ಮಿ ಮಿಕ್ಸ್ 2 ಹೊಸ ಆವೃತ್ತಿ ಮಾರುಕಟ್ಟೆಗೆ: ವಿಶೇಷತೆಗಳೇನು.?

Written By: Lekhaka

ಚೀನಾ ಮಾರುಕಟ್ಟೆಯಲ್ಲಿ ಶಿಯೋಮಿ ಅಬ್ಬರ ಜೋರಾಗಿಯೇ ಇದೆ. ಮೊನ್ನೇ ತಾನೆ ಮಿ ನೋಟ್ 3 Yifan ಆವೃತ್ತಿ ಬಿಡುಗಡೆಯಾಗಿತ್ತು. ಇದರ ಬೆನ್ನಲೇ ಮಿ ಮಿಕ್ಸ್ 2 ಸಿರಾಮಿಕ್ ಆವೃತ್ತಿಯನ್ನು ಮಾರಾಟಕ್ಕೆ ಇಟ್ಟಿದೆ.

ಮಿ ಮಿಕ್ಸ್ 2 ಹೊಸ ಆವೃತ್ತಿ ಮಾರುಕಟ್ಟೆಗೆ: ವಿಶೇಷತೆಗಳೇನು.?

ಸೆಪ್ಟೆಂಬರ್ ನಲ್ಲಿ ಯೇ ಮಾರುಕಟ್ಟೆಗೆ ಬಂದ ಮಿಕ್ಸ್ 2 ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ದೊರೆಯತ್ತಿತ್ತು. ಅದರಲ್ಲಿ ಒಂದು ಸೆರಾಮಿಕ್ ಅಲುಮಿನಿಯಮ್ ಆಲಾಯ್ ಪ್ರೇಮ್ ನೊಂದಿಗೆ ಮತ್ತೊಂದು ಫುಲ್ ಸೆರಾಮಿಕ್ ಆವೃತ್ತಿ.

ಇದರಲ್ಲಿ 8 GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ, ಮತ್ತೊಂದು 6 GB RAM ಮತ್ತು 256 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿತ್ತು. ಫುಲ್ ಸೆರಾಮಿಕ್ ಆವೃತ್ತಿಯಲ್ಲಿ 18K ಗೋಲ್ಡ್ ರಿಂಗ್ ಅನ್ನು ಕ್ಯಾಮೆರಾ ಸುತ್ತಾ ಮತ್ತು ಫಿಂಗ್ರರ್ ಪ್ರಿಂಟ್ ಸ್ಕ್ಯಾನರ್ ಸುತ್ತಲು ಕಾಣಬಹುದಾಗಿತ್ತು.

ಈ ಸ್ಮಾರ್ಟ್ ಫೋನ್ ಗಳ ಪ್ರಮುಖ ವ್ಯತ್ಯಾಸ ಎಂದರೆ ಫುಲ್ ಸೆರಾಮಿಕ್ ಆವೃತ್ತಿಯ ಫೋನ್ ಸೆರಾಮಿಕ್ ಬಾಡಿಯನ್ನು ಹೊಂದಿದ್ದು, ಇದು ಅನೇಕ ಪರೀಕ್ಷೆಗಳಿಗೆ ಒಳಪಟ್ಟಿದೆ. 1400 ಡಿಗ್ರಿ ಸೆಲ್ಶಿಯಸ್ ನಲ್ಲಿ ಬಿಸಿ ಮಾಡಿರುವುದಲ್ಲದೇ 240 ಭಾರವನ್ನು ಈ ಸೆರಾಮಿಕ್ ಮೇಲೆ ಹೊರಿಸಲಾಗಿದೆ.

ಈ ಫುಲ್ ಸೆರಾಮಿಕ್ ಬಾಡಿಯ ಶಿಯೋಮಿ ಮಿಕ್ಸ 2 ಸ್ಮಾರ್ಟ್ ಫೋನ್ ರೂ. 46000ಕ್ಕೆ ಮಿ ಸ್ಟೊರ್ ಗಳಲ್ಲಿ ದೊರೆಯಲಿದೆ ಎನ್ನಲಾಗಿದೆ. ಆದರೆ ಈ ಸ್ಮಾರ್ಟ್ ಫೋನ್ ಇನ್ನು ಜಾಗತೀಕ ಮಾರಕಟ್ಟೆಯಲ್ಲಿ ಲಭ್ಯವಿಲ್ಲ.

ಹೊಸ ಮೊಬೈಲ್ ಖರೀದಿಸಿದರೆ 8 ಗಂಟೆ ಚಾರ್ಜ್ ಮಾಡಿ ಬಳಸಲು ಹೇಳುವುದೇಕೆ?..ಇಲ್ಲಿದೆ ಉತ್ತರ!!

ಮಿ ಮಿಕ್ಸ್ 2 ಸ್ಮಾರ್ಟ್ ಫೋನ್ 5.99 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, 18:9 ಅನುಪಾತದಲ್ಲಿದೆ. ಅಲ್ಲದೇ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ 6 GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.

Read more about:
English summary
Xiaomi Mi Mix 2 full ceramic variant has been launched in China and is available for sale at 4699 yuan.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot