ಶ್ಯೋಮಿ ಎಮ್ಐ ನೋಟ್ ಯಶಸ್ಸಿನ ಯಶೋಗಾಥೆ

By Shwetha
|

ಶ್ಯೋಮಿ ಫ್ಲ್ಯಾಗ್‌ಶಿಪ್‌ನ ಎಮ್ಐ ನೋಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಫೋನ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಶ್ಯೋಮಿ ಹೊಸ ಅಲೆಯನ್ನೇ ಹುಟ್ಟುಹಾಕಿದ್ದು ಅಂತಹ ಅದ್ಭುತ ಇದರಲ್ಲಿ ಏನಿದೆ ಎಂಬುದೇ ಇಂದಿನ ಲೇಖನದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಅಂಶವಾಗಿದೆ. [ವಾಟ್ಸಾಪ್ ಹೊಂದಿರುವ ಕಡಿಮೆ ದರದ ಕಿಟ್‌ಕ್ಯಾಟ್ ಫೋನ್ಸ್]

ಚೀನಾದ ಆಪಲ್ ಎಂದೇ ಬಿರುದಾಂಕಿತನಾಗಿರುವ ಶ್ಯೋಮಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಇನ್ನು ಎಮ್ಐ ನೋಟ್ ಕೂಡ ತನ್ನ ಅಸದಳ ವಿನ್ಯಾಸ ವೇಗದ RAM ಮತ್ತು ಹೆಚ್ಚುವಂತಿ ಸಂಗ್ರಹಣಾ ಸಾಮರ್ಥ್ಯ ಅದ್ಭುತ ಕ್ಯಾಮೆರಾ ಅಂಶಗಳಿಂದ ಮನಸೆಳೆಯುವಂತಿದೆ. ಎಮ್ಐ ನೋಟ್ ಕುರಿತ ಇನ್ನಷ್ಟು ಮಾಹಿತಿ ಕೆಳಗಿನ ಸ್ಲೈಡರ್‌ಗಳಲ್ಲಿ [ಭಾರತದಲ್ಲಿ ಗ್ಯಾಲಕ್ಸಿ ಎಸ್6 ಲಾಂಚ್‌ನೊಂದಿಗೆ ಸ್ಯಾಮ್‌ಸಂಗ್ ಭರ್ಜರಿ ಆಟ]

ಎಮ್ಐ ನೋಟ್: ವಿನ್ಯಾಸ

ಎಮ್ಐ ನೋಟ್: ವಿನ್ಯಾಸ

ಚೀನಾದ ಸ್ಮಾರ್ಟ್‌ಫೋನ್ ಆಗಿರುವ ಶ್ಯೋಮಿ ಎಮ್ಐ ನೋಟ್ ಅಮೇಜಿಂಗ್ ನೋಟದಲ್ಲಿ ಮನವನ್ನು ಕದಿಯುವಂತಿದೆ. ಅಲ್ಯುಮಿನಿಯಮ್ ಮತ್ತು ಗ್ಲಾಸ್ ವಿನ್ಯಾಸವನ್ನು ಈ ಡಿವೈಸ್ ಪಡೆದುಕೊಂಡಿದೆ.

ಎಮ್ಐ ನೋಟ್: ದೊಡ್ಡದಾದ ಪರದೆ

ಎಮ್ಐ ನೋಟ್: ದೊಡ್ಡದಾದ ಪರದೆ

5.7 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಎಮ್ಐ ನೋಟ್ ಪಡೆದುಕೊಂಡಿದ್ದು ಆಕರ್ಷಕವಾಗಿದೆ.

ಎಮ್ಐ ನೋಟ್: ಹೆಚ್ಚು ರೆಸಲ್ಯೂಶನ್ ಫೋಟೋ ಮತ್ತು ವೀಡಿಯೊ

ಎಮ್ಐ ನೋಟ್: ಹೆಚ್ಚು ರೆಸಲ್ಯೂಶನ್ ಫೋಟೋ ಮತ್ತು ವೀಡಿಯೊ

ಫೋನ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. 4 ಕೆ ರೆಸಲ್ಯೂಶನ್ ವೀಡಿಯೊವನ್ನು ಡಿವೈಸ್ ಹೊಂದಿದೆ.

ಎಮ್ಐ ನೋಟ್: ಹಾರ್ಡ್ ಬಟನ್‌ಗಳು

ಎಮ್ಐ ನೋಟ್: ಹಾರ್ಡ್ ಬಟನ್‌ಗಳು

ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಅನ್ನು ಡಿವೈಸ್ ಒಳಗೊಂಡಿದ್ದು ಹಾರ್ಡ್ ಬಟನ್‌ಗಳನ್ನು ಪಡೆದುಕೊಂಡಿದೆ.

ಎಮ್ಐ ನೋಟ್: ಹೌ ಓಲ್ಡ್ ಆರ್ ಯು

ಎಮ್ಐ ನೋಟ್: ಹೌ ಓಲ್ಡ್ ಆರ್ ಯು

ಫೋನ್ ಕ್ಯಾಮೆರಾವನ್ನು ನಿಮ್ಮ ಮುಖದ ಸಮೀಪ ಹಿಡಿದಾಗ ಇದು ನಿಮ್ಮ ವಯಸ್ಸನ್ನು ತಿಳಿಸುತ್ತದೆ.

ಎಮ್ಐ ನೋಟ್: ಇನ್ನಷ್ಟು ಆಕರ್ಷಣೆ

ಎಮ್ಐ ನೋಟ್: ಇನ್ನಷ್ಟು ಆಕರ್ಷಣೆ

ಫೋನ್‌ನ ಮುಂಭಾಗ ಕ್ಯಾಮೆರಾ 4 ಮೆಗಾಪಿಕ್ಸೆಲ್ ಅನ್ನು ಹೊಂದಿದ್ದು ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ದುಪ್ಪಟ್ಟು ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಹೆಚ್ಚು ರೆಸಲ್ಯೂಶನ್ ಸೆಲ್ಫಿಗಳನ್ನು ತೆಗೆಯಲು ಇದು ಅತ್ಯುತ್ತಮವಾಗಿದೆ.

ಎಮ್ಐ ನೋಟ್: ಯುಎಸ್‌ಬಿ ಅಳವಡಿಕೆ

ಎಮ್ಐ ನೋಟ್: ಯುಎಸ್‌ಬಿ ಅಳವಡಿಕೆ

ಫೋನ್‌ನ ಯಾವ ಭಾಗದಲ್ಲಿ ಯುಎಸ್‌ಬಿ ಇದೆ ಎಂಬುದು ನಿಮಗೆ ಗೊಂದಲವನ್ನುಂಟು ಮಾಡಬಹುದು. ಶ್ಯೋಮಿಯು ಮೈಕ್ರೊ ಯುಎಸ್‌ಬಿಯನ್ನು ಬಳಸುತ್ತಿದ್ದು ಯಾವ ಭಾಗದಲ್ಲಿ ಇದು ಬರುತ್ತದೆ ಎಂಬ ಗೊಂದಲವನ್ನುಂಟು ಮಾಡುವಂತಿದೆ.

Best Mobiles in India

English summary
This article talking about Xiaomi's flagship Mi Note smartphone. The hottest Chinese company on the planet eating Samsung's lunch and gunning for Apple.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X