Subscribe to Gizbot

ಮಿಂಚಿನ ಸಂಚಾರವನ್ನುಂಟು ಮಾಡಲಿರುವ ಶ್ಯೋಮಿ ಎಮ್ಐ 4i

Written By:

ಶ್ಯೋಮಿ ಗುರುವಾರವಷ್ಟೇ ಎಮ್ಐ 4i ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಫೋನ್ ಸ್ನ್ಯಾಪ್‌ಡ್ರಾಗನ್ 615 ಅನ್ನು ಒಳಭಾಗದಲ್ಲಿ ಹೊಂದಿದ್ದು, 4i ನೋಟದಲ್ಲಿ ಎಮ್ಐ 4 ನಂತೆಯೇ ಇದೆ. ಇದುವರೆಗೆ ಶ್ಯೋಮಿ ಲಾಂಚ್ ಮಾಡಿರುವ ಫೋನ್‌ಗಳಲ್ಲಿ 'ದಿ ಬೆಸ್ಟ್' ಎಂಬ ಹಣೆಪಟ್ಟಿಗೆ ಈ ಫೋನ್ ಭಾಜನವಾಗಿದೆ.

ಓದಿರಿ: ಚೀನಾ ಆಪಲ್ ಶ್ಯೋಮಿ ಎಮ್ಐ 4 ಕುರಿತ 10 ಗುಟ್ಟುಗಳು

ಎಮ್ಐ 4i ನಿಜಕ್ಕೂ ಆಕರ್ಷಕ ಫೋನ್ ಆಗಿದ್ದು, ಬರಿಯ ಮಾರುಕಟ್ಟೆಯಲ್ಲಿ ಹೆಸರು ಪಡೆಯಲು ಮಾತ್ರ ಬಂದಿರದೇ ಬಳಕೆದಾರರಿಗೆ ಉಪಕಾರಿ ಎಂದೆನಿಸಬಹುದಾದ ಹಲವಾರು ಮಹತ್ವ ಅಂಶಗಳನ್ನು ತನ್ನಲ್ಲಿ ಪಡೆದುಕೊಂಡಿದೆ. ಇಂದಿನ ಲೇಖನದಲ್ಲಿ ಎಮ್ಐ 4i ಕುರಿತ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ

ಶ್ಯೋಮಿ ಎಮ್ಐ 4i : ಡಿಸ್‌ಪ್ಲೇ

ಇತರ ದುಬಾರಿ ಫೋನ್‌ಗಳಲ್ಲಿ ನೀವು ಕಾಣದ ಡಿಸ್‌ಪ್ಲೇಯನ್ನು ಎಮ್ಐ 4i ನಲ್ಲಿ ನಿಮಗೆ ಕಾಣಬಹುದು. 5 ಇಂಚಿನ ಡಿಸ್‌ಪ್ಲೇಯೊಂದಿಗೆ 1080 ಪಿ ರೆಸಲ್ಯೂಶನ್ ಅನ್ನು ಡಿವೈಸ್ ಪಡೆದುಕೊಂಡಿದೆ. ಇನ್ನು ಕಂಪೆನಿ ಫೋನ್ ಡಿಸ್‌ಪ್ಲೇ ಹೊಳಪಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದು, ಗಾಢತೆಗಾಗಿ ಈ ಫೋನ್ ಅತ್ಯುತ್ತಮ ಎಂದೆನಿಸಲಿದೆ.

ಸನ್‌ಲೈಟ್

ಶ್ಯೋಮಿ ಎಮ್ಐ 4i: ಡಿಸ್‌ಪ್ಲೇ

ಶ್ಯೋಮಿ ತನ್ನ ಎಮ್ಐ 4i ಡಿಸ್‌ಪ್ಲೇಯನ್ನು ಸನ್‌ಲೈಟ್ ಎಂದು ಕರೆದಿದ್ದು ಫೋನ್‌ನ ಬ್ರೈಟ್‌ನೆಸ್ ಆಗಾಗ್ಗೆ ಬದಲಾಗುತ್ತಿರುತ್ತದೆ. ಫೋನ್‌ನಲ್ಲಿ ಇನ್ನು ಸ್ಪಷ್ಟ ಚಿತ್ರವನ್ನು ನಮಗೆ ಕಾಣಬಹುದಾಗಿದೆ.

ಕ್ಯಾಮೆರಾ

ಶ್ಯೋಮಿ ಎಮ್ಐ 4i: ಕ್ಯಾಮೆರಾ

5 ಅಂಶಗಳನ್ನು ಎಮ್ಐ 4i ಕ್ಯಾಮೆರಾ ಹೊಂದಿದ್ದು ಡ್ಯುಯಲ್ ಟೋನ್ ಫ್ಲ್ಯಾಶ್ ಅನ್ನು ಇದು ಹೊಂದಿದೆ. 13 ಮೆಗಾಪಿಕ್ಸೆಲ್ ರಿಯರ್ ಅಂತೆಯೇ 5 ಮೆಗಾಪಿಕ್ಸೆಲ್ ಮುಂಭಾಗದಲ್ಲಿದೆ. ಎಚ್‌ಡಿಆರ್ ಮೋಡ್ ಅನ್ನು ಈ ಕ್ಯಾಮೆರಾ ಹೊಂದಿದ್ದು ಸೆಲ್ಫಿಗಾಗಿ ಟೈಮರ್ ಅನ್ನು ಕಾಣಬಹುದಾಗಿದೆ.

ಫೀಚರ್‌

ಶ್ಯೋಮಿ ಎಮ್ಐ 4i: ಕ್ಯಾಮೆರಾ

ಕ್ಯಾಮೆರಾದ ಮುಂಭಾಗ ಮತ್ತು ಹಿಂಭಾಗ ಸುಂದರವಾದ ಫೀಚರ್‌ಗಳನ್ನು ಹೊಂದಿದ್ದು, ನೆರಿಗೆಗಳು ಇತರೆ ಫೋಟೋ ಕೊರತೆಗಳನ್ನು ನೀಗಿಸುವಂತಿದೆ.

ಹೊಸ ಎಮ್ಐಯುಐ

ಶ್ಯೋಮಿ ಎಮ್ಐ 4i: ಎಮ್ಐಯುಐ

ಎಮ್ಐಯುಐ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಆಂಡ್ರಾಯ್ಡ್ ಲಾಲಿಪಪ್ ಆಧಾರಿತ ಭಾರತಕ್ಕೆ ಆಗಮಿಸಿರುವ ಪ್ರಥಮ ಶ್ಯೋಮಿ ಫೋನ್ ಇದಾಗಿದೆ. ಈ ಹೊಸ ಸಾಫ್ಟ್‌ವೇರ್ ತಮಿಳು, ತೆಲುಗು, ಕನ್ನಡ, ಮಲಯಾಳಮ್ ಭಾಷೆಗಳಿಗೆ ಬೆಂಬಲವನ್ನೀಯಲಿದೆ.

ವಿಶುವಲ್ ಐವಿಆರ್

ಶ್ಯೋಮಿ ಎಮ್ಐ 4i: ವಿಶುವಲ್ ಐವಿಆರ್

ಫೋನ್ ಅನ್ನು ಐವಿಆರ್‌ಗೆ ಸಂಪರ್ಕಪಡಿಸಿದಾಗ, ಅಂದರೆ ಐಆರ್‌ಸಿಟಿ ಐವಿಆರ್‌ನಂತಹ ಕಂಪ್ಯೂಟರ್ ಧ್ವನಿಯನ್ನು ಆಲಿಸುವುದನ್ನು ಹೊರತುಪಡಿಸಿ ಫೋನ್‌ನಲ್ಲಿರುವ ದೃಶ್ಯ ಐವಿಆರ್‌ಗೆ ಬಳಕೆದಾರರು ಹೋಗಬಹುದು ಅಂತೆಯೇ ಸಂಬಂಧಿತ ಮಾಹಿತಿಯನ್ನು ಒದಗಿಸುವ ಆಯ್ಕೆಯನ್ನು ಆರಿಸಬಹುದಾಗಿದೆ.

ದೊಡ್ಡ ಬ್ಯಾಟರಿ

ಶ್ಯೋಮಿ ಎಮ್ಐ 4i: ದೊಡ್ಡ ಬ್ಯಾಟರಿ

5 ಇಂಚು ಅಥವಾ ಸಣ್ಣ ಪರದೆಯಲ್ಲಿ ನೀವು ಇದುವರೆಗೆ ನೋಡದೇ ಇರುವ ದೊಡ್ಡ ಬ್ಯಾಟರಿಗಳನ್ನು ಶ್ಯೋಮಿ ತನ್ನ ಎಮ್ಐ 4i ನಲ್ಲಿ ಅಳವಡಿಸಿದೆ. 3120mAh ಬ್ಯಾಟರಿಯನ್ನು ಡಿವೈಸ್ ಹೊಂದಿದ್ದು ನಿಜಕ್ಕೂ ಇದು ದೊಡ್ಡದಾಗಿದೆ. ಇದು ಒಂದು ಗಂಟೆಯಲ್ಲಿ 40 ಶೇಕಡಾ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸಂಪರ್ಕ ಆಯ್ಕೆಗಳು

ಶ್ಯೋಮಿ ಎಮ್ಐ 4i: ಸಂಪರ್ಕ ಆಯ್ಕೆಗಳು

ಎರಡೂ ಸಿಮ್ ಫೋನ್‌ಗಳು 4 ಜಿ ನೆಟ್‌ವರ್ಕ್‌ಗೆ ಬೆಂಬಲವನ್ನು ಒದಗಿಸುತ್ತದೆ. ಎಸಿ ಪ್ರೊಟೊಕಾಲ್ ಬಳಸಿ ವೈಫೈಗೂ ಫೋನ್ ಅನ್ನು ಸಂಪರ್ಕಪಡಿಸಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಶ್ಯೋಮಿ ಎಮ್ಐ 4i: ಬೆಲೆ ಮತ್ತು ಲಭ್ಯತೆ

ಎಮ್ಐ 4i, 16 ಜಿಬಿ ಆವೃತ್ತಿಗೆ ರೂ 12,999 ಆಗಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಏಪ್ರಿಲ್ 30 ರಿಂದ ಫೋನ್ ದೊರೆಯಲಿದೆ. ಕೆಲವೇ ದಿನಗಳಲ್ಲಿ ಫೋನ್ ಇತರ ವೆಬ್‌ಸೈಟ್‌ಗಳನ್ನು ಪ್ರವೇಶಿಸಲಿದೆ.

ವಿಶೇಷತೆ

ಶ್ಯೋಮಿ ಎಮ್ಐ 4i: ವಿಶೇಷತೆ

ಎಮ್ಐ 4i ನಿಜಕ್ಕೂ ಆಕರ್ಷಕ ಫೋನ್ ಆಗಿದ್ದು, ಬರಿಯ ಮಾರುಕಟ್ಟೆಯಲ್ಲಿ ಹೆಸರು ಪಡೆಯಲು ಮಾತ್ರ ಬಂದಿರದೇ ಬಳಕೆದಾರರಿಗೆ ಉಪಕಾರಿ ಎಂದೆನಿಸಬಹುದಾದ ಹಲವಾರು ಮಹತ್ವ ಅಂಶಗಳನ್ನು ತನ್ನಲ್ಲಿ ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi on Thursday launched the Mi 4i smartphone. The company calls it the flagship Mi phone though that is an assertions many are likely to differ with. The Mi 4i has a price of Rs.12,999 for the 16GB version.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot