ಸೆಪ್ಟೆಂಬರ್ ನಲ್ಲಿ ಬರಲಿದೆ ಶಿಯೋಮಿ Mi ಮಿಕ್ಸ್ 2..ಬೆಲೆ ಎಷ್ಟು?

By: Tejaswini P G

ಶಿಯೋಮಿ ಉತ್ಪನ್ನಗಳಿಗೆ ಜನರು ಕಾತರದಿಂದ ಕಾಯುವುದು ಗೊತ್ತೇ ಇದೆ. Mi ಮಿಕ್ಸ್ 2 ಕೂಡ ಇದಕ್ಕೆ ಹೊರತಾಗಿಲ್ಲ. ಅಲ್ಲದೆ Mi ಮಿಕ್ಸ್ 2 ಫ್ಲ್ಯಾಗ್ಶಿಪ್ ಮೊಬೈಲ್ ಆಗಿರುವುದರಿಂದ ಇದರ ಕುರಿತು ಸಾಕಷ್ಟು ವದಂತಿಗಳು ಈಗಾಗಲೇ ಕೇಳಸಿಗುತ್ತಿವೆ.

ಸೆಪ್ಟೆಂಬರ್ ನಲ್ಲಿ ಬರಲಿದೆ ಶಿಯೋಮಿ Mi ಮಿಕ್ಸ್ 2..ಬೆಲೆ ಎಷ್ಟು?

ವದಂತಿಗಳ ಹೊರತಾಗಿ,ಶಿಯೋಮಿ Mi ಮಿಕ್ಸ್ 2 ಈಗಾಗಲೇ ಬೆನ್ಚ್ಮಾರ್ಕ್ ಸೈಟ್ ಗೀಕ್ಬೆಂಚ್ ನಲ್ಲಿ ಬಂದಿರುವುದರಿಂದ ಅದರ ಬಹಳಷ್ಟು ಫೀಚರ್ಗಳ ಕುರಿತು ಮಾಹಿತಿ ಹೊರಬಿದ್ದಿದೆ. Mi ಮಿಕ್ಸ್ 2 ನ ವಿನ್ಯಾಸವನ್ನು ಸಿದ್ಧಪಡಿಸಿದವರು ಖ್ಯಾತ ಫ್ರೆಂಚ್ ವಿನ್ಯಾಸಕಾರ ಫಿಲಿಪ್ ಸ್ಟಾರ್ಕ್. ಇಷ್ಟೇ ಅಲ್ಲದೆ 'ಮೈ ಡ್ರೈವರ್ಸ್' ಸೈಟ್ನಲ್ಲಿ Mi ಮಿಕ್ಸ್ 2 ಕುರಿತು ಅನೇಕ ಮಾಹಿತಿಗಳು ಲಭ್ಯವಾಗಿದೆ.

ಶಿಯೋಮಿ Mi ಮಿಕ್ಸ್ 2 ಬಿಡುಗಡೆಯ ದಿನ ಬಹುತೇಕ ಖಚಿತವಾಗಿದೆ. ಇದೇ ಸೆಪ್ಟೆಂಬರ್ 12ಕ್ಕೆ ಮಾರುಕಟ್ಟೆಗೆ ಬರಲಿದೆಯಂತೆ Mi ಮಿಕ್ಸ್ 2.ಈ ಸುದ್ದಿ ನಿಜವೇ ಆದಲ್ಲಿ ಈ ಹಿಂದಿನ Mi ಮಿಕ್ಸ್ ಫೋನ್ಗೆ ಹೋಲಿಸಿದರೆ Mi ಮಿಕ್ಸ್ 2 ಬೇಗನೇ ಬಿಡುಗಡೆ ಭಾಗ್ಯ ಕಾಣಲಿದೆ. ಐ ಫೋನ್ 8 ಕೂಡ ಹೆಚ್ಚು ಕಮ್ಮಿ ಇದೇ ಸಮಯದಲ್ಲಿ ಬಿಡುಗಡೆಯಾಗಲಿದ್ದು, ಈ ಮೂಲಕ ಮಾರುಕಟ್ಟೆಯ ಒಂದಷ್ಟು ಭಾಗವನ್ನು ಆಪಲ್ನಿಂದ ಕಸಿದುಕೊಳ್ಳುವ ಪ್ರಯತ್ನ ಶಿಯೋಮಿ ಮಾಡುತ್ತಲೂ ಇರಬಹುದು.

ಡ್ಯುಯಲ್ ಕ್ಯಾಮೆರಾ ಹೊಂದಿರುವ ನೋಕಿಯಾ 8 ಲಾಂಚ್: ಬೆಲೆ, ವಿಶೇಷತೆಗಳ ಸಂಪೂರ್ಣ ವಿವರ.!

ಇತ್ತೀಚೆಗೆ Mi ಮಿಕ್ಸ್ ಫೋನಿನ ಬೆಲೆಯೂ ಸಾಕಷ್ಟು ಇಳಿಕೆ ಕಂಡಿತ್ತು.ಇದೆಲ್ಲವೂ Mi ಮಿಕ್ಸ್ 2 ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎನ್ನುವುದರ ಸೂಚನೆ ಎಂದರೆ ತಪ್ಪಾಗಲಾರದು.

ಶಿಯೋಮಿ Mi ಮಿಕ್ಸ್ 2 ಎರಡು ವಿಭಿನ್ನ ಮೆಮೋರಿ ಆವೃತ್ತಿಗಳಲ್ಲಿ ಬರಲಿದೆಯಂತೆ.ಮೊದಲನೆಯ ಆವೃತ್ತಿ 6GB RAM ಮತ್ತು 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿರಲಿದೆ. ಗೀಕ್ಬೆಂಚ್ ನಲ್ಲಿಯೂ Mi ಮಿಕ್ಸ್ 2 ಇದೇ ಕಾನ್ಫಿಗರೇಶನ್ ನೊಂದಿಗೆ ಪಟ್ಟಿಯಾಗಿತ್ತು. ಇನ್ನು Mi ಮಿಕ್ಸ್ 2 ನ ಉನ್ನತ ಮಟ್ಟದ ಆವೃತ್ತಿ 8GB RAM ಮತ್ತು 256GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿರಲಿದೆ ಎನ್ನುವ ಸುದ್ದಿಯಿದ್ದರೂ ಅದು ಎಷ್ಟರ ಮಟ್ಟಿಗೆ ನಿಜ ಎಂಬುದು ತಿಳಿದಿಲ್ಲ.

ಈಗ ಮಾರುಕಟ್ಟೆಯಲ್ಲಿ ಒನ್ ಪ್ಲಸ್ 5,ನುಬಿಯಾ Z17,ಏಸಸ್ ಝೆನ್ಫೋನ್ AR ಮೊದಲಾದ ಮೊಬೈಲ್ಗಳು 8GB RAM ಹೊಂದಿರುವುದರಿಂದ ಶಿಯೋಮಿ ಅದರ ಫ್ಲ್ಯಾಗ್ಶಿಪ್ ಮೊಬೈಲ್ ಆದ Mi ಮಿಕ್ಸ್ 2 ನಲ್ಲಿ 8GB RAM ನೀಡುವ ಸಾಧ್ಯತೆಯೂ ಇದೆ.

ಶಿಯೋಮಿ Mi ಮಿಕ್ಸ್ 2 ನ ಬೆಲೆ ಕುರಿತು ಈ ರೀತಿ ಮಾಹಿತಿ ಇದೆ. Mi ಮಿಕ್ಸ್ 2 ನ ಮೂಲ ಆವೃತ್ತಿಯ ಬೆಲೆ 3999 ಯುವಾನ್ ( ಅಂದಾಜು ರೂ 38,450) ಇದ್ದರೆ ಅದರೆ ಉನ್ನತ ಆವೃತ್ತಿಯ ಬೆಲೆ 4,999 ಯುವಾನ್(ಅಂದಾಜು ರೂ 48,000) ಇರಲಿದೆಯಂತೆ.

ಇನ್ನು Mi ಮಿಕ್ಸ್ 2 ಸ್ಮಾರ್ಟ್ಫೋನಿನ ಇತರ ಫೀಚರ್ಗಳ ಕುರಿತು ಹೇಳುವುದಾದರೆ, ಇದರಲ್ಲಿದೆ ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 835 ಪ್ರಾಸೆಸರ್.ಅಲ್ಲದೆ ಆಂಡ್ರಾಯ್ಡ್ 7.1.1 ನುಗಾಟ್ ಜೊತೆ ಬರಲಿರುವ ಮಿ ಮಿಕ್ಸ್ 2 ಆಂಡ್ರಾಯ್ಡ್ ಮೇಲೆ MIUI 9 ನ ಪದರವನ್ನೂ ಹೊಂದಿದೆ.

Mi ಮಿಕ್ಸ್ ನಂತೆ Mi ಮಿಕ್ಸ್ 2 ಕೂಡ 6.4 ಇಂಚ್ ಡ್ಯುಯಲ್ ಕರ್ವಡ್ AMOLED 2K ಡಿಸ್ಪ್ಲೇ ಹೊಂದಿರಲಿದೆ.ಅಲ್ಲದೆ ಇದರ ಡಿಸ್ಪ್ಲೇ ಯು ಆಕರ್ಷಕವಾಗಿದ್ದು ಸ್ಕ್ರೀನ್ ಟು ಬಾಡಿ ಅನುಪಾತ 93% ಹಾಗೂ ಆಸ್ಪೆಕ್ಟ್ ಅನುಪಾತ 18:9 ಇರಲಿದೆ.

Read more about:
English summary
The source reveals the Xiaomi Mi Mix 2 will come in different memory variants.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot