Subscribe to Gizbot

ಈ ತಿಂಗಳೇ ಲಾಂಚ್ ಆಗಲು ತಯಾರಾಗಿದೆ.. ಶಿಯೋಮಿ ಮಿ ನೋಟ್ 3!

By: Tejaswini P G

ಶಿಯೋಮಿ ಆಭಿಮಾನಿಗಳೇ..ಇಲ್ಲದೆ ಒಂದು ಬಿಸಿ ಬಿಸಿ ಸುದ್ದಿ!!ಶಿಯೋಮಿ ಮಿ ಫ್ಯಾಬ್ಲೆಟ್ ಪರಿವಾರದ ಹೊಸ ಸದಸ್ಯ ಮಿ ನೋಟ್ 3 ನಿಮ್ಮ ಕೈ ಸೇರಲು ಸಜ್ಜಾಗಿ ನಿಂತಿದೆ. ಚೀನಾದಿಂದ ಬರುತ್ತಿರುವ ವರದಿಗಳನ್ನು ನಂಬುವುದಾದರೆ ಈ ತಿಂಗಳಾಂತ್ಯದೊಳಗೆ ಶಿಯೋಮಿ ಮಿ ನೋಟ್ 3 ಮಾರುಕಟ್ಟೆಗೆ ಬರಲಿದೆ.

ಈ ತಿಂಗಳೇ ಲಾಂಚ್ ಆಗಲು ತಯಾರಾಗಿದೆ.. ಶಿಯೋಮಿ ಮಿ ನೋಟ್ 3!

ಕಳೆದ ಅಕ್ಟೋಬರ್ನಲ್ಲಷ್ಟೇ ಮಿ ನೋಟ್ 2 ಅನ್ನು ಬಿಡುಗಡೆ ಮಾಡಿದ್ದ ಶಿಯೋಮಿ ನಿಗದಿತ ಅವಧಿಗಿಂತ ಮೊದಲೇ ಮಿ ನೋಟ್ 3 ಅನ್ನು ಬಿಡುಗಡೆ ಮಾಡಲು ತಯಾರಾಗಿದೆ. ಒಂದು ವೇಳೆ ಶಿಯೋಮಿ ಈ ಆಗಸ್ಟ್ ನಲ್ಲಿ ಮಿ ನೋಟ್ 3 ಅನ್ನು ಲಾಂಚ್ ಮಾಡಲು ವಿಫಲವಾದರೂ ಸೆಪ್ಟೆಂಬರ್ ನಲ್ಲಂತೂ ಮಿ ನೋಟ್ 3 ಬೆಳಕು ಕಾಣುವುದು ಖಂಡಿತ! ಈ ಸುದ್ದಿಯು ಶಿಯೋಮಿಯ ಸಪ್ಲೈ ಚೈನ್ ನಿಂದ ಬಂದಿದೆ ಎನ್ನುತ್ತದೆ ಪ್ಲೇಫುಲ್ಡ್ರಾಯ್ಡ್ ನ ವರದಿ.

ಮಿ ನೋಟ್ 3 ಯ ಲಾಂಚ್ ಕುರಿತು ಸುದ್ದಿಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ.ಶಿಯೋಮಿ MIUI 9 ಜೊತೆಗೆ ಮಿ ನೋಟ್ 3 ಕೂಡ ಜುಲೈನಲ್ಲಿ ಲಾಂಚ್ ಆಗಲಿದೆ ಎನ್ನುವ ವದಂತಿಗಳು ಹಬ್ಬಿದ್ದವು.ಆದರೆ MIUI ಶಿಯೋಮಿ ಮಿ 5X ಜೊತೆಗೆ ಕೆಲ ವಾರಗಳ ಹಿಂದಷ್ಟೇ ಬಿಡುಗಡೆಯಾಯಿತು.ಶಿಯೋಮಿ ಮಿ ನೋಟ್ 3 ಯ ವಿನ್ಯಾಸ ಹಾಗೂ ಫೀಚರ್ಗಳ ಕುರಿತು ಅನೇಕ ವದಂತಿಗಳು ಈಗಾಗಲೇ ಇದೆ. ಆದರೆ ಶಿಯೋಮಿಯಿಂದ ಆಧಿಕೃತವಾಗಿ ಯಾವುದೇ ಮಾಹಿತಿ ಬರುವವರೆಗೆ ಇದ್ಯಾವುದನ್ನೂ ನಂಬುವಂತಿಲ್ಲ.

ಭಾರತದಲ್ಲಿ 10 ಲಕ್ಷ ಗ್ರಾಹಕರಿಂದ ನೋಕಿಯಾ 6 ಆಂಡ್ರಾಯ್ಡ್ ಬುಕ್!!.ಮತ್ತೊಂದು ದಾಖಲೆ!!

ಸುದ್ದಿಜಾಲದಲ್ಲಿ ಬರುತ್ತಿರುವ ವರದಿಗಳನ್ನು ನಂಬುವುದಾದರೆ ಮಿ ನೋಟ್ 3 ಸ್ಯಾಮ್ಸಂಗ್ ತಯಾರಿಸಿರುವ 5.7 ಇಂಚ್ QHD 1440p ಸೂಪರ್ AMOLED ಡಿಸ್ಪ್ಲೇ ಹೊಂದಿರಲಿದೆ.ಮಿ ನೋಟ್ 3 ಎರಡು ಆವೃತ್ತಿಗಳಲ್ಲಿ ಬರಲಿದೆ- ಮೊದಲನೆಯದು 6GB RAM,128 GB ಸ್ಟೋರೇಜ್ ಮತ್ತು ಸ್ನ್ಯಾಪ್ಡ್ರ್ಯಾಗನ್ 821 SoC ಹೊಂದಿದ್ದರೆ ಎರಡನೆಯದು 8GB RAM,256GB ಸ್ಟೋರೇಜ್ ಮತ್ತು ಸ್ನ್ಯಾಪ್ಡ್ರ್ಯಾಗನ್ 835 SoC ಹೊಂದಿರಲಿದೆ.

ಚಾಲ್ತಿಯಲ್ಲಿರುವ ಊಹಾಪೋಹಗಳ ಪ್ರಕಾರ ಮಿ ನೋಟ್ 3 ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿರಲಿದೆ.MIUI 9 ಆಧಾರಿತ ಆಂಡ್ರಾಯ್ಡ್ ನುಗಾಟ್ 7.1.1 ಮೇಲೆ ಓಡಲಿದೆಯಂತೆ ಮಿ ನೋಟ್ 3. ಅಲ್ಲದೆ 4000mAH ನಾನ್-ರಿಮೂವೆಬಲ್ ಬ್ಯಾಟರಿ ಹೊಂದಿರುವ ಮಿ ನೊಟ್ 3 ಕ್ವಿಕ್ ಚಾರ್ಜ್ 4.0 ಸಪೋರ್ಟ್ ಜೊತೆ ಬರಲಿದೆಯಂತೆ.

ಇಷ್ಟೆಲ್ಲಾ ಫೀಚರ್ಗಳನ್ನು ಪಡೆದಿರುವ ಶಿಯೋಮಿ ಮಿ ನೋಟ್ 3 ಯ ಬೆಲೆ ಎಷ್ಟಿರಬಹುದು? 6 GB RAM ಆವೃತ್ತಿಯ ಮಿ ನೋಟ್ 3 ಯ ಬೆಲೆ $599(ಸುಮಾರು ರೂ 39,000) ಇದ್ದರೆ 8 GB RAM ಆವೃತ್ತಿಯ ಬೆಲೆ $699 ( ಅಂದಾಜು ರೂ 45,000) ಇರಬಹುದೆಂಬ ವದಂತಿಗಳಿವೆ.

Read more about:
English summary
Xiaomi Mi Note 3 is believed to be launched by the end of this month but there is no official confirmation.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot