat. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X