ಶಿಯೋಮಿಯಿಂದ ಮಿ 7 ಸ್ಮಾರ್ಟ್ ಫೋನ್ ನೊಂದಿಗೆ ವೈರ್ ಲೈಸ್ ಚಾರ್ಜಿಂಗ್..!

By Lekhaka
|

ಪ್ರತಿ ವರ್ಷ ಏಪ್ರಿಲ್ ನಲ್ಲಿ ಚೀನಾ ಮೂಲದ ಶಿಯೋಮಿ ಕಂಪನಿಯೂ ಮಿ ಟಾಪ್ ಎಂಡ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ. ಇದೇ ಮಾದರಿಯಲ್ಲಿ ಮಿ6 ಈ ಬಾರಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ವರ್ಷದ ಮಿ7 ಸ್ಮಾರ್ಟ್ ಪೋನ್ ಬಿಡುಗಡೆಯಾಗುವ ಸಾಧ್ಯತೆ ಗಳಿದೆ ಎನ್ನಲಾಗಿದೆ. ಈಗಾಗಲೇ ಈ ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ರೂಮರ್ ಗಳು ಶುರುವಾಗಿದೆ.

ಶಿಯೋಮಿಯಿಂದ ಮಿ 7 ಸ್ಮಾರ್ಟ್ ಫೋನ್ ನೊಂದಿಗೆ ವೈರ್ ಲೈಸ್ ಚಾರ್ಜಿಂಗ್..!


ಮಿ 7 ಸ್ಮಾರ್ಟ್ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ವೈರ್ ಲೈಸ್ ಚಾರ್ಜಿಂಗ್ ಆಯ್ಕೆಯನ್ನು ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಇದು ಆಪಲ್ ಮಾದರಿಯ ವೈರ್ ಲೈಸ್ ಚಾರ್ಜರ್ ಆಗಲಿದೆ. ಇದರಿಂದ ಬಳಕೆದಾರರಿಗೆ ಉತ್ತಮ ದರ್ಜೆಯ ಸೇವೆಯು ದೊರೆಯಲಿದೆ.

ಈಗಾಗಲೇ ವೈರ್ ಲೈಸ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ ಎನ್ನಲಾಗಿದೆ. ಇದಕ್ಕಾಗಿ ಬ್ರಾಡ್ ಕಾನ್ ಚಿಪ್ ಮತ್ತು NEX ಟ್ರಾನ್ಸ್ ಮೀಟರ್ ಅನ್ನು ವೈರ್ ಲೈಸ್ ಚಾರ್ಜಿಂಗ್ ನಲ್ಲಿ ಅಳವಡಿಸಲಿದೆ. ಇದೇ ಮಾದರಿಯ ಕಾಪೋನೆಂಟ್ ಗಳು ಆಪಲ್ ವೈರ್ ಲೈನ್ಸ್ ಚಾರ್ಜಿಂಗ್ ನಲ್ಲೂ ಕಾಣಬಹುದು ಎನ್ನಲಾಗಿದೆ.

ದೇಶ್‌ ಕಾ ಸ್ಮಾರ್ಟ್‌ಫೋನ್ ಸೇಲ್ ಶುರು: ಇಲ್ಲಿದೇ ನೋಡಿ ಕಂಪ್ಲೀಟ್ ಡಿಟೈಲ್ಸ್..!

ಮಿ 7 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಗ್ಲಾಸ್ ಫೀನಿಷಿಂಗ್ ಕಾಣಬಹುದಾಗಿದೆ. 6.01 ಇಂಚಿನ OLED ಸ್ಕ್ರಿನ್ ಅನ್ನು ಕಾಣಬಹುದಾಗಿದೆ. ಇದು 18:9 ಅನುಪಾತದಲ್ಲಿದೆ ಎನ್ನಲಾಗಿದೆ. ಅಲ್ಲದೇ 8GB RAM ಅನ್ನು ಆದರೊಂದಿಗೆ ಜೊತೆಗೆ 64GB ಇಂಟರ್ನಲ್ ಮೆಮೊರಿಯನ್ನು ಇದರಲ್ಲಿ ನೋಡಬಹುದಾಗಿದೆ.

ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಒಮ್ಮೆಲೆ ವಿಡಿಯೊ ಲೈವ್ ಮಾಡುವುದು ಹೇಗೆ?ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಒಮ್ಮೆಲೆ ವಿಡಿಯೊ ಲೈವ್ ಮಾಡುವುದು ಹೇಗೆ?

ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಇದರಲ್ಲಿ 16MP + 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಮುಂಭಾಗದಲ್ಲಿಯೂ ಉತ್ತಮ ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ ಉತ್ತಮವಾಗದ ಆಯ್ಕೆಗಳನ್ನು ಶಿಯೋಮಿ ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ.

Best Mobiles in India

Read more about:
English summary
Xiaomi is said to use the same foundry as Apple for wireless charging.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X