ಶೀಘ್ರದಲ್ಲೇ ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿ ಸೇರಲಿದೆ ಅಚ್ಚರಿಯ ಫೀಚರ್ಸ್‌!

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಕಾಲಕ್ಕೆ ಅನುಗುಣವಾಗಿ ಬಳಕೆದಾರರಿಗೆ ಹೊಸ ಅನುಭವ ನೀಡುತ್ತಿದೆ. ಸದ್ಯ ಇದೀಗ ವಾಟ್ಸಾಪ್ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಎರಡು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈ ಎರಡು ಫೀಚರ್ಸ್‌ಗಳು ಡೆಸ್ಕ್‌ಟಾಪ್‌ ಬೀಟಾ ಆವೃತ್ತಿಯಲ್ಲಿ ಗುರುತಿಸಿಕೊಂಡಿವೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಡೆಸ್ಕ್‌ಟಾಪ್ ಬೀಟಾ ಆವೃತ್ತಿಯಲ್ಲಿ ಎರಡು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ಎರಡು ಹೊಸ ಫೀಚರ್ಸ್‌ಗಳು ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿವೆ ಎನ್ನಲಾಗಿದೆ. ಇವುಗಳನ್ನು ಮೆಸೇಜ್‌ ರಿಯಾಕ್ಷನ್‌ ಮತ್ತು ವಾಟ್ಸಾಪ್‌ ಸ್ಟೇಟಸ್‌ ಪ್ರೈವೆಸಿ ಶಾರ್ಟ್‌ಕಟ್‌ ಫೀಚರ್ಸ್‌ ಹೆಸರಿಸಲಾಗಿದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಿರುವ ಈ ಎರಡು ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ಡೆಸ್ಕ್‌ಟಾಪ್‌ ಬೀಟಾ ಮೆಸೇಜ್‌ ರಿಯಾಕ್ಷನ್‌

ವಾಟ್ಸಾಪ್‌ ಡೆಸ್ಕ್‌ಟಾಪ್‌ ಬೀಟಾ ಮೆಸೇಜ್‌ ರಿಯಾಕ್ಷನ್‌

ವಾಟ್ಸಾಪ್‌ ಪರಿಚಯಿಸಿರುವ ಹೊಸ ಫೀಚರ್ಸ್‌ ಹೆಸರೇ ಸೂಚಿಸುವಂತೆ ವಾಟ್ಸಾಪ್‌ ಮೆಸೇಜ್‌ಗಳಿಗೆ ಎಮೋಜಿಗಳ ಮೂಲಕ ರಿಯಾಕ್ಷನ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಬಳಕೆದಾರರು ಸ್ವೀಕರಿಸುವ ಸಂದೇಶಕ್ಕೆ ಎಮೋಜಿ ಮೂಲಕ ತ್ವರಿತವಾಗಿ ರಿಯಾಕ್ಷನ್‌ ಮಾಡಲು ಅನುಮತಿಸುತ್ತದೆ. ಈಗಾಗಲೇ ಮೆಟಾ ಒಡೆತನದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ಗಳು ಈ ಫೀಚರ್ಸ್‌ ಅನ್ನು ಬೆಂಬಲಿಸುತ್ತವೆ. ಈ ಹೊಸ ಫೀಚರ್ಸ್‌ ಇದೀಗ ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡರಲ್ಲೂ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಇನ್ನು ಈ ಫೀಚರ್ಸ್‌ ಹೇಗಿರಲಿದೆ ಅನ್ನೊದ ಸ್ಕ್ರೀನ್‌ಶಾಟ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅದರಂತೆ ಸಂದೇಶದ ಮೇಲೆ ಕರ್ಸರ್ ಅನ್ನು ಚಲಿಸುವಾಗ ಮಾತ್ರ ಈ ಬಟನ್ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಪ್ರತಿಕ್ರಿಯೆ ಬಟನ್ ಅನ್ನು ಕ್ಲಿಕ್ ಮಾಡುವುದರಿಂದ ಸಂದೇಶಕ್ಕೆ ಪ್ರತಿಕ್ರಿಯಿಸಲು ಆಯ್ಕೆ ಮಾಡಬಹುದಾದ ಆರು ಎಮೋಜಿಗಳನ್ನು ಸತತವಾಗಿ ಪ್ರದರ್ಶಿಸಲಾಗುತ್ತದೆ.

ವಾಟ್ಸಾಪ್‌ ಸ್ಟೇಟಸ್‌ ಪ್ರೈವೆಸಿ ಶಾರ್ಟ್‌ಕಟ್

ವಾಟ್ಸಾಪ್‌ ಸ್ಟೇಟಸ್‌ ಪ್ರೈವೆಸಿ ಶಾರ್ಟ್‌ಕಟ್

ಇನ್ನು ವಾಟ್ಸಾಪ್‌ ಇದೀಗ ಪರಿಚಯಿಸಿರುವ ಮತ್ತೊಂದು ಫೀಚರ್ಸ್‌ ಎಂದರೆ ವಾಟ್ಸಾಪ್‌ ಸ್ಟೇಟಸ್‌ ಪ್ರೈವೆಸಿ ಶಾರ್ಟ್‌ಕಟ್ ಆಗಿದೆ. ಇದರ ಮೂಲಕ ನೀವು ಚಾಟ್‌ನಲ್ಲಿನ ಫೋಟೋ ಅಥವಾ ವೀಡಿಯೊಗಾಗಿ ವಿಭಿನ್ನ ಸ್ವೀಕೃತದಾರರನ್ನು ಆಯ್ಕೆ ಮಾಡಲು ಅಥವಾ ಅದನ್ನು ಸ್ಟೇಟಸ್ ಅಪ್‌ಡೇಟ್‌ನಂತೆ ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಹೊಸ ಪ್ರೈವೆಸಿ ಶಾರ್ಟ್‌ಕಟ್‌ನೊಂದಿಗೆ ಚಿತ್ರವನ್ನು ಸ್ಟೇಟಸ್ ಆಗಿ ಹಂಚಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಅದು ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಳುತ್ತದೆ. ಬಳಕೆದಾರರು ಚಿತ್ರದ ಮೇಲೆ ಕ್ಲಿಕ್ ಮಾಡಬಹುದು ಮತ್ತು ಚಾಟ್‌ನೊಳಗಿನ ಸ್ಟೇಟಸ್‌ ಬಟನ್ ಅನ್ನು ಟ್ಯಾಪ್ ಮಾಡಬಹುದು ಮತ್ತು ಅದನ್ನು ಪೋಸ್ಟ್ ಮಾಡುವ ಮೊದಲು ನಿರ್ದಿಷ್ಟ ಸ್ಟೇಟಸ್‌ಗಾಗಿ ಪ್ರೇಕ್ಷಕರನ್ನು ಆಯ್ಕೆ ಮಾಡಬಹುದು. ಇನ್ನು ಈ ಹೊಸ ಫೀಚರ್ಸ್‌ಗಳು ಶೀಘ್ರದಲ್ಲೇ ವಾಟ್ಸಾಪ್‌ ಡೆಸ್ಕ್‌ಟಾಪ್ ಬೀಟಾ ಆವೃತ್ತಿಗೆ ಬರಲಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಐಒಎಸ್‌ ಡಿವೈಸ್‌ನಲ್ಲಿ ಹೊಸ ವಾಯ್ಸ್‌ ಇಂಟರ್ಫೆಸ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಹೊಸ ಫೀಚರ್ಸ್‌ ಗ್ರೂಪ್‌ಕಾಲ್‌ನಲ್ಲಿ ಹೊಸ ಅನುಭವವನ್ನು ತರಲಿದೆ. ಇದು ಪ್ರತಿ ಸ್ಪೀಕರ್‌ಗೆ ರಿಯಲ್‌-ಟೈಂ, ಕಲರ್-ಕೋಡೆಡ್ ಆಡಿಯೊ ತರಂಗರೂಪಗಳನ್ನು ನಿಯೋಜಿಸುತ್ತದೆ. ಜೊತೆಗೆ ಡಿಸ್ಕಾರ್ಡ್‌ನಂತೆಯೇ, ಇಂಡಿಕೇಟರ್‌ ಈಗ ಬಳಕೆದಾರರು ಮಾತನಾಡುವುದನ್ನು ನಿಲ್ಲಿಸಿದಾಗ ಸಕ್ರಿಯ ಸ್ಪೀಕರ್‌ಗಳು ಮತ್ತು ಫ್ಲಾಟ್‌ಲೈನ್‌ನ ಕುರಿತು ತಿಳಿಸುತ್ತದೆ. ಅಲ್ಲದೆ ವಾಯ್ಸ್‌ ಕಾಲ್‌ಗಳಿಗಾಗಿ ಬ್ಯಾಕ್‌ಗ್ರೌಂಡ್‌ ವಾಲ್‌ಪೇಪರ್ ಫಿಚರ್ಸ್‌ ಕೂಡ ಲಭ್ಯವಾಗಲಿದೆ.

ವಾಟ್ಸಾಪ್‌

ಇನ್ನು ಇದೇ ರೀತಿಯ ಇಂಟರ್ಫೇಸ್ ಅನ್ನು ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ ಪರಿಚಯಿಸಲಿದೆ. ಇದರಿಂದ ನೀವು ವಾಟ್ಸಾಪ್‌ ಕಾಲ್‌ ಸಮಯದಲ್ಲಿ ಸ್ಪೀಕರ್‌ ಮೋಡ್‌ಗೆ ಬದಲಾಯಿಸುವ, ವೀಡಿಯೋ ಕಾಲ್‌ಗೆ ಬದಲಾಯಿಸಲು, ನಿಮ್ಮನ್ನು ಮ್ಯೂಟ್ ಮಾಡಲು ಮತ್ತು ಕಾಲ್‌ ಎಂಡ್‌ ಮಾಡಲು ಅನುಮತಿಸುವ UI ಬಟನ್‌ಗಳನ್ನು ಸ್ಕ್ರೀನ್‌ ಕೆಳಗೆ ಇರಿಸಲಾಗುತ್ತದೆ. ಇದಲ್ಲದೆ 1-ಆನ್-1 ಕರೆಗಳ ಸಮಯದಲ್ಲಿ, ಗ್ರೇ ಕಲರ್‌ ಸ್ಕ್ವೇರ್‌ ನಲ್ಲಿ ನೀವು ಮಾತನಾಡುತ್ತಿರುವ ಸಂಪರ್ಕದ ಹೆಸರನ್ನು ತೋರಿಸುತ್ತದೆ. ಜೊತೆಗೆ ಅದರ ಕೆಳಗಿನ ಕರೆ ಅವಧಿಯನ್ನು ಸಹ ನಾವು ನೋಡಬಹುದು. ಈ ಎರಡು ಅಂಶಗಳ ಕೆಳಗೆ ಬಳಕೆದಾರರ ಪ್ರೊಫೈಲ್ ಚಿತ್ರವನ್ನು ತೋರಿಸುವ ಬಿಗ್‌ ಸರ್ಕಲ್‌ ಕಾಣಲಿದೆ.

Best Mobiles in India

English summary
WhatsApp working on adding features like message reactions and search message shortcuts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X