ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಶಿಯೋಮಿ!

|

ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆ ಇಂದು ಸಾಕಷ್ಟು ಕಲರ್‌ಫುಲ್‌ ಆಗಿದೆ. ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಸ್ಮಾರ್ಟ್‌ಟಿವಿಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತದಲ್ಲಿ ಸ್ಮಾರ್ಟ್‌ಟಿವಿಗಳಿಗೆ ಭಾರಿ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಕೂಡ ತಮ್ಮ ಭಿನ್ನ ಶ್ರೇಣಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಶಿಯೋಮಿ, ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ರೆಡ್ಮಿ ಸ್ಮಾರ್ಟ್‌ಟಿವಿಗಳು ಉತ್ತಮ ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ಶಿಯೋಮಿ ಮುಂಚೂಣಿಯಲ್ಲಿದೆ.

ಸ್ಮಾರ್ಟ್‌ಟಿವಿ

ಹೌದು, ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿ ಬ್ರ್ಯಾಂಡ್‌ ಸಾಕಷ್ಟು ಜನಪ್ರಿಯತೆ ಸಾಧಿಸಿದೆ. ಇತ್ತೀಚಿನ ದಿನಗಳ ವರೆಗೂ ಶಿಯೋಮಿ ಕಂಪೆನಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಸದ್ಯ ಇದೀಗ ಬಹಿರಂಗವಾಗಿರುವ ಕೌಂಟರ್‌ಪಾಯಿಂಟ್‌ ವರದಿಯ ಪ್ರಕಾರ ಶಿಯೋಮಿ ಭಾರತೀಯ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ ಎನ್ನಲಾಗಿದೆ. ಹಾಗಾದ್ರೆ ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಯಾವೆಲ್ಲಾ ಬ್ರ್ಯಾಂಡ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಿಯೋಮಿ

ಶಿಯೋಮಿ

ಶಿಯೋಮಿ ಕಂಪೆನಿ 2022ರ 3ನೇ ತ್ರೈಮಾಸಿಕದಲ್ಲಿಯೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. 3ನೇ ತ್ರೈಮಾಸಿಕದಲ್ಲಿ ಶಿಯೋಮಿ ಕಂಪನಿಯ ಶಿಫ್ಟಿಂಗ್‌ ವರ್ಷದಿಂದ ವರ್ಷಕ್ಕೆ 38% ರಷ್ಟು ಹೆಚ್ಚಾಗಿದೆ. ಅದರಲ್ಲೂ ಫೆಸ್ಟಿವಲ್‌ ಸೀಸನ್‌ ಸೇಲ್‌, ಆಕರ್ಷಕ ರಿಯಾಯಿತಿ, ನವೀನ ಮಾದರಿಯ ಟೆಕ್ನಾಲಜಿಯಿಂದ ಶಿಯೋಮಿ ಟಿವಿಗಳು ಭಾರಿ ಬೇಡಿಕೆ ಪಡೆದುಕೊಂಡಿವೆ. ಸದ್ಯದ ಮಾಹಿತಿ ಪ್ರಕಾರ 2022ರ 3ನೇ ತ್ರೈಮಾಸಿಕದಲ್ಲಿ ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿ 11% ಪಾಲನ್ನು ಪಡೆದುಕೊಳ್ಳುವ ಮೂಲಕ ನಂ. 1 ಸ್ಥಾನದಲ್ಲಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕಂಪೆನಿ ಶೀಯೋಮಿ ಕಂಪೆನಿ ಪ್ರಬಲ ಪೈಪೋಟಿ ನೀಡುತ್ತಾ ಬಂದಿದೆ. ಸ್ಮಾರ್ಟ್‌ಫೋನ್‌ ವಲಯದಲ್ಲಿ ಪೈಪೋಟಿ ನಡೆಸಿದಂತೆ ಸ್ಮಾರ್ಟ್‌ಟಿವಿ ವಲಯದಲ್ಲಿಯೂ ಕೂಡ ಪೈಪೋಟಿ ನಡೆಸುತ್ತಿದ್ದು, ಈ ವರ್ಷದ 3ನೇ ತ್ರೈಮಾಸಿಕದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅದರಂತೆ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿ 3ನೇ ತ್ರೈಮಾಸಿಕದಲ್ಲಿ 10% ಪಾಲನ್ನು ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಎಲ್‌ಜಿ ಕಂಪೆನಿ

ಎಲ್‌ಜಿ ಕಂಪೆನಿ

ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ದೈತ್ಯ ಎನಿಸಿಕೊಂಡಿರುವ LG ಕಂಪೆನಿ ಭಾರತದಲ್ಲಿ ಈ ವರ್ಷದ 3 ನೇ ತ್ರೈಮಾಸಿಕದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಎಲ್‌ಜಿ ಕಂಪೆನಿ 9% ಮಾರುಕಟ್ಟೆ ಪಾಲನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ. ಎಲ್‌ಜಿ ಕಂಪೆನಿಯ ಜನಪ್ರಿಯತೆಯಲ್ಲಿ OLED ಟಿವಿಗಳ ಪಾಲು ಸಾಕಾಷ್ಟಿದೆ ಎಂದು ಹೇಳಲಾಗಿದೆ.

ಒನ್‌ಪ್ಲಸ್‌

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ ಕಂಪೆನಿ ಕೂಡ ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯ ಟಾಪ್‌ ಐದು ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ಇದು ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 89% ಮಾರುಕಟ್ಟೆ ಪಾಲು ಪಡೆದಿದ್ದು, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ 8.5% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಇದರಲ್ಲಿ ಒನ್‌ಪ್ಲಸ್‌ Y1, Y1S ಮತ್ತು Y1S ಪ್ರೊ ಸರಣಿಯ ಸ್ಮಾರ್ಟ್‌ಟಿವಿಗಳು ಭಾರಿ ಬೇಡಿಕೆ ಪಡೆದುಕೊಂಡಿವೆ ಎಂದು ವರದಿಯಾಗಿದೆ.

ಸ್ಮಾರ್ಟ್‌ಟಿವಿ

ಇತ್ತೀಚಿಗೆ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸಣ್ಣ-ಗಾತ್ರದ ಟಿವಿಗಳ ಪಾಲು ಹೆಚ್ಚುತ್ತಿದೆ. ಇದರಲ್ಲಿ 32-ಇಂಚಿನ 42-ಇಂಚಿನ ಡಿಸ್‌ಪ್ಲೇ ಗಾತ್ರದ ಸ್ಮಾರ್ಟ್‌ಟಿವಿಗಳು ಹೆಚ್ಚು ಮಾರಾಟವನ್ನು ಕಂಡಿವೆ. ಆದರೆ ಡಿಸ್‌ಪ್ಲೇ ವಿಚಾರದಲ್ಲಿ ಎಲ್ಇಡಿ ಡಿಸ್‌ಪ್ಲೇಗಳು ಭಾರತೀಯರ ಆದ್ಯತೆಯ ಆಯ್ಕೆಯಾಗಿ ಉಳಿದಿವೆ ಎಂದು ವರದಿಯಾಗಿದೆ. ಇದರ ನಡುವೆಯೂ OLED ಮತ್ತು QLED ಡಿಸ್‌ಪ್ಲೇ ಮಾದರಿಗಳು ಕೂಡ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ ಎಂದು ಹೇಳಲಾಗಿದೆ. ಜಾಗತಿಕ ಬ್ರ್ಯಾಂಡ್‌ಗಳು 40% ಪಾಲನ್ನು ಹೊಂದಿರುವ ಮಾರುಕಟ್ಟೆಯನ್ನು ಮುನ್ನಡೆಸುತ್ತವೆ ಎಂದು ಹೇಳಲಾಗಿದೆ.

Best Mobiles in India

English summary
Xiaomi lead the Indian smart TV market in Q3 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X