ಜಿಯೋನ ಆಫರ್ ಏನೇ ಇರಲಿ ನಾವು ಸಮರಕ್ಕೆ ಸಿದ್ಧ: ಬಿಎಸ್‌ಎನ್‌ಎಲ್

By Shwetha
|

ಬಿಎಸ್‌ಎನ್‌ಎಲ್ ಎಂಟ್ರಿ ಲೆವಲ್‌ನ ಪ್ರಮೋಶನಲ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೊರತಂದಿದ್ದು ಅನಿಯಮಿತ ಬ್ರಾಡ್‌ಬ್ಯಾಂಡ್ 249 ಪೋಸ್ಟ್‌ಪೇಡ್‌ಗೆ ಎಂಬುದಾಗಿ ಘೋಷಿಸಿದೆ. ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಹೊಸ ಗ್ರಾಹಕರನ್ನು ಕರೆತರುವುದಕ್ಕಾಗಿ ಕಂಪೆನಿ ಈ ಯೋಜನೆಯನ್ನು ಹೊರತಂದಿದೆ ಅಂತೆಯೇ ಜಿಯೋಗೆ ಪೈಪೋಟಿಯಂತೆ ಎಂಬುದಾಗಿ ಕೂಡ ಪರಿಗಣಿಸಬಹುದಾಗಿದೆ.

ಓದಿರಿ: ರಿಲಾಯನ್ಸ್ ಜಿಯೋ ಲಾಂಚ್‌: ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

ಜಿಯೋದ ಟಾರಿಫ್ ಯೋಜನೆ

ಜಿಯೋದ ಟಾರಿಫ್ ಯೋಜನೆ

ರಿಲಾಯನ್ಸ್ ಜಿಯೋದ ಟಾರಿಫ್ ಯೋಜನೆಗಳನ್ನು ಸರಿದೂಗಿಸುವಂತೆ ಸಮನಾಗಿ ಬಿಎಸ್‌ಎನ್‌ಎಲ್ ಯೋಜನೆಗಳನ್ನು ರೂಪಿಸಲಿದೆ. ರೂ 1 ಕ್ಕೆ ಜಿಬಿಯಷ್ಟನ್ನು ಡೌನ್‌ಲೋಡ್ ಮಾಡಬಹುದು ಎಂಬುದಾಗಿ ಬಿಎಸ್‌ಎನ್‌ಎಲ್ ಹೆಚ್ಚು ಡೇಟಾ ಬಳಕೆದಾರರಿಗೆ ತಿಳಿಸಿದೆ. ಮಾರುಕಟ್ಟೆಯಲ್ಲಿ ನಾವು ಉಳಿಯಲು ಜಿಯೋಗೆ ಸರಿಹೊಂದುವಂತಹ ಯೋಜನೆಗಳನ್ನು ನಾವು ತರಬೇಕಾಗಿದೆ.

ಸರಿದೂಗಲು ಸಾಧ್ಯ

ಸರಿದೂಗಲು ಸಾಧ್ಯ

ಬಿಎಸ್‌ಎನ್‌ಎಲ್‌ನ ಯೋಜನೆಗಳು ಜಿಯೋನ ಯೋಜನೆಗಳನ್ನು ಸರಿದೂಗಲು ಸಾಧ್ಯ. ನಾವು ಲ್ಯಾಂಡ್‌ಲೈನ್‌ಗಳಾಗಿದ್ದು ಮತ್ತು ಆಪ್ಟಿಕಲ್ ಫೈಬರ್ ಆಪರೇಟರ್ ಎಂದೆನಿಸಿದ್ದೇವೆ ಇದರಿಂದ ನಮ್ಮ ಬ್ರಾಡ್‌ಬ್ಯಾಂಡ್ ಟಾರಿಫ್ ನಮ್ಮದೇ ನೆಟ್‌ವರ್ಕ್‌ನಲ್ಲಿ ರೈಡ್ ಮಾಡಬಹುದಾಗಿದೆ.

ಯಾವುದೇ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಾಗಿಲ್ಲ

ಯಾವುದೇ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಾಗಿಲ್ಲ

ನಮಗೆ ಇದಕ್ಕಾಗಿ ಯಾವುದೇ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಾಗಿಲ್ಲ ಎಂಬುದಾಗಿ ಬಿಎಸ್‌ಎನ್‌ಎಲ್ ಚೇರ್‌ಮೆನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.

ಅನಿಯಮಿತ 3ಜಿ ಮೊಬೈಲ್ ಡೇಟಾ

ಅನಿಯಮಿತ 3ಜಿ ಮೊಬೈಲ್ ಡೇಟಾ

ರಾಷ್ಟ್ರೀಯ ಅನಿಯಮಿತ 3ಜಿ ಮೊಬೈಲ್ ಡೇಟಾ ಯೋಜನೆಯನ್ನು ಕಂಪೆನಿ ರೂ 1,099 ಕ್ಕೆ ಈಗಾಗಲೇ ಘೋಷಿಸಿದ್ದು, ಪ್ರಸ್ತುತ ಯೋಜನೆಗಳ ಮೂಲಕ ಡೇಟಾ ಬಳಕೆಯನ್ನು ವಿಸ್ತರಿಸುವ ಇರಾದೆಯನ್ನು ಕಂಪೆನಿ ಹೊಂದಿದೆ.

ಭರ್ಜರಿ ಪೈಪೋಟಿ

ಭರ್ಜರಿ ಪೈಪೋಟಿ

ಅಂತೂ ಮಾರುಕಟ್ಟೆಯಲ್ಲಿ ಭರ್ಜರಿ ಪೈಪೋಟಿಯನ್ನು ನಾವು ನಿರೀಕ್ಷಿಸಬಹುದಾಗಿದೆ. ಇನ್ನು ಮೊಬೈಲ್ ಬಳಕೆದಾರರಿಗೆ ಉಚಿತ ವಾಯ್ಸ್ ಕರೆಗಳನ್ನು ಒಸಗಿಸುವುದರ ಬಗ್ಗೆ ಶ್ರೀವಾಸ್ತವ್ ಅವರು ಮುಂದಿನ 2-3 ತಿಂಗಳುಗಳಲ್ಲಿ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಉಚಿತ ವಾಯ್ಸ್ ಕರೆ

ಉಚಿತ ವಾಯ್ಸ್ ಕರೆ

ಮಾಸಿಕ ದರದಲ್ಲಿ ಫಿಕ್ಸ್ ದರವನ್ನು ನಿಯೋಜಿಸುವುದರ ಮೂಲಕ ಉಚಿತ ವಾಯ್ಸ್ ಕರೆಗಳನ್ನು ನೀಡುವುದಾಗಿ ಎಮ್‌ಡಿ ತಿಳಿಸಿದ್ದಾರೆ.

Best Mobiles in India

English summary
'If tariff of Jio is aggressive, the tariff of BSNL and of all other operators is also going to be aggressive'.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X