ಸಿಮ್‌ ಕಾರ್ಡ್‌ ಖರೀದಿಸುವ ಮುನ್ನ ಈ ಹೊಸ ನಿಯಮದ ಬಗ್ಗೆ ತಿಳಿಯಿರಿ!

|

ಪ್ರಸ್ತುತ ದಿನಗಳಲ್ಲಿ ಭಾರತದ ದೂರ ಸಂಪರ್ಕ ಇಲಾಖೆ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಇದೀಗ ದೂರಸಂಪರ್ಕ ಇಲಾಖೆ ಮತ್ತೊಮ್ಮೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಈ ಹೊಸ ನಿಯಮದ ಪ್ರಕಾರ ಇನ್ಮುಂದೆ ಅಪ್ರಾಪ್ತ ವಯಸ್ಕರು ಸಿಮ್ ಪಡೆಯಲು ಸಾಧ್ಯವಾಗುವುದಿಲ್ಲ. ಅಂದರೆ ನೀವು ಹೊಸ ಸಿಮ್‌ ಕಾರ್ಡ್‌ ಖರೀದಿಸಬೇಕಾದರೆ 18 ವರ್ಷ ತುಂಬಿರಲೇಬೇಕೆಂಬ ನಿಯಮ ಕಡ್ಡಾಯಗೊಳಿಸಿದೆ. ಇದಲ್ಲದೇ, ಅಪ್ರಾಪ್ತ ವಯಸ್ಕ ಗ್ರಾಹಕರು ಇನ್ಮುಂದೆ ಸ್ಥಿರ-ಲೈನ್ ಸಂಪರ್ಕಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಲಭ್ಯವಾಗುವುದಿಲ್ಲ.

ಸಿಮ್‌

ಹೌದು, ಭಾರತ ದೂರಸಂಪರ್ಕ ಇಲಾಖೆ ಸಿಮ್‌ ಖರೀದಿ ಮಾಡುವವರಿಗೆ ಹೊಸ ನಿಯಮ ಜಾರಿಗೊಳಿಸಿದೆ. ಅಪ್ರಾಪ್ತ ವಯಸ್ಕರಿಗೆ ಸಿಮ್‌ ಖರೀದಿಸಲು ಅವಕಾಶ ನೀಡದಂತೆ ಟೆಲಿಕಾಂ ಆಪರೇಟರ್‌ಗಳಿಗೆ ಸೂಚನೆ ನೀಡಿದೆ. ಅಷ್ಟೆ ಅಲ್ಲ ಹೊಸ ನಿಯಮದ ಅನ್ವಯ ಒಬ್ಬ ಗ್ರಾಹಕ ಎಷ್ಟು ಸಿಮ್‌ ಖರೀದಿಸಬಹುದು ಅನ್ನೊದನ್ನು ಸಹ ಗೊತ್ತುಪಡಿಸಿದೆ. ಈ ಮೂಲಕ ಸಿಮ್‌ ಕಾರ್ಡ್‌ ಖರೀದಿಯಲ್ಲಿ ನಡೆಯುವ ವಂಚನೆಯನ್ನು ತಡೆಯಲು ಮುಂದಾಗಿದೆ ಹಾಗಾದ್ರೆ ದೂರ ಸಂಪರ್ಕ ಇಲಾಖೆ ಜಾರಿ ಗೊಳಿಸಿರುವ ಹೊಸ ಮಾನದಂಡದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಿಮ್‌ ಖರೀದಿ ಮಾಡುವುದಕ್ಕೆ ಹೊಸ ರೂಲ್ಸ್‌!

ಸಿಮ್‌ ಖರೀದಿ ಮಾಡುವುದಕ್ಕೆ ಹೊಸ ರೂಲ್ಸ್‌!

ಸದ್ಯ ಡಿಒಟಿ ಜಾರಿಗೊಳಿಸಿರುವ ಹೊಸ ರೂಲ್ಸ್‌ ಪ್ರಕಾರ, ಹೊಸ ಸಿಮ್ ಖರೀದಿಸಲು ಗ್ರಾಹಕರು ಗ್ರಾಹಕ ಸ್ವಾಧೀನ ನಮೂನೆ (ಸಿಎಎಫ್) ಎಂಬ ನಮೂನೆಯನ್ನು ಭರ್ತಿ ಮಾಡಬೇಕು. ಈ ಫಾರ್ಮ್ ಅನ್ನು ಗ್ರಾಹಕರು ಮತ್ತು ಟೆಲಿಕಾಂ ಆಪರೇಟರ್‌ಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಗ್ರಾಹಕರು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರ ನಡುವಿನ ಒಪ್ಪಂದವಾಗಿರಲಿದೆ. ಈ ನಮೂನೆಗಳು ಕೆಲವು ನಿಯಮಗಳು ಮತ್ತು ಷರತ್ತುಗಳೊಂದಿಗೆ ಬರುತ್ತವೆ. ಇದನ್ನು ಗ್ರಾಹಕರು ಮತ್ತು TSP ಗಳು ಸ್ವೀಕರಿಸಬೇಕು ಎಂದು ಕೇರಳ ಟೆಲಿಕಾಂ ವರದಿ ಮಾಡಿದೆ.

ಸಿಮ್ ಕಾರ್ಡ್‌ಗಳಿಗಾಗಿ ಡಿಒಟಿ ಸೆಕ್ಷನ್ 11

ಸಿಮ್ ಕಾರ್ಡ್‌ಗಳಿಗಾಗಿ ಡಿಒಟಿ ಸೆಕ್ಷನ್ 11

ದೂರಸಂಪರ್ಕ ಇಲಾಖೆಯ ಹೊಸ ನಿಯಮದ ಪ್ರಕಾರ ಸಿಮ್‌ ಖರೀದಿ ಮಾಡುವ ಗ್ರಾಹಕರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಒಂದು ನಮೂನೆ ಅಥವಾ ಒಪ್ಪಂದಕ್ಕೆ ಸಹಿ ಮಾಡುವಾಗ ಗ್ರಾಹಕರು ಇನ್ನೊಬ್ಬರ ಒತ್ತಡವನ್ನು ಹೊಂದಿರಬಾರದು. ಎಲ್ಲಾ ಗ್ರಾಹಕರು ಒಪ್ಪಂದದ ನಿಯಮಗಳನ್ನು ಪೂರೈಸಲು ಅರ್ಹರಾಗಿರಬೇಕು. ಸದ್ಯ ದೂಸಂಪರ್ಕ ಇಲಾಖೆ ದೇಶದ ಎಲ್ಲಾ ಟೆಲಿಕಾಂ ಆಪರೇಟರ್‌ಗಳೊಂದಿಗೆ ಹೊಸ ಮಾರ್ಗಸೂಚಿಗಳನ್ನು ಹಂಚಿಕೊಂಡಿದೆ. ಜೊತೆಗೆ ಈ ಎಲ್ಲಾ ನಿಯಮಗಳನ್ನು ಪಾಲಿಸಬೇಕೆಂದು ಸೂಚನೆ ನೀಡಿದೆ.

ನೀವು ಎಷ್ಟು ಸಿಮ್ ಖರೀದಿಸಬಹುದು?

ನೀವು ಎಷ್ಟು ಸಿಮ್ ಖರೀದಿಸಬಹುದು?

ದೂರಸಂಪರ್ಕ ಇಲಾಖೆಯ ಹೊಸ ನಿಯಮದಂತೆ, ಒಬ್ಬ ಗ್ರಾಹಕ ತನ್ನ ಮತ್ತು ಅವಳ ಹೆಸರಿನಲ್ಲಿ 18 ಸಿಮ್‌ಗಳನ್ನು ಖರೀದಿಸಬಹುದು. ಇಲ್ಲಿ ಸಾಮಾನ್ಯ ಸಂವಹನಕ್ಕಾಗಿ 9 ಸಿಮ್‌ಗಳು, M2M ಸಂವಹನಕ್ಕಾಗಿ 9 ಸಿಮ್‌ಗಳನ್ನು ಖರೀದಿಸಬಹುದಾಗಿದೆ. ಆದರೆ M2M ಸಿಮ್ ಪಡೆಯಲು, ಗ್ರಾಹಕರು ಪರಿಶೀಲನಾ ನಮೂನೆಯನ್ನು ಸಲ್ಲಿಸಬೇಕು. ಜೊತೆಗೆ ಗ್ರಾಹಕರು ತಮ್ಮ ಡಿವೈಸ್‌ಗಳನ್ನು ಬದಲಾಯಿಸಿದರೆ ಹೊಸ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ಎಷ್ಟು ಸಿಮ್‌ಗಳಿವೆ ಎಂದು ಪತ್ತೆ ಹಚ್ಚುವುದು ಹೇಗೆ?

ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ಎಷ್ಟು ಸಿಮ್‌ಗಳಿವೆ ಎಂದು ಪತ್ತೆ ಹಚ್ಚುವುದು ಹೇಗೆ?

ಹಂತ:1 ಮೊದಲಿಗೆ tafcop.dgtelecom.gov.in ವೆಬ್‌ಸೈಟ್‌ ತೆರೆಯಿರಿ.
ಹಂತ:2 ವೆಬ್‌ಸೈಟ್‌ನಲ್ಲಿನ ಸೂಚನೆಯಂತೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು OTP ರಿಕ್ವೆಸ್ಟ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಂತರ, OTP ಅನ್ನು ನಮೂದಿಸಿ ಮತ್ತು ಸಬ್ಮಿಟ್‌ ಆಯ್ಕೆಯನ್ನು ಟ್ಯಾಪ್ ಮಾಡಿರಿ.
ಹಂತ:4 ಈಗ, ನೀವು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೋಡಲು ಅನುಮತಿಸಲಾಗುತ್ತದೆ.

Best Mobiles in India

English summary
According to DoT, for buying the new SIM, customers have to fill a form called the Customer Acquisition Form (CAF).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X