ಶಾಕಿಂಗ್‌ ಸುದ್ದಿ; ಹೊಸ ವರ್ಷದಿಂದ ಈ ಎಲ್ಲಾ ಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ಮಾಡುವುದಿಲ್ಲ!

|

ದಿನನಿತ್ಯವೂ ವಾಟ್ಸಾಪ್‌ ಬಳಕೆ ಮಾಡಲಿಲ್ಲ ಎಂದರೆ ಸ್ಮಾರ್ಟ್‌ಫೋನ್‌ ವ್ಯರ್ಥ ಎಂಬಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕೆಂದರೆ ಯಾವುದೇ ಮಾಹಿತಿ ಪಡೆಯಲು, ಸಂವಹನ ನಡೆಸಲು ವಾಟ್ಸಾಪ್ ಕಡ್ಡಾಯವಾಗಿದೆ. ಆದರ, ಕೆಲವು ಬಳಕೆದಾರರಿಗೆ ಈಗ ವಾಟ್ಸಾಪ್‌ ನಿಂದ ಬೇಸರದ ವಿಷಯ ಹೊರಬಿದ್ದಿದೆ. ಅದೇನೆಂದರೆ ಇನ್ಮುಂದೆ ಇಲ್ಲಿ ಪಟ್ಟಿ ಮಾಡಲಾದ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುವುದಿಲ್ಲ.

ಹೌದು, ಡಿಸೆಂಬರ್ 31 ರ ಹೊತ್ತಿಗೆ, ಮೆಸೇಜಿಂಗ್ ಆಪ್‌ ಆದ ವಾಟ್ಸಾಪ್‌ ಐಓಎಸ್‌ ಹಾಗೂ ಆಂಡ್ರಾಯ್ಡ್‌ನ 49 ಡಿವೈಸ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹಾಗಿದ್ರೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವಾಟ್ಸಾಪ್‌ ಕಾರ್ಯನಿರ್ವಹಿಸುವುದಿಲ್ಲ, ಯಾವ ಕಾರಣಕ್ಕೆ ಈ ರೀತಿಯಾಗುತ್ತಿದೆ, ಪಟ್ಟಿಯಲ್ಲಿ ಇರುವ ಫೋನ್‌ ಹೊಂದಿರುವವರು ಏನು ಮಾಡಬೇಕು?, ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ವಾಟ್ಸಾಪ್‌

ಗಮನಿಸಬೇಕಾದ ಪ್ರಮುಖ ಮಾಹಿತಿ ಎಂದರೆ ಪ್ರತಿ ತಿಂಗಳು 2 ಶತಕೋಟಿಗೂ ಹೆಚ್ಚು ಬಳಕೆದಾರರೊಂದಿಗೆ, ವಾಟ್ಸಾಪ್‌ ಜಗತ್ತಿನಾದ್ಯಂತ ಪ್ರಮುಖ ತ್ವರಿತ ಸಂದೇಶ ಕಳುಹಿಸುವ ಆಪ್‌ ಆಗಿದೆ. ಅದರಲ್ಲಿ ಭಾರತವು ಅದರ ಅತಿದೊಡ್ಡ ಮಾರುಕಟ್ಟೆಯಾಗಿದ್ದು, 500 ಮಿಲಿಯನ್ ಖಾತೆಗಳನ್ನು ಹೊಂದಿರುವುದು ವಿಶೇಷ.

ವಾಟ್ಸಾಪ್‌ ಹೇಳಿದ್ದೇನು?

ವಾಟ್ಸಾಪ್‌ ಹೇಳಿದ್ದೇನು?

ಮುಂಬರುವ ಫೀಚರ್ಸ್‌ಗಳು ಮತ್ತು ಕಾರ್ಯಚಟುವಟಿಕೆಗಳೊಂದಿಗೆ ಹೊಂದಾಣಿಕೆಯ ಸಮಸ್ಯೆ ಉಂಟಾಗುವುದರಿಂದ ಇನ್ನು ಮುಂದೆ ಬೆಂಬಲಿಸದ ಆಪರೇಟಿಂಗ್ ಸಿಸ್ಟಂಗಳನ್ನು ಹಂತಹಂತವಾಗಿ ಹೊರಹಾಕುವ ನಿರ್ಧಾರವನ್ನು ಮಾಡಲಾಗುತ್ತದೆ ಎಂದು ಹೇಳಿದೆ. ಹಾಗೆಯೆ ಐಓಎಸ್‌ 12 ಮತ್ತು ಅದಕ್ಕಿಂತ ಹೆಚ್ಚಿನ ಡಿವೈಸ್‌ಗಳೊಂದಿಗೆ ವಾಟ್ಸಾಪ್‌ ಹೊಂದಿಕೊಳ್ಳುತ್ತದೆ. ಆದರೂ ಆಪಲ್‌ನ ಆಪರೇಟಿಂಗ್ ಸಿಸ್ಟಮ್‌ನ ಇತ್ತೀಚಿನ ಆವೃತ್ತಿಗೆ ನವೀಕರಿಸಲು ಆಪ್‌ ಬಳಕೆದಾರರಿಗೆ ಸಲಹೆ ನೀಡುತ್ತದೆ.

ಹಳೆಯ ಫೋನ್ ಬಳಕೆದಾರರು ಏನು ಮಾಡಬೇಕು?

ಹಳೆಯ ಫೋನ್ ಬಳಕೆದಾರರು ಏನು ಮಾಡಬೇಕು?

ಈ ಹಳೆಯ ಡಿವೈಸ್‌ಗಳಲ್ಲಿ ದುರುದ್ದೇಶಪೂರಿತ ಚಟುವಟಿಕೆಗಳಿಂದ ರಕ್ಷಿಸಲು ಅಗತ್ಯವಾದ ನವೀಕರಣಗಳನ್ನು ಕಳೆದುಕೊಳ್ಳಬಹುದು ಅಥವಾ ವಾಟ್ಸಾಪ್‌ ನ ಬಳಕೆಗೆ ಅಗತ್ಯವಿರುವ ಸಾಕಷ್ಟು ಸಾಮರ್ಥ್ಯವನ್ನು ಹೊಂದಿಲ್ಲದಿರಬಹುದು ಎಂದು ವಾಟ್ಸಾಪ್‌ ಮಾಹಿತಿ ನೀಡಿದೆ. ಇದರೊಂದಿಗೆ ವಾಟ್ಸಾಪ್ ಬಳಕೆದಾರರಿಗೆ ಸಮಯಕ್ಕೆ ಮುಂಚಿತವಾಗಿ ಈ ಮಾಹಿತಿ ತಿಳಿಸಲು ಮತ್ತು ಜ್ಞಾಪನೆಗಳನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಆಪ್‌ ಬೆಂಬಲಿಸುವುದನ್ನು ನಿಲ್ಲಿಸುವ ಮೊದಲು ಅವರು ತಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

2023ರಲ್ಲಿ ವಾಟ್ಸಾಪ್‌ ಬೆಂಬಲಿಸದ ಐಫೋನ್‌ಗಳು

2023ರಲ್ಲಿ ವಾಟ್ಸಾಪ್‌ ಬೆಂಬಲಿಸದ ಐಫೋನ್‌ಗಳು

 • ಐಫೋನ್ 5
 • ಐಫೋನ್ 5c
 • ಆಪಲ್‌ ಐಫೋನ್ SE (16GB)
 • ಆಪಲ್‌ ಐಫೋನ್ SE (32GB)
 • ಆಪಲ್‌ ಐಫೋನ್ 6S (64GB)
 • ಆಪಲ್‌ ಐಫೋನ್6S ಪ್ಲಸ್‌ (128 GB)
 • ಆಪಲ್‌ ಐಫೋನ್ 6S ಪ್ಲಸ್‌ (16GB)
 • ಆಪಲ್‌ ಐಫೋನ್ 6S ಪ್ಲಸ್‌ (32GB)
 • ಆಪಲ್‌ ಐಫೋನ್ 6S ಪ್ಲಸ್‌ (64GB)
 • ಆಪಲ್‌ ಐಫೋನ್ SE (64GB)
 • ಆಪಲ್‌ ಐಫೋನ್6S (128 GB)
 • ಆಪಲ್‌ ಐಫೋನ್6s (16gb)
 • ಆಪಲ್‌ ಐಫೋನ್ 6S (32GB)
 • ಆಂಡ್ರಾಯ್ಡ್‌ ಡಿವೈಸ್‌ಗಳು

  ಆಂಡ್ರಾಯ್ಡ್‌ ಡಿವೈಸ್‌ಗಳು

  4.1 ಕ್ಕಿಂತ ಹಳೆಯ ಆಂಡ್ರಾಯ್ಡ್‌ ಆವೃತ್ತಿಯಲ್ಲಿ ಕೆಲಸ ಮಾಡುವ ಸ್ಮಾರ್ಟ್‌ಫೋನ್‌ಗಳು ವಾಟ್ಸಾಪ್‌ಗೆ ಬಂಬಲ ನೀಡುವುದಿಲ್ಲ. ಕೆಲವು ಫೋನ್‌ಗಳಲ್ಲಿ ಓಎಸ್‌ ಅನ್ನು ನವೀಕರಿಸುವ ಆಯ್ಕೆ ನೀಡಲಾಗಿದ್ದು ವಾಟ್ಸಾಪ್‌ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಮೊದಲೇ ಅಪ್‌ಡೇಟ್ ಮಾಡಿಕೊಳ್ಳಿ. ಅಂತೆಯೇ ಯಾವೆಲ್ಲಾ ಫೋನ್‌ನಲ್ಲಿ ವಾಟ್ಸಾಪ್‌ ಲಭ್ಯ ಇರುವುದಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

  ಪ್ಲಾಟಿನಂ
  • ಆರ್ಕೋಸ್ 53 ಪ್ಲಾಟಿನಂ
  • HTC ಡಿಸೈರ್ 500
  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್
  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ II
  • ಮಿನಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S3
  • ಕ್ಯಾಟರ್ಪಿಲ್ಲರ್ ಕ್ಯಾಟ್ B15
  • ಸೋನಿ ಎಕ್ಸ್‌ಪೀರಿಯಾ m
  • THL W8
  • ZTE ಗ್ರಾಂಡ್ x ಕ್ವಾಡ್ v987
  • ZTE ಗ್ರಾಂಡ್ ಮೆಮೊ
  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್ 2
  • LG ಲುಸಿಡ್ 2
  • LG ಆಪ್ಟಿಮಸ್ F7
  • LG ಆಪ್ಟಿಮಸ್ L3 II ಡ್ಯುಯಲ್
  • LG ಆಪ್ಟಿಮಸ್ F5
  • LG ಆಪ್ಟಿಮಸ್ L5 II
  • LG ಆಪ್ಟಿಮಸ್ L5 II ಡ್ಯುಯಲ್
  • LG ಆಪ್ಟಿಮಸ್ L3 II
  • LG ಆಪ್ಟಿಮಸ್ L7 II ಡ್ಯುಯಲ್
  • LG ಆಪ್ಟಿಮಸ್ L7 II
  • LG ಆಪ್ಟಿಮಸ್ F6
  • LG ಕಾಯಿದೆ
  • LG ಆಪ್ಟಿಮಸ್ L4 II ಡ್ಯುಯಲ್
  • LG ಆಪ್ಟಿಮಸ್ F3
  • LG ಆಪ್ಟಿಮಸ್ L4 II
  • LG ಆಪ್ಟಿಮಸ್ L2 II
  • LG ಆಪ್ಟಿಮಸ್ F3Q
  • vico ಸಿಂಕ್ ಐದು
  • ವಿಕೊ ಡಾರ್ಕ್ನೈಟ್
  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್ ಕವರ್ 2
  • ಹುವಾವೇ ಅಸೆಂಡ್G740
  • ZTE ಗ್ರಾಂಡ್ ಎಸ್ ಫ್ಲೆಕ್ಸ್
  • ಲೆನೊವೊ A820
  • ಹುವಾವೇ ಅಸೆಂಡ್ ಮೇಟ್‌
  • ZTE V956 - UMI X2
  • ಹುವಾವೇ ಅಸೆಂಡ್ D2
  • ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಕೋರ್
  • ಫೇಯಾ ಎಫ್1

Best Mobiles in India

English summary
WhatsApp Will Stop Working on These Smartphones in 2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X