ನಿಮ್ಮ ಬಳಿ ಶಿಯೋಮಿ ಫೋನ್‌ ಇದ್ರೆ, ಈ ಚಾನ್ಸ್‌ ಮಿಸ್‌ ಮಾಡ್ಕೋಬೇಡಿ!

|

ಜನಪ್ರಿಯ ಮೊಬೈಲ್‌ ಸಂಸ್ಥೆ ಶಿಯೋಮಿ (Xiaomi) ಇದೀಗ ಭಾರತದಲ್ಲಿನ ತನ್ನ ಗ್ರಾಹಕರಿಗೆ ಹೊಸ ಬ್ಯಾಟರಿ ರಿಪ್ಲೇಸಮೆಂಟ್‌ ಕಾರ್ಯಕ್ರಮವನ್ನು (battery replacement program) ಘೋಷಿಸಿದೆ. ಗ್ರಾಹಕರು ತಮ್ಮ ಮೊಬೈಲ್‌ ಬ್ಯಾಟರಿಯನ್ನು ಮಿ ಸೇವಾ ಕೇಂದ್ರದಲ್ಲಿ ಪರಿಶೀಲಿಸಬಹುದು ಎಂದು ಕಂಪನಿ ಘೋಷಿಸಿದೆ. ಒಂದು ವೇಳೆ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಗ್ರಾಹಕರು ಬ್ಯಾಟರಿಯನ್ನು ಆಕರ್ಷಕ ಮೊತ್ತಕ್ಕೆ ಬದಲಾಯಿಸಬಹುದು.

ಬ್ಯಾಟರಿಯನ್ನು

ಹೌದು, ಶಿಯೋಮಿ ಅಥವಾ ರೆಡ್ಮಿ ಸ್ಮಾರ್ಟ್‌ಫೋನ್ ಹೊಂದಿರುವ ಬಳಕೆದಾರರು ತಮ್ಮ ಫೋನ್‌ ಬ್ಯಾಟರಿಯನ್ನು ಬದಲಾಯಿಸಲು ಸಂಸ್ಥೆಯು ಅವಕಾಶ ಮಾಡಿಕೊಟ್ಟಿದೆ. ಶಿಯೋಮಿ ಪ್ರಕಾರ ಬ್ಯಾಟರಿಯನ್ನು ಆರಂಭಿಕ ಬೆಲೆ 499ರೂ. ಬದಲಾಯಿಸಬಹುದು. ಮೊಬೈಲ್‌ ಬ್ಯಾಟರಿಯನ್ನು ಪರಿಶೀಲಿಸಲು, ಗ್ರಾಹಕರು ಶಿಯೋಮಿಯ ಅಧಿಕೃತ ಸರ್ವೀಸ್‌ ಸೆಂಟರ್‌ಗೆ ಭೇಟಿ ನೀಡಬೇಕು. ಶಿಯೋಮಿ ತಿಳಿಸಿರುವ ಬ್ಯಾಟರಿ ರಿಪ್ಲೇಸಮೆಂಟ್‌ ಕಾರ್ಯಕ್ರಮದ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ ಬ್ಯಾಟರಿ ರಿಪ್ಲೇಸಮೆಂಟ್‌ ಕಾರ್ಯಕ್ರಮ

ಶಿಯೋಮಿ ಬ್ಯಾಟರಿ ರಿಪ್ಲೇಸಮೆಂಟ್‌ ಕಾರ್ಯಕ್ರಮ

ಶಿಯೋಮಿ ಕಂಪನಿಯು ಭಾರತದಲ್ಲಿ ಬ್ಯಾಟರಿ ರಿಪ್ಲೇಸಮೆಂಟ್‌ ಕಾರ್ಯಕ್ರಮ (battery replacement program) ಪ್ರಾರಂಭಿಸಿದೆ. ಈ ಕಾರ್ಯಕ್ರಮದಲ್ಲಿ ಗ್ರಾಹಕರು ತಮ್ಮ ಫೋನ್‌ಗಳ ಬ್ಯಾಟರಿಯನ್ನು 499 ರೂ. ಗಳ ಆರಂಭಿಕ ಬೆಲೆಯಿಂದ ಬದಲಾಯಿಸಬಹುದಾಗಿದೆ. ಇದಕ್ಕಾಗಿ ರೆಡ್ಮಿ ಮತ್ತು ಶಿಯೋಮಿ ಗ್ರಾಹಕರು ತಮ್ಮ ಮೊಬೈಲ್‌ಗಳ ಬ್ಯಾಟರಿಯನ್ನು ಹತ್ತಿರದ ಅಧಿಕೃತ ಶಿಯೋಮಿ ಸರ್ವೀಸ್‌ ಸೆಂಟರ್‌ಗಳಲ್ಲಿ ಪರಿಶೀಲಿಸಬಹುದಾಗಿದೆ.

ಸಾಧ್ಯತೆಗಳು

ಒಂದು ವೇಳೆ ಗ್ರಾಹಕರ ಫೋನ್ ಸಾಕಷ್ಟು ಹಳೆಯದಾಗಿದ್ದರೆ, ಬ್ಯಾಟರಿಯು ಸಾಮಾನ್ಯಕ್ಕಿಂತ ಬಹುಬೇಗನೆ ಬರಿದಾಗುವ ಸಾಧ್ಯತೆಗಳಿವೆ. ಇದು ಮೇಲಿಂದ ಮೇಲೆ ಚಾರ್ಜ್ ಆಗುವುದರಿಂದ ಅಥವಾ ಚಾರ್ಜ್ ನಿರ್ವಹಿಸಲು ಬ್ಯಾಟರಿಯಲ್ಲಿನ ಸೆಲ್‌ಗಳು ದುರ್ಬಲಗೊಳ್ಳುವುದರಿಂದ ಆಗುವ ಸಾಧ್ಯತೆಗಳು ಇರುತ್ತವೆ. ಈ ಬಗ್ಗೆ ಶಿಯೋಮಿ ಮತ್ತು ರೆಡ್ಮಿ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೊಬೈಲ್‌ಗಳನ್ನು ಹತ್ತಿರದ ಅಧಿಕೃತ ಸೇವಾ ಕೇಂದ್ರದಲ್ಲಿ ಪರಿಶೀಲಿಸಬೇಕಾಗುತ್ತದೆ.

ಬ್ಯಾಟರಿ

ಬ್ಯಾಟರಿ ಕಾರ್ಯವೈಖರಿ ಕಡಿಮೆ ಇದ್ದರೆ, ಗ್ರಾಹಕರು ಜಸ್ಟ್‌ 499ರೂ. ಬೆಲೆಗೆ ಬ್ಯಾಟರಿಯನ್ನು ಬದಲಾಯಿಸಬಹುದಾಗಿದೆ. ಇನ್ನು ಬ್ಯಾಟರಿ ಬೆಲೆಯು ಫೋನ್‌ಗಳ ಬ್ಯಾಟರಿ ಸಾಮರ್ಥ್ಯ ಹಾಗೂ ಫೋನ್‌ಗಳ ಮಾಡೆಲ್‌ಗಳ ಮೇಲೆ ಅವಲಂಭಿತವಾಗಿರುತ್ತದೆ. ಬ್ಯಾಟರಿ ಬೆಲೆ ಮತ್ತು ಬ್ಯಾಟರಿ ವಾರಂಟಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗ್ರಾಹಕರು ಅಧಿಕೃತ ಸರ್ವೀಸ್‌ ಸೆಂಟರ್‌ಗೆ ಭೇಟಿ ನೀಡಿ ಮಾಹಿತಿ ತಿಳಿಯಬಹುದು.

ಕಾರ್ಯ

ಕೆಲವೊಮ್ಮೆ ಮೊಬೈಲ್ ಬ್ಯಾಟರಿಯು ದೋಷಪೂರಿತವಾಗಿರುವ ಮತ್ತು ಪರಿಣಾಮಕಾರಿಯಾಗಿ ಚಾರ್ಜ್ ಆಗದಿರುವ ಪರಿಸ್ಥಿತಿಯು ಇರಬಹುದು. ಅಂತಹ ಸಂದರ್ಭಗಳಲ್ಲಿ, ಬ್ಯಾಟರಿಯ ಕಾರ್ಯ ವೈಖರಿಯ ಮಟ್ಟವನ್ನು ಪರಿಶೀಲಿಸಲು ಗ್ರಾಹಕರು ಅಧಿಕೃತ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದು ಸೂಕ್ತ. ಇನ್ನು ಮುಖ್ಯವಾಗಿ, ಫೋನ್ ಅನ್ನು ಚಾರ್ಜ್ ಮಾಡಲು ಕಂಪನಿ ಒದಗಿಸಿದ/ ಅನುಮೋದಿತ ಚಾರ್ಜರ್ ಅನ್ನು ಬಳಸುವುದು ಬ್ಯಾಟರಿ ಬಾಳಿಕೆಗೆ ಉತ್ತಮ.

ಉತ್ತಮ

ಫೋನ್‌ನಲ್ಲಿ ಪ್ಯಾಕ್ ಮಾಡಲಾದ SoC ಬ್ಯಾಟರಿಯು ವೇಗವಾಗಿ ಖಾಲಿಯಾಗಿದ್ದರೆ ಮೊಬೈಲ್‌ ಕಾರ್ಯಕ್ಷಮತೆಯನ್ನು ತಡೆಯಬಹುದು. SoC ಹೆಚ್ಚು ಬ್ಯಾಟರಿಯನ್ನು ಬಳಸದಂತೆ ಇದನ್ನು ಮಾಡಲಾಗುತ್ತದೆ. ಇದು ಸ್ವಲ್ಪ ಉತ್ತಮ ಬ್ಯಾಟರಿ ಬಾಳಿಕೆ ಪೂರಕವಾಗಿದೆ.

ಮೊಬೈಲ್ ಬ್ಯಾಟರಿ ಬದಲಾಯಿಸುವುದು ಯಾಕೆ ಅಗತ್ಯ?

ಮೊಬೈಲ್ ಬ್ಯಾಟರಿ ಬದಲಾಯಿಸುವುದು ಯಾಕೆ ಅಗತ್ಯ?

ಪ್ರಸ್ತುತ ಆಧುನಿಕ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ತಂತ್ರಜ್ಞಾನದೊಂದಿಗೆ ಬರುತ್ತವೆ. ಮೊಬೈಲ್‌ಗಳಲ್ಲಿ ಬಳಸುವ 'ಲಿಥಿಯಂ ಐಯಾನ್ ಬ್ಯಾಟರಿ'ಯು ಬಳಕೆಗೆ ಸುರಕ್ಷಿತವಾಗಿದೆ. ಆದಾಗ್ಯೂ, ದೀರ್ಘಾವಧಿಯ ಬಳಕೆಯ ನಂತರ ಬ್ಯಾಟರಿಯ ಕಾರ್ಯವೈಖರಿ ಹದಗೆಡುತ್ತದೆ. ಈ ಕಾರಣದಿದಾಗಿ ಬಹುಬೇಗನೆ ಬ್ಯಾಟರಿ ಡ್ರೈನ್ ಆಗುತ್ತದೆ. ಇದು ಒಟ್ಟಾರೆ ಬ್ಯಾಟರಿ ಚಾರ್ಜ್ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ಇದು ಕಡಿಮೆ ಸ್ಕ್ರೀನ್-ಆನ್ ಸಮಯ/ ಸ್ಟ್ಯಾಂಡ್‌ಬೈ ಸಮಯಕ್ಕೆ ಕಾರಣವಾಗುತ್ತದೆ.

Best Mobiles in India

English summary
Xiaomi Announces Battery Replacement Program in India: Price Starts at Rs 499.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X