ಕೇವಲ 999ರೂ. ಬೆಲೆಗೆ ಸಿಗಲಿದೆ ವಿಂಗ್ಸ್‌ ಕಂಪೆನಿಯ ಹೊಸ ಇಯರ್‌ಬಡ್ಸ್‌!

|

ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಇಯರ್‌ ಫೋನ್‌ಗಳ ಮೆಲಿನ ಬೇಡಿಕೆ ಕೂಡ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ವಿವಿಧ ಮಾದರಿಯ ಇಯರ್‌ಫೋನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ವಿಂಗ್ಸ್‌ ಕಂಪೆನಿ ಕೂಡ ಒಂದಾಗಿದೆ. ವಿಂಗ್ಸ್‌ ಕಂಪೆನಿ ಭಾರತದಲ್ಲಿ ಇದೀಗ ಹೊಸ ವಿಂಗ್ಸ್‌ ಫ್ಯಾಂಟಮ್‌ 200 TWS ಇಯರ್‌ಬಡ್ಸ್‌ ಲಾಂಚ್‌ ಮಾಡಿದೆ. ಈ ಹೊಸ ಇಯರ್‌ಬಡ್ಸ್‌ ಗೇಮಿಂಗ್‌ ಕೇಂದ್ರಿತ ಫೀಚರ್ಸ್‌ಗಳನ್ನು ಒಳಗೊಂಡಿದೆ.

ವಿಂಗ್ಸ್‌

ಹೌದು, ವಿಂಗ್ಸ್‌ ಕಂಪೆನಿ ಹೊಸ ವಿಂಗ್ಸ್‌ ಫ್ಯಾಂಟಮ್‌ 200 TWS ಇಯರ್‌ಬಡ್ಸ್‌ ಪರಿಚಯಿಸಿದೆ. ಈ ಇಯರ್‌ಬಡ್ಸ್‌ ಗೇಮಿಂಗ್‌ ಪ್ರಿಯರಿಗೆ ಸೂಕ್ತವಾದ ಫೀಚರ್ಸ್‌ಗಳಿಂದ ಡಿಸೈನ್‌ ಮಾಡಲಾಗಿದೆ. ಇನ್ನು ವಿಂಗ್ಸ್‌ ಫ್ಯಾಂಟಮ್‌ 200 TWS ಡೀಪ್‌ ಬಾಸ್‌ಗಾಗಿ 13mm ಗ್ರ್ಯಾಫೀನ್ ಆಡಿಯೋ ಡ್ರೈವರ್‌ಗಳಿಗೆ ಬೆಂಬಲವನ್ನು ಸಹ ನೀಡಲಿದೆ. ಇದಲ್ಲದೆ ಆಡಿಯೋ ಮತ್ತು ಗೇಮಿಂಗ್‌ ಅನುಭವಕ್ಕಾಗಿ ಅಕೌಸ್ಟಿಕ್‌ ಎಕೋ ಕ್ಯಾನ್ಸಲೇಶನ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಇಯರ್‌ಬಡ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿಂಗ್ಸ್ ಫ್ಯಾಂಟಮ್ 200 TWS ಫೀಚರ್ಸ್‌ ಏನಿದೆ?

ವಿಂಗ್ಸ್ ಫ್ಯಾಂಟಮ್ 200 TWS ಫೀಚರ್ಸ್‌ ಏನಿದೆ?

ವಿಂಗ್ಸ್‌ ಫ್ಯಾಂಟಮ್ 200 TWS ಇಯರ್‌ಬಡ್ಸ್‌ ಗೇಮಿಂಗ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಸುಗಮ ಗೇಮಿಂಗ್‌ ಅನುಭವಕ್ಕಾಗಿ 40ms ಅಲ್ಟ್ರಾ-ಲೋ ಲೇಟೆನ್ಸಿಯನ್ನು ಬೆಂಬಲಿಸಲಿದೆ. ಜೊತೆಗೆ ಗೇಮಿಂಗ್ ಮೋಡ್ ಮೂಲಕ ಆಕ್ಟಿವ್‌ಗೊಳ್ಳಲಿದೆ. ಇದನ್ನು 2 ಸೆಕೆಂಡ್‌ಗಳಲ್ಲಿ ರೈಟ್‌ ಇಯರ್‌ಬಡ್ಸ್‌ನಲ್ಲಿ ಟ್ಯಾಪ್‌ ಮಾಡುವ ಮೂಲಕ ಆಕ್ಟಿವ್‌ ಮಾಡಬಹುದಾಗಿದೆ. ಇದರಿಂದ ಗೇಮಿಂಗ್‌ ಪ್ರಿಯರನ್ನು ಸೆಳೆಯುವ ಇಯರ್‌ಬಡ್ಸ್‌ಗಳ ಸಾಲಿಗೆ ಇದು ಕೂಡ ಸೇರಿದೆ. ಇದರಲ್ಲಿ ಗೇಮಿಂಗ್‌ ಅನುಭವದ ಜೊತೆಗೆ ಇತರ ಕಾರ್ಯಗಳನ್ನು ಕೂಡ ನಡೆಸಬಹುದಾಗಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ ನಾಯ್ಸ್‌ ಕ್ಯಾನ್ಸಲೇಶನ್‌ ಮತ್ತು ಸ್ಪಷ್ಟವಾದ ಸೌಂಡ್‌ ಸಿಸ್ಟಂಗಾಗಿ ಕ್ವಾಡ್ DNS ENC ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ. ಜೊತೆಗೆ ಇದರಲ್ಲಿ ಗೇಮಿಂಗ್ ಸಮಯದಲ್ಲಿ ಸಂಭಾಷಣೆಗಳನ್ನು ಮಾಡುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ. ಈ ಗೇಮಿಂಗ್ ಇಯರ್‌ಬಡ್ಸ್‌ ಥಿಕ್‌ ಗ್ರೀನ್‌ ಗೇಮಿಂಗ್ LED ಹೈಲೈಟ್ಸ್‌ಗಳೊಂದಿಗೆ ಬರಲಿದೆ. ಇದು ಬ್ಯಾಟರಿ ಸ್ಟೇಟಸ್‌ ಇಂಡಿಕೇಟರ್‌ ಆಗಿ ದ್ವಿಗುಣಗೊಳ್ಳುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಇಯರ್‌ ಬಡ್ಸ್‌ ಬೆವರು-ನಿರೋಧಕ ಇಯರ್‌ ಟಿಪ್ಸ್‌ ಇಯರ್‌ ಡಿಸೈನ್‌ ಅನ್ನು ಬೆಂಬಲಿಸಲಿದೆ. ಜೊತೆಗೆ IPX5 ರೇಟಿಂಗ್‌ ವಾಟರ್‌ ರೆಸಿಸ್ಟೆನ್ಸಿಯನ್ನು ಕೂಡ ಒಳಗೊಂಡಿದೆ.

ಡ್ರೈವರ್‌ಗಳಿಗೆ

ಇನ್ನು ವಿಂಗ್ಸ್ ಫ್ಯಾಂಟಮ್ 200 TWS ಇಯರ್‌ಬಡ್ಸ್‌ 13mm ಗ್ರ್ಯಾಫೀನ್ ಡ್ರೈವರ್‌ಗಳಿಗೆ ಬೆಂಬಲಿಸಲಿದೆ. ಅಲ್ಲದೆ ಆಡಿಯೋ ಮತ್ತು ಗೇಮಿಂಗ್ ಅನುಭವಕ್ಕಾಗಿ ಅಕೌಸ್ಟಿಕ್ ಎಕೋ ಸಿಸ್ಟಂನೊಂದಿಗೆ ಬರಲಿದೆ. ಇದು ಬ್ಲೂಟೂತ್ ಆವೃತ್ತಿ 5.2 ಬೆಂಬಲಿಸಲಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ ಚಾರ್ಜಿಂಗ್‌ ಕೇಸ್‌ನೊಂದಿಗೆ 38 ಗಂಟೆಗಳ ಬ್ಯಾಕ್‌ಅಪ್‌ ನೀಡಲಿದೆ. ಚಾರ್ಜಿಂಗ್ ಕೇಸ್‌ ಇಲ್ಲದೆ 8 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆ. ಇನ್ನು ಇಯರ್‌ಬಡ್ಸ್‌ ಹೈ-ಸ್ಪೀಡ್ ಬುಲೆಟ್ ಚಾರ್ಜ್ ತಂತ್ರಜ್ಞಾನವನ್ನು ಪಡೆದಿದ್ದು, ಕೇವಲ 10 ನಿಮಿಷಗಳಲ್ಲಿ 20 ಗಂಟೆಗಳ ಪ್ಲೇಬ್ಯಾಕ್ ಟೈಂ ಒದಗಿಸಲಿದೆ. ಇಯರ್‌ಬಡ್ಸ್‌ಗಳನ್ನು USB-C ಮತ್ತು ಟಚ್ ಕಂಟ್ರೋಲ್‌ಗಳ ಮೂಲಕ ಚಾರ್ಜಿಂಗ್ ಮಾಡಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ವಿಂಗ್ಸ್ ಫ್ಯಾಂಟಮ್ 200 ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಭಾರತದಲ್ಲಿ 999ರೂ. ಬೆಲೆಯನ್ನು ಹೊಂದಿದೆ. ಇದು ವಿಂಗ್ಸ್‌ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗುತ್ತಿದೆ. ಇದನ್ನು ಗ್ರಾಹಕರು ಕಪ್ಪು ಮತ್ತು ಬಿಳಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

Read more about:
English summary
Wings has launched the new Phantom 200 TWS earbuds in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X