Just In
- 15 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 16 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 17 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 19 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- News
Iran Earthquake: ವಾಯುವ್ಯ ಇರಾನ್ನಲ್ಲಿ ಭೂಕಂಪನ; 7 ಸಾವು, 400 ಕ್ಕೂ ಹೆಚ್ಚು ಗಾಯಾಳು
- Movies
Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಶ್ವದ ಟಾಪ್ ನಾಯಕರು ಬಳಸುವ ಮೊಬೈಲ್ ಯಾವುವು ಗೊತ್ತಾ?..ಮೋದಿಯವರ ಮೊಬೈಲ್ ಇದು!!
ಇಂದಿನ ಡಿಜಿಟಲ್ ಯುಗದಲ್ಲಿ ಓರ್ವ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಒಂದು ದೇಶದ ಪ್ರಧಾನಿಯವರೆಗೂ ಎಲ್ಲರೂ ಮೊಬೈಲ್ ಬಳಕೆ ಮಾಡುವುದು ವಿಶೇಷವೇನಲ್ಲ.ಆದರೆ, ಸಾಮಾನ್ಯರು ಬಳಕೆ ಮಾಡುವ ಮೊಬೈಲ್‌ಗಳು ಯಾವುವು ಎಂಬುದು ನಮಗೆ ಗೊತ್ತು. ಒಂದು ದೇಶದ ಪ್ರಧಾನಿ ಯಾವ ಮೊಬೈಲ್ ಬಳಕೆ ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾ.?
ಅತ್ಯುತ್ತನ ಹುದ್ದೆ ಹೊಂದಿರುವ ಸಲುವಾಗಿ ವಿಶ್ವದ ಎಲ್ಲಾ ನಾಯಕರು ಸ್ಯಾಟಲೈಟ್ ಫೋನ್ ಅನ್ನು ಹೊಂದಿರುವುದು ಸಾಮಾನ್ಯ. ಹೆಚ್ಚು ಭಧ್ರತೆ ಹೊಂದಿರುವ ಇಂತಹ ಮೊಬೈಲ್‌ಗಳನ್ನು ರಾಜತಾಂತ್ರಿಕ ವಿಚಾರಗಳಿಗೆ ಬಳಸುತ್ತಾರೆ. ಆದರೆ, ಇಷ್ಟು ಮಾತ್ರವಲ್ಲದೇ ಅವರು ಬೇರೆ ಯಾವ ಯಾವ ಫೋನ್ ಬಳಸುತ್ತಾರೆ ಎಂಬುದೇ ಕುತೋಹಲ.

ಈ ರೀತಿಯ ಕುತೋಹಲ ಎಲ್ಲರಿಗೂ ಇದ್ದೇ ಇರುತ್ತದೆ. ಏಕೆಂದರೆ, ಇಂದು ಮೊಬೈಲ್ ಸಂಪರ್ಕವಿಲ್ಲದೇ ಯಾರು ಇರಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ .ಹಾಗಾಗಿ, ಇಂದಿನ ಲೇಖನದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಸೇರಿದಂತೆ ವಿಶ್ವ ನಾಯಕರು ಬಳಸುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯೋಣ.

ಬರಾಕ್ ಒಬಾಮ!
ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಾರೆ. ಒಬಾಮಾ ಅವರ ಬ್ಲ್ಯಾಕ್‌ಬೆರಿ ಫೋನ್ ಪ್ರಪಂಚದ ಅತ್ಯಂತ ಸುರಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ.ವಾಟ್ಸ್ಆಪ್, ಸೆಲ್ಫಿ ಕ್ಯಾಮೆರಾ, ಗೇಮ್ ಮತ್ತು ಸಂದೇಶಗಳಿಲ್ಲದ ಈ ಫೋನ್ ಗೂಢಲಿಪೀಕರಣ ವ್ಯವಸ್ಥೆಯೊಂದಿಗೆ ಬರುತ್ತದೆ. ಮೂಲಗಳ ಪ್ರಕಾರ ಇದರ ಬೆಲೆ $ 3000 ( ಸರಿಸುಮಾರು 2 ಲಕ್ಷ) ಡಾಲರ್‌ಗಳು

ಅಮೆರಿಕ ಅಧ್ಯಕ್ಷ ಟ್ರಂಪ್
ಮೊಬೈಲ್ ಬಳಕೆ ವಿಚಾರಕ್ಕಾಗಿಯೇ ಭಾರೀ ವಿವಾದಕ್ಕೀಡಾಗಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಮೊದಲು ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದರು. ಆದರೆ ಅಧ್ಯಕ್ಷರ ಭಧ್ರತೆಗಾಗಿ ಅವರಿಗೆ ಸರ್ಕಾರಿ ನಿರ್ಮಿತ ಫೋನ್ ನೀಡಲಾಗಿದೆ. ಜೊತೆಗೆ ವಯಕ್ತಿಕ ಭದ್ರತೆಯ ಕಾರಣ ಐಫೋನ್ ಅನ್ನು ಸಹ ಬಳಕೆ ಮಾಡುತ್ತಿದ್ದಾರೆ.

5 ಬ್ರಿಟಿಷ್ ರಾಯಲ್ ಫ್ಯಾಮಿಲಿ
ಅರ್ಧವಿಶ್ವವನ್ನೇ ಆಳಿದ ರಾಜಮನೆತನ ಎಂಬ ಖ್ಯಾತಿ ಹೊಂದಿರುವ ಬ್ರಿಟಿಶ್ ರಾಯಲ್ ಫ್ಯಾಮಿಲಿ ಐಫೋನ್ ಅನ್ನು ಹೆಚ್ಚು ಪ್ರೀತಿಸುತ್ತಿದೆ. ಕೊನೆಯ ಬಾರಿಗೆ ಪ್ರಿನ್ಸ್ ವಿಲಿಯಂ ಅವರು ಒಲಿಂಪಿಕ್ಸ್ (2013 ರಲ್ಲಿ) ಐಫೋನ್ ಜೊತೆಗೆ ಕಾಣಿಸಿಕೊಂಡಿದ್ದರು. ಐಪ್ಯಾಡ್‌ಗಳನ್ನು ಖರೀದಿಸಲು ರಾಣಿ ಎಲಿಜಬೆತ್ ತನ್ನ ಸಿಬ್ಬಂದಿಗೆ ಆದೇಶ ನೀಡಿದ್ದನ್ನು ನೀವು ತಿಳಿಯಬಹುದು.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್.!
ಅಮೆರೀಕಾ ಸೇರಿದಂತೆ ಜಗತ್ತಿನ ಹಲವು ದೇಶಗಳ ವಿರೋಧ ಕಟ್ಟಿಕೊಂಡಿರುವ ಉತ್ತರ ಕೊರಿಯಾ ಅಧ್ಯಕ್ಷ..ಕಿಮ್ ಜಾಂಗ್ ಉನ್ ಆಪಲ್ ಮತ್ತು ಸ್ಯಾಮ್‌ಸಂಗ್ ಮೊಬೈಲ್‌ಗಳನ್ನು ಬಹಳ ವಿರೋಧಿಸುತ್ತಾನೆ.! ಹಾಗಾಗಿಯೇ ಕಿಮ್ ಜಾಂಗ್ ಥೈವಾನ್ ಮೂಲದ HTC ಫೋನ್ ಬಳಕೆ ಮಾಡುತ್ತಾನೆ ಎನ್ನಲಾಗಿದೆ.!!

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಆಪಲ್‌ಗೆ ಸಂಬಂಧಪಟ್ಟ ಯಾವುದೇ ಪ್ರಾಡಕ್ಟ್ ಬಂದರೂ ಕೂಡಲೆ ಅದು ಪುಟಿನ್ ಕೈಯಲ್ಲಿ ಇರುತ್ತವೆ ಎನ್ನುವ ಮಾತಿದೆ. ರಷ್ಯಾ ಸರ್ಕಾರ ನಿರ್ಮಿತ ಫೋನ್ ಜೊತೆಗೆ ಆಪಲ್ ಮೊಬೈಲ್‌ಗಳನ್ನು ಬಳಕೆ ಮಾಡುವುದೆಂದರೆ ಪುಟಿನ್ಗೆ ಅತ್ಯಾನಂದವಂತೆ. ಇದನ್ನು ಅವರೆ ಹೇಳಿಕೊಂಡಿದ್ದಾರೆ.!

ಜರ್ಮನ್ ಚಾನ್ಸಲರ್ ಏಂಜಲಾ ಮಾರ್ಕೆಲ್!
ಈಗಲೂ ನೋಕಿಯಾ ಒಂದು ದೊಡ್ಡ ಜವಬ್ದಾರಿ ವ್ಯಕ್ತಿಯ ಕೈಯಲ್ಲಿದೆ ಎಂದರೆ ಅದು ಜರ್ಮನ್ ಚಾನ್ಸಲರ್ ಏಂಜಲಾ ಮಾರ್ಕೆಲ್ ಅವರು. ನೋಕಿಯಾ 6260 ಸ್ಲೈಡ್ (Nokia 6260) ಮತ್ತು ನ್ಲಾಕ್‌ಬೆರ್ರಿ (BlackBerry Z10) ಎರಡು ಪೋನ್‌ಗಳನ್ನು ಏಂಜಲಾ ಮಾರ್ಕೆಲ್ ಅವರು ಬಳಸುತ್ತಾರೆ.

ನಮ್ಮ ಪ್ರಧಾನಿ ಮೋದಿ!?
ಇತರ ದೇಶಗಳ ಪ್ರಾಧಾನಿಗಳಂತೆಯೇ ನಮ್ಮ ಪ್ರಧಾನಿ ಮೋದಿ ಅವರು ಸಹ ಅತ್ಯಾಧುನಿಕ ಸೆಕ್ಯುರಿಟಿ ಹೊಂದಿರುವ ಸ್ಯಾಟ್‌ಲೈಟ್ ಪೋನ್ ಬಳಕೆ ಮಾಡುತ್ತಾರೆ.! ಸೆಲ್ಫಿ ಪ್ರಿಯರಾದ ಮೋದಿ ಅವರು ಆಪಲ್ ಕಂಪೆನಿಯ ಐಫೋನ್ ಜೊತೆಗೆ ಬ್ಲಾಕ್‌ಬೆರ್ರಿ ಸ್ಮಾರ್ಟ್‌ಫೊನ್ ಬಳಕೆ ಮಾಡುವುದನ್ನು ಸಹ ನಾವು ನೋಡಬಹುದು.!!

ಇಂಟರ್‌ನೆಟ್‌ನಿಂದಲೇ ವಿಶ್ವದ ಅತ್ಯಂತ ಶ್ರೀಮಂತರಾದ ದಿಗ್ಗಜರು ಇವರು!!
ನೀವೇನಾದರೂ ಈ ಜಗತ್ತಿನ ಅತ್ಯಂತ ಶ್ರೀಮಂತರು ಯಾರು ಎಂಬ ಪಟ್ಟಿಯನ್ನು ಹುಡುಕಿದರೆ, ಆ ಪಟ್ಟಿಯಲ್ಲಿ ಹೆಚ್ಚಿನ ಶ್ರೀಮಂತರ ಸಂಪತ್ತಿನ ಮೂಲವು ತಂತ್ರಜ್ಞಾನ ಸಂಸ್ಥೆಯಾಗಿರುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ನೀವು ನೋಡುವ ಟಾಪ್ 10 ಪಟ್ಟಿಯಲ್ಲಿ ಕನಿಷ್ಠ 5 ಜನರು ಇಂಟರ್‌ನೆಟ್‌ನಿಂದಲೇ ಶ್ರೀಮಂತರಾಗಿತ್ತಾರೆ.!
ಕಳೆದ ಕೆಲ ವರ್ಷಗಳಿದಲೂ ತಂತ್ರಜ್ಞಾನ ಸಂಸ್ಥೆಯನ್ನು ಹೊಂದಿರುವ ಶ್ರೀಮಂತರ ಸಂಪತ್ತಿನ ನಿವ್ವಳ ಮೌಲ್ಯ ವೇಗವಾಗಿ ಬೆಳೆಯುತ್ತಿರುವುದನ್ನು ನಾವು ನೋಡಬಹುದು. ಉದಾಹರಣೆಗೆ ಪ್ರಖ್ಯಾತ ಇ ಕಾಮರ್ಸ್ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಪ್ರಪಂಚದ ಅತ್ಯಂತ ಶ್ರೀಮಂತನಾಗಿದ್ದರೆ, ಫೇಸ್‌ಬುಕ್ ಸಂಸ್ಥಾಪಕ ಜುಕರ್‌ಬರ್ಗ್ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ.!
ಹಾಗಾಗಿ, ಇಂಟರ್‌ನೆಟ್ ಆಧಾರಿತ ಇ-ಕಾಮರ್ಸ್ ಮತ್ತು ಸೋಷಿಯಲ್ ನೆಟ್ವರ್ಕಿಂಗ್ ಉದ್ಯಮವು ಇಂಟರ್ನೆಟ್ ಉದ್ಯಮವನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾದರೆ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಾಗಿರುವ ತಂತ್ರಜ್ಞಾನ ಸಂಸ್ಥೆಯ ಒಡೆಯರು ಯಾರು ಅವರ ಆಸ್ತಿ ಮೌಲ್ಯ ಎಷ್ಟಿದೆ ಎಂಬ ಕುತೋಹಲದ ಮಾಹಿತಿಯನ್ನು ಮುಂದೆ ತಿಳಿಯಿರಿ.

1. ಜೆಫ್ ಬೆಜೊಸ್ ($ 100 ಬಿಲಿಯನ್)
ಪ್ರಪಂಚದ ಅತಿದೊಡ್ಡ ಅಂತರ್ಜಾಲ ಆದಾಯ ಕಂಪೆನಿ ಅಮೆಜಾನ್ ಒಡೆಯ ಜೆಫ್ ಬೆಜೊಸ್ ಇಂದು ವಿಶ್ವದ ನಂಬರ್ ಒನ್ ಶ್ರೀಮಂತ. 1994 ರಲ್ಲಿ ಅಮೆಜಾನ್ ಎಂಬ ಚಿಲ್ಲರೆ ಆನ್ಲೈನ್ ಶಾಪಿಂಗ್ ತಾಣವನ್ನು ಸ್ಥಾಪಿಸಿದ ಜೆಫ್ ಬೆಜೊಸ್ ಇಂದು 100 ಬಿಲಿಯನ್ ಡಾಲರ್ ಒಡೆಯನಾಗಿದ್ದಾರೆ. ಬೆಜೊಸ್ ಬ್ಲೂ ಒರಿಜಿನ್ ಮತ್ತು ಬೆಜೊಸ್ ಎಕ್ಸ್ಪೆಡಿಶನ್ಸ್ ಎಂಬ ಎರಡು ಕಂಪನಿಗಳನ್ನು ಸಹ ಸ್ಥಾಪಿಸಿದ್ದಾರೆ.

2 ಮಾರ್ಕ್ ಜುಕರ್‌ಬರ್ಗ್ ($ 75 ಶತಕೋಟಿ)
ಪ್ರಪಂಚದ ಅತಿದೊಡ್ಡ ಸಾಮಾಜಿಕ ನೆಟ್ವರ್ಕಿಂಗ್ ಜಾಲತಾಣ ಆಗಿರುವ ಫೇಸ್‌ಬುಕ್ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ತನ್ನ ಕಾಲೇಜು ಗೆಳೆಯರೊಂದಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಫೇಸ್‌ಬುಕ್ ಅನ್ನು ಪ್ರಾರಂಭಿಸಿದ ಜುಕರ್‌ಬರ್ಗ್ ಜಗತ್ತಿನಲ್ಲಿ ಕಿರಿಯ ಅತ್ಯಂತ ಶ್ರೀಮಂತ ಇಂಟರ್ನೆಟ್ ಉದ್ಯಮಿಯಾಗಿದ್ದಾರೆ.

3 ಲ್ಯಾರಿ ಪೇಜ್ ($ 53.3 ಶತಕೋಟಿ)
ಗೂಗಲ್ ಸಹ ಸಂಸ್ಥಾಪಕ ಮತ್ತು ಆಲ್ಫಾಬೆಟ್ ಇಂಕ್ ಕಂಪೆನಿಯ ಸಿಇಒ ಆಗಿರುವ ಲ್ಯಾರಿ ಪೇಜ್ 53 ಬಿಲಿಯನ್ ಡಾಲರ್ ಆಸ್ತಿಯನ್ನು ಸಂಪಾದಿಸಿದ್ದಾರೆ. ಗೂಗಲ್‌ನ ಉತ್ಪನ್ನಗಳು ಮತ್ತು ಸೇವೆಗಳು ಇಂಟರ್ನೆಟ್ ಆಧರಿಸಿವೆ, ಕಂಪನಿಯ ಪ್ರಮುಖ ಆದಾಯದ ಮೂಲವು ಆನ್ಲೈನ್ ಜಾಹೀರಾತಿನ ಮೂಲಕ ಬರುತ್ತಿದೆ.

4. ಸರ್ಜೆ ಬ್ರಿನ್ ($ 51.1 ಶತಕೋಟಿ)
ಗೂಗಲ್‌ನ ಮತ್ತೋರ್ವ ಸಹ-ಸಂಸ್ಥಾಪಕ ಮತ್ತು ಆಲ್ಫಾಬೆಟ್ ಇಂಕ್ ಕಂಪೆನಿಯ ಅಧ್ಯಕ್ಷರಾಗಿರುವ ಸೆರ್ಗೆ ಬ್ರಿನ್ಸ ಅವರ ಒಟ್ಟು ಆಸ್ತಿ ಮೌಲ್ಯ ಒಟ್ಟು 51.1 ಬಿಲಿಯನ್ ಡಾಲರ್‌ಗಳಾಗಿವೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಅವರು ಹುಟ್ಟಿಹಾಕಿದ ಗೂಗಲ್ ಕಂಪೆನಿ ಈಗ ವಿಶ್ವದ ಅತ್ಯಂತ ಜನಪ್ರಿಯ ವೆಬ್ ಹುಡುಕಾಟ ಎಂಜಿನ್ ಆಗಿದೆ.


4. ಜಾಕ್ ಮಾ ($ 43.5 ಶತಕೋಟಿ)
ಚೀನಾದ ನಂಬರ್ ಒನ್ ಶ್ರೀಮಂತ ಜಾಕ್ ಮಾ ಅವರು ಚೀನಾದ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಆಲಿಬಾಬ ಕಂಪೆನಿಯ ಸಂಸ್ಥಾಪಕರು. ಒಂದು ಕಾಲದಲ್ಲಿ ಬೀದಿಯಲ್ಲಿ ಪುಸ್ತಕ ಮಾರುತ್ತಿದ್ದ ಜಾಕ್ ಮಾ ಅವರು ಇಂದು 43.5 ಬಿಲಿಯನ್ ಡಾಲರ್ ಒಡೆಯರಾಗಿದ್ದಾರೆ. ಇಂಟರ್‌ನೆಟ್‌ನಿಂದ ಇವರು ಗಳಿಸಿಕೊಂಡಿದ್ದು ಅಪಾರ.!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470