ಶಿಯೋಮಿ Mi A1 ಮೊದಲ ಆಂಡ್ರಾಯ್ಡ್ ಓನ್ ಸ್ಮಾರ್ಟ್ ಪೋನ್!

Written By: Lekhaka

ಶಿಯೋಮಿ Mi A1 ಸದ್ಯ ಹೆಚ್ಚು ಸದ್ದು ಮಾಡುತ್ತಿದ್ದು, ಈ ಫೋನ್ ಕಂಪನಿಯ ಮೊದಲ ಆಂಡ್ರಾಯ್ಡ್ ಓನ್ ಸ್ಮಾರ್ಟ್ ಫೋನ್ ಆಗಲಿದೆ. ಈಗಾಗಲೇ ಈ ಫೋನ್ ಇಂಡೋನೆಷ್ಯಾದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಫೋನಿನಲ್ಲಿ ಫುಲ್ ಡಿಸ್ ಪ್ಲೇ ಸ್ಕ್ರಿನ್ ಇರಲಿದೆ ಎನ್ನಲಾಗಿದೆ.

ಶಿಯೋಮಿ Mi A1 ಮೊದಲ ಆಂಡ್ರಾಯ್ಡ್ ಓನ್ ಸ್ಮಾರ್ಟ್ ಪೋನ್!

ಇದು Mi 5X ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಇದರಲ್ಲಿ ಆಂಡ್ರಾಯ್ಡ್ ಓನ್ ಓಎಸ್ ಇರಲಿದ್ದು, ಇದರೊಂದಿಗೆ 5.5 ಇಂಚಿನ FHD ಡಿಸ್ ಪ್ಲೇ ಇರಲಿದೆ ಎನ್ನುವ ಮಾತು ಕೇಳಿಬಂದಿದೆ. ಅದುವೇ ಬ್ರಸಿಲ್ ಲೆಸ್ ಡಿಸ್ ಪ್ಲೇ ಎನ್ನುವ ರೂಮರ್ ಸಹ ಇದೆ.

ಈ ಆಂಡ್ರಾಯ್ಡ್ ಓನ್ ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಇರಲಿದ್ದು, ಆಂಡ್ರಾಯ್ಡ್ ಜೊತೆಗೆ MIUI 9 ಸಹ ನೀಡಲಾಗುವುದು. ಈ ಫೋನ್ ಸೆಪ್ಟೆಂಬರ್ ಮಾಸದ ಅಂತ್ಯದ ವೇಳೆಗೆ ಲಾಂಚ್ ಆಗುವ ಸಾಧ್ಯತೆಯೂ ಹೆಚ್ಚಾಗಿದೆ.

ಆಂಡ್ರಾಯ್ಡ್ ಓನ್ ಓಎಸ್ ಅನ್ನು ಗೂಗಲ್ 2014ರಲ್ಲಿ ಬಿಡಯಗಡೆ ಮಾಡಿತ್ತು. ಬಜೆಟ್ ಬೆಲೆಯ ಫೋನಿನಲ್ಲಿ ಸ್ಟಾಕ್ ಆಂಡ್ರಾಯ್ಡ್ ಅನ್ನು ನೀಡಲು ಈ ಕಾರ್ಯಕ್ಕೆ ಮುಂದಾಗಿತ್ತು. ಆದರೆ ಈ ಹಿಂದೆ ಇದು ಹೆಚ್ಚು ಖ್ಯಾತಿಯನ್ನು ಪಡೆದಿರಲಿಲ್ಲ. ಆದರೆ ಈ ಬಾರಿ ಹೆಚ್ಚು ಸದ್ದು ಮಾಡುತ್ತಿದೆ.

ಸ್ಯಾಮ್‌ಸಂಗ್‌ ಪ್ರೇಮಿಗಳಿಗೆ ಅಚ್ಚುಮೆಚ್ಚಾದ ಗ್ಯಾಲಕ್ಸಿ ನೋಟ್ ವಿಶೇಷತೆ ಏನು?

ಒಟ್ಟಿನಲ್ಲಿ ಶಿಯೋಮಿಯ ಈ ಹೊಸ ಪ್ರಯತ್ನದಿಂದ ಭಾರತೀಯ ಕೈಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಆಂಡ್ರಾಯ್ಡ್ ಫೋನ್ ವೊಂದು ಬಂದು ಸೇರಲಿದೆ. ಇನ್ನೊಂದು ತಿಂಗಳಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ ಎನ್ನಲಾಗಿದೆ.

SourceEnglish summary
The Xiaomi Mi A1, which is likely to be the next Android One smartphone is said to arrive with a full-screen display.
Please Wait while comments are loading...
Opinion Poll

Social Counting