Subscribe to Gizbot

ಶಿಯೋಮಿ ನಂ.1 ಮಿ ಫ್ಯಾನ್ ಸೇಲ್: ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ

Written By: Lekhaka

ಹೊಸ ವರ್ಷದ ಅಂಗವಾಗಿ ಶಿಯೋಮಿ ನಂ.1 ಮಿ ಫ್ಯಾನ್ ಸೇಲ್ ಆಯೋಜನೆ ಮಾಡಿದ್ದು, ಆದರೆ ಈ ಬಾರಿ ಆನ್ ಲೈನ್ ಮತ್ತು ತನ್ನ ಮಿ ಸ್ಟೋರ್ ಮಳಿಗೆಗಳಲ್ಲಿ ಶಿಯೋಮಿ ನಂ.1 ಮಿ ಫ್ಯಾನ್ ಸೇಲ್ ಆಯೋಜನೆ ಮಾಡಿದ್ದು ಈ ಮೂಲಕ ದೇಶದ ವಿವಿಧ ಭಾಗದಲ್ಲಿರುವ ಮೀ ಸ್ಟೋರ್ ಗಳಲ್ಲಿ ಗ್ರಾಹಕರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಬಹುದಾಗಿದೆ.

ಶಿಯೋಮಿ ನಂ.1 ಮಿ ಫ್ಯಾನ್ ಸೇಲ್: ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ

ಈ ಸೇಲ್ ಇದೇ ಡಿಸೆಂಬರ್ 23ರಿಂದ ಆರಂಭವಾಗಿದ್ದು, ಜನವರಿ 1ರ ವರೆಗೂ ನಡೆಯಲಿದೆ ಎನ್ನಲಾಗಿದೆ. ಗ್ರಾಹಕರು ಮಿ ಸ್ಟೋರ್ ಮತ್ತು ಮಿ.ಕಾಮ್ ಎರಡರಲ್ಲಿಯೂ ಈ ಸೇಲ್ ನ ಲಾಭವನ್ನು ಪಡೆಯಬಹುದಾಗಿದೆ. ಈಗಾಗಲೇ ದೇಶದ ಆರು ನಗರಗಳಲ್ಲಿ ಮಿ ಸ್ಟೋರ್ ಗಳು ಕಾರ್ಯಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ.

ಈ ಸೇಲ್ ನಲ್ಲಿ ಮಿ ಮಾಕ್ಸ್ 2, Mi A1, ರೆಡ್ ಮಿ ನೋಟ್ 4, ರೆಡ್ ಮಿ 4, ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ರಿಯಾಯತಿಯನ್ನು ಕಾಣಬಹುದಾಗಿದೆ. ಇವುಗಳ ಮೇಲೆ ರೂ. 3000ದ ವರೆಗೂ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಶಿಯೋಮಿ ಮಿ ಮಿಕ್ಸ್ 2 ಸ್ಮಾರ್ಟ್ ಫೋನ್ ರೂ. 32,999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

ಮೊಬೈಲ್ ಬಳಕೆ ನಿಯಂ‌ತ್ರಿಸಿಕೊಳ್ಳಬೇಕೆ?..ಹೀಗೆ ಮಾಡಿ ನೋಡಿ!!

Mi A1 ಸ್ಮಾರ್ಟ್ ಫೋನ್ ರೂ. 12,999ಕ್ಕೆ ದೊರೆಯುತ್ತಿದ್ದು, ಇದಲ್ಲದೇ ಮಿ ಮಾಕ್ಸ್ 2 ಸ್ಮಾರ್ಟ್ ಫೋನ್ 12,999ಕ್ಕೆ ಲಭ್ಯವಿದೆ. ಇದಲ್ಲದೇ ರೆಡ್ ಮಿ ನೋಟ್ 4 ಸ್ಮಾರ್ಟ್ ಫೋನ್ 4GB RAM/64GB ಸ್ಮಾರ್ಟ್ ಫೋನ್ ರೂ. 10,999ಕ್ಕೆ ದೊರೆಯುತ್ತಿದೆ. ಅಲ್ಲದೇ ರೆಡ್ ಮಿ 4 ಸ್ಮಾರ್ಟ್ ಫೋನಿನ ಮೇಲೆ ರೂ. 500 ಕಡಿತವನ್ನು ಮಾಡಲಾಗಿದೆ.

ಇದಲ್ಲದೇ ಶಿಯೋಮಿಯ ಎಲ್ಲಾ ಉತ್ಪನ್ನಗಳ ಮೇಲೆಯೂ ಬೆಲೆ ಕಡಿತವನ್ನು ಕಾಣಬಹುದಾಗಿದ್ದು, ಗ್ರಾಹಕರಿಗೆ ಈ ಖರೀದಿಯ ಸಂದರ್ಭಧಲ್ಲಿ ಕೂಪನ್ ವೊಂದನ್ನು ನೀಡಲಾಗುವುದು. ಅದರಲ್ಲಿ ಅದೃಷ್ಠವಂತರಿಗೆ ವಿಶೇಷ ಕೊಡುಗೆಗಳನ್ನು ಶಿಯೋಮಿ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಗ್ರಾಹಕರು ಈ ಸೇಲ್ ಗಾಗಿ ಕಾಯುತ್ತಿದ್ದಾರೆ.

English summary
Xiaomi No 1 Mi Fan Sale is now live on all 15 Mi Home stores in 6 cities across the country.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot