Subscribe to Gizbot

ಶ್ಯೋಮಿ ಎಮ್ಐ 4i ಮಾರುಕಟ್ಟೆಗೆ

Written By:

ಶ್ಯೋಮಿ ಕಂಪೆನಿ ತನ್ನ 'ಗ್ಲೋಬಲ್ ಎಮ್ಐ ಫೋನ್ ಪ್ರೀಮಿಯರ್' ಈವೆಂಟ್‌ ಅನ್ನು ಇಂದು ನಡೆಸುತ್ತಿದ್ದು ಜೊತೆಗೆ 'ಐ ಈಸ್ ಕಮಿಂಗ್' ಎಂಬ ಸುಳಿವಿನ ಜೊತೆಗೆ ಇನ್ನೊಂದು ಅತ್ಯದ್ಭುತ ಡಿವೈಸ್ ಎಮ್ಐ 4i ಅನ್ನು ಹೊರತರುವ ಯೋಜನೆಯಲ್ಲಿದೆ. ಶ್ಯೋಮಿ ಎಮ್ಐ 4i, ಎಮ್ಐ 4 ನ ಹೋಲಿಕೆಯನ್ನೇ ಹೋಲುತ್ತಿದ್ದು, ಅದಾಗ್ಯೂ ಹೆಚ್ಚಿನ ಬದಲಾವಣೆಗಳನ್ನು ಈ ಡಿವೈಸ್‌ನಲ್ಲಿ ನಮಗೆ ಕಾಣಬಹುದಾಗಿದೆ.

ಶ್ಯೋಮಿ ಎಮ್ಐ 4i ಮಾರುಕಟ್ಟೆಗೆ

ಹ್ಯಾಂಡ್‌ಸೆಟ್‌ನ ಎಡಭಾಗದಲ್ಲಿ ಮುಂಭಾಗ ಕ್ಯಾಮೆರಾವನ್ನು ಲೀಕ್ ಇಮೇಜ್‌ನಲ್ಲಿ ನಮಗೆ ಕಾಣಬಹುದಾಗಿದ್ದು ಎಮ್ಐ 4 ಗೆ ಹೋಲಿಸಿದಾಗ ಇದು ಸ್ಲಿಮ್ಮರ್ ಬೆಜೆಲ್‌ಗಳು ಮತ್ತು ಸೆನ್ಸಾರ್‌ಗಳನ್ನು ಹೊಂದಿದೆ ಹಾಗೂ ಮುಂಭಾಗದಲ್ಲಿ ಭಿನ್ನವಾಗಿ ಕಾಣುತ್ತಿದೆ. ಇನ್ನು ವದಂತಿಗಳ ಪ್ರಕಾರ ಎಮ್ಐ 4i, 1.65GHz ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ 64 ಬಿಟ್ ಪ್ರೊಸೆಸರ್ ಮತ್ತು 2 ಜಿಬಿ RAM ಅನ್ನು ಒಳಗೊಂಡಿದೆ. ಆಂಡ್ರಾಯ್ಡ್ ಲಾಲಿಪಪ್ 5.0.2 ಫೋನ್‌ನಲ್ಲಿದ್ದು ಇದು 'ಫೆರಾರಿ' ಎಂಬ ಹೆಸರನ್ನೂ ಪಡೆದುಕೊಂಡಿದೆ.

ಶ್ಯೋಮಿ ಎಮ್ಐ 4i ಮಾರುಕಟ್ಟೆಗೆ

ಇನ್ನು ಶ್ಯೋಮಿಗಾಗಿ ಭಾರತ ಹೆಚ್ಚು ಮುಖ್ಯವಾದ ಮಾರುಕಟ್ಟೆಯಾಗಿದೆ. ಇದು ಇನ್ನು ಮುಂದೆ ಫ್ಲಿಪ್‌ಕಾರ್ಟ್‌ನಲ್ಲಿ ತನ್ನ ಫೋನ್‌ಗಳನ್ನು ಮಾರಾಟ ಮಾಡುವುದಿಲ್ಲ ಎಂಬುದನ್ನು ಕೂಡ ಈಗಾಗಲೇ ತಿಳಿಸಿದೆ. ಅಮೆಜಾನ್ ಇಲ್ಲವೇ ಸ್ನ್ಯಾಪ್‌ಡೀಲ್ ಇನ್ನು ಶ್ಯೋಮಿಯ ರೀಟೈಲ್ ಪಾಲುದಾರರಾಗಲಿವೆ. 'ದ ಮೊಬೈಲ್ ಸ್ಟೋರ್' ಮೂಲಕ ಶ್ಯೋಮಿ ತನ್ನ ಆಯ್ಕೆಯ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ಮಾಡುತ್ತಿದ್ದು ಇದರಲ್ಲಿ ಎಮ್ಐ 4 ಕೂಡ ಸೇರಿದೆ.

English summary
Xiaomi is gearing up for its ‘Global Mi phone premiere’ event that will take place in New Delhi today. The company has been all along teasing us with ‘i is coming’ hinting at the launch of the Mi 4i.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot