ದೇಶದಲ್ಲಿ 5G ಯಾವಾಗ ಆರಂಭ?..ಯಾವ ಸಂಸ್ಥೆ ಮೊದಲು 5G ಸೇವೆ ನೀಡಲಿದೆ?

|

ಪ್ರಸ್ತುತ ಇಡೀ ದೇಶವೇ ವೇಗದ 5G ನೆಟವರ್ಕ್‌ ನಿರೀಕ್ಷೆಯಲ್ಲಿದೆ. ಇತ್ತೀಚೆಗೆ 5G ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ರಿಯಲನ್ಸ್‌ ಜಿಯೋ, ಭಾರ್ತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಟೆಲಿಕಾಂ ಸಂಸ್ಥೆಗಳು ಭಾಗವಹಿಸಿದ್ದವು. ಆದರೆ ಅಸಲಿಗೆ ಭಾರತದಲ್ಲಿ 5G ನೆಟವರ್ಕ್‌ ಲಭ್ಯವಾಗುವುದು ಯಾವಾಗ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಣಿಸಿಕೊಂಡಿದೆ.

ಟೆಲಿಕಾಂ

ಇನ್ನು 2021 ರಲ್ಲಿ, ವೊಡಾಫೋನ್ ಐಡಿಯಾ, ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಸೇರಿದಂತೆ ಟೆಲಿಕಾಂ ಕಂಪನಿಗಳು ವಿವಿಧ ಕಂಪನಿಗಳ ಸಹಯೋಗದೊಂದಿಗೆ 5G ಪ್ರಯೋಗಗಳನ್ನು ನಡೆಸಿದ್ದವು. ಹಾಗೆಯೇ ಈಗಾಗಲೇ ದೆಹಲಿ, ಗುರುಗ್ರಾಮ್, ಬೆಂಗಳೂರು, ಕೋಲ್ಕತ್ತಾ, ಚಂಡೀಗಢ, ಜಾಮ್‌ನಗರ, ಅಹಮದಾಬಾದ್, ಚೆನ್ನೈ, ಹೈದರಾಬಾದ್, ಲಕ್ನೋ, ಪುಣೆ ಮತ್ತು ಗಾಂಧಿನಗರದಲ್ಲಿ 5G ಟ್ರಯಲ್ ಸೈಟ್‌ಗಳನ್ನು ಸ್ಥಾಪಿಸಿವೆ.

ಅಶ್ವಿನಿ

ಈ ಹಿಂದೆ, 2022 ರ ಅಂತ್ಯದ ವೇಳೆಗೆ 5G ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ದೂರಸಂಪರ್ಕ ಇಲಾಖೆ ಹೇಳಿಕೊಂಡಿತ್ತು. ಆದರೆ, ಈಗ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು 5G ಅನ್ನು ಮಾರ್ಚ್ 2023 ರಲ್ಲಿ ನಿಯೋಜಿಸಲು ಸಿದ್ಧವಾಗಲಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ 5G ಬೆಳೆವಣಿಗೆಗಳು ಚುರುಕಾಗಿ ಸಾಗಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ದೇಶದಲ್ಲಿ 5G ಸೇವೆಗಳನ್ನು ಮೊದಲು ಯಾರು ಪ್ರಾರಂಭಿಸಲಿದ್ದಾರೆ?

ದೇಶದಲ್ಲಿ 5G ಸೇವೆಗಳನ್ನು ಮೊದಲು ಯಾರು ಪ್ರಾರಂಭಿಸಲಿದ್ದಾರೆ?

ಜಿಯೋ, ಏರ್‌ಟೆಲ್‌ ಹಾಗೂ ವಿ ಈ ಮೂರು ಟೆಲಿಕಾಂ ಕಂಪನಿಗಳಲ್ಲಿ ಯಾವುದು ಮೊದಲು 5G ಸೇವೆಗಳನ್ನು ಪ್ರಾರಂಭಿಸುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಹೆಚ್ಚು ಕಡಿಮೆ ಎಲ್ಲ ಕಂಪನಿಗಳು ಒಂದೇ ಸಮಯದಲ್ಲಿ ಸೇವೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಈಗಾಗಲೇ 5G ಸೇವೆಗಳನ್ನು ಪಡೆಯುವ ನಿರೀಕ್ಷೆಯಿರುವ 13 ನಗರಗಳಲ್ಲಿ ತಮ್ಮ ಪ್ರಾಯೋಗಿಕ ಸೈಟ್‌ಗಳನ್ನು ಸ್ಥಾಪಿಸಿವೆ. ಭಾರತದಲ್ಲಿ 5G ಸೇವೆಗಳನ್ನು ಹೊರತರುವ ಮೊದಲ ಸಂಸ್ಥೆ ಎಂದು ಏರ್‌ಟೆಲ್ ಮತ್ತು ಜಿಯೋ ಹೇಳಿಕೊಂಡಿವೆ ಎಂದು ವರದಿಗಳು ಬಹಿರಂಗಪಡಿಸಿವೆ.

ಕವರೇಜ್

ಏರ್‌ಟೆಲ್‌ನ ಭಾರ್ತಿ ಮಿತ್ತಲ್ ಕಂಪನಿಯ 5G ನೆಟ್‌ವರ್ಕ್ ಸಿದ್ಧವಾಗಿದೆ ಮತ್ತು ಹರಾಜು ಪೂರ್ಣಗೊಂಡ ನಂತರ ಶೀಘ್ರದಲ್ಲೇ ಹೊರತರಲಿದೆ ಎಂದು ಖಚಿತಪಡಿಸಿದ್ದಾರೆ. ಮತ್ತೊಂದೆಡೆ, ಜಿಯೋ ದೇಶಾದ್ಯಂತ 1000 ಕ್ಕೂ ಹೆಚ್ಚು ನಗರಗಳಿಗೆ 5G ಕವರೇಜ್ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದು ಹೇಳಿದೆ. ಟೆಲಿಕಾಂ ಕಂಪನಿಯು ಭಾರತದಲ್ಲಿ ಹಂತ ಹಂತವಾಗಿ 5G ಅನ್ನು ಹೊರತರಲು ಯೋಜಿಸಿದೆ ಎಂದು ಹೇಳಿದೆ.

5G ತರಂಗಾಂತರ ಹರಾಜು

5G ತರಂಗಾಂತರ ಹರಾಜು

ಈ ತರಂಗಾಂತರ ಹರಾಜಿನ ಸಂಚಿತ ಬಿಡ್‌ಗಳು ಮೊದಲ ಎರಡು ದಿನಗಳಲ್ಲಿ 1,490 ಶತಕೋಟಿ ರೂ. ಆಗಿದ್ದು, ಮೂರನೇ ದಿನವೂ ಬಿಡ್ಡಿಂಗ್ ನಡೆಯುತ್ತಿದೆ. ಆದ್ದರಿಂದ ಎರಡನೇ ದಿನದಲ್ಲಿ ಬಿಡ್ ಮಾಡಲಾದ ಹೆಚ್ಚುವರಿ ಸ್ಪೆಕ್ಟ್ರಮ್ 3300 MHz, 1800 MHz, ಮತ್ತು 2100 MHz ಬ್ಯಾಂಡ್‌ಗಳಲ್ಲಿದೆ.

ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂಗಳು ಎಷ್ಟು ಖರ್ಚು ಮಾಡಿವೆ?

ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂಗಳು ಎಷ್ಟು ಖರ್ಚು ಮಾಡಿವೆ?

ಐಸಿಐಸಿಐ ಸೆಕ್ಯುರಿಟೀಸ್‌ನ ಅಂದಾಜಿನ ಪ್ರಕಾರ, ಏರ್‌ಟೆಲ್ ಟೆಲಿಕಾಂ ಇಲ್ಲಿಯವರೆಗೆ ಒಟ್ಟು 461 ಶತಕೋಟಿ ರೂ. ಖರ್ಚು ಮಾಡಿರಬಹುದು. ಆದರೆ ಜಿಯೋ ಟೆಲಿಕಾಂನ ಒಟ್ಟು ಖರ್ಚು ಸುಮಾರು 843 ಬಿಲಿಯನ್ ಆಗಿರಬಹುದು. ಇನ್ನು ವಿ ಟೆಲಿಕಾಂನ ಒಟ್ಟು ಉತ್ಪಾದನೆಯು ಸುಮಾರು 184 ಬಿಲಿಯನ್ ಆಗಿರಬಹುದು. 3 ನೇ ದಿನದ ಬಿಡ್ಡಿಂಗ್ ನಡೆಯುತ್ತಿದೆ ಮತ್ತು ಟೆಲಿಕಾಂಗಳು ಈಗಾಗಲೇ ಹೆಚ್ಚಿನ ಖರೀದಿಗಳನ್ನು ಮಾಡಿರುವುದರಿಂದ ಹರಾಜುಗಳು ಇಂದು ಬೇಗನೆ ಮುಕ್ತಾಯಗೊಳ್ಳಬಹುದು.

ಭಾರತದಲ್ಲಿ 5G ಸೇವೆಯಿಂದ ಏನೆಲ್ಲಾ ಪ್ರಯೋಜನ!

ಭಾರತದಲ್ಲಿ 5G ಸೇವೆಯಿಂದ ಏನೆಲ್ಲಾ ಪ್ರಯೋಜನ!

ಶೀಘ್ರದಲ್ಲೇ ಭಾರತದಲ್ಲಿ 5G ಸೇವೆಗಳು ಬರುವುದರಿಂದ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಏಕೆಂದರೆ 5G ಸೇವೆಗಳು 4G ಗಿಂತ ಹತ್ತುಪಟ್ಟು ವೇಗವಾಗಿ ದೊರೆಯಲಿವೆ. ಒಂದು ಹಂತದ ವರದಿಯ ಪ್ರಕಾರ 5G ಸೇವೆ ಲಭ್ಯವಾದರೆ ಭಾರತದಲ್ಲಿ ಸೇವಾ ಪೂರೈಕೆದಾರರಿಗೆ 5G ಸಕ್ರಿಯಗೊಳಿಸಿದ ಡಿಜಿಟಲೀಕರಣದ ಆದಾಯದ ಯೋಜಿತ ಮೌಲ್ಯವು 2030 ರ ವೇಳೆಗೆ ಸರಿಸುಮಾರು USD 17 ಶತಕೋಟಿ ಆಗಿರುತ್ತದೆ ಎನ್ನಲಾಗಿದೆ. ಇನ್ನು 5G ಸೇವೆ ಕೇವಲ ಬೆಳೆಯುತ್ತಿರುವ ನಿರ್ವಹಣೆ ಯನ್ನು ನಿರ್ವಾಹಕರಿಗೆ ಮಾತ್ರ ಸಕ್ರಿಯಗೊಳಿಸುವುದಿಲ್ಲ. ಬದಲಿಗೆ ಗ್ರಾಹಕರ ಡೇಟಾ ಅಗತ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಲಿದೆ.

ಬ್ರಾಡ್‌ಬ್ಯಾಂಡ್

ಇದಲ್ಲದೆ 5G ಸೇವೆ ಗ್ರಾಹಕರಿಗೆ ಸ್ಮಾರ್ಟ್ ಮತ್ತು ಹೆಚ್ಚು ಸಂಪರ್ಕಿತ ಜಗತ್ತನ್ನು ಸಕ್ರಿಯಗೊಳಿಸುತ್ತದೆ. ಇದರಿಂದ 5Gಯ ಆರಂಭಿಕ ಹಂತಗಳಲ್ಲಿ, ಸುಧಾರಿತ ಮೊಬೈಲ್ ಬ್ರಾಡ್‌ಬ್ಯಾಂಡ್ (eMBB) ಮತ್ತು ಸ್ಥಿರ ವೈರ್‌ಲೆಸ್ ಪ್ರವೇಶ (FWA) ವನ್ನು ಬಳಸಬೇಕಾಗುತ್ತದೆ. ಇವುಗಳು ಭಾರತದಲ್ಲಿ ಕಡಿಮೆ ಸ್ಥಿರ ಬ್ರಾಡ್‌ಬ್ಯಾಂಡ್ ಪೆನೆಟ್ರೇಷನ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಜೊತೆಗೆ ಪ್ರಯಾಣದಲ್ಲಿರುವಾಗ ಗ್ರಾಹಕರ ಡೇಟಾ ಅನುಭವವನ್ನು ಸುಧಾರಿಸುತ್ತದೆ. ಗ್ರಾಹಕರಿಗೆ ಅವಶ್ಯವಿರುವ ಡೇಟಾ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿ ಯಾಗಿ ಪೂರೈಸಲು 5G ಸಹಾಯ ಮಾಡಲಿದೆ, ಇದರಿಂದಾಗಿ ಒಟ್ಟಾರೆ ಗ್ರಾಹಕ ಅನುಭವವು ಉತ್ತಮವಾಗಿರುತ್ತದೆ.

ಗ್ರಾಹಕರು

5G ಸೇವೆ ಪಡೆದುಕೊಳ್ಳುವ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 4K ವೀಡಿಯೊವನ್ನು ವೀಕ್ಷಿಸಲು ಅವಕಾಶ ಪಡೆಯಲಿದ್ದಾರೆ. ಅಲ್ಲದೆ AR/ VR, ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ಗಳು ಮತ್ತು ವಿವಿಧ ತಲ್ಲೀನಗೊಳಿಸುವ ಚಟುವಟಿಕೆಗಳು ಮತ್ತು ಹೊಸ ಅಪ್ಲಿಕೇಶನ್‌ಗಳನ್ನು ಬಳಸಲು ಅನುಮತಿಸುತ್ತದೆ. ಇದಲ್ಲದೆ ಮನರಂಜನೆಯನ್ನು ಪಡೆಯಲು ಸುರಕ್ಷಿತವಾದ ಮಾರ್ಗವನ್ನು ಕಲ್ಪಿಸಲಿದೆ. ಅಲ್ಲದೆ 5G ಆಗಮನದಿಂದ ಡೇಟಾ ಡೌನ್‌ಲೋಡ್ ವೇಗ ಹೆಚ್ಚಾಗಲಿದೆ. ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ ದಕ್ಷತೆ ಮತ್ತು ಅತಿ ಕಡಿಮೆ ಸುಪ್ತತೆಯನ್ನು ಕಾಣಬಹುದಾಗಿದೆ.

ಭಾರತದಲ್ಲಿ 5G ಏಕೆ ಮುಖ್ಯ ಎನಿಸಿಕೊಂಡಿದೆ?

ಭಾರತದಲ್ಲಿ 5G ಏಕೆ ಮುಖ್ಯ ಎನಿಸಿಕೊಂಡಿದೆ?

ಭಾರತದಲ್ಲಿ 5G ನೆಟ್‌ವರ್ಕ್‌ ಹೆಚ್ಚಿನ ಇಂಟರ್‌ನೆಟ್‌ ವೇಗಕ್ಕಾಗಿ ಅತಿ ಅವಶ್ಯಕ ಎನಿಸಿದೆ. ಇದು ಹೆಚ್ಚಿನ ಮಲ್ಟಿ GBPS ಗರಿಷ್ಠ ಡೇಟಾ ವೇಗವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಟ್ರಾ ಲೋ ಲೆಟೆನ್ಸಿ, ಕ್ರಿಯೆ ಮತ್ತು ಪ್ರತಿಕ್ರಿಯೆಯ ನಡುವಿನ ಹೆಚ್ಚಿನ ನೆಟ್‌ವರ್ಕ್ ವಿಶ್ವಾಸಾರ್ಹತೆಯನ್ನು ಹೊಂದಿದೆ. ಹೆಚ್ಚಿನ ಜನರನ್ನು ಮತ್ತು ಹೆಚ್ಚಿನ ಸಾಧನಗಳನ್ನು ಬೆಂಬಲಿಸುವ ಬೃಹತ್ ನೆಟ್‌ವರ್ಕ್ ಸಾಮರ್ಥ್ಯ ಇದರಲ್ಲಿದೆ. ಯಾವುದೇ ಸಮಯದಲ್ಲಿ ಅನೇಕ ಉದ್ಯಮ ಅಪ್ಲಿಕೇಶನ್‌ಗಳು ಮತ್ತು ಬಳಕೆದಾರರನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆ.

Best Mobiles in India

English summary
When will 5G Service Start in India and who will Launch 5G First?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X