ತ್ವರಿತ ಸಾಲಕ್ಕಾಗಿ ಭಾರತದಲ್ಲಿ ಬಿಡುಗಡೆಗೊಂಡಿದೆ ಶಿಯೋಮಿ ಎಂಐ ಕ್ರೆಡಿಟ್

|

ಶಿಯೋಮಿ ಕಂಪೆನಿಯು ಭಾರತದಲ್ಲಿ ಎಂಐ ಕ್ರೆಡಿಟ್ ನ್ನು ಬಿಡುಗಡೆಗೊಳಿಸಿದ್ದು, ಯುವ ವೃತ್ತಿಪರರಿಗೆ ತ್ವರಿತವಾಗಿ ಸಾಲ ಸೌಲಭ್ಯ ಪಡೆಯಲು ಇದು ನೆರವಾಗಲಿದೆ . ಚೀನಾದ ಕಂಪೆನಿಯಾಗಿರುವ ಎಂಐ ತಿಳಿಸುವಂತೆ ಇದು ತನ್ನ ಬಳಕೆದಾರರಿಗೆ ಹಣಕಾಸು ಸಾಲ ಆರಂಭಿಸಲು ಸೂಕ್ತವಾದ ವೇದಿಕೆಯಾಗಲಿದೆ. ಕಂಪೆನಿಯು ಎಂಐ ಕ್ರೆಡಿಟ್ ನಲ್ಲಿ ಹಣಕಾಸು ಸಾಲ ನೀಡುವವರ ಬಗೆಗಿನ ಪಟ್ಟಿಯನ್ನು ತಯಾರಿಸಿದ್ದು, ಈ ವೇದಿಕೆಗೆ ಬಳಕೆದಾರರು ಲಾಗ್ ಇನ್ ಆಗಿ ತ್ವರಿತ ಸಾಲಕ್ಕೆ ಅರ್ಜಿ ಹಾಕಬಹುದು.

ತ್ವರಿತ ಸಾಲಕ್ಕಾಗಿ ಭಾರತದಲ್ಲಿ ಬಿಡುಗಡೆಗೊಂಡಿದೆ ಶಿಯೋಮಿ ಎಂಐ ಕ್ರೆಡಿಟ್

ಶಿಯೋಮಿ ಬಹಿರಂಗ ಪಡಿಸಿರುವ ಪ್ರಕಾರ ಎಂಐ ಕ್ರೆಡಿಟ್ ಅನ್ನುವುದು ತ್ವರಿತ ಸಾಲ ನೀಡುವ ವೇದಿಕೆಯಾಗಿರುವ ಕ್ರೆಡಿಟ್ ಬೀ ಪಾಲುದಾರಿಕೆಯಲ್ಲಿ ನಡೆಯಲಿದೆ.ಎಂಐ ಕ್ರೆಡಿಟ್ ಶಿಯೋಮಿಯ ಮೂರನೇ ಮತ್ತೊಂದು ಅಂತರ್ಜಾಲ ಸೇವೆಯಾಗಿದ್ದು,ಇತ್ತೀಚೆಗಷ್ಟೇ ಅಂದರೆ ಮಾರ್ಚ್ 2018 ರಲ್ಲಿ ಎಂಐ ಮ್ಯೂಸಿಕ್ ಮತ್ತು ಎಂಐ ವೀಡಿಯೋ ಸೌಲಭ್ಯವನ್ನು ಬಿಡುಗಡೆಗೊಳಿಸಲಾಗಿತ್ತು.

ಶಿಯೋಮಿ ಎಂಐ ಕ್ರೆಡಿಟ್ ವೇದಿಕೆಯು ಕೇವಲ MIUI ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತೆ. ಕ್ರೆಡಿಟ್ ಬಿ ಯು 1000 ದಿಂದ 1,00,000 ದ ವರೆಗೆ ಸಾಲವನ್ನು ನೀಡಲಿದ್ದು ಇದು ಯುವ ವೃತ್ತಿಪರರಿಗೆ ಸಾಕಷ್ಟು ಅನುಕೂಲ ನೀಡಲಿದೆ.ಶಿಯೋಮಿ ಹೇಳುವ ಪ್ರಕಾರ ಕೇವಲ 10 ನಿಮಿಷದಲ್ಲಿ ಸಾಲವನ್ನು ಆರಂಭಿಸಲು ಸಾಧ್ಯವಿದ್ದು, ಸರಳವಾದ ಕೆವೈಸಿ ಪರಿಶೀಲನೆಯನ್ನು ಮಾಡಿದರೆ ಸಾಕಾಗುತ್ತೆ.

ಎಲ್ಲಾ ಪರಿಶೀಲನೆ ಮತ್ತು ಬಳಕೆದಾರನ ಮಾಹಿತಿಯನ್ನು ಪಾಲುದಾರನ ವೇದಿಕೆಯಲ್ಲಿ ನೀಡಲಾಗುತ್ತೆ ಮತ್ತು ಎಂಐ ಕ್ರೆಡಿಟ್ ವೆಬ್ ಸೈಟ್ ಕೇವಲ ಏಜೆಂಟರ ಹೆಸರುಗಳನ್ನು ಪಟ್ಟಿ ಮಾಡಲಿದೆ. ಇದು ಕೇವಲ MIUI ಬಳಕೆದಾರರಿಗೆ ಮಾತ್ರ ಲಭ್ಯವಿರುವುದರಿಂದಾಗಿ ಶಿಯೋಮಿ ಎಂಐ ಎ1ನಂತಹ ಯಾವುದೇ ಆಂಡ್ರಾಯ್ಡ್ ಫೋನುಗಳಲ್ಲಿ ಲಭ್ಯವಿರುವುದಿಲ್ಲ.

ಶಿಯೋಮಿಯ ಉಪಅಧ್ಯಕ್ಷರೂ ಮತ್ತು ಭಾರತೀಯ ಕಛೇರಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮನು ಜೈನ್ ಹೇಳುವ ಪ್ರಕಾರ " ಇವರ ಡಿವೈಸ್ ನ ಕನೆಕ್ಟಿವಿಟಿ ಮತ್ತು ಹಾರ್ಡ್ ವೇರ್ ಮತ್ತು ತಡೆರಹಿತ ಇಂಟರ್ ನೆಟ್ ಸರ್ವೀಸ್ ಮೂಲಕವಾಗ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ತಮ್ಮ ಸಂಸ್ಥೆ ಅನುಕೂಲ ಮಾಡಿಕೊಡಲಿದೆ.

ದುಬಾರಿ ಐಫೋನ್ Xಗಿಂತಲೂ ಒನ್‌ಪ್ಲಸ್ 6 ಬೆಸ್ಟ್: ಇಲ್ಲಿದೇ 6 ಕಾರಣಗಳು..!ದುಬಾರಿ ಐಫೋನ್ Xಗಿಂತಲೂ ಒನ್‌ಪ್ಲಸ್ 6 ಬೆಸ್ಟ್: ಇಲ್ಲಿದೇ 6 ಕಾರಣಗಳು..!

ಆ ನಿಟ್ಟಿನಲ್ಲಿ ಎಂಐ ಕ್ರೆಡಿಟ್ ಒಂದು ಅಧ್ಬುತ ಹೆಜ್ಜೆಯಾಗಿದ್ದು, ಭಾರತಕ್ಕೆ ಮಹತ್ವಪೂರ್ಣವಾದ ಅಂತರ್ಜಾಲ ಸೇವೆ ಒದಗಿಸಲು ನೆರವಾಗಲಿದೆ.ಅತ್ಯಾಧುನಿಕ ಸೌಲಭ್ಯದ ಲಾಭವನ್ನು ಖಂಡಿತ ಇದರ ಬಳಕೆದಾರರು ಪಡೆಯಬಹುದಾಗಿದೆ" ಎಂಬುದಾಗಿ ತಿಳಿಸುತ್ತಾರೆ.

How to send WhatsApp Payments invitation to others - GIZBOT KANNADA

ಕಂಪೆನಿಯ ಮುಖ್ಯ ಗುರಿ ಏನೆಂದರೆ ತನ್ನದೇ ವೇದಿಕೆಯಲ್ಲಿ ತಮ್ಮ ಪ್ರೊಡಕ್ಟ್ ಗಳನ್ನು ಮಾರುವ ತಂತ್ರಗಾರಿಕೆಯನ್ನು ಬಳಸಿದಂತಿದೆ. ಒಟ್ಟು ಮಾರ್ಕೆಟ್ ನಲ್ಲಿ ಕಂಪೆನಿಯ ಹೆಸರು ಗಗನಕ್ಕೇರಿದ್ದು, ಭಾರತದಲ್ಲಿ ಆನ್ ಲೈನ್ ಮೂಲಕ ಇನ್ನಷ್ಟು ಸ್ಮಾರ್ಟ್ ಫೋನ್ ಗಳನ್ನು ಮಾರುವ ತಂತ್ರವನ್ನು ಬಳಸಲಾಗುತ್ತಿದೆ.

Best Mobiles in India

Read more about:
English summary
The Xiaomi Mi Credit service has been announced in partnership with KreditBee, an instant personal loan platform. Xiaomi Mi Credit platform is only meant for the MIUI users. The company has teamed up with KreditBee to offer loans from Rs. 1,000 to Rs. 1,00,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X