ಜಿಯೋ-ಶಿಯೋಮಿ ಆಫರ್: ರೆಡ್‌ಮಿ ಗೋ​ ಮೇಲೆ ಕ್ಯಾಶ್​ಬ್ಯಾಕ್ ಮತ್ತು​ 100GB ಉಚಿತ ಡೇಟಾ!

|

ಇದೇ ಏಪ್ರಿಲ್ 4 ರಂದು ಶಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಗೋ ಮಾದರಿಯ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಮತ್ತೊಮ್ಮೆ ಫ್ಲಾಶ್‌ಸೇಲ್ ಮಾರಾಟಕ್ಕೆ ಬರುತ್ತಿದೆ. ಆದರೆ, ಈ ಬಾರಿಯ ಸಹಿಸುದ್ದಿ ಎಂದರೆ, ಭಾರತದ ನಂಬರ್ 1 ಡೇಟಾ ನೆಟ್​ವರ್ಕ್​ ಜಿಯೋ ಇದೀಗ ಶಿಯೋಮಿಯೊಂದಿಗೆ ಕೈ ಜೋಡಿಸಿದೆ. ಇದರ ಮೊದಲ ಕಾಣಿಕೆಯಾಗಿ ನೂತನ ರೆಡ್​ಮಿ ಗೋ ಸ್ಮಾರ್ಟ್​ಫೋನ್​ ಮೇಲೆ ಜಿಯೋ ಟೆಲಿಕಾಂ 2200 ರೂ.ಗಳ ಭಾರೀ ಡಿಸ್ಕೌಂಟ್ ರೀಚಾರ್ಜ್ ಪ್ಯಾಕ್​ ಅನ್ನು ಒದಗಿಸುತ್ತಿದೆ.

ಹೌದು, #ಅಪ್​ಕಿನಯಿದುನಿಯಾ ಆಫರ್​ ಅಡಿಯಲ್ಲಿ ಈ ರಿಯಾಯಿತಿ ಲಭ್ಯವಿದ್ದು, ನೀವು ಶೀಯೋಮಿ ರೆಡ್​ಮಿ ಗೋ ಮೊಬೈಲ್​ ಕೊಂಡುಕೊಂಡರೆ ನಿಮಗೆ 2200 ರೂ.ಗಳ ಕೂಪನ್​ ಸಿಗಲಿದೆ. ಅಷ್ಟೇ ಅಲ್ಲದೆ ಅದರೊಂದಿಗೆ 100GB ಡೇಟಾಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದನ್ನು ನೀವು ಜಿಯೋ ಆಪ್​ ಮೂಲಕ ರಿಜಾರ್ಚ್​ ಮಾಡಿಕೊಳ್ಳಬಹುದಾಗಿದೆ.50 ರೂ.ಗಳ 44 ಕೂಪನ್​ಗಳನ್ನು ನೀಡಲಾಗುತ್ತಿದ್ದು, ಇದನ್ನು 199 ರೂ. ಹಾಗೂ 299 ರೂ.ಗಳ ಆನ್​ಲೈನ್ ರಿಚಾರ್ಜ್​ ವೇಳೆ ಬಳಸಿಕೊಳ್ಳಬಹುದಾಗಿದೆ.

ಜಿಯೋ-ಶಿಯೋಮಿ ಆಫರ್: ರೆಡ್‌ಮಿ ಗೋ​ ಮೇಲೆ ಕ್ಯಾಶ್​ಬ್ಯಾಕ್ ಮತ್ತು​ 100GB ಡೇಟಾ!

ಪ್ರತಿ ಬಾರಿ ರಿಚಾರ್ಜ್ ಮಾಡಿಕೊಂಡರೂ 50 ರೂ.ಗಳ ಡಿಸ್ಕೌಂಟ್​ ಸಿಗಲಿದೆ. ಅಂದರೆ ನೀವು 199 ರೂ. ರಿಚಾರ್ಜ್ ಮಾಡುವಾಗ ಕೂಪನ್ ಸಂಖ್ಯೆಯನ್ನು ನಮೂದಿಸಿದರೆ 149 ರೂ.ಗಳ ಮಾತ್ರ ಪಾವತಿಸಿದರೆ ಸಾಕು. ಅದೇ ರೀತಿ ಮೊದಲ ಹತ್ತು ಬಾರಿಯ ರಿಚಾರ್ಜ್​ನೊಂದಿಗೆ 10GB ಯಂತೆ 100GB ಡೇಟಾ ಸಿಗಲಿದೆ. ಇನ್ನು 4,500 ರೂ.ಗಳಿಗೆ ಖರಿದಿಗೆ ಲಭ್ಯವಿರುವ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಕೂಡ ಗ್ರಾಹಕರ ಗಮನಸೆಳೆಸದಿದ್ದು, ಈ ಸ್ಮಾರ್ಟ್‌ಫೋನಿನ ಫೀಚರ್ಸ್ ಏನಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ ರೆಡ್‌ಮಿ ಗೋ?

ಹೇಗಿದೆ ರೆಡ್‌ಮಿ ಗೋ?

ಶಿಯೋಮಿಯ ಮೊದಲ ಆಂಡ್ರಾಯ್ಡ್ ಗೋ ಮಾದರಿಯ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಬೇಸಿಕ್ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಹೊಂದಿದೆ. ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ ನಿರೀಕ್ಷೆಯಂತೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯು ಇಲ್ಲ. ಇನ್ನು ಹಿಂಬಾಗದಲ್ಲಿ ಒಂದು ಕ್ಯಾಮೆರಾ ಹೊಂದಿರುವ ಪೋನ್ ಉತ್ತಮ ಬಾಡಿ ವಿನ್ಯಾಸವನ್ನು ಹೊಂದಿದೆ.

ರೆಡ್‌ಮಿ ಗೋ ಡಿಸ್‌ಪ್ಲೇ!

ರೆಡ್‌ಮಿ ಗೋ ಡಿಸ್‌ಪ್ಲೇ!

 • ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ 5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. 16:9 ಆಕಾರ ಅನುಪಾತದಲ್ಲಿ ಬಂದಿರುವ ಡಿಸ್‌ಪ್ಲೇ 1280 x 720 ಪಿಕ್ಸೆಲ್‌ಗಳ ಸಾಮರ್ಥ್ಯದ್ದಾಗಿದೆ. 380 ನಿಟ್ಸ್ ಬ್ರೈಟ್‌ನೆಸ್, 72 ಶೇಕಡಾ ಎನ್ ಟಿ ಎಸ್ ಸಿ ಕಲರ್ ಗ್ಯಾಮಟ್ ಮತ್ತು 1000: 1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿರುವ ಬಜೆಟ್ ಫೋನ್‌ಗಳ ಮಧ್ಯಮ ಡಿಸ್‌ಪ್ಲೇ ಇದಾಗಿದೆ.
 • ಪ್ರೊಸೆಸರ್ ಮತ್ತು RAM!

  ಪ್ರೊಸೆಸರ್ ಮತ್ತು RAM!

  ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ 1.4GHz ಕ್ವಾಲ್ಕಾಮ್ ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 425 ಪ್ರೊಸೆಸರ್ ಅನ್ನು ಹೊಂದಿದೆ.ಅಡ್ರಿನೊ 308 ಜಿಪಿಯು ಜೊತೆಗೂಡಿ ಬಂದಿರುವುದು ಸ್ವಲ್ಪ ವಿಶೇಷತೆ ಎನ್ನಬಹುದು. ಇನ್ನು 1GB RAM ಮತ್ತು 8GB ಆಂತರಿಕ ಸಂಗ್ರಹದೊಂದಿಗೆ ಬಿಡುಗಡೆಯಾಗಿರುವ ಫೋನ್ ಮೆಮೊರಿಯನ್ನು SD ಕಾರ್ಡ್ ಮೂಲಕ 128GB ವಿಸ್ತರಿಸುವ ಆಯ್ಕೆ ಇದೆ.

  ಕ್ಯಾಮೆರಾ ಹೇಗಿದೆ?

  ಕ್ಯಾಮೆರಾ ಹೇಗಿದೆ?

  ಎಫ್ / 2.0 ಅಪರ್ಚರ್, ಎಲ್ಇಡಿ ಫ್ಲ್ಯಾಶ್ ಮತ್ತು 1.12 ಎಮ್ಎಮ್ಪಿ ಪಿಕ್ಸೆಲ್ ಗಾತ್ರದೊಂದಿಗೆ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ ಹಾಗೂ ಮುಂದೆ ಎಫ್ / 2.2 ಅಪರ್ಚರ್ ಮತ್ತು 1.12 ಎಮ್ಎಮ್ ಪಿಕ್ಸೆಲ್ ಗಾತ್ರದ 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾಗಳನ್ನು ನೀಡಲಾಗಿದೆ. ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗುವ ಕ್ಯಾಮೆರಾಗಳ ವಿಶೇಷತೆಗಳು ಇದರಲ್ಲಿವೆ ಎನ್ನಬಹುದು.

  ಇತರೆ ಫೀಚರ್ಸ್?

  ಇತರೆ ಫೀಚರ್ಸ್?

  4G VoLTE, ಬ್ಲೂಟೂತ್ 4.1, ವೈಫೈ 802.11 ಬೌ / ಗ್ರಾಂ / ಎನ್, ಜಿಪಿಎಸ್, 3.5 ಎಂಎಂ ಆಡಿಯೋ ಜಾಕ್, ಮೈಕ್ರೋ ಯುಎಸ್ಬಿ 2.0 ಬೆಂಬಲ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ 3000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಆಂಡ್ರಾಯ್ಡ್ 8.1 (ಓರಿಯೊ ಗೋ ಆವೃತ್ತಿ) ಯಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಪೋನ್ ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿದೆ.

Most Read Articles
Best Mobiles in India

English summary
Xiaomi Redmi Go next sale scheduled for April 4: Everything you need to know. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X