ಸೆಪ್ಟೆಂಬರ್ 11ಕ್ಕೆ ಶಿಯೋಮಿಯಿಂದ ಮತ್ತೊಂದು ಟಾಪ್ ಎಂಡ್ ಫೋನ್ ಲಾಂಚ್..!

Written By: Lekhaka

ಈ ಬಾರಿಯ IFA 2017 ಹಲವಾರು ಸ್ಮಾರ್ಟ್ ಫೋನ್ ಗಳ ಬಿಡುಗಡೆಗೆ ಸಾಕ್ಷಿಯಾಗಿದ್ದು, ಇದೇ ಮಾದರಿಯಲ್ಲಿ ಚೀನಾ ಮೂಲದ ಶಿಯೋಮಿ ಸಹ ತನ್ನ ಹೊಸ ಸ್ಮಾರ್ಟ್ ಫೋನ್ ಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಿದೆ.

ಸೆಪ್ಟೆಂಬರ್ 11ಕ್ಕೆ ಶಿಯೋಮಿಯಿಂದ ಮತ್ತೊಂದು ಟಾಪ್ ಎಂಡ್ ಫೋನ್ ಲಾಂಚ್..!

ಈಗಾಗಲೇ ತಿಳಿದಿರುವಂತೆ ಶಿಯೀಮಿ Mi Mix2 ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದ್ದು, ಅದುವೇ ಸೆಪ್ಟೆಂಬರ್ 11 ರಂದೇ ಬಿಡುಗಡೆಯಾಗುವುದು ಅಧಿಕೃತಗೊಂಡಿದೆ. ಈ ಸ್ಮಾರ್ಟ್ ಫೋನ್ ಫುಲ್ ಸ್ಕ್ರಿನ್ ವಿನ್ಯಾಸವನ್ನು ಹೊಂದಿದ್ದು, ಟಾಪ್ ಎಂಡ್ ಫೀಚರ್ ಗಳನ್ನು ಹೊಂದಿದೆ.

ಇದೇ ಮಾದರಿಯಲ್ಲಿ ಸೆಪ್ಟೆಂಬರ್ 12 ರಂದು ಆಪಲ್ ತನ್ನ ಐಫೋನ್ 8 ಅನ್ನು ಬಿಡುಗಡೆ ಮಾಡಲಿದ್ದು, ಇದರೊಂದಿಗೆ ಐಫೋನ್ 7ಎಸ್ ಮತ್ತು ಐಫೋನ್ 7ಎಸ್ ಪ್ಲಸ್ ಅನ್ನು ಸಹ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್‌ನಲ್ಲಿಯೇ DSLRರೀತಿಯ ಫೋಟೊ ತೆಗೆಯಬೇಕೆ!? ಈ ಲೇಖನ ಓದಿದ್ರೆ ಸಾಕು!!

ಇದಕ್ಕೆ ಒಂದು ದಿನ ಮುಂಚಿತವಾಗಿ ಶಿಯೋಮಿ Mi Mix2 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ ಫೋನ್ 6.4 ಇಂಚಿನ ಅಮೊಲೈಡ್ ಡಿಸ್ ಪ್ಲೇಯನ್ನು ಹೊಂದಿದ್ದು, 2ಕೆ ರೆಸಲ್ಯೂಷನ್ ಗುಣಮಟ್ಟದಾಗಿದೆ. ಈ ಫೋನ್ ಆಂಡ್ರಾಯ್ಡ್ 7.1.1 ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ MIUI 9 ಸಹ ಕಾಣಬಹುದು.

ಇದಲ್ಲದೇ ಈ ಫೋನಿನಲ್ಲಿ 6GB RAM ಅಳವಡಿಸಲಾಗಿದ್ದು, 128 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದಲ್ಲದೇ 8GB RAM ಮತ್ತು 256 GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿಯೂ ಲಭ್ಯವಿದೆ.

Source

Read more about:
English summary
The launch poster reveals that the Xiaomi Mi Mix 2 will arrive with a full-screen 2.0 design.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot