ವಿಶ್ವದ ಮೊದಲ ಗೂಗಲ್ ಸ್ಟೇಷನ್ ವೈ-ಫೈ ಹಾಟ್‌ಸ್ಪಾಟ್ ಪುಣೆಯಲ್ಲಿ.!
ಪುಣೆ ನಗರಕ್ಕೆ ಮೊದಲ ಭಾರಿಗೆ ಗೂಗಲ್ ಸ್ಟೆಷನ್ ವೈ-ಫೈ ಹಾಟ್‌ಸ್ಪಾಟ್‌ಅನ್ನು ಆರಂಭಿಸಲಾಗುತ್ತಿದ್ದು, ಇದರ ಮೂಲಕ ಸಾರ್ವಜನಿಕ ಪ್ರದೇಶಗಳಲ್ಲಿ ವೇಗದ ಇಂಟರ್ನೆಟ್ ಸೇವೆಯನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
ದೇಶದಲ್ಲಿ ಸ್ಮಾರ್ಟ್‌ಸಿಟಿಗಳ ನಿರ್ಮಾಣ ಮಾಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದ ಬೆನ್ನಲ್ಲೇ ಭಾರತಕ್ಕೆ ಬಂದಿದ್ದ ಗೂಗಲ್ ಸಿಇಓ ಭಾರತೀಯ ಮೂಲದ ಸುಂದರ್ ಪಿಚೈ ಭಾರತದಲ್ಲಿ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದಾಗಿ ಹೇಳಿದ್ದರು, ಅದರ ಮುಂದುವರೆದ ಭಾಗವಾಗಿ ಪುಣೆ ನಗರಕ್ಕೆ ಸಂಪೂರ್ಣ ವೈ-ಫೈ ಇಂಟರ್‌ನೆಟ್ ಸೇವೆಯನ್ನು ಪಡೆಯಲಿದೆ.

ಓದಿರಿ: ಕೇವಲ ರೂ. 3,333 ಕ್ಕೆ ಲಾವಾ 4G ಪೋನು: ಹೇಗಿದೆ ಈ ಪೋನು..? ವಿಶೇಷತೆಗಳೇನು..?
ಪುಣೆ ನಗರಕ್ಕೆ ಮೊದಲ ಬಾರಿಗೆ ಗೂಗಲ್ ಸ್ಟೆಷನ್ ವೈ-ಫೈ ಹಾಟ್‌ಸ್ಪಾಟ್‌ಅನ್ನು ಆರಂಭಿಸಲಾಗುತ್ತಿದ್ದು, ಇದರ ಮೂಲಕ ಸಾರ್ವಜನಿಕ ಪ್ರದೇಶಗಳಲ್ಲಿ ವೇಗದ ಇಂಟರ್ನೆಟ್ ಸೇವೆಯನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದ್ದು, ಇದಕ್ಕಾಗಿ ಐಬಿಎಂ, ಎಲ್&ಟಿ, ಮತ್ತು ರೈಲ್‌ಟೆಲ್ ಕಂಪನಿಗಳೂ ಒಂದಾಗಿವೆ.
ದೇಶದೆಲ್ಲಡೇ ಈ ಗೂಗಲ್ ಸ್ಟೆಷನ್ ವೈ-ಫೈ ಹಾಟ್‌ಸ್ಪಾಟ್ ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಇದರ ಮೊದಲ ಹಂತವಾಗಿ ಪುಣೆ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಹೆಚ್ಚಿನ ಜನರು ಸೇರುವ ಪ್ರದೇಶಗಳಲ್ಲಿ ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದು, ಇದಕ್ಕಾಗಿ ಸುಮಾರು 150 ಕೋಟಿ ಹಣವನ್ನು ವ್ಯಯಿಸಲಾಗುತ್ತಿದೆ ಎನ್ನಲಾಗಿದೆ.

ಓದಿರಿ: ಪ್ರೇಮಿಗಳ ದಿನಾಚರಣೆಯಂದು 'ರೆಡ್‌ಮಿ ನೋಟ್ 4X' ಬಿಡುಗಡೆ
ಈ ಸಾರ್ವಜನಿಕ ಪ್ರದೇಶಗಳಲ್ಲಿ ಚೈನ್ ಲಿಂಗ್ ಮಾದರಿಯಲ್ಲಿ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಆರಂಭಿಸಿ, ಬಳಕೆದಾರಿಗೆ ಒಂದೇ ಲಾಂಗಿಗ್ ಮೂಲಕ ಎಲ್ಲಾಡೆಯಲ್ಲೂ ಇಂಟರ್‌ನೆಟ್ ಸೇವೆಯನ್ನು ಪಡೆಯಬಹುದಾಗಿದ್ದು, ಅದಕ್ಕಾಗಿ ಕೇವಲ ಒಂದು ಓಟಿಪಿ ಅವಶ್ಯಕತೆ ಮಾತ್ರವಿರಲಿಲದೆ. ಒಟ್ಟಿನಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟದ ಇಂಟರನೆಟ್ ಸೇವೆಯನ್ನು ಪಡೆಯಬೇಕು ಎಂದು ಹೊರಟಿರುವ ಈ ಯೋಜನೆ ಯಶಸ್ವಿಯಾಗಲಿ.


Click it and Unblock the Notifications








