ಆನ್‌ಲೈನ್‌ನಿಂದ ಆಫ್‌ಲೈನ್‌ ಮೋಡ್‌ಗೆ ಬಂದ ಫ್ಲಿಪ್‌ಕಾರ್ಟ್‌

By Suneel
|

ಇದುವರೆಗೂ ಆನ್‌ಲೈನ್‌ ಪ್ರಾಡಕ್ಟ್‌ ಮಾರಾಟದಲ್ಲಿ ತೊಡಗಿದ್ದ ಕೆಲವು ಇ-ಕಾಮರ್ಸ್ ಕಂಪನಿಗಳು ಈಗ ತಮ್ಮ ಸೈಟ್‌ಗಳನ್ನು ಬಂದ್‌ ಮಾಡುತ್ತಿವೆ. ಅವುಗಳಲ್ಲಿ ಭಾರತದ ಅತಿದೊಡ್ಡ ಇ-ಕಾಮರ್ಸ್‌ ಕಂಪನಿಯಾದ ಫ್ಲಿಪ್‌ಕಾರ್ಟ್‌ ಸಹ ಒಂದಾಗಿದೆ. ಇದರ ಜೊತೆಗೆ ಇನ್ನು ಕೆಲವು ಕಂಪನಿಗಳು ಈ ನಿರ್ಧಾರವನ್ನು ಕೈಗೊಂಡಿದ್ದು, ಸದ್ಯದಲ್ಲೇ ತಮ್ಮ ಮಾರಾಟವನ್ನು ಭೌತಿಕ ಸ್ಟೋರ್‌ಗಳನ್ನು ಸ್ಥಾಪಿಸುವುದರ ಮೂಲಕ ತಮ್ಮ ಪ್ರಾಡಕ್ಟ್‌ ಮಾರಾಟದಲ್ಲಿ ತೊಡಗಲಿವೆ.

ಓದಿರಿ:ಫ್ಲಿಪ್‌ಕಾರ್ಟ್ ತಾಣಗಳಲ್ಲಿ ಬಿಗಿ ಭದ್ರತೆ

ಈ ಕಂಪನಿಗಳ ಆನ್‌ಲೈನ್‌ ಪ್ರಕ್ರಿಯೆ ಆಫ್‌ಲೈನ್‌ ಮಾಡುವ ನಿರ್ಧಾರ ನಿಗೂಢವಾಗಿದ್ದು, ಕಾರಣ ಏನು ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ಗಿಜ್‌ಬಾಟ್‌ ಬಂದ್‌ ಆಗಿರುವ ಕಂಪನಿಗಳು ಯಾವುವು, ಕಾರಣ ಏನು ಎಂಬ ಹಲವು ಮಾಹಿತಿಯನ್ನು ಈ ಲೇಖನದಲ್ಲಿ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌ ಬಂದಾಗಲಿದೆ

ಫ್ಲಿಪ್‌ಕಾರ್ಟ್‌ ಬಂದಾಗಲಿದೆ

ಆನ್‌ಲೈನ್ ಮಾರುಕಟ್ಟೆಗೆ ಹೆಸರುವಾಸಿಯಾದ ಫ್ಲಿಪ್‌ಕಾರ್ಟ್‌ ಆಫ್‌ಲೈನ್‌ ಆಗುವ ಬಗ್ಗೆ ಮಾಹಿತಿ ನೀಡಿದೆ. ಕಂಪನಿ ತನ್ನ ಆನ್‌ಲೈನ್‌ ಮಾರಾಟ ಬಂದ್‌ ಮಾಡಿ ಗ್ರಾಹಕರಿಗೆ ತನ್ನ ಪ್ರಾಡಕ್ಟ್‌ಗಳನ್ನು ಭೌತಿಕವಾಗಿ ಸ್ಟೋರ್‌ಗಳನ್ನು ಸ್ಥಾಪಿಸಿ ಗ್ರಾಹಕ ವಸ್ತುವನ್ನು ಸ್ಪರ್ಶಿಸಿ ತೆಗೆದುಕೊಳ್ಳಲು ಅನುವುಮಾಡಿಕೊಡಲು ಈ ತೀರ್ಮಾನ ಕೈಗೊಂಡಿದೆ.

ಆಫ್‌ಲೈನ್‌ ಆಗುತ್ತಿರುವ ಇತರೆ ಆನ್‌ಲೈನ್‌ ಮಾರಾಟ ಕಂಪನಿಗಳು

ಆಫ್‌ಲೈನ್‌ ಆಗುತ್ತಿರುವ ಇತರೆ ಆನ್‌ಲೈನ್‌ ಮಾರಾಟ ಕಂಪನಿಗಳು

ಫ್ಲಿಫ್‌ಕಾರ್ಟ್‌ ಅಲ್ಲದೇ, ಜಿವೇಮ್‌, ಪೆಪ್ಪಫ್ರೈ, ಫಸ್ಟ್‌ಕ್ರೈ, ಲೆನ್ಸ್‌ಕಾರ್ಟ್ ಆನ್‌ಲೈನ್‌ ಮಾರಾಟ ಕಂಪನಿಗಳು ಸಹ ಆಫ್‌ಲೈನ್‌ ಆಗುತ್ತಿವೆ. ಇದರಿಂದ ತಮ್ಮ ವಿಶ್ವಾಸವನ್ನು ನೇರವಾಗಿ ಸ್ಟೋರ್‌ಗಳ ಮೂಲಕ ಮಾರಾಟ ಆರಂಭಿಸಿ ಹೆಚ್ಚಿಸಿಕೊಳ್ಳುವ ಮಹದಾಶೆ ಹೊಂದಿವೆ.

 100 ಸ್ಟೋರ್‌ಗಳ  ಸ್ಥಾಪಿಸಲಿರುವ ಜಿವೇಮ್‌ ಕಂಪನಿ

100 ಸ್ಟೋರ್‌ಗಳ ಸ್ಥಾಪಿಸಲಿರುವ ಜಿವೇಮ್‌ ಕಂಪನಿ

"ಪ್ರಸ್ತುತದಲ್ಲಿ ಯಾರೂ ಬೇಕಾದರೂ ಆನ್‌ಲೈನ್‌ ಸ್ಟೋರ್‌ಗಳನ್ನು ಸ್ಥಾಪಿಸಬಹುದು. ಗುಣಮಟ್ಟದ ಪರಿಶೋಧನೆ ಎಲ್ಲಿದೆ?", ಎಂದು ಜಿವೇಮ್‌ ಕಂಪನಿಯ ಸಂಸ್ಥಾಪಕ ಪ್ರಶ್ನೆ ಮಾಡಿದ್ದಾರೆ. ಒಳ ಉಡುಪುಗಳ ಆನ್‌ಲೈನ್‌ ಮಾರಾಟ ಕಂಪನಿಯಾದ ಜಿವೇಮ್‌ ಮುಂದಿನ 3 ವರ್ಷಗಳಲ್ಲಿ 100 ಸ್ಟೋರ್‌ಗಳನ್ನು ಸ್ಥಾಪಿಸಲಿದ್ದು, ಬೆಂಗಳೂರಿನಲ್ಲಿ ಈಗಾಗಲೇ ಕಳೆದ ಎರಡು ವಾರದ ಹಿಂದೆ ಭೌತಿಕ ಸ್ಟೋರ್ ಸ್ಥಾಪಿಸಿದೆ.

 ಇಟ್ಟಿಗೆ ಮತ್ತು ಗಾರೆ ಸಾಮಾನುಗಳ ಸ್ಟೋರ್‌

ಇಟ್ಟಿಗೆ ಮತ್ತು ಗಾರೆ ಸಾಮಾನುಗಳ ಸ್ಟೋರ್‌

ಇಟ್ಟಿಗೆ ಮತ್ತು ಗಾರೆ ಸಾಮಾನುಗಳ ಸ್ಟೋರ್‌ ವಿಂಡೋ ಶಾಪಿಂಗ್ ಸೇವೆ ಅವಕಾಶ ಕಲ್ಪಿಸಿದ್ದು, ಅವುಗಳನ್ನು ಸ್ಪರ್ಶದ ಮುಖಾಂತರ ಗುಣಮಟ್ಟ ಪರೀಕ್ಷಿಸಿ ನಂತರ ಅವುಗಳನ್ನು ಕೊಳ್ಳಬಹುದಾಗಿದೆ.

 ಜಾಹಿರಾತು ಹಣ ಉಳಿಸಬಹುದು

ಜಾಹಿರಾತು ಹಣ ಉಳಿಸಬಹುದು

ಪೆಪ್ಪರ್‌ಫ್ರೈ ಕಂಪನಿಯೂ ಈ ಸ್ಟೋರ್‌ಗಳನ್ನು ಸ್ಥಾಪಿಸಿ ಜಾಹಿರಾತು ಟೂಲ್‌ಆಗಿಯೂ ಮತ್ತು ಮಾಧ್ಯಮವಾಗಿಯೂ ಬಳಕೆ ಮಾಡಿಕೊಳ್ಳಬಹುದು ಎಂದಿದೆ. ಅಲ್ಲದೇ ಇದು 6 ಆಫ್‌ಲೈನ್‌ ಸ್ಟೋರ್‌ಗಳನ್ನು ಸ್ಥಾಪಿಸುವುದಾಗಿ ಹೇಳಿದೆ.

ಫಸ್ಟ್‌ಕ್ರೈ.ಕಾಂ

ಫಸ್ಟ್‌ಕ್ರೈ.ಕಾಂ

"ಕಿಡ್ಸ್‌ವಿಯರ್‌ ಆನ್‌ಲೈನ್‌ ಕಂಪನಿಯಾದ ಫಸ್ಟ್‌ಕ್ರೈ.ಕಾಂ 135 ಭೌತಿಕ ಸ್ಟೋರ್‌ಗಳನ್ನು ಸ್ಥಾಪಿಸುವುದರ ಮೂಲಕ ಮಾರ್ಕೆಟಿಂಗ್ ಬಜೆಟ್‌ನಲ್ಲಿ ಶೇಕಡ 25 ರಷ್ಟು ಬಜೆಟ್‌ ಅನ್ನು ಕಡಿಮೆಮಾಡಿಕೊಂಡಿದೆ", ಎಂದು ಕಂಪನಿ ಸಂಸ್ಥಾಪಕಿ ಸುಪಂ ಮಹೇಶ್ವರಿ ಹೇಳಿದ್ದಾರೆ.

 ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್

ಭಾರತದ ಅತಿದೊಡ್ಡ ಇ-ಕಾಮರ್ಸ್‌ ಕಂಪನಿಯಾದ ಫ್ಲಿಪ್‌ಕಾರ್ಟ್ 10 ನಗರಗಳಲ್ಲಿ 20 ಆಫ್‌ಲೈನ್‌ ಸ್ಟೋರ್‌ಗಳನ್ನು ಸ್ಥಾಪಿಸಿದ್ದು, ಮುಂದಿನ ಮಾರ್ಚ್‌ ತಿಂಗಳ ಒಳಗಾಗಿ 100 ಸ್ಟೋರ್‌ಗಳನ್ನು ಸ್ಥಾಪಿಸುವುದಾಗಿ ಹೇಳಿದೆ.

ಲೆನ್ಸ್‌ಕಾರ್ಟ್‌

ಲೆನ್ಸ್‌ಕಾರ್ಟ್‌

ಲೆನ್ಸ್‌ಕಾರ್ಟ್‌ ಐವಿಯರ್ ಗಳ ಸ್ಟೋರ್‌ಗಳನ್ನು ಭಾರತದಾದ್ಯಂತ ಪ್ರಸ್ತುತದಲ್ಲಿ 100 ಸ್ಟೋರ್‌ಗಳನ್ನು ಹೊಂದಿದೆ. ಇದು 2020 ಇಸವಿಯೊಳಗೆ 1000 ಆಫ್‌ಲೈನ್‌ ಸ್ಟೋರ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.

Best Mobiles in India

English summary
Several e-commerce companies are opening physical stores to give customers a touch-and-feel experience of products and stand out in the clutter of the increasingly flooded online retail space.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X