Subscribe to Gizbot

ಶ್ಯೋಮಿ ಬಿಡುಗಡೆ ಮಾಡಿದೆ ಬಜೆಟ್ ಸ್ನೇಹಿ ಭರ್ಜರಿ ಫೋನ್

Written By:

ಶ್ಯೋಮಿ ಫೋನ್ ಮಾರುಕಟ್ಟೆಯಲ್ಲಿ ಉಂಟುಮಾಡಿರುವ ಹವಾ ನಿನ್ನೆ ಮೊನ್ನೆಯದಲ್ಲ. ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವುದರ ಮೂಲಕ ಬಳಕೆದಾರರನ್ನು ಆಕರ್ಷಿಸಿದ ಈ ಬ್ರ್ಯಾಂಡ್ ತನ್ನದೇ ಹೊಸ ಛಾಪನ್ನು ಮೂಡಿಸಿದ್ದು ಈಗ ಇತಿಹಾಸವಾಗಿದೆ. ಬಾನೆತ್ತರಕ್ಕೆ ಬೆಳೆದು ನಿಂತಿರುವ ಕಂಪೆನಿ ಬ್ರ್ಯಾಂಡ್ ಫೋನ್‌ಗಳಿಗೂ ಪೈಪೋಟಿಯನ್ನು ನೀಡುತ್ತಿದೆ.

ಆನ್‌ಲೈನ್‌ನಲ್ಲಿ ಫ್ಲ್ಯಾಶ್ ಸೇಲ್ ಅನ್ನು ಪ್ರಸ್ತುಪಡಿಸುವ ಮೂಲಕ ತನ್ನಾಟಕ್ಕೆ ಹೊಸ ತಿರುವನ್ನು ಉಂಟುಮಾಡಿದ ಕಂಪೆನಿ ಬಳಕೆದಾರರಿಗೆ ಅಚ್ಚುಮೆಚ್ಚಿನದ್ದಾಗಿ ಮಾರ್ಪಟ್ಟಿದೆ. ಈಗ ತನ್ನ ಸಾಧನೆಗೆ ಇನ್ನೊಂದು ಗರಿ ಎಂಬಂತೆ ರೆಡ್ಮೀ ನೋಟ್ 3 ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಚೀನಾದಲ್ಲಿ 4 ತಿಂಗಳುಗಳ ಹಿಂದೆಯೇ ಲಾಂಚ್ ಆಗಿದ್ದ ಫೋನ್ ಈಗ ಭಾರತಕ್ಕೆ ಕಾಲಿಟ್ಟಿದೆ. ಬನ್ನಿ ಫೋನ್ ಕುರಿತು ಇನ್ನಷ್ಟು ಪ್ರಮುಖಾಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂನಿಬಾಡಿ ವಿನ್ಯಾಸ

#1

ಶ್ಯೋಮಿ ರೆಡ್ಮೀ ನೋಟ್ 3 ಮೆಟಲ್ ಯೂನಿಬಾಡಿ ವಿನ್ಯಾಸದೊಂದಿಗೆ ಬಂದಿದ್ದು 5.5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 650 ಹೆಕ್ಸಾ ಕೋರ್ ಸಾಕ್ ಇದರಲ್ಲಿದ್ದು ಎರಡು ಕೋರ್ಟೆಕ್ಸ್ A72 ಕೋರ್ಸ್ 1.2GHz ಹಾಗೂ 1.8GHz ಇದರಲ್ಲಿದೆ.

ಫೋನ್‌ನ ಸ್ಟೋರೇಜ್

#2

ಫೋನ್‌ನ ಸ್ಟೋರೇಜ್ 2ಜಿಬಿ RAM ಮತ್ತು 16 ಜಿಬಿಯನ್ನು ಪಡೆದುಕೊಂಡಿದ್ದು 3ಜಿಬಿ RAM ನೊಂದಿಗೆ 32 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಅನ್ನು ಇದು ಒಳಗೊಂಡಿದೆ.

ಕ್ಯಾಮೆರಾ

#3

ರೆಡ್ಮೀ ಫ್ಯಾಬ್ಲೆಟ್ ಹಿಂಭಾಗದಲ್ಲಿ ಸುಧಾರಿತ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಡಿವೈಸ್ ಅಭಿವೃದ್ಧಿಪಡಿಸಿದೆ. 16 ಎಮ್‌ಪಿ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಅಂತೆಯೇ ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಆಂಡ್ರಾಯ್ಡ್ 5.1 ಲಾಲಿಪಪ್

#4

ಫೋನ್ ಆಂಡ್ರಾಯ್ಡ್ 5.1 ಲಾಲಿಪಪ್ ಓಎಸ್ ಆಧಾರಿತ MiUi 7 ಅನ್ನು ಪಡೆದುಕೊಂಡಿದೆ. ಡ್ಯುಯಲ್ ಸಿಮ್ ಫ್ಯಾಬ್ಲೆಟ್ 4,000mAH ಬ್ಯಾಟರಿಯೊಂದಿಗೆ ಬಂದಿದ್ದು ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನೂ ಇದು ಪಡೆದುಕೊಂಡಿದೆ.

ಬಣ್ಣ

#5

ಡಿವೈಸ್ ಡಾರ್ಕ್ ಗ್ರೇ, ಸಿಲ್ವರ್ ಮತ್ತು ಚಾಂಪ್‌ಗೇನ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ.

ಫೋನ್ ಬೆಲೆ

#6

ಫೋನ್ ಬೆಲೆ 16ಜಿಬಿ/2ಜಿಬಿ RAM ನದ್ದು 9,999 ಆಗಿದ್ದರೆ 32ಜಿಬಿ/3ಜಿಬಿ RAM ಬೆಲೆ ರೂ 11,999 ಆಗಿದೆ.

ಫ್ಲ್ಯಾಶ್ ಸೇಲ್‌

#7

ರೆಡ್ಮೀ ನೋಟ್ 3 ಯು ಮಾರ್ಚ್ 9, ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ Mi.com ಫ್ಲ್ಯಾಶ್ ಸೇಲ್‌ನಲ್ಲಿ ಲಭ್ಯವಾಗಲಿದೆ. ಅಂತೆಯೇ ಇತರ ಇ ಕಾಮರ್ಸ್ ಸೈಟ್‌ಗಳಾದ ಸ್ನ್ಯಾಪ್‌ಡೀಲ್, ಫ್ಲಿಪ್‌ಕಾರ್ಟ್ ಅಂತೆಯೇ ಆಫ್‌ಲೈನ್ ಮಳಿಗೆಗಳಲ್ಲೂ ಲಭ್ಯವಾಗಲಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ನೀವು ತಿಳಿದಿರಲೇಬೇಕಾದ ವಾಟ್ಸಾಪ್‌ನ ಹೊಸ 7 ಫೀಚರ್ಸ್
ವ್ಯಕ್ತಿಯ ಮರಣ ದಿನ ತಿಳಿಸುವ "ಆನ್‌ಲೈನ್‌ ಕ್ಯಾಲ್ಕುಲೇಟರ್‌"
ಬೆಂಗಳೂರು ಮಹಿಳೆ ಆಪಲ್‌ ಜಾಹೀರಾತಿನಲ್ಲಿ ಮಿಂಚಿದ್ದಾದರೂ ಹೇಗೆ?
ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆಹಚ್ಚುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Xiaomi Redmi Note 3 comes with an all-metal unibody design and sports a 5.5 inch Full HD (1920x1080p) IPS display upfront.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot