ತನ್ನ ಹೊಸ ದಾಳದೊಂದಿಗೆ ಶ್ಯೋಮಿ ಆಡಲಿದೆ ಹೊಸ ಆಟ
ಭಾರತದ ಸ್ಟೋರ್‌ಗಳಲ್ಲಿ ಶ್ಯೋಮಿ ಅತಿ ಶೀಘ್ರದಲ್ಲೇ ಬರಲಿದೆ. ತನ್ನ ಎಮ್ಐ 4 (16ಜಿಬಿ/64ಜಿಬಿ) ಹಾಗೂ ರೆಡ್ಮೀ ನೋಟ್ 4 ಜಿಯನ್ನು ಹೊಸ ದೆಹಲಿಯ ಮೊಬೈಲ್ ಸ್ಟೋರ್‌ಗಳಲ್ಲಿ ಮಾರಾಟ ಮಾಡುವುದಕ್ಕೆ ಕಂಪೆನಿ ಆರಂಭಿಸಿದೆ. ದೇಶಾದ್ಯಂತ ಸುಮಾರು 300 ಮಳಿಗೆಗಳನ್ನು ಆವರಿಸುವ ಇರಾದೆ ಕಂಪೆನಿಗಿದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ಶ್ಯೋಮಿ ಎಮ್ಐ ನೋಟ್ ಯಶಸ್ಸಿನ ಯಶೋಗಾಥೆ
ಕಂಪೆನಿ ಘೋಷಿಸಿದ ಬೆಲೆಗಳಲ್ಲೇ ಈ ಫೋನ್‌ಗಳು ಮಾರಾಟ ಮಳಿಗೆಗಳಲ್ಲಿ ದೊರೆಯುತ್ತಿದೆ. ಫ್ಲಿಪ್‌ಕಾರ್ಟ್ ಜೊತೆಗಿನ ತನ್ನ ಒಪ್ಪಂದವನ್ನು ಕಂಪೆನಿ ಮುಂದುವರಿಸುತ್ತಿದೆ.ದೇಶದಲ್ಲಿ ಶ್ಯೋಮಿಗಿರುವ ಬೇಡಿಕೆ ನೋಡುವಾಗ ತನ್ನ ಹೆಚ್ಚು ಚರ್ಚಿತವಾದ ಫ್ಲ್ಯಾಶ್‌ಸೇಲ್ ಅನ್ನು ಪುನಃ ಪ್ರಾರಂಭಿಸುವಂತೆ ಕಂಡುಬರುತ್ತಿದೆ.

ತನ್ನ ಎಮ್ಐ ಟ್ಯಾಬ್ಲೆಟ್, ಎಮ್ಐ 4 ಮತ್ತು ರೆಡ್ಮೀ ನೋಟ್ 4ಜಿ ಸ್ಮಾರ್ಟ್‌ಫೋನ್‌ಗಳಿಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಮುಕ್ತ ಮಾರಾಟವನ್ನು ಕಂಪೆನಿ ಆಯ್ಕೆಮಾಡಿಕೊಂಡಿತ್ತು. ಇದೇ ರೀತಿಯಲ್ಲೇ ರೆಡ್ಮೀ 2 ಸ್ಮಾರ್ಟ್‌ಫೋನ್ ಅನ್ನು ಶ್ಯೋಮಿ ಫ್ಲಿಪ್‌ಕಾರ್ಟ್‌ನಲ್ಲಿ ಮುಕ್ತ ಮಾರಾಟಕ್ಕಾಗಿ ತೊಡಗಿಸಲಿದೆ.


Click it and Unblock the Notifications








