ಮಾಸಿಕ ಅವಧಿಯ ಪ್ಲಾನ್‌ಗಳು 30 ದಿನಗಳ ಬದಲಿಗೆ 28 ದಿನಗಳ ಮಾನ್ಯತೆ ನೀಡಲಿವೆ ಯಾಕೆ?

|

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ತಮ್ಮ ಬಳಕೆದಾರರಿಗಾಗಿ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ ಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಚಂದದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಪ್ಲಾನ್‌ಗಳನ್ನು ಪರಿಚಯಿಸುವುದು ಸಾಮಾನ್ಯವಾಗಿದೆ. ಇದರಲ್ಲಿ ಅಲ್ಪಾವಧಿ ಮಾನ್ಯತೆಯ ಪ್ಲಾನ್‌ಗಳು ಮಾತ್ರವಲ್ಲದೆ ದೀರ್ಘಾವಧಿಯ ಪ್ಲಾನ್‌ಗಳು ಕೂಡ ಸೇರಿವೆ.

ಟೆಲಿಕಾಂ

ಹೌದು, ಟೆಲಿಕಾಂ ಕಂಪೆನಿಗಳು ಭಿನ್ನ ಮಾದರಿಯ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಮಾಸಿಕ ಅವಧಿಯ ಪ್ರಿಪೇಯ್ಡ್‌ ಪ್ಲಾನ್‌ಗಳು ಹೆಚ್ಚು ಗಮನಸೆಳೆದಿವೆ. ಆದರೆ ಮಾಸಿಕ ಅವಧಿಯ ಪ್ಲಾನ್‌ಗಳು ಕೇವಲ 28 ದಿನಗಳ ಮಾನ್ಯತೆಯಲ್ಲಿ ಬರಲಿವೆ. ತಿಂಗಳ ವ್ಯಾಲಿಡಿಟಿ ಪ್ಲಾನ್‌ಗಳು ಕೇವಲ 28 ದಿನಗಳ ಮಾನ್ಯತೆಯಲ್ಲಿ ಬರುವುದಕ್ಕೆ ಕಾರಣ ಏನು? ಇದರಿಂದ ಟೆಲಿಕಾಂ ಕಂಪಪೆನಿಗಳಿಗೆ ದೊರೆಯುವ ಲಾಭ ಏನು? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಲಾನ್‌ಗಳು

ಸಾಮಾನ್ಯವಾಗಿ ಅಲ್ಪಾವಧಿ ಮಾನ್ಯತೆ ಬಯಸುವ ಚಂದಾದಾರರು ಮಾಸಿಕ ಅವಧಿಯ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ರೀಚಾರ್ಜ್‌ ಮಾಡಿಸುತ್ತಾರೆ. ಆದರೆ ಈ ಪ್ಲಾನ್‌ಗಳು ಕೇವಲ 28 ದಿನಗಳ ಮಾನ್ಯತೆಯಲ್ಲಿ ಬರಲಿವೆ. ಒಂದು ತಿಂಗಳ ಪ್ಲಾನ್‌ನಲ್ಲಿ ನಾವು ಎರಡು ದಿನ ಕಡಿಮೆ ವ್ಯಾಲಿಡಿಟಿಯನ್ನು ಏಕೆ ಪಡೆಯುತ್ತೇವೆ ಎನ್ನುವ ಪ್ರಶ್ನೇ ಬಹುತೇಕ ಎಲ್ಲಾ ಗ್ರಾಹಕರಿಗೂ ಇದ್ದೆ ಇರುತ್ತದೆ. 28 ದಿನಗಳ ಮಾಸಿಕ ಮಾನ್ಯತೆಯ ಪ್ಲಾನ್‌ ರೀಚಾರ್ಜ್‌ ಮಾಡುವವರು ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡಬೇಕಾಗುತ್ತದೆ.

ಮಾಸಿಕ

ಮಾಸಿಕ ಅವಧಿಯ ಪ್ಲಾನ್‌ ರೀಚಾರ್ಜ್‌ ಮಾಡಿಸಿದಾಗ ನಿಮಗೆ ಕೇವಲ 28 ದಿನಗಳ ಮಾನ್ಯತೆ ಸಿಗಲಿದೆ. ಇದರಿಂದ ಫೆಬ್ರವರಿ ಹೊರತು ಪಡಿಸಿ ಇನ್ನುಳಿದ ಎಲ್ಲಾ ತಿಂಗಳಿನಲ್ಲಿಯೂ ಎರಡು ದಿನಗಳ ವ್ಯಾಲಿಡಿಟಿ ಕಡಿಮೆ ಇರಲಿದೆ. ಇದರಿಂದ ನೀವು ಪ್ರತಿ ತಿಂಗಳಿಗೆ 28 ದಿನಗಳಂತೆ ವರ್ಷಕ್ಕೆ ಕೇವಲ 336 ದಿನಗಳ ಮಾನ್ಯತೆಯನ್ನು ಈ ಪ್ಲಾನ್‌ಗಳಲ್ಲಿ ಪಡೆಯಬಹುದು. ಇನ್ನುಳಿದ 29 ದಿನಗಳಿಗಾಗಿ ಮತ್ತೊಂದು ಪ್ಲಾನ್‌ ರೀಚಾರ್ಜ್‌ ಮಾಡಿಸುವ ಅವಶ್ಯಕತೆ ಬರಲಿದೆ. ಇದರಿಂದ ಈ ರೀತಿಯ ಪ್ಲಾನ್‌ಗಳು ಟೆಲಿಕಾಂ ಕಂಪೆನಿಗಳಿಗೆ ಲಾಭವಾದರೆ, ಗ್ರಾಹಕರಿಗೆ ವರ್ಷಕ್ಕೆ ಒಂದು ಪ್ಲಾನ್‌ ಹೆಚ್ಚುವರಿಯಾಗಲಿದೆ.

ಟೆಲಿಕಾಂ

ಇದರಿಂದ ಟೆಲಿಕಾಂ ಕಂಪೆನಿಗಳು ಲಾಭವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗ್ತಿದೆ. ಪ್ರಸ್ತುತ ಏರ್‌ಟೆಲ್ ಟೆಲಿಕಾಂ 35.48 ಕೋಟಿ ಬಳಕೆದಾರರನ್ನು ಹೊಂದಿದೆ. ಈ ಬಳಕೆದಾರರು 28 ದಿನಗಳ ಮಾನ್ಯತೆ ನೀಡುವ 179ರೂ. ಪ್ಲಾನ್‌ ರೀಚಾರ್ಜ್‌ ಮಾಡಿದರೆ, ಅಂದಾಜು 6,350 ಕೋಟಿ ರೂಪಾಯಿಗಳು ಏರ್‌ಟೆಲ್‌ ಕಂಪೆನಿ ಗಳಿಸಲಿದೆ. ಇದೇ ರೀತಿಯಲ್ಲಿ 40.8 ಕೋಟಿ ಚಂದಾದಾರರನ್ನು ಹೊಂದಿರುವ ಜಿಯೋ 28 ದಿನಗಳಲ್ಲಿ ಸುಮಾರು 8,527 ಕೋಟಿ ರೂಪಾಯಿಗಳನ್ನು ಗಳಿಸಲಿದೆ. ಇದೇ ಕಾರಣಕ್ಕೆ ಟೆಲಿಕಾಂ ಕಂಪೆನಿಗಳು 28 ದಿನಗಳ ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಚಯಿಸುತ್ತಾ ಬಂದಿವೆ.

TRAI

ಇದೆಲ್ಲವನ್ನು ಗಮನಿಸಿರುವ TRAI ಇತ್ತೀಚಿಗೆ ಟೆಲಿಕಾಂ ಕಂಪೆನಿಗಳಿಗೆ ಹೊಸ ಸೂಚನೆಯನ್ನು ನೀಡಿದೆ. ಅದರಂತೆ ಮಾಸಿಕ ಮಾನ್ಯತೆ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳು ಕ್ಯಾಲೆಂಡರ್‌ ಅವಧಿಯನ್ನು ಹೊಂದಿರಬೇಕು ಎಂದು ಆದೇಶಿಸಿದೆ. ಇದರ ಪ್ರಕಾರ ಕ್ಯಾಲೆಂಡರ್ ತಿಂಗಳಿನ 30 ಅಥವಾ 31 ದಿನಗಳನ್ನು ಲೆಕ್ಕಿಸದೆ ಮಾಸಿಕ ಮಾನ್ಯತೆಯೊಂದಿಗೆ ಬರುವ ಪ್ಲಾನ್‌ಗಳನ್ನು ಟೆಲಿಕಾಂ ಕಂಪೆನಿಗಳು ನೀಡುವುದು ಕಡ್ಡಾಯವಾಗಿದೆ.

ಇದರಿಂದ

ಇದರಿಂದ ಇತ್ತೀಚಿನ ದಿನಗಳಲ್ಲಿ ಕ್ಯಾಲೆಂಡರ್‌ ಅವಧಿ ನೀಡುವ ಮಾಸಿಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಕೂಡ ಕಾಣಬಹುದಾಗಿದೆ. ಇದರಲ್ಲಿ ಜಿಯೋ ಟೆಲಿಕಾಂನ 259ರೂ. ಪ್ರಿಪೇಯ್ಡ್ ಪ್ಲಾನ್‌ ಕೂಡ ಒಂದಾಗಿದೆ. ಇದು ಒಂದು ತಿಂಗಳ ಸಂಪೂರ್ಣ ಅವಧಿಯ ಮಾನ್ಯತೆಯ್ನು ನೀಡಲಿದೆ. ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಕಂಪೆನಿಗಳು ಕೂಡ ಕ್ಯಾಲೆಂಡರ್‌ ಅವಧಿಯ ಮಾನ್ಯತೆ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ.

Best Mobiles in India

English summary
Why Jio, Airtel, and Vi plans offer 28 days validity?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X