ಸೇಲ್ ಆರಂಭವಾದ 10 ನಿಮಿಷದಲ್ಲಿ Redmi 3S, Redmi 3S Prime ಸೋಲ್ಡ್ ಔಟ್

|

ಭಾರತೀಯ ಮೂಲದ ಈ ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಮತ್ತೆ ಮಾರುಕಟ್ಟೆಯಲ್ಲಿ ಯಶಸ್ಸಿಯಾಗಿದ್ದ ಶ್ಯೋಮಿ ಕಂಪನಿಯ ರೆಡ್‌ಮಿ 3 ಎಸ್ ಮತ್ತು ರೆಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್‌ಪೋನ್‌ಗಳ ಸೇಲ್ ಅನ್ನು ಇಂದು ಆರಂಭಿಸಿತ್ತು. ಆದರೆ ಸೇಲ್ ಆರಂಭವಾದ 10 ನಿಮಿಷದಲ್ಲಿ ಎರಡು ಪೋನ್ ಗಳು ಸೋಲ್ಡ್ ಔಟ್ ಆಗಿದೆ.

10 ನಿಮಿಷದಲ್ಲಿ Redmi 3S, Redmi 3S Prime ಸೋಲ್ಡ್ ಔಟ್

ಅಸಸ್ ನಿಂದ 6,999ಕ್ಕೆ 128 ಜಿಬಿ ಸ್ಮಾರ್ಟ್‌ಪೋನ್..!

ಈ ಹಿಂದೆಯೇ ಭಾರತೀಯ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿದ್ದ ರೆಡ್‌ಮಿ 3ಎಸ್ ಮತ್ತು ರೆಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್‌ಪೋನ್‌ಗಳು ಈ ಹಿಂದೆ ಇದೇ ಫ್ಲಿಪ್‌ಕಾರ್ಟ್ನಲ್ಲಿ ಸೇಲ್ ಇಟ್ಟಿದ್ದ ಸಂದರ್ಭದಲ್ಲಿಯೂ ಗ್ರಾಹಕರು ಮುಗಿಬಿದ್ದು ಖರೀದಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಫ್ಲಿಪ್‌ಕಾರ್ಟ್ ಮತ್ತೆ ಸೇಲ್ ಆರಂಭಿಸಿತ್ತು, ಆದರೆ ಆಚ್ಚರಿ ರೀತಿಯಲ್ಲಿ ಕ್ಷಣ ಮಾತ್ರದಲ್ಲಿ ಸೇಲಿಗಿಟ್ಟಿದ ಎಲ್ಲ ಪೋನುಗಳು ಮಾರಾಟವಾಗಿದೆ.

ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದ್ದ ಫ್ಲಾಷ್ ಸೇಲ್:

ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದ್ದ ಫ್ಲಾಷ್ ಸೇಲ್:

ಇಂದು 12 ಗಂಟೆಗೆ ಫ್ಲಿಪ್‌ಕಾರ್ಟ್ನಲ್ಲಿ ಆರಂಭವಾದ ರೆಡ್‌ಮಿ 3ಎಸ್ ಮತ್ತು ರೆಡ್‌ಮಿ 3ಎಸ್ ಪ್ರೈಮ್ ಫ್ಲಾಷ್ ಸೇಲ್ ನಲ್ಲಿ ಕೆಲವೇ ಕ್ಷಣಗಳಲ್ಲಿ ಹಾಟ್ ಕೇಕ್ ನಂತೆ ಸೇಲ್ ಆಗಿವೆ. ಹಿಂದಿನಂತೆ ಈ ಬಾರಿಯ ಸೇಲ್ ಗೆ ಯಾವುದೇ ನೋಂದಣಿಯನ್ನು ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ ಹಾಗಾಗಿ ಗ್ರಾಹಕರು ಒಮ್ಮೆಗೆ ಮುಗಿಬಿದ್ದು ಈ ಪೋನ್ ಗಳನ್ನು ಖರೀದಿಸಿದ್ದಾರೆ.

ಮೂರು ಬಣ್ಣದ ಪೋನ್ ಗಳ ಮಾರಾಟ:

ಮೂರು ಬಣ್ಣದ ಪೋನ್ ಗಳ ಮಾರಾಟ:

ಮೂರು ಬಣ್ಣಗಳಲ್ಲಿ ಈ ಪೋನ್ ಗಳನ್ನು ಫ್ಲಿಪ್‌ಕಾರ್ಟ್ ಸೇಲಿಗೆ ಇಟ್ಟಿತ್ತು ಚಿನ್ನ, ಬೆಳ್ಳಿ ಮತ್ತು ಬೂದು ಬಣ್ಣಗಳಲ್ಲಿ ಎರಡೂ ಫೋನ್ ಗಳ ಮಾರಾಟ ಆರಂಭಿಸಿತ್ತು. 3GB RAM ಮತ್ತು 32GB ಸಾಮಾರ್ಥ್ಯದ ರೆಡ್‌ಮಿ 3ಎಸ್ ಸ್ಮಾರ್ಟ್‌ಪೋನಿನ ಬೆಲೆಯನ್ನು ರೂ 8.999 ನಿಗಧಿ ಮಾಡಿತ್ತು. ಹಾಗಾಗೇ 2GB RAM ಮತ್ತು 16GB ಸಾಮಾರ್ಥ್ಯದ ರೆಡ್‌ಮಿ 3ಎಸ್ ನ ಬೆಲೆಯನ್ನು 6,999 ರೂಗಳಿಗೆ ನಿಗಧಿ ಮಾಡಿತ್ತು.

ರೆಡ್‌ಮಿ 3ಎಸ್ ಮತ್ತು ರೆಡ್‌ಮಿ 3ಎಸ್ ಪ್ರೈಮ್ ವಿಶೇಷತೆಗಳು:

ರೆಡ್‌ಮಿ 3ಎಸ್ ಮತ್ತು ರೆಡ್‌ಮಿ 3ಎಸ್ ಪ್ರೈಮ್ ವಿಶೇಷತೆಗಳು:

ಈ ಎರಡು ಪೋನ್ ಗಳು 5 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, ಲೋಹದ ದೇಹದ, 1.4GHz ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತವೆ, 128GB ಗೆ ಮೆಮೊರಿ ವಿಸ್ತರಿಸಲು ಈ ಪೋನಿನಲ್ಲಿ ಅವಕಾಶವಿದೆ. 4100mAh ಬ್ಯಾಟರಿ ಮತ್ತು ಹಿಂಭಾಗದ 13MP ಕ್ಯಾಮೆರಾ ಈ ಎರಡು ಪೋನ್‌ನಿನಲ್ಲಿದೆ.

10 ನಿಮಿಷಕ್ಕೆ ಸೋಲ್ಡ್ ಔಟ್:

10 ನಿಮಿಷಕ್ಕೆ ಸೋಲ್ಡ್ ಔಟ್:

ಹೀಗಾಗಿ ಕಡಿಮೆ ದರದಲ್ಲಿ ಪೋನ್ ಮಾರಾಟಕ್ಕೆ ಇಟ್ಟ ಹಿನ್ನಲೆಯಲ್ಲಿ 10 ನಿಮಿಷದಲ್ಲಿ ಎಲ್ಲಾ ಪೋನುಗಳು ಮಾರಾಟವಾಗಿವೆ. ಸೇಲ್ ಆರಂಭವಾದ 30 ನಿಮಿಷ ಬಿಟ್ಟು ಫ್ಲಿಪ್‌ಕಾರ್ಟ್ ನೋಡಿದವರಿಗೆ ಸೋಲ್ಡ್ ಔಟ್ ಎಂಬ ಬೋರ್ಡು ತೂಗಿಹಾಕಲಾಗಿತ್ತು.

Best Mobiles in India

Read more about:
English summary
E-commerce firm Flipkart is bringing back the successful Xiaomi Redmi 3S and Redmi 3S Prime smartphones on sale and has announced. kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X