ಭಾರತಕ್ಕೆ ಎಂಟ್ರಿ ಕೊಟ್ಟ ಶಿಯೋಮಿಯ ಸೈಬರ್‌ ಡಾಗ್‌ ರೋಬೋಟ್‌!

|

ಟೆಕ್‌ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ತನ್ನ ವೈವಿಧ್ಯಮಯ ಗ್ಯಾಜೆಟ್ಸ್‌ಗಳಿಂದ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಇಯರ್‌ ಬಡ್ಸ್‌ ಸೇರಿದಂತೆ ಅನೇಕ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳನ್ನು ಪರಿಚಯಿಸಿದೆ. ಇದಲ್ಲದೆ ಟೆಕ್ನಾಲಜಿ ಆಧಾರಿತ ರೋಬೋಟ್‌ಗಳನ್ನು ಕೂಡ ಪರಿಚಯಿಸಿದೆ. ಸದ್ಯ ಇದೀಗ ಶಿಯೋಮಿ ಕಂಪೆನಿಯು ಹೊಸ ಸೈಬರ್‌ ಡಾಗ್‌ ಅನ್ನು ಅನಾವರಣಗೊಳಿಸಿದೆ. ಇದು ನಾಯಿಯ ವಿನ್ಯಾಸವನ್ನು ಹೊಂದಿದ್ದು, ಸ್ಮಾರ್ಟ್‌ ಆಫೀಸ್‌ಗಳಲ್ಲಿ ಸಾಕಷ್ಟು ಕೆಲಸವನ್ನು ನಿರ್ವಹಿಸಲಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಹೊಸ ಸೈಬರ್‌ ಡಾಗ್‌ ಪರಿಚಯಿಸಿದೆ. ಪ್ರಸ್ತುತ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಈ ಸೈಬರ್‌ ಡಾಗ್‌ ಭಾರತದ ಪ್ರಮುಖ ನಗರಗಳಲ್ಲಿರುವ ಮಿ ಹೋಮ್‌ ಸ್ಟೋರ್‌ಗಳಲ್ಲಿ ಲಭ್ಯವಿದೆ. ಸದ್ಯ ಈ ಸೈಬರ್‌ಡಾಗ್‌ ಇನ್ನು ಕೂಡ ಮಾರಾಟಕ್ಕೆ ಬಂದಿಲ್ಲ. ಇನ್ನು ಈ ಸೈಬರ್‌ ಡಾಗ್‌ ತನ್ನ ಆಕಾರ ಹಾಗೂ ಫೀಚರ್ಸ್‌ಗಳಿಂದ ಸಾಕಷ್ಟು ಗಮನ ಸೆಳೆಯುತ್ತಿದೆ. ಇದರಲ್ಲಿ ಟಚ್‌ ಸೆನ್ಸಾರ್‌, ಕ್ಯಾಮೆರಾ, ಅಲ್ಟ್ರಾಸಾನಿಕ್‌ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಸವಾಲಿನ ಪ್ರದೇಶದಲ್ಲಿಯೂ ಕೂಡ ಚಲಿಸುವ ಸಾಮರ್ಥ್ಯವನ್ನು ಈ ರೋಬೋಟ್‌ ಹೊಂದಿದೆ.

ಶಿಯೋಮಿ

ಶಿಯೋಮಿ ಸೈಬರ್‌ ಡಾಗ್‌ ಆಧುನಿಕ ಯುಗದ ರೋಬೋಟ್‌ ಆಗಿದ್ದು, ನಿಮಗೆ ಸಹಾಯಕವಾಗುವ ಅನೇಕ ಕೆಲಸಗಳನ್ನು ನಿರ್ವಹಿಸಲಿದೆ. ಇದು ಎನ್‌ವಿಡಿಯಾ ಜೆಟ್ಸನ್‌ ಕ್ಸೇವಿಯರ್‌ ಎನ್‌ಎಕ್ಸ್‌ ಎಐ ಸೂಪರ್‌ ಕಂಪ್ಯೂಟರ್‌ನಿಂದ ರನ್‌ ಆಗಲಿದೆ ಎನ್ನಲಾಗಿದೆ. ಈ ಸೈಬರ್‌ ಡಾಗ್‌ ಎರಡು ಡೆಪ್ತ್‌ ಲರ್ನಿಂಗ್‌ ವೇಗವರ್ಧಕ ಎಂಜಿನ್‌ಗಳನ್ನು ಒಳಗೊಂಡಿದೆ. ಇನ್ನು ಈ ಡಾಗ್‌ ಶಿಯೋಮಿಯ ಬಯೋ-ಇನ್‌ಸ್ಪೈರ್ಡ್ ಪ್ರೇರಿತ ಕ್ವಾಡ್ರುಪ್ಡ್ ರೋಬೋಟ್ ಆಗಿದೆ. ಈ ರೋಬೋಟ್‌ ಅನ್ನು ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಅಹಮದಾಬಾದ್‌ನ ವಿವಿಧ ಮಿ ಹೋಮ್‌ಗಳಿಗೆ ಹೋಗಿ ಪರಿಶೀಲಿಸಬಹುದು. ಹಾಗಾದ್ರೆ ಶಿಯೋಮಿ ಸೈಬರ್‌ ಡಾಗ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸೈಬರ್‌ ಡಾಗ್‌ ವಿಶೇಷತೆ ಏನು?

ಸೈಬರ್‌ ಡಾಗ್‌ ವಿಶೇಷತೆ ಏನು?

ಸೈಬರ್‌ ಡಾಗ್‌ ಶಿಯೋಮಿ ಪರಿಚಯಿಸಿರುವ ಹೊಸ ತಲೆಮಾರಿನ ರೋಬೋಟ್‌ ಆಗಿದೆ. ನೋಡುವುದಕ್ಕೆ ಥೇಟ್‌ ನಾಯಿಯ ಹೋಲಿಕೆಯನ್ನು ಹೊಂದಿದೆ. ಇದು ತಂತ್ರಜ್ಞಾನ ಆಧಾರಿತ ರೋಬೋಟ್‌ ಆಗಿದ್ದು, ನೀವು ನೀಡುವ ಸಲಹೆಗಳು ಹಾಗೂ ಆಜ್ಞೆಗಳನ್ನು ಪಾಲಿಸಲಿದೆ. ಇದನ್ನು ಯಾವುದೇ ಸವಾಲಿನ ಪ್ರದೇಶದಲ್ಲಿ ಕೂಡ ಬಳಸುವುದಕ್ಕೆ ಸಾಧ್ಯವಾಗಲಿದೆ. ಇದರಲ್ಲಿ ಹೊಸ ತಲೆ ಮಾರಿನ ಸೆನ್ಸಾರ್‌ಗಳನ್ನು ಅಳವಡಿಸಿರುವುದರಿಂದ ಬಳಕೆಯು ಕೂಡ ಸುಲಭವಾಗಲಿದೆ. ಇದು ಸ್ಮಾರ್ಟ್‌ ಡಿವೈಸ್‌ ಆಗಿರುವುದರಿಂದ ಮನೆಯಲ್ಲಿ ಬಳಸುವುದಕ್ಕೆ ಸೂಕ್ತವಾಗಿದೆ.

ಯಾವೆಲ್ಲಾ ಸೆನ್ಸಾರ್‌ ಒಳಗೊಂಡಿದೆ?

ಯಾವೆಲ್ಲಾ ಸೆನ್ಸಾರ್‌ ಒಳಗೊಂಡಿದೆ?

ಶಿಯೋಮಿಯ ಹೊಸ ಸೈಬರ್‌ ಡಾಗ್‌ ರೋಬೋಟ್‌ ಟಚ್ ಸೆನ್ಸರ್‌ಗಳು, ಕ್ಯಾಮೆರಾಗಳು, ಅಲ್ಟ್ರಾಸಾನಿಕ್ ಸೆನ್ಸಾರ್‌ಗಳು , ಜಿಪಿಎಸ್ ಮಾಡ್ಯೂಲ್‌ಗಳು ಸೇರಿದಂತೆ ಹಲವು ಹೊಸ ಮಾದರಿಯ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಒಟ್ಟು 11 ಹೈ-ಪ್ರಿಸಿಶನ್ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಈ ಸೆನ್ಸಾರ್‌ಗಳು ಸೈಬರ್‌ ಡಾಗ್‌ ರೋಬೋಟ್ ಅಡೆತಡೆಗಳು ಮತ್ತು ಸವಾಲಿನ ಭೂಪ್ರದೇಶದಲ್ಲಿಯೂ ಮನಬಂದಂತೆ ಚಲಿಸುವುದಕ್ಕೆ ಸಹಾಯ ಮಾಡುತ್ತದೆ.

ಸೈಬರ್‌ಡಾಗ್‌ ಕಾರ್ಯದಕ್ಷತೆ

ಸೈಬರ್‌ಡಾಗ್‌ ಕಾರ್ಯದಕ್ಷತೆ

ಸೈಬರ್‌ಡಾಗ್ ರೋಬೋಟ್‌ ಹೊಸ ತಲೆಮಾರಿನ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಸಂಕೀರ್ಣ ಕಾರ್ಯವಿಧಾನಗಳನ್ನು ನಿರ್ವಹಿಸಲು, ಎನ್‌ವಿಡಿಯಾ ಜೆಟ್ಸನ್ ಕ್ಸೇವಿಯರ್ ಎನ್‌ಎಕ್ಸ್ ಎಐ ಸೂಪರ್‌ಕಂಪ್ಯೂಟರ್‌ನಿಂದ ರನ್‌ ಆಗಲಿದೆ. ಇದು 384 CUDA ಕೋರ್‌ಗಳು, 48 ಟೆನ್ಸರ್ ಕೋರ್‌ಗಳು, 6 ಕಾರ್ಮೆಲ್ ARM CPU, ಮತ್ತು 2 ಡೆಪ್ತ್‌ ಲರ್ನಿಂಗ್‌ ವೇಗವರ್ಧಕ ಎಂಜಿನ್‌ಗಳನ್ನು ಒಳಗೊಂಡಿದೆ. ಹಾಗೆಯೇ 128GB SSD ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಸೈಬರ್ ಡಾಗ್ ಕೌಶಲ್ಯಗಳು

ಸೈಬರ್ ಡಾಗ್ ಕೌಶಲ್ಯಗಳು

ಸೈಬರ್‌ಡಾಗ್ ರೋಬೋಟ್‌ ನಿರ್ದಿಷ್ಟ ಬಳಕೆಯ ಪ್ರಕರಣವನ್ನು ಹೊಂದಿಲ್ಲ. ಆದರೆ ಇದು ಸ್ಮಾರ್ಟ್‌ ಹೋಮ್‌ನಲ್ಲಿ ಬಳಸಬಹುದಾದ ಒಂದು ಸ್ಮಾರ್ಟ್‌ ಡಿವೈಸ್‌ ಆಗಿದೆ. ಸೈಬರ್‌ಡಾಗ್ ತನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ನೈಜ ಸಮಯದಲ್ಲಿ ವಿಶ್ಲೇಷಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಅದರ ಗಮ್ಯಸ್ಥಾನವನ್ನು ತಲುಪಲು ನ್ಯಾವಿಗೇಷನಲ್ ನಕ್ಷೆಗಳನ್ನು ಸಹ ಕ್ರಿಯೆಟ್‌ ಮಾಡಬಹುದಾಗಿದೆ. ಇದಲ್ಲದೆ ಈ ಸೈಬರ್‌ ಡಾಗ್‌ ರೋಬೋಟ್‌ ಧ್ವನಿ ಆಜ್ಞೆಗಳನ್ನು ಸಹ ಕೇಳಬಹುದು.

ಸೈಬರ್‌ಡಾಗ್‌

ಈ ಹೊಸ ಸೈಬರ್‌ಡಾಗ್‌ ರೋಬೋಟ್‌ ಎಂಬೆಡೆಡ್ ಮತ್ತು ಎಡ್ಜ್ ಸಿಸ್ಟಮ್‌ ಎಐ ಸೂಪರ್ ಕಂಪ್ಯೂಟರ್ ಆಗಿದೆ. ಸೈಬರ್ ಡಾಗ್ ತನ್ನ ಸೆನ್ಸಾರ್‌ ಮೂಲಕ ಸೆರೆಹಿಡಿಯುವ ಬೃಹತ್ ಡೇಟಾವನ್ನು ಸ್ಟೋರೇಜ್‌ ಮಾಡಬಹುದಾಗಿದೆ. ಇನ್ನು ಈ ಸೈಬರ್‌ಡಾಗ್‌ನ ಇಂಟರ್‌ನಲ್ಲಿ ಇಂಟರ್ಫೇಸ್ ಮೂರು ಟೈಪ್-ಸಿ ಪೋರ್ಟ್‌ಗಳು ಮತ್ತು ಒಂದು ಎಚ್‌ಡಿಎಂಐ ಪೋರ್ಟ್ ಅನ್ನು ಒಳಗೊಂಡಿದೆ. ಇದನ್ನು ಡೆವಲಪರ್‌ಗಳು ಹಾರ್ಡ್‌ವೇರ್ ಆಡ್-ಆನ್‌ಗಳು ಅಥವಾ ಸಾಫ್ಟ್‌ವೇರ್ ಸಿಸ್ಟಮ್‌ಗಳನ್ನು ಸಂಪರ್ಕಿಸಲು ಬಳಸಬಹುದಾಗಿದೆ.

ರೋಬೋಟ್

ಇನ್ನು ಈ ರೋಬೋಟ್ ದೃಷ್ಟಿ ಸಂವೇದಕ ವ್ಯವಸ್ಥೆಯೊಂದಿಗೆ ಬರುತ್ತದೆ, ಇದು ಸೈಬರ್ ಡಾಗ್ ತನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ನೈಜ ಸಮಯದಲ್ಲಿ ವಿಶ್ಲೇಷಿಸಲು, ನ್ಯಾವಿಗೇಷನಲ್ ನಕ್ಷೆಗಳನ್ನು ರಚಿಸಲು, ಅದರ ಗಮ್ಯಸ್ಥಾನವನ್ನು ರೂಪಿಸಲು ಮತ್ತು ಅಡೆತಡೆಗಳನ್ನು ತಪ್ಪಿಸಲು ಅನುವು ಮಾಡಿಕೊಡುತ್ತದೆ. ರಿಮೋಟ್ ಮತ್ತು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಬಳಸುವ ಮೂಲಕ ಇದನ್ನು ಕಂಟ್ರೋಲ್‌ ಮಾಡುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ಸ್ಮಾರ್ಟ್‌

ಸ್ಮಾರ್ಟ್‌ ಗ್ಯಾಜೆಟ್ಸ್‌ಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಶಿಯೋಮಿ ಕಳೆದ ವರ್ಷ ಸ್ಮಾರ್ಟ್ ಗ್ಲಾಸ್‌ ಅನ್ನು ಕೂಡ ಪರಿಚಯಿಸಿತ್ತು. ಈ ಸ್ಮಾರ್ಟ್‌ಗ್ಲಾಸ್‌ ಮೈಕ್ರೊ ಎಲ್‌ಇಡಿ ಇಮೇಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು 0.13-ಇಂಚಿನ ಮೈಕ್ರೋ ಎಲ್‌ಇಡಿ ಡಿಸ್‌ಪ್ಲೇ ಅನ್ನು ಹೊಂದಿದ್ದು, ಮೈಕ್ರೋ ಎಲ್‌ಇಡಿಗಳು ಹೆಚ್ಚಿನ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿವೆ. ಬಳಕೆದಾರರಿಗೆ ಇದು ಕಾಂಪ್ಯಾಕ್ಟ್ ಡಿಸ್‌ಪ್ಲೇ ಎನಿಸಲಿದೆ. ಶಿಯೋಮಿಯ ಈ ಸ್ಮಾರ್ಟ್ ಗ್ಲಾಸ್ ಡಿವೈಸ್ ಅತೀ ಚಿಕ್ಕ ಡಿಸ್‌ಪ್ಲೇ ಚಿಪ್‌ ಅನ್ನು ಹೊಂದಿದ್ದು, ಸೂಕ್ಷ್ಮದರ್ಶಕದಲ್ಲಿ ಈ ಚಿಪ್ ಗಮನಿಸಿದರೇ ಅದು ಒಂದು ಅಕ್ಕಿ ಕಾಳಿನ ಗಾತ್ರವನ್ನು ಹೊಂದಿದೆ. ಹಾಗೆಯೇ 2 ಮಿಲಿಯನ್ ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ಹೊಂದಿದೆ. ಹಾಗಯೇ ಇದು 51 ಗ್ರಾಂ ತೂಕವನ್ನು ಪಡೆದಿದೆ.

Best Mobiles in India

Read more about:
English summary
Xiaomi has revealed CyberDog in India: specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X