ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಶಿಯೋಮಿಯ 43 ಇಂಚಿನ ಸ್ಮಾರ್ಟ್‌ಟಿವಿ ಸೇಲ್ ಆರಂಭ!
ಚೀನಾ ಮೂಲದ ಶಿಯೋಮಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಹೊಸ 43 ಇಂಚಿನ ಶಿಯೋಮಿ Mi TV 4X ಸ್ಮಾರ್ಟ್‌ಟಿವಿ ತನ್ನ ಫೀಚರ್ಸ್‌ಗಳಿಂದ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಿದೆ. ಜನಪ್ರಿಯ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇಂದು (ಮಾ.11 ರಂದು ) ಈ ಸ್ಮಾರ್ಟ್‌ಟಿವಿಯು ಸೇಲ್ ಆರಂಭಿಸಲಿದೆ. ಅಂದಹಾಗೆ ಈ ಸ್ಮಾರ್ಟ್ ಟಿವಿಯ ಆರಂಭಿಕ ಬೆಲೆಯು 24,999ರೂ.ಗಳು ಆಗಿದೆ.

ಹೌದು, ಶಿಯೋಮಿ ಕಂಪನಿಯ ಇತ್ತೀಚಿನ ಹೊಸ Mi TV 4X ಸ್ಮಾರ್ಟ್ ಟಿವಿಯು ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. 43 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್ ಟಿವಿಯು 20W ಸಾಮರ್ಥ್ಯದ ಸ್ಪೀಕರ್ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೆ ಈ ಸ್ಮಾರ್ಟ್‌ಟಿವಿಯು ಗೂಗಲ್ ವಾಯಿಸ್ ಅಸಿಸ್ಟಂಟ್ ಸೌಲಭ್ಯವನ್ನು ಪಡೆದಿದ್ದು, ವಿವಿಧ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ಬೆಂಬಲವನ್ನು ಸಹ ಪಡೆದುಕೊಂಡಿದೆ.

ಶಿಯೋಮಿಯ ಈ ಹೊಸ ಸ್ಮಾರ್ಟ್ ಟಿವಿಯು 3840 x 2160 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದ್ದು, 43 ಇಂಚಿನ ವಿಶಾಲ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 4K UHD ಸಪೋರ್ಟ್ ಹೊಂದಿದ್ದು, ಉತ್ತಮ ಪ್ರಖರತೆ ಕಾಣಿಸಲಿದೆ. ಹಾಗೆಯೇ ಡಾಲ್ಬಿ ಪ್ಲಸ್, ಹಾಗೂ ಡಿಟಿಎಸ್ ಹೆಚ್‌ಡಿ ಆಡಿಯೊ ಸೌಲಭ್ಯವನ್ನು ಪಡೆದಿದೆ. ಈ ಸ್ಮಾರ್ಟ್ ಟಿವಿಯು 20W ಸಾಮರ್ಥ್ಯದ ಸ್ವೀಕರ್‌ಗಳನ್ನು ಒಳಗೊಂಡಿದೆ.

ಹಾಗೆಯೇ ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್ 9 ಪೈ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಗೂಗಲ್ ಪ್ಲೇ ಸೌಲಭ್ಯವನ್ನು ಪಡೆದಿದ್ದು, ಪಾತ್‌ವಾಲ್ UI ಆಯ್ಕೆ ಇದೆ. ಬಿಲ್ಟ್-ಇನ್ ಕ್ರೋಮ್‌ಕಾಸ್ಟ್ ಸೌಲಬ್ಯವನ್ನು ಒಳಗೊಂಡಿದೆ. ಜೊತೆಗೆ ಪ್ಲೇ ಮೂವೀಸ್, ಗೂಗಲ್ ಅಸಿಸ್ಟಂಟ್, ಫೈಲ್ ಮ್ಯಾನೇಜರ್, ಮೀಡಿಯಾ ಪ್ಲೇಯರ್, ಟಿವಿ ಮ್ಯಾನೇಜರ್, ಟಿವಿ ಗೈಡ್ ಆಪ್, ಲೈವ್ ಟಿವಿ ಆಪ್ ಸೇರಿದಂತೆ ಇತ್ತೀಚಿನ ಅಗತ್ಯ ಕನೆಕ್ಟಿವಿಟಿ ಸೌಲಭ್ಯಗಳನ್ನು ಸಹ ಒಳಗೊಂಡಿದೆ.

ಇನ್ನು ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್ ಟಿವಿ ಬೆಂಬಲ ಹೊಂದಿದೆ. ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೊ, ಯೂಟ್ಯೂಬ್ ಮತ್ತು ಇನ್ನಿತರೆ ಕಂಟೆಂಟ್ ಆಪ್‌ಗಳ ಜೊತೆಗೆ ಸುಮಾರು 7,00,000 ಅಧಿಕ ಗಂಟೆಗಳ ಕಂಟೆಂಟ್ ಸೌಲಭ್ಯವನ್ನು ಒಳಗೊಂಡಿದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಈ ಟಿವಿಯ ಆರಂಭಿಕ ಬೆಲೆಯು 24,999ರೂ. ಆಗಿದೆ. HSBC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಹಾಗೂ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಬಳಸಿ ಟಿವಿ ಖರೀದಿಸಿದರೇ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್ ದೊರೆಯಲಿದೆ. ಹಾಗೆಯೇ ಆಕರ್ಷಕ EMI ಆಯ್ಕೆಗಳು ಲಭ್ಯವಾಗಲಿವೆ.


Click it and Unblock the Notifications








