ಇಂದು 30ನೇ ಸಂಭ್ರಮದಲ್ಲಿ 'ವರ್ಲ್ಡ್ ವೈಡ್ ವೆಬ್(WWW)': ನೀವು ತಿಳಿಯದ 10 ಅಚ್ಚರಿಗಳು!!
ಮಾನವನ ಇತಿಹಾಸವನ್ನೇ ಬದಲಿಸಿದ 'ವರ್ಲ್ಡ್ ವೈಡ್ ವೆಬ್(WWW)' ಕಂಡುಹಿಡಿದು 30 ವರ್ಷಗಳಾದ ಸಂಭ್ರಮಾಚರಣೆಯನ್ನು ಗೂಗಲ್ ತನ್ನ ಡೂಡಲ್ ಮೂಲಕ ಆಚರಿಸಿದೆ. ಇಂದು ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಇಂಟರ್‌ನೆಟ್ ಬಳಸಲು, ಇಂಟರ್ನೆಟ್ ಮೂಲಕ ವ್ಯವಹರಿಸಲು ಮತ್ತು ಮಾಹಿತಿ ಹುಡುಕಲು ಸೇರಿದಂರೆ, ಎಲ್ಲವನ್ನು ನಿರ್ದಿಷ್ಟವಾಗಿ ಗುರುತಿಸಲು ಮೂಲವಾದ ಭವಿಷ್ಯದ ಬ್ರಹ್ಮಾಂಡ ದ್ವಾರ 'ವರ್ಲ್ಡ್ ವೈಡ್ ವೆಬ್(WWW)' ತನ್ನ 30 ವಸಂತಗಳನ್ನು ಪೂರೈಸಿದ್ದನ್ನು ಗೂಗಲ್ ಇಡೀ ಜಗತ್ತಿಗೇ ನೆನಪಿಸಿದೆ.
ಹೌದು, 1989ರ ಮಾರ್ಚ್ 12 ರಂದು ವಿಜ್ಞಾನಿ 'ಟೀಮ್ ಬರ್ನಸ್ ಲೀ' ಅವರು 'ವರ್ಲ್ಡ್ ವೈಡ್ ವೆಬ್(WWW)' ಅನ್ನು ಕಂಡುಹಿಡಿದಿದ್ದರು. ಬ್ರಿಟೀಷ್ ಪ್ರಜೆಯಾಗಿದ್ದ 'ಟೀಮ್ ಬರ್ನಸ್ ಲೀ' ಅವರು ಸ್ವಿಜ್ಜರ್‌ಲೆಂಡ್ ದೇಶದ ಜಿನಿವಾ ಸಮೀಪದ ಸಿಇಆರ್ಎನ್(ಸರ್ನ್)ನಲ್ಲಿ ಉದ್ಯೋಗಿಯಾಗಿದ್ದ ವೇಳೆಯಲ್ಲಿ 'ವರ್ಲ್ಡ್ ವೈಡ್ ವೆಬ್(WWW)' ಅನ್ನು ಹುಟ್ಟಹಾಕಿದರು. ಇದಲ್ಲದೇ, 1990 ರಲ್ಲಿ ಮೊದಲ ವೆಬ್ ಬ್ರೌಸರ್ ಅನ್ನು ರೂಪಿಸಿ ಜನಸಾಮಾನ್ಯರ ಬಳಿಗೆ ವೆಬ್ ಬ್ರೌಸರ್ ಎಂಬ ಭವಿಷ್ಯದ ಬ್ರಹ್ಮಾಂಡ ದ್ವಾರವನ್ನು ತೆರೆದಿದ್ದರು.

ವಲ್ಡ್‌ವೈಡ್ ವೆಬ್‌ಗೂ ಮೊದಲು ಇಂಟರ್ನೆಟ್ ಮೂಲಕ ಟೆಕ್ಸ್ಟ್‌ಗಳನ್ನಷ್ಟೇ ರವಾನಿಸಲಾಗುತ್ತಿತ್ತು. ಟೆಕ್ಸ್ಟ್‌ನ ಫಾಂಟ್ ಹಾಗೂ ಸೈಜ್ ಒಂದೇ ರೀತಿಯವು ಆಗಿರುತ್ತಿದ್ದವು. ಆದರೆ, ವಲ್ಡ್‌ವೈಡ್ ವೆಬ್ ಕಂಡು ಬಳಕೆಗೆ ಬಂದ ಬಳಿಕವಷ್ಟೇ ಇಂಟರ್ನೆಟ್‌ಗೆ ನಿಜವಾದ ಜೀವ ಮತ್ತು ಮೌಲ್ಯ ಬಂದಿತ್ತು. ಹಾಗಾಗಿ, ಇಂದಿನ ಲೇಖನದಲ್ಲಿ ಇಂಟರ್ನೆಟ್‌ನ ರೂಪ ಬದಲಿಸಿದ್ದಷ್ಟೇ ಅಲ್ಲ, ಚಿತ್ರಗಳು ಹಾಗೂ ಶಬ್ದಗಳ ಪ್ರದರ್ಶನ ಹಾಗೂ ವರ್ಗಾವಣೆಗೆ ಅವಕಾಶವನ್ನೂ ಮಾಡಿಕೊಟ್ಟ 'ವರ್ಲ್ಡ್ ವೈಡ್ ವೆಬ್(WWW)' ಅಚ್ಚರಿಗಳನ್ನು ನಾವು ತಿಳಿಯೋಣ.

ವಲ್ಡ್‌ವೈಡ್ ವೆಬ್ ಇತಿಹಾಸ!
ಮೊದಲೇ ಹೇಳಿದಂತೆ, 1989ರ ಮಾರ್ಚ್ 12 ರಂದು ವಿಜ್ಞಾನಿ 'ಟೀಮ್ ಬರ್ನಸ್ ಲೀ' ಅವರು 'ವರ್ಲ್ಡ್ ವೈಡ್ ವೆಬ್(WWW)' ಅನ್ನು ಕಂಡುಹಿಡಿದಿದ್ದರು. ಬ್ರಿಟೀಷ್ ಪ್ರಜೆಯಾಗಿದ್ದ 'ಟೀಮ್ ಬರ್ಜಸ್ ಲೀ' ಅವರು ಸ್ವಿಜ್ಜರ್‌ಲೆಂಡ್ ದೇಶದ ಜಿನಿವಾ ಸಮೀಪದ ಸಿಇಆರ್ಎನ್(ಸರ್ನ್)ನಲ್ಲಿ ಉದ್ಯೋಗಿಯಾಗಿದ್ದ ವೇಳೆಯಲ್ಲಿ 'ವರ್ಲ್ಡ್ ವೈಡ್ ವೆಬ್(WWW)' ಅನ್ನು ಹುಟ್ಟಹಾಕಿದರು. 1990 ರಲ್ಲಿ ಮೊದಲ ವೆಬ್ ಬ್ರೌಸರ್ ಅನ್ನು ರೂಪಿಸಿ ಜನಸಾಮಾನ್ಯರ ಬಳಿಗೆ ವೆಬ್ ಬ್ರೌಸರ್ ಎಂಬ ಭವಿಷ್ಯದ ಬ್ರಹ್ಮಾಂಡ ದ್ವಾರವನ್ನು ತೆರೆದಿದ್ದರು.

ಏನಿದು ವಲ್ಡ್‌ವೈಡ್ ವೆಬ್
ನಮಗೆಲ್ಲಾ ಇಂಟರ್ನೆಟ್‌ನ ಶಕ್ತಿ ಏನೆಂಬುದು ಎಲ್ಲರಿಗೂ ಅರಿವಾಗಿದೆ. ಆದರೆ, ಈ ಶಕ್ತಿಯ ಮೂಲ ಯಾವುದು, ವೆಟ್‌ಪುಟಗಳನ್ನು ಮುಕ್ತವಾಗಿ ನೋಡುವ ಶಕ್ತಿ ನಮಗೆ ಹೇಗೆ ಸಿಕ್ಕಿತು ಎನ್ನುವ ಮಾಹಿತಿ ಗೊತ್ತಿಲ್ಲದಿದ್ದರೆ ಈ ವಲ್ಡ್ ವೈಡ್ ವೆಬ್‌ಗೆ ನೀವು ಸಲಾಮ್ ಹೇಳಬೇಕು. ಈಗ ಕೇವಲ 30ನೇ ವರ್ಷಕ್ಕೆ ಕಾಲಿಡುತ್ತಿರುವ ವಲ್ಡ್‌ವೈಡ್ ವೆಬ್ ಇಂಟರ್ನೆಟ್‌ನ ರೂಪ ಬದಲಿಸಿದ ವಲ್ಡ್‌ವೈಡ್ ವೆಬ್ ಇಂಟರ್ನೆಟ್‌ನ ಒಂದು ಭಾಗ ಎಂಬುದು ನಿಮಗೆ ತಿಳಿದಿರಬೇಕು.

ವಲ್ಡ್‌ವೈಡ್ ವೆಬ್ ಮೊದಲ ಪ್ರಯತ್ನಗಳು
ಟಿಮ್ ಬರ್ನರ್ಸ್ ಲೀ ಅವರ 1989ರಲ್ಲಿ ಬರೆದ ಪ್ರಸ್ತಾಪದ ಹಿನ್ನೆಲೆಯಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸಲು ಯುರೋಪಿಯನ್ ಸೆಂಟರ್ ಫಾರ್ ನ್ಯೂಕ್ಸಿಯರ್ ರಿಸರ್ಚ್‌ನಲ್ಲಿ ವಲ್ಡ್‌ವೈಡ್ ವೆಬ್‌ಗೆ ಸಂಬಂಧಿಸಿದ ಮೊದಲ ಪ್ರಯತ್ನಗಳು ಆರಂಭವಾದವು. ಅದರಂತೆ 1991ರ ವೇಳೆಗೆ ವೆಬ್ ಬ್ರೌಸರ್ ಮತ್ತು ಸರ್ವರ್ ಸಾಫ್ಟ್‌ವೇರ್ ಸಿದ್ಧವಾಗಿದ್ದವು.

ವಲ್ಡ್‌ವೈಡ್ ವೆಬ್ ಇಂಟರ್‌ನೆಟ್ಟಾ?
ಬಹುತೇಕರು ಇಂಟರ್ನೆಟ್ ಮತ್ತು ವೆಬ್ ಒಂದೇ ಎಂದು ತಿಳಿದುಕೊಂಡಿದ್ದಾರೆ. ಆದರೆ, ಇಂಟರ್ನೆಟ್ ಮತ್ತು ವಲ್ಡ್ ವೈಡ್ ವೆಬ್ ಬೇರೆ ಬೇರೆ. ಇಂಟರ್ನೆಟ್ ಅನ್ನುವುದು ವಿಶ್ವದ ಎಲ್ಲ ಕಂಪ್ಯೂಟರ್ ನೆಟ್‌ವರ್ಕ್ ಮೂಲಸೌಲಭ್ಯಗಳಿಗೆ ಸಂಬಂಧಿಸಿದ್ದು. ಇಂಟರ್ನೆಟ್ ಬಳಸಿಕೊಂಡು ನೋಡಬಹುದಾದ, ಅಪ್‌ಲೋಡ್ ಮಾಡಬಹುದಾದ ಟೆಕ್ಸ್ಟ್‌ಗಳು, ಡಿಜಿಟಲ್ ಫೋಟೋ, ಮ್ಯೂಸಿಕ್ ಫೈಲ್, ವೀಡಿಯೋಗಳ ಸಂಗ್ರಹಕ್ಕೆ ವಲ್ಡ್‌ವೈಡ್ ವೆಬ್ ಎನ್ನುತ್ತಾರೆ. ವಲ್ಡ್‌ವೈಡ್ ವೆಬ್ ಇಂಟರ್ನೆಟ್‌ನ ಒಂದು ಭಾಗ. ಇಂಟರ್ನೆಟ್ ಜಗತ್ತು ವಿಶಾಲವಾಗಿದೆ.

ಮೊದಲ ವಲ್ಡ್‌ವೈಡ್ ವೆಬ್ ಬಂದಿದ್ದು?
1990ರಲ್ಲಿ ವಿಶ್ವದ ಮೊದಲ ವೆಬ್ ಬ್ರೌಸರ್ ವಲ್ಡ್‌ವೈಡ್ ವೆಬ್ ಅನ್ನು ಬರೆಯಲು ಲೀ ಅವರು ಬಳಸಿದ್ದು ಎನ್‌ಇಎಕ್ಸ್‌ಟಿ ಕಂಪ್ಯೂಟರ್ ಅನ್ನು. ವಿಶ್ವದ ಮೊದಲ ವೆಬ್ ಸರ್ವರ್ ಕೂಡ ಇದೇ ಕಂಪ್ಯೂಟರ್ ಆಗಿದೆ. 'ವಲ್ಡ್ ವೈಡ್ ವೆಬ್' ಲೀ ಅವರ ಆವಿಷ್ಕಾರದ ಫಲಬರ್ನರ್ಸ್ ಲೀ ಅವರು ವಲ್ಡ್‌ವೈಡ್ ವೆಬ್ ಬಳಸಿ ಮೊದಲ ಫೋಟೋವನ್ನು 1992ರಲ್ಲಿ ವೆಬ್‌ಗೆ ಅಪ್‌ಲೋಡ್ ಮಾಡಿದರು. http://info.cern.ch ಆನ್‌ಲೈನ್(ಆ.6, 1991ರಂದು) ಆದ ಮೊದಲ ವೆಬ್‌ಸೈಟ್ ಎಂಬುದು ನಿಮಗೆ ಬಹುತೇಕ ತಿಳಿದಿಲ್ಲ ಎನ್ನಬಹುದು.

1993ರಲ್ಲಿ ಮೊಸೈಕ್ ವೆಬ್‌ಬ್ರೌಸರ್
ವಿಶ್ವದ ಮೊದಲ ವೆಬ್ ಬ್ರೌಸರ್ ವಲ್ಡ್‌ವೈಡ್ ವೆಬ್ ಅಭಿವೃದ್ದಿಯಾದ ನಂತರ 1993ರಲ್ಲಿ ಮೊಸೈಕ್ ವೆಬ್‌ಬ್ರೌಸರ್‌ನ ಬಿಡುಗಡೆಯಾಯಿತು. ಇದು ವಲ್ಡ್‌ವೈಡ್ ವೆಬ್‌ನ ಇತಿಹಾಸದ ಮಹತ್ವದ ಘಟ್ಟ. ಇದೊಂದು ಗ್ರಾಫಿಕಲ್ ಬ್ರೌಸರ್ ಆಗಿದ್ದು ಇಲಿನಾಯ್ಸ್ ವಿವಿಯ ನ್ಯಾಷನಲ್ ಸೆಂಟರ್ ಫಾರ್ ಸೂಪರ್ ಕಂಪ್ಯೂಟಿಂಗ್ ಅಪ್ಲಿಕೇಷನ್ಸ್‌ನ ತಂಡ ಅಭಿವೃದ್ಧಿಪಡಿಸಿತ್ತು. ಇದು ವಲ್ಡ್‌ವೈಡ್ ವೆಬ್‌ನ ದಿಕ್ಕನ್ನೇ ಬದಲಾಯಿಸಿತು ಎಂದು ಹೇಳಬಹುದು.

1993ರಲ್ಲಿ ಎಲ್ಲರಿಗೂ ಮುಕ್ತ
1989ರಲ್ಲಿ ಹುಟ್ಟಿದ ವೆಬ್ ಬ್ರೌಸರ್ ವಲ್ಡ್‌ವೈಡ್ ವೆಬ್ ಸಂಶೋಧನೆ ಕೇವಲ 4 ವರ್ಷಗಳಲ್ಲಿ ಜನಸಾಮಾನ್ಯರಿಗೂ ದಕ್ಕಿತು. ಏ.30, 1993ರಂದು ಯುರೋಪಿಯನ್ ರಿಸರ್ಚ್ ಆರ್ಗನೈಸೇಷನ್(ಸಿಇಆರ್‌ಎನ್ ವಲ್ಡ್‌ವೈಡ್ ವೆಬ್ ಅನ್ನು ಮುಂದೆ ಎಲ್ಲರಿಗೂ ಮುಕ್ತವಾಗಿದೆ ಎಂದು ಹೇಳಿತು. ಇದನ್ನು ಯಾರು ಬೇಕಾದರೂ ಉಚಿತವಾಗಿ ಬಳಸಬಹುದು ಎಂದು ಘೋಷಿಸಿತು. ಹಾಗಾಗಿ, ಇದು ಕೂಡ ಇಂಟರ್ನೆಟ್‌ನ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ ಎಂಬುದು ನಿಮಗೆ ತಿಳಿದಿರಲಿ.

ಇಂಟರ್ನೆಟ್‌ನ ರೂಪ ಬದಲಿಸಿತು!
ಇಂಟರ್ನೆಟ್‌ಗೆ ಹೊಸ ಜೀವ ವಲ್ಡ್‌ವೈಡ್ ವೆಬ್‌ಗೂ ಮೊದಲು ಇಂಟರ್ನೆಟ್ ಮೂಲಕ ಟೆಕ್ಸ್ಟ್‌ಗಳನ್ನಷ್ಟೇ ರವಾನಿಸಲಾಗುತ್ತಿತ್ತು. ಟೆಕ್ಸ್ಟ್‌ನ ಫಾಂಟ್ ಹಾಗೂ ಸೈಜ್ ಒಂದೇ ರೀತಿಯವು ಆಗಿರುತ್ತಿದ್ದವು. ಆದರೆ, ವಲ್ಡ್‌ವೈಡ್ ವೆಬ್ ಕಂಡು ಬಳಕೆಗೆ ಬಂದ ಬಳಿಕವಷ್ಟೇ ಇಂಟರ್ನೆಟ್‌ಗೆ ನಿಜವಾದ ಜೀವ, ಮೌಲ್ಯ ಬಂದದ್ದು. ಇದು ಇಂಟರ್ನೆಟ್‌ನ ರೂಪ ಬದಲಿಸಿದ್ದಷ್ಟೇ ಅಲ್ಲ, ಚಿತ್ರಗಳು ಹಾಗೂ ಶಬ್ದಗಳ ಪ್ರದರ್ಶನ ಹಾಗೂ ವರ್ಗಾವಣೆಗೆ ಅವಕಾಶವನ್ನೂ ಮಾಡಿಕೊಟ್ಟಿತು.

ಈಗ ಇಂಟರ್ನೆಟ್ ಜಗತ್ತು ವಿಶಾಲ
ವಿಶ್ವದ ಎಲ್ಲ ಕಂಪ್ಯೂಟರ್ ನೆಟ್‌ವರ್ಕ್ ಮೂಲಸೌಲಭ್ಯಗಳಿಗೆ ಸಂಬಂಧಿಸಿದ್ದು. ಇಂಟರ್ನೆಟ್ ಬಳಸಿಕೊಂಡು ನೋಡಬಹುದಾದ, ಅಪ್‌ಲೋಡ್ ಮಾಡಬಹುದಾದ ಟೆಕ್ಸ್ಟ್‌ಗಳು, ಡಿಜಿಟಲ್ ಫೋಟೋ, ಮ್ಯೂಸಿಕ್ ಫೈಲ್, ವೀಡಿಯೋಗಳ ಸಂಗ್ರಹಕ್ಕೆ ಸುಲಭವಾಗಿ ವಲ್ಡ್‌ವೈಡ್ ವೆಬ್ ಎಂದು ಹೇಳಬಹುದು. ವಲ್ಡ್‌ವೈಡ್ ವೆಬ್ ಇಂಟರ್ನೆಟ್‌ನ ಒಂದು ಭಾಗವಾಗಿ ಇಂಟರ್ನೆಟ್ ಜಗತ್ತಿನ ವಿಶಾಲತೆಯನ್ನು ತೆರೆದಿಡುವ ಈ ಮಾಹಿತಿಯನ್ನು ನೀವು ಕೂಡ ಹಂಚಿಕೊಳ್ಳಿ.


Click it and Unblock the Notifications








