ಶಿಯೋಮಿ 'ಲೆವೆಲ್‌ ಅಪ್‌' ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್‌ಗಳಿಗೆ ಭರ್ಜರಿ ಆಫರ್‌!

|

ಟೆಕ್‌ ವಲಯದಲ್ಲಿ ಜನಪ್ರಿಯ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿರುವ ಶಿಯೋಮಿ ಕಂಪೆನಿ 'ಲೆವೆಲ್‌ ಅಪ್‌' ಸೇಲ್‌ ಅನ್ನು ಘೋಷಿಸಿದೆ. ಈ ಸೇಲ್‌ ಇಂದಿನಿಂದ ಲೈವ್‌ ಆಗಿದ್ದು ಜೂನ್‌ 17 ರವರೆಗೆ ನಡೆಯಲಿದೆ. ಇನ್ನು ಈ ಸೇಲ್‌ ಎಲ್ಲಾ ಆಫ್‌ಲೈನ್‌ ಪಾಲುದಾರರ ಜೊತೆಗೆ ನಡೆಯಲಿದೆ. ಇದಲ್ಲದೆ ಮಿ.ಕಾಮ್‌, ಮಿ ಹೋಮ್‌, ಫ್ಲಿಪ್‌ಕಾರ್ಟ್‌, ಅಮೆಜಾನ್‌ನಲ್ಲಿ ಸೇಲ್‌ ನಡೆಯಲಿದೆ. ಇನ್ನು ಈ ಸೇಲ್‌ನಲ್ಲಿ ಶಿಯೋಮಿ ಕಂಪೆನಿ ತನ್ನ ಮಿ ಮತ್ತು ರೆಡ್ಮಿ ಲ್ಯಾಪ್‌ಟಾಪ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಇಂದಿನಿಂದ ಲೆವೆಲ್‌ ಅಪ್‌ ಸೇಲ್‌ ನಡೆಸುತ್ತಿದೆ. ಈ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳ ಮೇಲೆ ಬಿಗ್‌ ಆಫರ್‌ ನೀಡಿದೆ. ಶಿಯೋಮಿ ಕಂಪೆನಿಯ ಡಿಸ್ಕೌಂಟ್‌ ಜೊತೆಗೆ ಬ್ಯಾಂಕ್‌ ಆಫರ್‌ಗಳು ಕೂಡ ಲಭ್ಯವಾಗಲಿದೆ. ಇದರಿಂದ ನಿಮ್ಮ ನೆಚ್ಚಿನ ಮಿ ಮತ್ತು ರೆಡ್ಮಿ ಲ್ಯಾಪ್‌ಟಾಪ್‌ಗಳ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ಶಿಯೋಮಿ ಕಂಪೆನಿಯ ಲೆವೆಲ್‌ ಅಪ್‌ ಸೇಲ್‌ನಲ್ಲಿ ಯಾವೆಲ್ಲಾ ಲ್ಯಾಪ್‌ಟಾಪ್‌ಗಳ ಡಿಸ್ಕೌಂಟ್‌ ಪಡೆದುಕೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಿಯೋಮಿ

ಶಿಯೋಮಿಯ ಲೆವೆಲ್‌ ಅಪ್‌ ಸೇಲ್‌ನಲ್ಲಿ ಮಿ ನೋಟ್‌ಬುಕ್‌ ಅಲ್ಟ್ರಾ(ಇಂಟೆಲ್‌ ಕೋರ್‌ i5 + 8GB RAM) ಮತ್ತು ಮಿ ನೋಟ್‌ಬುಕ್‌ ಅಲ್ಟ್ರಾ (ಇಂಟೆಲ್‌ ಕೋರ್‌ i5 + 16GB RAM) ರಿಯಾಯಿತಿ ದರದಲ್ಲಿ ಕ್ರಮವಾಗಿ 57,999ರೂ. ಮತ್ತು 59,999 ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ಮಿ ನೋಟ್‌ಬುಕ್‌ ಪ್ರೊ (ಇಂಟೆಲ್ ಕೋರ್ i5 + 8GB RAM ಆವೃತ್ತಿ) ನಿಮಗೆ ಕೇವಲ 55,999 ರೂಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಇದರ 16GB RAM ಆವೃತ್ತಿಯು 57,999 ರೂಗಳಿಗೆ ಲಭ್ಯವಾಗಲಿದೆ.

ಶಿಯೋಮಿ

ಇನ್ನು ಶಿಯೋಮಿ ಸೇಲ್‌ನಲ್ಲಿ ರೆಡ್ಮಿಬುಕ್‌ ಅನ್ನು 6000ರೂ.ಗಳ ಹೆಚ್ಚುವರಿ ರಿಯಾಯಿತಿಯಲ್ಲಿ ಖರೀದಿಸಬಹುದು. ಇದರ ಇಂಟೆಲ್‌ ಕೋರ್‌ i3 + 256GB ರೂಪಾಂತರವನ್ನು 32,999ರೂ.ಗಳಿಗೆ ಮತ್ತು ಇಂಟೆಲ್‌ ಕೋರ್‌ i3+ 512GB ರೂಪಾಂತರವನ್ನು 35,999ರೂ. ಬೆಲೆಯಲ್ಲಿ ಖರೀದಿಸಬಹುದು. ಜೊತೆಗೆ ಹೆಚ್ಚುವರಿಯಾಗಿ, ಇಂಟೆಲ್‌ ಕೋರ್ i5 ಪ್ರೊಸೆಸರ್ ಹೊಂದಿರುವ ರೆಡ್ಮಿಬುಕ್‌ ಪ್ರೊ ಅನ್ನು 42,999ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು HDFC ಕಾರ್ಡ್ ಹೊಂದಿರುವವರು 9 ತಿಂಗಳವರೆಗೆ ನೋ-ಕಾಸ್ಟ್ EMI ಜೊತೆಗೆ 4,500ರೂ. ವರೆಗಿನ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ.

ರೆಡ್ಮಿಬುಕ್‌

ಈ ಸೇಲ್‌ನಲ್ಲಿ ರೆಡ್ಮಿಬುಕ್‌ ಇಂಟೆಲ್‌ ಕೋರ್‌ i3 + 256G ಮಾದರಿಯು 6,000ರೂ. ರಿಯಾಯಿತಿ ಪಡೆದಿದ್ದು, 32,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಮಿ ನೋಟ್‌ಬುಕ್ ಪ್ರೊ i5 /8G/512G ಮಾದರಿಯು 1,000ರೂ. ಡಿಸ್ಕೌಂಟ್‌ ಪಡೆದುಕೊಂಡಿದ್ದು, 55,999ರೂ,ಬೆಲೆಗೆ ಲಭ್ಯವಾಗಲಿದೆ. ಇದಲ್ಲದೆ Mi ನೋಟ್‌ಬುಕ್ ಪ್ರೊ i5/16G/512G ಮಾದರಿಯು ಆಫರ್‌ ಬೆಲೆಯಲ್ಲಿ ಕೇವಲ 57,999ರೂ.ಗಳಿಗೆ ದೊರೆಯಲಿದೆ. ಅಂದರೆ ಈ ಲ್ಯಾಪ್‌ಟಾಪ್‌ 3,500ರೂ.ಗಳ ರಿಯಾಯಿತಿಯನ್ನು ಪಡೆದುಕೊಂಡಿದೆ. ಇನ್ನು ಮಿ ನೋಟ್‌ಬುಕ್‌ ಅಲ್ಟ್ರಾ i5/8G/512G ಮಾದರಿಯು 2,000 ಡಿಸ್ಕೌಂಟ್‌ ಹೊಂದಿದ್ದು, 57,999ರೂ.ಗಳಿಗೆ ದೊರೆಯಲಿದೆ. ಜೊತೆಗೆ ಮಿ ನೋಟ್‌ಬುಕ್ ಅಲ್ಟ್ರಾ i5/16G/512G ಮಾದರಿ 5,500 ಡಿಸ್ಕೌಂಟ್‌ ಪಡೆದಿದೆ. ಇದರಿಂದ ಇದರ ಬೆಲೆ 59,999ರೂ.ಗಳಿಗೆ ಇಳಿಕೆಯಾಗಿದೆ.

Best Mobiles in India

English summary
Xiaomi has announced its “Level Up” sale across Mi.com, Mi Home, Flipkart, Amazon and all offline partners starting June 8 to June 17 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X