ಶಿಯೋಮಿಯಿಂದ ಮತ್ತೆ ಎರಡು ಫ್ಲ್ಯಾಗ್‌ಶಿಪ್‌ ಫೋನ್‌ ಲಾಂಚ್!..200ಎಂಪಿ ಕ್ಯಾಮೆರಾ!

|

ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಶಿಯೋಮಿ ಕಂಪೆನಿಯು 12 ಸರಣಿಯಲ್ಲಿ ಈಗಾಗಲೇ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿದೆ. ಇದೀಗ ಅದೇ ಸರಣಿಯಲ್ಲಿ ನೂತನವಾಗಿ ಶಿಯೋಮಿ 12T ಪ್ರೊ ಮತ್ತು ಶಿಯೋಮಿ 12T ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ದೊಡ್ಡ ಸದ್ದು ಮಾಡುವ ಲಕ್ಷಣಗಳನ್ನು ಸೂಚಿಸಿದೆ.

ನೂತನವಾಗಿ

ಹೌದು, ಶಿಯೋಮಿ ಸಂಸ್ಥೆಯು ನೂತನವಾಗಿ ಶಿಯೋಮಿ 12T ಪ್ರೊ ಮತ್ತು ಶಿಯೋಮಿ 12T ಸ್ಮಾರ್ಟ್‌ಫೋನ್‌ಗಳನ್ನು ಯುರೋಪ್‌ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಎರಡು ಫೋನ್‌ಗಳು ಫ್ಲ್ಯಾಗ್‌ಶಿಪ್‌ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿವೆ. ಅಲ್ಲದೇ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 120W ಹೈಪರ್‌ಚಾರ್ಜ್.ಸೌಲಭ್ಯ ಹೊಂದಿವೆ. ಜಸ್ಟ್‌ 19 ನಿಮಿಷಗಳಲ್ಲಿ ಬ್ಯಾಟರಿ ಪೂರ್ಣ ಚಾರ್ಜ್‌ ಪಡೆಯುವುದಾಗಿ ಕಂಪನಿ ಹೇಳಿಕೊಂಡಿದೆ.

ಶಿಯೋಮಿ

ಇನ್ನು ಶಿಯೋಮಿ 12T ಪ್ರೊ ಹಿಂಬದಿಯಲ್ಲಿ 200 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದರೆ, ಶಿಯೋಮಿ 12T ಸ್ಮಾರ್ಟ್‌ಫೋನ್‌ 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಎರಡು ಫೋನ್‌ಗಳು 8GB + 128GB ಸ್ಟೋರೇಜ್‌ ಆಯ್ಕೆಯಲ್ಲಿ ಹೊಂದಿದ್ದು, ಸಿಲ್ವರ್, ಬ್ಲ್ಯಾಕ್‌ ಹಾಗೂ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿವೆ. ಹಾಗಾದರೆ ಶಿಯೋಮಿ 12T ಪ್ರೊ ಮತ್ತು ಶಿಯೋಮಿ 12T ಸ್ಮಾರ್ಟ್‌ಫೋನ್‌ಗಳ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ 12T ಪ್ರೊ ಫೋನ್‌ ಫೀಚರ್ಸ್‌

ಶಿಯೋಮಿ 12T ಪ್ರೊ ಫೋನ್‌ ಫೀಚರ್ಸ್‌

ಶಿಯೋಮಿ 12T ಪ್ರೊ ಸ್ಮಾರ್ಟ್‌ಫೋನ್‌ 2712 x 1220 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 6.67 ಇಂಚಿನ ಕ್ರಿಸ್ಟಲ್ ರೆಸ್ (CrystalRes) ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್‌ 1 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್ 12 ಆಧಾರಿತ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ.

ಮೆಗಾ

ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ಹೈಪರ್‌ಚಾರ್ಜ್.ಸೌಲಭ್ಯ ಹೊಂದಿವೆ.

ಶಿಯೋಮಿ 12T ಫೋನ್‌ ಫೀಚರ್ಸ್‌

ಶಿಯೋಮಿ 12T ಫೋನ್‌ ಫೀಚರ್ಸ್‌

ಶಿಯೋಮಿ 12T ಸ್ಮಾರ್ಟ್‌ಫೋನ್‌ ಸಹ 2712 x 1220 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 6.67 ಇಂಚಿನ ಕ್ರಿಸ್ಟಲ್ ರೆಸ್ (CrystalRes) ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಅಲ್ಟ್ರಾ SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್ 12 ಆಧಾರಿತ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ.

ಟ್ರಿಪಲ್

ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ಹೈಪರ್‌ಚಾರ್ಜ್.ಸೌಲಭ್ಯ ಹೊಂದಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿ 12T ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ ಯುರೋಪ್‌ನಲ್ಲಿ EUR 599 (ಭಾರತದಲ್ಲಿ ಅಂದಾಜು 48,800ರೂ. ಎನ್ನಲಾಗಿದೆ) ಹೊಂದಿದೆ. ಅದೇ ರೀತಿ ಶಿಯೋಮಿ 12T ಪ್ರೊ ಫೋನ್‌ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ ಯುರೋಪ್‌ನಲ್ಲಿ EUR 749 (ಭಾರತದಲ್ಲಿ ಅಂದಾಜು 60,500ರೂ. ಎನ್ನಲಾಗಿದೆ). ಇನ್ನು ಈ ಫೋನ್‌ ಸಿಲ್ವರ್, ಬ್ಲ್ಯಾಕ್‌ ಹಾಗೂ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

Best Mobiles in India

English summary
Xiaomi 12T Pro, Xiaomi 12T with 5000mAh Battery Launched: Price, Availability.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X