ಶಿಯೋಮಿ ಬುಕ್ ಏರ್ 13 ಲಾಂಚ್‌: ಬೆಲೆ, ಫೀಚರ್ಸ್‌ ಏನು!?

|

ಶಿಯೋಮಿಯು ಟೆಕ್‌ ವಲಯದಲ್ಲಿ ಸ್ಮಾರ್ಟ್‌ಗ್ಯಾಜೆಟ್‌ಗಳ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್‌ ತಯಾರಕಾ ಕಂಪೆನಿಗಳಲ್ಲಿ ಶಿಯೋಮಿ ಸಹ ಪ್ರಮುಖ ಕಂಪೆನಿಯಾಗಿದೆ. ಇದರ ನಡುವೆ ರೆಡ್ಮಿ ನೋಟ್ 12 ಸರಣಿ ಗ್ಯಾಜೆಟ್‌ಗಳನ್ನು ಲಾಂಚ್‌ ಮಾಡಲಾಗಿದ್ದು, ಇದರಲ್ಲಿ, ರೆಡ್ಮಿ ನೋಟ್ 12 5G, ನೋಟ್ 12 ಪ್ರೊ 5G, ನೋಟ್ 12 ಪ್ರೊ+ 5G ಮತ್ತು ನೋಟ್ 12 ಎಕ್ಸ್ಪ್ಲೋರರ್ ಆವೃತ್ತಿ ಸಹ ಸೇರಿವೆ. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೀಡಿಯಾಟೆಕ್‌ ಡೈಮೆನ್ಸಿಟಿ 1080 SoC ನಲ್ಲಿ ಕಾರ್ಯನಿರ್ವಹಿಸಲಿವೆ. ಇದರ ನಡುವೆ ಶಿಯೋಮಿ 'ಬುಕ್ ಏರ್ 13' ಎಂಬ ಹೊಸ ಲ್ಯಾಪ್‌ಟಾಪ್ ಅನ್ನು ಸಹ ಲಾಂಚ್‌ ಮಾಡಿದೆ.

ಶಿಯೋಮಿ

ಹೌದು, ಹೊಸ ಶಿಯೋಮಿ ನೋಟ್‌ಬುಕ್ ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ. ಇಂಟೆಲ್‌ನ 12 ನೇ ತಲೆಮಾರಿನ ಸಿಪಿಯುಗಳ ಬಲ ಹೊಂದಿದ್ದು, ಡಿಸ್‌ಪ್ಲೇಯನ್ನು ಸುಮಾರು 360 ಡಿಗ್ರಿವರೆಗೆ ತಿರುಗಿಸಲು ಅನುಕೂಲಕರವಾದ ರಚನೆ ಪಡೆದಿದೆ. ಜೊತೆಗೆ ಡಾಲ್ಬಿ ಅಟ್ಮಾಸ್ ಬೆಂಬಲ ಇರುವ ಎರಡು ಸ್ಪೀಕರ್‌ ಆಯ್ಕೆ ಇದರಲ್ಲಿದೆ. ಹಾಗಿದ್ರೆ ಇದರ ಬೆಲೆ ಎಷ್ಟು, ಏನೆಲ್ಲಾ ಪ್ರಮುಖ ಫೀಚರ್ಸ್‌ ಪಡೆದಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಬುಕ್ ಏರ್ 13 ಲ್ಯಾಪ್‌ಟಾಪ್ 13.3 ಇಂಚಿನ E4 OLED ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 2880 x 1800 ಪಿಕ್ಸೆಲ್ ರೆಸಲ್ಯೂಶನ್ ನೀಡುತ್ತದೆ. ಹಾಗೆಯೇ 16:10 ಆಕಾರ ಅನುಪಾತದ ಜೊತೆಗೆ 600nits ಬ್ರೈಟ್‌ನೆಸ್ ಫೀಚರ್ಸ್‌, ಪ್ರಮಾಣಿತ 60Hz ರಿಫ್ರೆಶ್ ರೇಟ್‌ ಫೀಚರ್ಸ್‌ ಪಡೆದಿದೆ. ಇದರೊಂದಿಗೆ ಈ ಡಿಸ್‌ಪ್ಲೇ ಟಚ್‌ ಸ್ಕ್ರೀನ್‌ ಫೀಚರ್ಸ್‌ ಪಡೆದಿದ್ದು, ಡಾಲ್ಬಿ ವಿಷನ್‌ಗೆ ಸಪೋರ್ಟ್‌ ಮಾಡುವುದರ ಜೊತೆಗೆ ತೆಳುವಾದ ಬೆಜೆಲ್‌ಗಳಿಂದ ಆವೃತವಾಗಿದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಈ ಲ್ಯಾಪ್‌ಟಾಪ್‌ i7-1250U CPU ಹಾಗೂ i5-1230U ನ ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯ ಇದೆ. ಇಂಟೆಲ್‌ನ 12 ನೇ ತಲೆಮಾರಿನ ಸಿಪಿಯುಗಳ ಬಲದ ಜೊತೆಗೆ ಇಂಟೆಲ್ ಐರಿಶ್ Xe ಜಿಪಿಯು ಆಯ್ಕೆ ಇದರಲ್ಲಿದೆ. ಇನ್ನು 16GB RAM ಹಾಗೂ 512GB ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, ಈ ಲ್ಯಾಪ್‌ಟಾಪ್ ವಿಂಡೋಸ್ 11 ಅನ್ನು ರನ್ ಮಾಡುತ್ತದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಶಿಯೋಮಿ ಬುಕ್ ಏರ್ 13 ಲ್ಯಾಪ್‌ಟಾಪ್ 58.3WHr ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 65W ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಇದರೊಂದಿಗೆ ಯುಎಸ್‌ಬಿ ಟೈಪ್-ಸಿ ಥಂಡರ್‌ಬೋಲ್ಟ್ 4 ಪೋರ್ಟ್‌, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ವೈಫೈ-6E ,ಬ್ಲೂಟೂತ್ 5.2 ಆವೃತ್ತಿ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಈ ಲ್ಯಾಪ್‌ಟಾಪ್ 8MP ವೆಬ್‌ಕ್ಯಾಮ್ ಅನ್ನು ಹೊಂದಿದ್ದು, ಎರಡು ಮೈಕ್ರೊಫೋನ್‌ಗಳು ಮತ್ತು ದೊಡ್ಡ ಗಾಜಿನ ಟಚ್‌ಪ್ಯಾಡ್‌ನೊಂದಿಗೆ ಪ್ಯಾಕ್‌ ಆಗಿದೆ. ಕೀಬೋರ್ಡ್ ಬ್ಯಾಕ್‌ಲಿಟ್ ಫೀಚರ್ಸ್‌ ಹೊಂದಿದ್ದು, ಪವರ್ ಬಟನ್ ಸುತ್ತಲೂ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್ 1.2 ಕೆಜಿ ತೂಕ ಹೊಂದಿದ್ದು, 12 ಮಿಮೀ ದಪ್ಪ ಇದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಬುಕ್ ಏರ್ 13 ಪ್ರಸ್ತುತ ಚೀನಾದಲ್ಲಿ ಮಾತ್ರ ಲಾಂಚ್‌ ಆಗಿದೆ. ಈ ಲ್ಯಾಪ್‌ಟಾಪ್‌ ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯ ಇದ್ದು, ಇದರಲ್ಲಿ ಬುಕ್ ಏರ್ 13 ಕೋರ್ i5-1230U ವೇರಿಯಂಟ್‌ಗೆ CNY 4999 (ಭಾರತದಲ್ಲಿ ಸುಮಾರು 57,000ರೂ. ಗಳು) ಹಾಗೆಯೆ ಮತ್ತು ಕೋರ್ i7-1250U CPU ವೇರಿಯಂಟ್‌ಗೆ CNY 5599 (ಸುಮಾರು 63,800ರೂ. ಗಳು) ಆಗಿದೆ. ಭಾರತವೂ ಸೇರಿದಂತೆ ಇತರೆ ದೇಶಗಳಲ್ಲಿ ಈ ಲ್ಯಾಪ್‌ಟಾಪ್‌ ಯಾವಾಗ ಲಭ್ಯ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

Best Mobiles in India

English summary
Xiaomi has gained a lot of popularity in the tech sector with its smart gadgets. Meanwhile Xiaomi Book Air 13 laptop has been launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X