Subscribe to Gizbot

ಶಿಯೋಮಿ ರೆಡ್ಮಿ 4A ನಲ್ಲಿದೆ 3GB RAM/32GB ಸ್ಟೋರೇಜ್, ಬೆಲೆ ರೂ 6999 ಮಾತ್ರ!

Posted By: Tejaswini P G

ಭಾರತಕ್ಕೆ ಸದ್ದಿಲ್ಲದೆ ಬಂದಿದೆ ಆರಂಭಿಕ ಬೆಲೆಯ ಹೊಸ ಶಿಯೋಮಿ ಸ್ಮಾರ್ಟ್ಫೋನ್. ಅದುವೇ ಶಿಯೋಮಿ ರೆಡ್ಮಿ 4A! 3GB RAM ಮತ್ತು 32GB ಸ್ಟೋರೇಜ್ ಹೊಂದಿರುವ ರೆಡ್ಮಿ 4A ನ ಬೆಲೆ ಕೇವಲ ರೂ 6,999 ಮಾತ್ರ!

ಶಿಯೋಮಿ ರೆಡ್ಮಿ 4A ನಲ್ಲಿದೆ 3GB RAM/32GB ಸ್ಟೋರೇಜ್, ಬೆಲೆ ರೂ 6999 ಮಾತ್ರ!

ಶಿಯೋಮಿ ರೆಡ್ಮಿ 4A ಕಳೆದ ಮಾರ್ಚ್ ನಲ್ಲೇ ರೂ 5,999/- ಕ್ಕೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಆದರೆ ಇದುವರೆಗೆ ರೆಡ್ಮಿ 4A 2GB RAM ಮತ್ತು 16GB ಸ್ಟೋರೇಜ್ ಇರುವ ಒಂದೇ ಅವೃತ್ತಿಯಲ್ಲಿ ಲಭ್ಯವಾಗಿತ್ತು.ಆದರೆ ಈಗ ಶಿಯೋಮಿಯ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಅವರ ಟ್ವೀಟ್ ಒಂದರ ಅನುಸಾರ ರೆಡ್ಮಿ 4A ಯ ಹೊಸ ಆವೃತ್ತಿ ಈಗ ಭಾರತಕ್ಕೆ ಬಂದಿದೆ. 3GB RAM ಮತ್ತು 32GB ಸ್ಟೋರೇಜ್ ಇರುವ ಈ ಹೊಸ ಆವೃತ್ತಿಯ ಬೆಲೆ ರೂ 6,999/-. ಇದು mi.com,ಅಮೇಜಾನ್ ಇಂಡಿಯಾ,ಫ್ಲಿಪ್ಕಾರ್ಟ್, ಟಾಟಾ ಕ್ಲಿಕ್ ಮತ್ತು ಪೇಟಿಯಂ ನಲ್ಲಿ ದೊರೆಯಲಿದೆ.

RAM ಮತ್ತು ಸ್ಟೋರೇಜ್ ಸಾಮರ್ಥ್ಯದಲ್ಲಿ ರೆಡ್ಮಿ 4A ನ ಮೂಲ ಆವೃತ್ತಿಗಿಂತ ಹೊಸ ಆವೃತ್ತಿ ಭಿನ್ನವಗಿದ್ದರೂ ಮಿಕ್ಕೆಲ್ಲಾ ಫೀಚರ್ಗಳು ಮೂಲ ಆವೃತ್ತಿಯಂತೆಯೇ ಇದೆ.ರೆಡ್ಮಿ 4A ಪಾಲಿಕಾರ್ಬೊನೇಟ್ ಬಾಡಿ ಮತ್ತು ಡ್ಯುಯಲ್ ಸಿಮ್ ಸ್ಲಾಟ್ ಹೊಂದಿದೆ. ಆಂಡ್ರಾಯ್ಡ್ 6.0 ಮಾರ್ಶ್ಮೆಲ್ಲೋ ಆಧಾರಿತ MIUI 8 ಮೇಲೆ ಓಡುವ ರೆಡ್ಮಿ 4A, 5 ಇಂಚ್ HD 720p ಡಿಸ್ಪ್ಲೇ ಹೊಂದಿದೆ. ಅಲ್ಲದೆ 1.4GHz ಕ್ವಾಡ್-ಕೋರ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 425 SoC ಮತ್ತು ಎಡ್ರೀನೋ 308 ಗ್ರಾಫಿಕ್ಸ್ ಯುನಿಟ್ ಕೂಡ ಇದೆ.

21 ವರ್ಷದ ಈ ಹುಡುಗನಿಗಾಗಿ ಕಿತ್ತಾಡುತ್ತಿರುವ ಗೂಗಲ್ -ಫೇಸ್‌ಬುಕ್..!

ಇನ್ನು ಇದರ ಇಮೇಜಿಂಗ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ರೆಡ್ಮಿ 4A ನಲ್ಲಿದೆ 13MP ಪ್ರೈಮರಿ ಕ್ಯಾಮೆರಾ PDAF, f/2.2ಅಪರ್ಚರ್,LED ಫ್ಲ್ಯಾಶ್ ಮತ್ತು 5P ಲೆನ್ಸ್ ಸಹಿತ. ಇನ್ನು ಇದರ ಸೆಲ್ಫೀ ಕ್ಯಾಮೆರಾ 5MP ರೆಸೊಲ್ಯೂಶನ್ ಇದ್ದು f/2.2ಅಪರ್ಚರ್ ಹೊಂದಿದೆ. ರೆಡ್ಮಿ 4A ಹೈಬ್ರಿಡ್ ಸಿಮ್ ಸ್ಲಾಟ್ ಹೊಂದಿದ್ದು ಮೈಕ್ರೋSD ಕಾರ್ಡ್ ಬಳಸಿ ಸ್ಟೋರೇಜ್ ಅನ್ನು 128GB ವರೆಗೆ ವಿಸ್ತರಿಸಬಹುದು.

ರೆಡ್ಮಿ 4A 4G VoLTE,ವೈಫೈ,ಬ್ಲೂಟೂತ್ 4.1,GPS ಮುಂತಾದ ಕನೆಕ್ಟಿವಿಟಿ ಫೀಚರ್ಗಳನ್ನು ಹೊಂದಿದ್ದು ಡ್ಯುಯಲ್ ಸಿಮ್ ಸಪೋರ್ಟ್ ಕೂಡ ಇದೆ.ರೆಡ್ಮಿ 4A 3120mAH ಬ್ಯಾಟರಿ ಹೊಂದಿದ್ದು ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ಇದೆ.

ಶಿಯೋಮಿ ಈಗಾಗಲೇ ಭಾರತದಲ್ಲಿ ಎರಡನೆಯ ದೊಡ್ಡ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿದೆ. ಶಿಯೋಮಿಯ ರೆಡ್ಮಿ ನೋಟ್ 4 ಮತ್ತು ರೆಡ್ಮಿ 4A ಈ ವರ್ಷದ ಪೂರ್ವಾರ್ಧದಲ್ಲಿ ಅತಿ ಹೆಚ್ಚು ಮಾರಾಟವಾದ ಆರಂಭಿಕ ಶ್ರೇಣಿಯ ಸ್ಮಾರ್ಟ್ಫೋನ್ಗಳೆನಿಸಿದೆ.ಹೀಗಿರುವಾಗ ಈಗ ಬಂದಿರುವ ರೆಡ್ಮಿ 4A ನ ಹೊಸ ಆವೃತ್ತಿ ಬಜೆಟ್ ಫೋನ್ಗಳ ಮಾರಾಟದಲ್ಲಿ ಹೊಸ ಅಲೆ ಮೂಡಿಸುವುದರಲ್ಲಿ ಸಂಶಯವಿಲ್ಲ!

English summary
Xiaomi Redmi 4A with 3GB RAM and 32GB storage capacity has been launched in India at a price of Rs. 6,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot