ನೂತನ ಐಫೋನ್ ಖರೀದಿಗೆ ಪ್ರೇರೇಪಿಸಲು ಆಪಲ್‌ನಿಂದ ಮೋಸ!!..ಆಪಲ್ ಹೇಳಿದ್ದು ಹೀಗೆ!!

ಹಳೆಯ ಐಫೋನ್ ಕಾರ್ಯನಿರ್ವಹಣೆ ಸ್ಲೋ ಆಗಿರುವ ಬಗ್ಗೆ ಆಪಲ್ ಸ್ಪಷ್ಟನೆ ನೀಡಿದ್ದು, ಹಳೆ ಮಾದರಿ ಐಫೋನ್‌ಗಳ ವೇಗ ಕಡಿಮೆಯಾಗಿರುವುದು ನಿಜ! ಆದರೆ, ಅದಕ್ಕೆ ಕಾರಣವೇ ಬೇರೆ ಎಂದು ಹೇಳಿದೆ.!!

|

ಐಫೋನ್ 8 ಮತ್ತು ಐಫೋನ್ 10 ಗಿಂತ ಮುಂಚಿತವಾಗಿ ಖರೀದಿಸಿದ ನಿಮ್ಮ ಆಪಲ್ ಐಫೋನ್ ಕಾರ್ಯನಿರ್ವಹಣೆ ವೇಗ ಕಡಿಮೆಯಾಗಿದೆ ಎಂದು ನಿಮಗೆ ಅನಿಸಿರಬಹುದು.! ನಿಮಗೆ ಮಾತ್ರವಲ್ಲ ಇಡೀ ಪ್ರಪಂಚದಾಧ್ಯಂತ ಐಫೋನ್ 8 ಗಿಂತ ಮೊದಲ ಸೀರಿಸ್ ಸ್ಮಾರ್ಟ್‌ಫೋನ್‌ಗಳ ವೇಗ ಕಡಿಮೆಯಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.!!

ಹಾಗಾಗಿ, ಹಳೆಯ ಐಫೋನ್ ಕಾರ್ಯನಿರ್ವಹಣೆ ಸ್ಲೋ ಆಗಿರುವ ಬಗ್ಗೆ ಆಪಲ್ ಸ್ಪಷ್ಟನೆ ನೀಡಿದ್ದು, ಹಳೆ ಮಾದರಿ ಐಫೋನ್‌ಗಳ ವೇಗ ಕಡಿಮೆಯಾಗಿರುವುದು ನಿಜ! ಆದರೆ, ಅದಕ್ಕೆ ಕಾರಣವೇ ಬೇರೆ ಎಂದು ಹೇಳಿದೆ.!! ಹಾಗಾದರೆ, ಆಪಲ್‌ ಹೇಳಿದಂತೆ ಐಫೋನ್‌ಗಳು ಸ್ಲೋ ಆಗಲು ಕಾರಣವೇನು? ಎಂಬುದನ್ನು ಮುಂದೆ ತಿಳಿಯಿರಿ.!!

ಹೊಸ ಐಫೋನ್‌ಗಳ ಖರೀದಿಗೆ ಪ್ರೇರಣೆ!!

ಹೊಸ ಐಫೋನ್‌ಗಳ ಖರೀದಿಗೆ ಪ್ರೇರಣೆ!!

ಹಳೆ ಐಫೋನ್ ಮಾದರಿಗಳಳು ಸ್ಲೋ ಆಗಿರುವುದಕ್ಕೆ ಕಾರಣವೇ ಹೊಸ ಐಫೋನ್‌ಗಳ ಖರೀದಿಗೆ ಪ್ರೇರೇಪಿಸಲು ಆಪಲ್ ಕಂಪೆನಿ ಮಾಡುತ್ತಿರುವ ಮೋಸ ಎಂದು ಇಡೀ ಪ್ರಪಂಚದಾಧ್ಯಂತ ದೂರಿದ್ದಾರೆ.! ಹೊಸ ಐಫೋನ್ ಬಿಡುಗಡೆಯಾದರೆ ಇಂತಹ ಸಮಸ್ಯೆ ಸಾಮನ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.!!

ಈ ಬಗ್ಗೆ ಆಪಲ್ ಹೇಳಿದ್ದೇನು?

ಈ ಬಗ್ಗೆ ಆಪಲ್ ಹೇಳಿದ್ದೇನು?

ಬಳಕೆದಾರರ ಹಿತರಕ್ಷಣೆಯೇ ನಮಗೆ ಹೆಚ್ಚು ಮುಖ್ಯವಾಗಿದ್ದು, ಯಾವುದೇ ಕಾರಣಕ್ಕೂ ಹಳೆ ಮಾದರಿ ಐಫೋನ್‌ಗಳ ವೇಗವನ್ನು ಕಡಿಮೆಮಾಡುವುದಿಲ್ಲ ಎಂದು ಆಪಲ್ ಕಂಪೆನಿ ತಿಳಿಸಿದೆ.!! ಇನ್ನು, ಹಳೆ ಮಾದರಿ ಐಫೋನ್‌ಗಳ ವೇಗ ಕಡಿಮೆಯಾಗಿರುವುದಕ್ಕೆ ಕಾರಣ "ios 11" ಎಂದು ಆಪಲ್ ತಿಳಿಸಿದೆ.!!

ಏನಿದು ios 11?

ಏನಿದು ios 11?

ಆಪಲ್ ಕಂಪೆನಿ ತನ್ನ ಐಪೋನ್ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್‌ಗಳನ್ನು ನೀಡಲು ಫೋನ್‌ನಲ್ಲಿನ ಸಾಫ್ಟ್‌ವೇರ್‌ ಅನ್ನು ಅಪ್‌ಗ್ರೇಡ್ ಮಾಡುತ್ತಿರುತ್ತದೆ.! ಆಪಲ್ ಈ ಸಾರಿ ios 11 ಸಾಫ್ಟ್‌ವೇರ್ ಅನ್ನು ಬಿಡುಗಡೆ ಮಾಡಿದ್ದು, ನೂತನ ಸಾಫ್ಟವೇರ್ ಅಪ್‌ಡೇಟ್ ಮಾಡಿದವರ ಫೋನ್‌ಗಳು ಸ್ಲೋ ಆಗಿವೆ.!!

ಸಾಫ್ಟವೇರ್ ಅಪ್‌ಡೇಟ್ ಮಾಡಿದರೆ ಸ್ಲೋ!!

ಸಾಫ್ಟವೇರ್ ಅಪ್‌ಡೇಟ್ ಮಾಡಿದರೆ ಸ್ಲೋ!!

ಹೌದು, ಆಪಲ್ ಹೇಳುವಂತೆ ನೂತನ ಸಾಫ್ಟವೇರ್ ಅನ್ನು ಮೊಬೈಲ್‌ಗೆ ಅಪ್‌ಡೇಟ್ ಮಾಡಿಕೊಂಡರೆ ಫೋನ್‌ಗಳು ಸ್ಲೋ ಆಗುತ್ತವೆ. ಮೊಬೈಲ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗೂ ನಿಕಟ ಸಂಭಂದವಿರುವುದರಿಂದ ಹಾರ್ಡ್‌ವೇರ್ ಸಪೋರ್ಟ್‌ಗಿಂತಲೂ ಸಾಫ್ಟ್‌ವೇರ್ ಕಾರ್ಯನಿರ್ವಹಣೆ ಹೆಚ್ಚಿದ್ದರೆ ಫೋನ್‌ಗಳು ಸ್ಲೋ ಆಗುತ್ತವೆ.!!

ಅಪ್‌ಡೇಟ್ ಆಗದಿದ್ದರೆ ತೊಂದರೆಯಿಲ್ಲ!!

ಅಪ್‌ಡೇಟ್ ಆಗದಿದ್ದರೆ ತೊಂದರೆಯಿಲ್ಲ!!

ಹಳೆಯ ಐಫೋನ್‌ಗಳಲ್ಲಿ ಆಪಲ್‌ನ ನೂತನ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳದಿದ್ದರೆ ಫೋನ್ ಸ್ಲೋ ಆಗುವ ತೊಂದರೆ ಇಲ್ಲ. ಆದರೆ, ನೂತನ ಸಾಫ್ಟ್‌ವೇರ್ ಮೂಲಕ ಸಿಗುತ್ತಿದ್ದ ಹಲವು ಫೀಚಸ್‌ಗಳು ಮಾತ್ರ ಇವರಿಗೆ ಸಿಗುವುದಿಲ್ಲ.!!

ರೆಡ್‌ಮಿ ನೋಟ್ 4ಗೆ ಸೆಡ್ಡು ಹೊಡೆಯುವ ಏಕೈಕ ಫೋನ್ ಇದು!!..ಬೆಲೆ ಕೇವಲ 6,999 ರೂ.!!ರೆಡ್‌ಮಿ ನೋಟ್ 4ಗೆ ಸೆಡ್ಡು ಹೊಡೆಯುವ ಏಕೈಕ ಫೋನ್ ಇದು!!..ಬೆಲೆ ಕೇವಲ 6,999 ರೂ.!!

Best Mobiles in India

English summary
Recently reports claimed that Apple is deliberately slowing down its older iPhones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X