ಗೂಗಲ್ ನಲ್ಲೂ ಫುಟ್ಬಾಲ್ ಸಂಭ್ರಮ...ಡೂಡಲ್ ಮೂಲಕ ಫಿಫಾ ಲೈವ್ ಇಟ್ ಅಪ್..!

By Avinash
|

ಇಂದಿನಿಂದ ವಿಶ್ವದಾದ್ಯಂತ ಫುಟ್ಬಾಲ ಜ್ವರ ಶುರುವಾಗಲಿದ್ದು, 32 ದೇಶಗಳ ಕಾಲ್ಚಳಕ ನೋಡಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಅದರಂತೆ ಐಟಿ ಜಗತ್ತು ಕೂಡ ಫಿಫಾ ಸಂಭ್ರಮವನ್ನು ಇಮ್ಮಡಿಗೊಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಲೈವ್ ಸ್ಟ್ರೀಮ್, ಆನ್ ಲೈವ್ ಸ್ಕೋರ್, ಲೈವ್ ಕಾಮೆಂಟರಿ ಮೂಲಕ ವಿವಿಧ ಸ್ಪೋರ್ಟ್ಸ್ ಮತ್ತು ಟಿವಿ ಆಪ್ ಗಳು ನಿಮ್ಮ ಅಂಗೈಗೆ ಫುಟ್ಬಾಲ್ ವೈಭವವನ್ನು ತಂದಿಡಲಿವೆ.

ಜಿಯೋ ಎದುರು ಮತ್ತೊಂದು ಬಿಗ್ ಆಫರ್ ಘೋಷಿಸಿದ ಬಿಎಸ್ಎನ್ಎಲ್...ಮೊಬೈಲ್ ನಲ್ಲಿಯೇ ಪುಟ್ಬಾಲ್ ನೋಡಿ..!ಜಿಯೋ ಎದುರು ಮತ್ತೊಂದು ಬಿಗ್ ಆಫರ್ ಘೋಷಿಸಿದ ಬಿಎಸ್ಎನ್ಎಲ್...ಮೊಬೈಲ್ ನಲ್ಲಿಯೇ ಪುಟ್ಬಾಲ್ ನೋಡಿ..!

ಆದರೆ, ಇಲ್ಲಿರೋದೆ ಬೇರೆ ಫಿಫಾ ವಿಶ್ವಕಪ್ ಸಂಭ್ರಮವನ್ನು ನಿಜವಾಗಲು ಹೆಚ್ಚಿಸಿದ್ದು ಗೂಗಲ್. ಸರ್ಚ್ ಇಂಜಿನ್ ದೈತ್ಯ ಇಂದಿನಿಂದ ಅಧಿಕೃತವಾಗಿ ಶುರುವಾಗಲಿರುವ ಫುಟ್ಬಾಲ್ ಉತ್ಸವಕ್ಕೆ ಡೂಡಲ್ ಮೂಲಕ ಸಂತಸ ಹಂಚಿಕೊಂಡಿದೆ. ಗೂಗಲ್ ವಿಶೇಷ ದಿನಗಳಂದು ಡೂಡಲ್ ಮೂಲಕ ಸಂಭ್ರಮ ಹಂಚಿಕೊಂಡಿದ್ದು, ಇದೇ ಮೊದಲಲ್ಲವಾದರೂ ಫಿಫಾ ಡೂಡಲ್ ವಿಶೇಷವಾಗಿ, ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಗೂಗಲ್ ನಲ್ಲೂ ಫುಟ್ಬಾಲ್ ಸಂಭ್ರಮ...ಡೂಡಲ್ ಮೂಲಕ ಫಿಫಾ ಲೈವ್ ಇಟ್ ಅಪ್..!

32 ದೇಶಗಳ ಸಂಸ್ಕೃತಿ ಅನಾವರಣ

32 ದೇಶಗಳ ಸಂಸ್ಕೃತಿ ಅನಾವರಣ

ಗೂಗಲ್ ನ ಫುಟ್ಬಾಲ್ ಡೂಡಲ್ ನಲ್ಲಿ ಫಿಫಾ ವಿಶ್ವಕಪ್ 2018ರಲ್ಲಿ ಭಾಗವಹಿಸುವ 32 ದೇಶಗಳ ವೈಭವದ ಸಂಸ್ಕೃತಿಯನ್ನು ಅನಾವರಣ ಮಾಡಲಾಗಿದೆ. ಎಲ್ಲ ದೇಶಗಳಿಗೂ ಪ್ರಾತಿನಿಧ್ಯ ನೀಡಿ ಕಾಲ್ಚೆಂಡು ಆಟ ಸಂಭ್ರಮವನ್ನು ಹೆಚ್ಚಿಸಿದೆ.

32 ರಾಷ್ಟ್ರಗಳ ಕಲಾವಿದರು ಭಾಗಿ

32 ರಾಷ್ಟ್ರಗಳ ಕಲಾವಿದರು ಭಾಗಿ

ಗೂಗಲ್ ಫಿಫಾ ಡೂಡಲ್ ರಚಿಸಲು 32 ದೇಶಗಳ ಕಲಾವಿದರಿಗೆ ಆಹ್ವಾನ ನೀಡಿತ್ತು. ನನ್ನ ದೇಶದಲ್ಲಿ ಫುಟ್ಬಾಲ್ ಯಾವ ರೀತಿ ಕಾಣುತ್ತದೆ? ಎಂಬ ಪ್ರಶ್ನೆಯನ್ನು ಗೂಗಲ್ ಕಲಾವಿದರ ಮುಂದಿಟ್ಟಿತ್ತು. ಆ ಪ್ರಶ್ನೆಗನುಸಾರವಾಗಿ ಗೂಗಲ್ ಡೂಡಲ್ ಅನ್ನು ಕಲಾವಿದರು ರಚಿಸಿಕೊಟ್ಟಿದ್ದರು.

ಇಂದಿನ ಡೂಡಲ್ ರಚಿಸಿದ್ದು ಗ್ಲೂಕಿಟ್

ಇಂದಿನ ಡೂಡಲ್ ರಚಿಸಿದ್ದು ಗ್ಲೂಕಿಟ್

32 ದೇಶಗಳ ಆಹ್ವಾನಿತ ಕಲಾವಿದರ ಡೂಡಲ್ ಗಳಲ್ಲಿ ಗೂಗಲ್ ಆಯ್ದುಕೊಂಡಿದ್ದು ಗ್ಲೂಕಿಟ್ ಎಂಬ ಇಲಸ್ಟ್ರೇಟರ್ ರಚಿಸಿದ ಡೂಡಲ್ ಅನ್ನು, ಈ ಡೂಡಲ್ ಸರಣಿ ಮುಂದುವರೆಯಲಿದೆ ಎಂದು ಗೂಗಲ್ ತಿಳಿಸಿದ್ದು, 32 ದೇಶಗಳ ಪ್ರತಿಭೆ ಮತ್ತು ವೈವಿಧ್ಯಮಯ ಸಂಸ್ಕೃತಿಯ ಸಾಕಾರ ಮುಂದುವರೆಯಲಿದೆ.

ಏನೆಲ್ಲಾ ಇದೇ ಫಿಫಾ ಡೂಡಲ್ ನಲ್ಲಿ

ಏನೆಲ್ಲಾ ಇದೇ ಫಿಫಾ ಡೂಡಲ್ ನಲ್ಲಿ

ಗೂಗಲ್ ನ ಇಂದಿನ ಡೂಡಲ್ ನಲ್ಲಿ ಫುಟ್ಬಾಲ್ ಗೋಲ್ ಪೋಸ್ಟ್ ಸುತ್ತಲೂ ವೈವಿಧ್ಯಮಯ ಜನ ಸಮೂಹ ಇದೆ. ಅದರಂತೆ, ಒಬ್ಬ ವ್ಯಕ್ತಿ ಪೆನಾಲ್ಟಿ ಕಿಕ್ ಮೂಲಕ ಗೋಲ್ ಗಳಿಸಲು ಸಿದ್ಧವಾಗುತ್ತಿರುವುದು. ಎರಡು ಗೋಲ್ ಕೀಪರ ಗಳು ಫುಟ್ಬಾಲ್ ಅನ್ನು ತಡೆಯುತ್ತಿರುವ ಡೂಡಲ್ ಯಾವುದೇ ಫಾರ್ಮಲಾಟಿ ಇಲ್ಲದ ಸ್ಟ್ರೀಟ್ ಫುಟ್ಬಾಲ್ ದೃಶ್ಯವನ್ನು ಕಟ್ಟಿಕೊಟ್ಟಿದೆ.

12 ಮೈದಾನಗಳಲ್ಲಿ ಲೈವ್ ಇಟ್ ಅಪ್

12 ಮೈದಾನಗಳಲ್ಲಿ ಲೈವ್ ಇಟ್ ಅಪ್

ಫಿಫಾ ವಿಶ್ವಕಪ್ 2018 ರಷ್ಯಾದ 11 ನಗರಗಳ 12 ಮೈದಾನಗಳಲ್ಲಿ ಜರುಗಲಿದ್ದು, ಫುಟ್ಬಾಲ್ ಪ್ರಿಯರಿಗೆ ಭರ್ಜರಿ ಮನರಂಜನೆಯಂತೂ ಗ್ಯಾರಂಟಿ. ಫೈನಲ್ ಸೇರಿ 64 ಪಂದ್ಯಗಳನ್ನು ಹೊಂದಿರುವ 2018 ಫಿಫಾ ವಿಶ್ವಕಪ್ ಸಂಭ್ರಮ ಬರೋಬ್ಬರಿ ಒಂದು ತಿಂಗಳ ಕಾಲ ನಡೆಯಲಿದೆ. ಐಸ್ ಲ್ಯಾಂಡ್ ಮತ್ತು ಪನಾಮಾ ದೇಶಗಳು ಇದೇ ಮೊದಲ ಸಲ ಫಿಫಾ ವಿಶ್ವಕಪ್ ನಲ್ಲಿ ಆಡಲಿಳಿದಿವೆ.

ಮೊದಲ ಡೂಡಲ್ ಬಂದಿದ್ದು 1998ರಲ್ಲಿ

ಮೊದಲ ಡೂಡಲ್ ಬಂದಿದ್ದು 1998ರಲ್ಲಿ

ಗೂಗಲ್ ತನ್ನ ಮೊದಲ ಡೂಡಲ್ ಪರಿಚಯಿಸಿದ್ದು ಆಗಸ್ಟ್ 20, 1998ರಲ್ಲಿ. ಇದನ್ನು ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿನ್ ಎಂಬುವವರು ಸೃಷ್ಟಿಸಿದರು. ಅದು ಬರ್ನಿಂಗ್ ಮ್ಯಾನ್ ಫೆಸ್ಟಿವಲ್ ಕುರಿತ ಡೂಡಲ್ ಆಗಿತ್ತು. ಇದು ಉತ್ಸವದಲ್ಲಿ ಗೂಗಲ್ ಬಳಕೆದಾರರು ಇಲ್ಲ ಎನ್ನುವುದನ್ನು ನೆನಪಿಸಿತ್ತು. ಅಂದಿನಿಂದ ಇಂದಿನವರೆಗೂ ಗೂಗಲ್ ಪ್ರಮುಖ ವ್ಯಕ್ತಿಗಳ ಜನ್ಮದಿನ, ಪ್ರುಮಖ ದಿನಗಳು, ಪ್ರಮುಖ ಪಂದ್ಯಾವಳಿ ಸಂದರ್ಭದಲ್ಲಿ ವಿಶೇಷ ಡೂಡಲ್ ಪ್ರಕಟಿಸುವುದು ವಾಡಿಕೆಯಾಗಿದೆ.

Riversong Jelly Kids GPS tracker hands-on - GIZBOT KANNADA
2015ರ ಕ್ರಿಕೆಟ್ ವಿಶ್ವಕಪ್ ಗೂ ಡೂಡಲ್ ನೀಡಿದ್ದ ಗೂಗಲ್

2015ರ ಕ್ರಿಕೆಟ್ ವಿಶ್ವಕಪ್ ಗೂ ಡೂಡಲ್ ನೀಡಿದ್ದ ಗೂಗಲ್

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 2015ರ ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲೂ ಫೆಬ್ರವರಿ 14 ರಂದು ಗೂಗಲ್ ಡೂಡಲ್ ಪ್ರಕಟಿಸಿತ್ತು. ಮತ್ತು ಫೆಬ್ರವರಿ 15ರಂದು ಪ್ರಕಟಿಸಿದ್ದ ಡೂಡಲ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಅಸ್ಮಿತೆಯನ್ನು ಬಿಂಬಿಸುವ ಪ್ರಯತ್ನ ಮಾಡಿತ್ತು.

Best Mobiles in India

English summary
World Cup 2018 Google doodle celebrates the start of FIFA's tournament. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X