ಶಿಯೋಮಿಯ ಹೊಸ 'ಮಿ ಟಿವಿ 4X' ಸ್ಮಾರ್ಟ್‌ಟಿವಿ ಸೇಲ್ ಆರಂಭ!
ಶಿಯೋಮಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಸೇರಿದಂತೆ ಸ್ಮಾರ್ಟ್‌ಟಿವಿ ಉತ್ಪನ್ನಗಳಿಂದ ಅಬ್ಬರಿಸಿದ್ದು, ಇತ್ತೀಚಿಗಷ್ಟೆ 'ಮಿ ಟಿವಿ 4X' ಸ್ಮಾರ್ಟ್‌ಟಿವಿಯ 2020ರ ಎಡಿಷನ್ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಟಿವಿಯ ಮೊದಲ ಸೇಲ್ ಇಂದು ಮಧ್ಯಾಹ್ನ 12ರಿಂದ ಆರಂಭವಾಗಿದ್ದು, ಜನಪ್ರಿಯ ಅಮೆಜಾನ್ ತಾಣ, ಶಿಯೋಮಿ ಅಧಿಕೃತ ವೆಬ್ ತಾಣದಲ್ಲಿ ಖರೀದಿಗೆ ಲಭ್ಯವಾಗಿದೆ.

ಹೌದು, ಶಿಯೋಮಿ ಕಂಪನಿಯ 'ಮಿ ಟಿವಿ 4X' ಸ್ಮಾರ್ಟ್‌ಟಿವಿಯ 2020ರ ನೂತನ ಆವತರಣಿಕೆ ಇದೀಗ ಗ್ರಾಹಕರ ಖರೀದಿಗೆ ಲಭ್ಯವಾಗಿದೆ. ಈ ಹೊಸ ಆವತರಣಿಕೆಯ ಸ್ಮಾರ್ಟ್‌ಟಿವಿಯು 10 ಬಿಟ್ HRD ಸಪೋರ್ಟ್ ಪಡೆದಿದ್ದು, 20W ಸಾಮರ್ಥ್ಯದ ಸ್ಪೀಕರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಎಡಿಷನ್ ಬೆಲೆಯು 34,999ರೂ.ಗಳು ಆಗಿದೆ. ಹಾಗಾದರೇ 'ಮಿ ಟಿವಿ 4X' 2020 ಎಡಿಷನ್ ಸ್ಮಾರ್ಟ್‌ಟಿವಿ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನ್ಯೂ ಎಡಿಷನ್-ಡಿಸ್‌ಪ್ಲೇ
ಹೊಸ 'ಮಿ ಟಿವಿ 4X' ಸ್ಮಾರ್ಟ್‌ಟಿವಿ 2020 ಎಡಿಷನ್ 4K 10-bit HDR ಸಾಮರ್ಥ್ಯದ 55 ಇಂಚಿನ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. Vivid ಪಿಚ್ಚರ್ ಸೌಲಭ್ಯವನ್ನು ಪಡೆದಿದ್ದು, ಡಿಸ್‌ಪ್ಲೇಯ ಪ್ರಖರತೆ ಮತ್ತು ಸ್ಪಷ್ಟತೆ ಉತ್ತಮವಾಗಿದೆ. ಹಾಗೆಯೇ ಆಂಡ್ರಾಯ್ಡ್ 9 ಪೈ ಆಧಾರಿತ ಪಾಚ್‌ವಾಲ್ UI 2.0 ತಂತ್ರಂಶಾ ಹೊಂದಿದ್ದು, 20W ಸಾಮರ್ಥ್ಯದ ಸ್ಪೀಕರ್ಸ್‌ಗಳು ಡಾಲ್ಬಿ ಆಡಿಯೊ ಮತ್ತು ಆಟಮ್ ಸೌಂಡ್ ವ್ಯವಸ್ಥೆಯನ್ನು ಸಹ ಪಡೆದುಕೊಂಡಿದೆ. ಕ್ರೋಮ್‌ಕಾಸ್ಟ್, ವಾಯಿಸ್ ಅಸಿಸ್ಟಂಟ್ ಸೌಲಭ್ಯಗಳನ್ನು ಪಡೆದಿದೆ.

ವಿಡಿಯೊ ಕಂಟೆಂಟ್ ಆಪ್ಸ್
ಇನ್ನು ಈ ಸ್ಮಾರ್ಟ್ ಟಿವಿಯು ಪ್ರಮುಖ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೊ ಮತ್ತು ಹಾಟ್‌ಸ್ಟಾರ್ ಸೇರಿದಂತೆ 16 ವಿವಿಧ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳ ಬೆಂಬಲವನ್ನು ಹೊಂದಿದೆ. ಇದರೊಂದಿಗೆ 7 ನೇರ ನ್ಯೂಸ್ ಚಾನೆಲ್‌ಗಳ ಲಭ್ಯತೆ ಸಹ ಇದೆ. ಗೂಗಲ್ ಸೇವೆಗಳಾದ ಗೂಗಲ್ ಅಸಿಸ್ಟಂಟ್, ಯೂಟ್ಯೂಬ್, ಕ್ರೋಮ್‌ಕಾಸ್ಟ್, ಡೇಟಾ ಸೇವರ್ ಮತ್ತು ಇನ್ನಿತರೆ ಸೌಲಭ್ಯಗಳ ಸಪೋರ್ಟ್ ಇದೆ.

ಆಫರ್ ಏನಿದೆ
ಶಿಯೋಮಿಯ ಈ ಹೊಸ ಸ್ಮಾರ್ಟ್‌ಟಿವಿ ಜೊತೆಗೆ ಒಂದು ವರ್ಷ ಹೆಚ್ಚಿನ ವಾರಂಟಿ ಪಡೆಯಲು ಗ್ರಾಹಕರು ಹೆಚ್ಚುವರಿಯಾಗಿ 999ರೂ. ಪಾವತಿಸಬೇಕು. ಹಾಗೂ ಈ ಟಿವಿ ಜೊತೆಗೆ ಕೇವಲ 1,800ರೂ.ಪಾವತಿಸಿದರೇ ನಾಲ್ಕು ತಿಂಗಳು ಅವಧಿಯ ಏರ್‌ಟೆಲ್ ಡಿಟಿಎಚ್ ಹೆಚ್ ಸಂಪರ್ಕ ಸಹ ಸಿಗಲಿದೆ.

ಲಭ್ಯತೆ ಮತ್ತು ಬೆಲೆ
ಶಿಯೋಮಿಯ 'ಮಿ ಟಿವಿ 4X' 2020 ಎಡಿಷನ್ ಸ್ಮಾರ್ಟ್‌ಟಿವಿ ಬೆಲೆಯು 34,999ರೂ.ಗಳಾಗಿದೆ. ಇದೀಗ ಸೇಲ್ ಆರಂಭವಾಗಿದ್ದು, ಈ ಸ್ಮಾರ್ಟ್‌ಟಿವಿಯನ್ನು ಗ್ರಾಹಕರು ಇ-ಕಾಮರ್ಸ್ ತಾಣ ಅಮೆಜಾನ್ ಮತ್ತು ಅಧಿಕೃತ ಶಿಯೋಮಿ ವೆಬ್ ತಾಣದಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








