ಟೆಲಿಕಾಂಗಳ ರೀಚಾರ್ಜ್ ವ್ಯಾಲಿಡಿಟಿ 30 ದಿನದ ಬದಲಿಗೆ 28 ದಿನ ಇರುವುದೇಕೆ?

|

ಮೊಬೈಲ್ ರೀಚಾರ್ಜ್ ಮಾಡಿಸುವಾಗ ಯಾವುದೇ ತಿಂಗಳ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೂ ಅದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇದು ಕೆಲವೊಮ್ಮೆ ಆಶ್ಚರ್ಯಕ್ಕೆ ಕಾರಣವಾಗುತ್ತದೆ. ಈ ಟೆಲಿಕಾಂ ಕಂಪೆನಿಗಳು ರೀಚಾರ್ಜ್ ವ್ಯಾಲಿಡಿಟಿಯನ್ನು 30 ದಿನದ ಬದಲಿಗೆ 28 ದಿನಗಳಿಗೆ ನೀಡುವುದೇಕೆ ಎಂದು ನೀವು ಕೂಡ ಅಂದುಕೊಂಡಿರಬಹುದು. ಅಲ್ಲವೇ.?

ನಿಮಗೆ ಗೊತ್ತಾ?, ಇದಕ್ಕೆ ನಿಜವಾಗಿಯೂ ಒಳ್ಳೆಯ ಕಾರಣವಂತೂ ಇಲ್ಲವೇ ಇಲ್ಲ. ಏಕೆಂದರೆ, ಕ್ಯಾಲೆಂಡರ್ ತಿಂಗಳುಗಳಲ್ಲಿ 28, 30 ರಿಂದ 31 ದಿನಗಳವರೆಗೆ ವ್ಯತ್ಯಾಸಗೊಳ್ಳುವ ದಿನಗಳಲ್ಲಿ ಅತ್ಯಂತ ಕಡಿಮೆ ದಿನದ ತಿಂಗಳು ಫೆಬ್ರವರಿಯನ್ನು (28ದಿನ) ಆಯ್ಕೆ ಮಾಡಿಕೊಂಡಿರುವುದು ಟೆಲಿಕಾಂ ಕಂಪೆನಿಗಳ ಉದ್ದೇಶಪೂರ್ವಕ ಕಾರ್ಯನೀತಿ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಟೆಲಿಕಾಂಗಳ ರೀಚಾರ್ಜ್ ವ್ಯಾಲಿಡಿಟಿ 30 ದಿನದ ಬದಲಿಗೆ 28 ದಿನ ಇರುವುದೇಕೆ?

28 ದಿನಗಳ ವ್ಯಾಲಿಡಿಟಿ ನೀಡುವ ಮೂಲಕ ಜನರಿಂದ ಹೆಚ್ಚು ಹಣವನ್ನು ಕೀಳುವ ದುರಾಸೆಯ ಯೋಜನೆ ಇದಾಗಿದ್ದು, ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು ಇದೇ ಸೂತ್ರವನ್ನು ಪಾಲಿಸಿಕೊಂಡು ಬಂದಿವೆ. 28 ದಿನಗಳ ಕಾಲ ರಿಚಾರ್ಜ್ ಮಾಡಿದಾಗ ಅದನ್ನು ಅದು ಇಡೀ ತಿಂಗಳು ಎಂದು ಭಾವಿಸುವ ಜನರನ್ನು ಸುಲಭವಾಗಿ ಮೂರ್ಖರನ್ನಾಗಿಸುವ ಕುತಂತ್ರ ಇದಾಗಿದೆ.

ಒಂದು ವರ್ಷದಲ್ಲಿ ಒಟ್ಟು 365 ದಿನಗಳು ಇರುತ್ತವೆ. ಇದರಲ್ಲಿ 12 ತಿಂಗಳು ಎಂದರೆ 28x12 =336 ದಿನಗಳು ನಾವು ಬೇರ್ಪಡಿಸಬಹುದು. ಆದರೆ, ಟೆಲಿಕಾಂಗಳು ಪ್ರತಿ ತಿಂಗಳು 28 ದಿನಗಳನ್ನು ಪರಿಗಣಿಸುತ್ತವೆ. ಪ್ರತಿದಿನ ತಿಂಗಳಲ್ಲಿ 2 ದಿನ ಕಡಿಮೆಯಾದರೆ 12 ತಿಂಗಳ ಬದಲು 13 ತಿಂಗಳ ಲೆಕ್ಕ ಸಿಗುತ್ತದೆ. ಅಂದರೆ, ಅವುಗಳು ವರ್ಷಕ್ಕೆ 13 ತಿಂಗಳು ಆದಾಯವನ್ನು ಪಡೆಯುತ್ತಿವೆ.

ಟೆಲಿಕಾಂಗಳ ರೀಚಾರ್ಜ್ ವ್ಯಾಲಿಡಿಟಿ 30 ದಿನದ ಬದಲಿಗೆ 28 ದಿನ ಇರುವುದೇಕೆ?

ಒಬ್ಬ 28 ದಿನಗಳ ಕಾಲ ರಿಚಾರ್ಜ್ ಮಾಡಿದಾಗ ಅದನ್ನು ಅದು ಇಡೀ ತಿಂಗಳು ಎಂದು ಜನರು ಭಾವಿಸುತ್ತಾರೆ. ಆದರೆ ಪ್ರತಿ ತಿಂಗಳ 2 ದಿನಗಳು ಒಂದು ವರ್ಷದಲ್ಲಿ ಇಡೀ ತಿಂಗಳನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿದಿರುವುದಿಲ್ಲ. ಇನ್ನು ನೀವು ಇದನ್ನು ತಿಳಿದಿದ್ದರೂ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಎಲ್ಲಾ ಟೆಲಿಕಾಂ ಕಂಪೆನಿಗಳು ಸೇರಿಕೊಂಡೇ ಹೀಗೆ ಮಾಡುತ್ತಿವೆ.

Best Mobiles in India

English summary
Why do the Indian telecom operators offer their services with 28 days validity, not 30 days?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X