ಫ್ಲ್ಯಾಶ್‌ ಸೇಲ್‌ನಲ್ಲೇ ಬಂಪರ್ ಹೊಡೆದ ಶ್ಯೋಮಿಯ ಎಮ್ಐ 5 ಎಕ್ಸ್

By: Shwetha PS

ಶ್ಯೋಮಿಯು ಎಮ್ಐ 5 ಎಕ್ಸ್ ಮತ್ತು MIUI 9 ಅನ್ನು ಹೊರತಂದಿದ್ದು, ಈ ಫೋನ್‌ನ ಮಾರಾಟವು ಚೀನಾದಲ್ಲಿ ಆಗಸ್ಟ್ 1 ರಿಂದ ನಡೆಯಲಿದೆ. ಇನ್ನು ಮೂಲಗಳ ಪ್ರಕಾರ ಶ್ಯೋಮಿಯು ಎಮ್ಐ 5 ಎಕ್ಸ್ ಮಾರಾಟವು ಕಂಪೆನಿಯ ತವರೂರಿನಲ್ಲಿ ನಡೆಯಲಿದೆ.

ಫ್ಲ್ಯಾಶ್‌ ಸೇಲ್‌ನಲ್ಲೇ ಬಂಪರ್ ಹೊಡೆದ ಶ್ಯೋಮಿಯ ಎಮ್ಐ 5 ಎಕ್ಸ್

ಶ್ಯೋಮಿ ಸಹಸಂಸ್ಥಾಪಕರಾದ ಲಿನ್ ಬಿನ್ ಹೇಳಿರುವಂತೆ ಎಮ್ಐ 5 ಎಕ್ಸ್‌ನ 300,000 ಯೂನಿಟ್‌ಗಳು ಪ್ರಥಮ ಸೇಲ್‌ನಲ್ಲೇ ಮಾರಾಟವಾಗಿದೆ ಎಂದಾಗಿದೆ. ಈ ಸಲುವಾಗಿ ಅವರು ಡಿವೈಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ವು ಯಿಫಾನ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಎಮ್ಐ 5 ಎಕ್ಸ್‌ನ ಪ್ರಥಮ ಫ್ಲ್ಯಾಶ್ ಸೇಲ್ ಮುಗಿದಿದ್ದು ಇದರ ಎರಡನೇ ಮಾರಾಟವು ಆಗಸ್ಟ್ 5 ಕ್ಕೆ ಬೆಳಗ್ಗೆ 10 ರಿಂದ ಆರಂಭವಾಗಲಿದೆ ಎಂದಾಗಿದೆ. ಇದು ಮಧ್ಯಮ ಶ್ರೇಣಿಯ ಡಿವೈಸ್ ಆಗಿದ್ದು ಶ್ಯೋಮಿಯ ಮೂರನೆಯ ಸ್ಮಾರ್ಟ್‌ಫೋನ್ ಡ್ಯುಯಲ್ ಲೆನ್ಸ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆದುಕೊಂಡಿದೆ ಎಂದಾಗಿದೆ.

ಇದು ನಮ್ಮ ಫೋನ್‌ಗೆ ಫ್ಲ್ಯಾಗ್‌ಶಿಪ್ ಮಾದರಿಯ ಗೌರವವನ್ನು ತಂದುಕೊಟ್ಟಿದ್ದು ಎಮ್ಐ 6 ನಲ್ಲಿರುವ ಅದೇ ಸೆನ್ಸಾರ್‌ಗಳು ಈ ಡಿವೈಸ್‌ನಲ್ಲಿದೆ. ಆದರೆ ಕ್ಯಾಮೆರಾ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಮಾತ್ರ ತಿಳಿದು ಬಂದಿಲ್ಲ.

ರೆಡ್ಮಿ ನೋಟ್ 4 ಸ್ಫೋಟಕ್ಕೆ ಕಾರಣ ತಿಳಿಸಿದ ಶಿಯೋಮಿ ಕಂಪೆನಿ!! ಏನು ಗೊತ್ತಾ?

ಎಮ್ಐ 5 ಎಕ್ಸ್‌ನ ವಿಶೇಷತೆಗಳನ್ನು ನೋಡುವುದಾದರೆ 5.5 ಇಂಚಿನ ಎಫ್‌ಎಚ್‌ಡಿ 1080 ಪಿ ಡಿಸ್‌ಪ್ಲೇಯನ್ನು ಫೋನ್ ಪಡೆದುಕೊಂಡಿದ್ದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 625 ಸಾಕ್ ಇದರಲ್ಲಿದೆ ಮತ್ತು 4 ಜಿಬಿ RAM ಅನ್ನು ಫೋನ್ ಒಳಗೊಂಡಿದೆ. ಡಿವೈಸ್‌ನಲ್ಲಿ 64 ಜಿಬಿ ಸಂಗ್ರಹಣೆ ಕೂಡ ಇದೆ. ಬ್ಯಾಟರಿ 3080 mAh ಆಗಿದೆ. ಎಮ್ಐ 5 ಎಕ್ಸ್‌ ಇನ್ನೊಂದು ವಿಶೇಷತೆ ಎಂದರೆ MIUI 9 ಆಧಾರಿತ ಆಂಡ್ರಾಯ್ಡ್ ನಾಗಟ್ ಇದರಲ್ಲಿದೆ.

ಈ ಡಿವೈಸ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಕಪ್ಪು, ಚಿನ್ನದ ಬಣ್ಣ ಮತ್ತು ಗುಲಾಬಿ ಬಣ್ಣ. ಬೆಲೆ 1499 ಯುವಾನ್ ಆಗಿದ್ದು (ಭಾರತೀಯ ಬೆಲೆ ರೂ 14,000) ವಾಗಿದೆ. ಫೋನ್ ಬೆಲೆ ಆಕರ್ಷಕವಾಗಿದ್ದು ಬೆಲೆಯು ಡಿವೈಸ್‌ನಲ್ಲಿರುವ ವೈಶಿಷ್ಟ್ಯಗಳಿಗೆ ಪೂರಕ ಎಂದೆನಿಸಿದೆ.

Read more about:
English summary
It has been revealed that the Xiaomi Mi 5X has crossed over 300,000 units in the first flash sale. Read more...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot